ಪಾದಟಿಪ್ಪಣಿ
a ಮೃತಪಟ್ಟಿರುವ ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರ ಸರಿಯಾದ ಸಂಖ್ಯೆಯು ನಮಗೆ ತಿಳಿದಿಲ್ಲ. ಉದಾಹರಣೆಗೆ, ಅಮೆರಿಕನ್ ಯುದ್ಧಗಳ ಕುರಿತು ನಿಜಾಂಶಗಳು (ಇಂಗ್ಲಿಷ್) ಎಂಬ ಶೀರ್ಷಿಕೆಯ 1998ರ ಪುಸ್ತಕವು ಕೇವಲ ಎರಡನೆಯ ಲೋಕ ಯುದ್ಧದ ಕುರಿತು ಹೀಗೆ ಗಮನಿಸುತ್ತದೆ: “ಎರಡನೆಯ ಲೋಕ ಯುದ್ಧದಲ್ಲಿ ಸತ್ತವರ (ಮಿಲಿಟರಿ ಮತ್ತು ನಾಗರಿಕರ) ಒಟ್ಟು ಸಂಖ್ಯೆಯು ಐದು ಕೋಟಿಯಾಗಿತ್ತು ಎಂದು ಅನೇಕ ಮೂಲಗಳು ತಿಳಿಸುತ್ತವೆ. ಆದರೆ ಈ ವಿಷಯವನ್ನು ಆಳವಾಗಿ ಅಧ್ಯಯನಮಾಡಿರುವ ಅನೇಕರು, ಸತ್ತವರ ನಿಷ್ಕೃಷ್ಟ ಸಂಖ್ಯೆಯು ಈ ಮೇಲೆ ಕೊಡಲಾದ ಸಂಖ್ಯೆಕ್ಕಿಂತಲೂ ಇಮ್ಮಡಿಯಾಗಿದೆ ಎಂದು ನಂಬುತ್ತಾರೆ.”