ಪಾದಟಿಪ್ಪಣಿ
a ಯೆಹೆಜ್ಕೇಲನು ದರ್ಶನದಲ್ಲಿ ‘ಸತ್ತ ಜನ್ರ’ ಮೂಳೆಗಳನ್ನ ನೋಡಿದನು. (ಯೆಹೆ. 37:9) ಇವರು ವಯಸ್ಸಾಗಿ ಸತ್ತಿರಲಿಲ್ಲ ಬದ್ಲಿಗೆ ಇವರನ್ನ ಕೊಲ್ಲಲಾಗಿತ್ತು. ಅದು ಹೇಗೆ? ಇಸ್ರಾಯೇಲ್ಯರ 10 ಕುಲಗಳ ರಾಜ್ಯವನ್ನ ಅಶ್ಶೂರ್ಯರು ಮತ್ತು ಯೆಹೂದದ 2 ಕುಲಗಳ ರಾಜ್ಯವನ್ನ ಬಾಬೆಲಿನವ್ರು ನಾಶ ಮಾಡಿ ಜನ್ರನ್ನ ಕೈದಿಗಳಾಗಿ ಕರೆದುಕೊಂಡು ಹೋದ್ರು. ‘ಇಸ್ರಾಯೇಲ್ಯರಿಗೆ’ ಯೆಹೋವನ ಜೊತೆ ಇದ್ದ ಸಂಬಂಧ ಆಗ ಸಂಪೂರ್ಣವಾಗಿ ಕಡಿದು ಹೋಯ್ತು. ಈ ಅರ್ಥದಲ್ಲಿ ಅವ್ರನ್ನ ಕೊಲ್ಲಲಾಯ್ತು.