b ಈ ಮಕ್ಕಳು ಒಂದೇ ಪ್ರಾಯದವರಾಗಿರಲಿಲ್ಲ ಎಂಬುದು ಸ್ಪಷ್ಟ. ‘ಚಿಕ್ಕ ಮಕ್ಕಳು’ ಎಂಬುದಾಗಿ ತರ್ಜುಮೆಮಾಡಲ್ಪಟ್ಟಿರುವ ಅದೇ ಪದವನ್ನು ಯಾಯೀರನ 12 ವರ್ಷ ಪ್ರಾಯದ ಮಗಳಿಗೂ ಉಪಯೋಗಿಸಲಾಗಿದೆ. (ಮಾರ್ಕ 5:39, 42; 10:13) ಆದರೆ ಇದೇ ವೃತ್ತಾಂತವನ್ನು ಲೂಕನು ಬರೆದಾಗ, ಕೂಸುಗಳಿಗಾಗಿ ಉಪಯೋಗಿಸಲ್ಪಡುವ ಒಂದು ಪದವನ್ನು ಅವನು ಬಳಸಿದನು.—ಲೂಕ 1:41; 2:12; 18:15.