ಪಾದಟಿಪ್ಪಣಿ
a ಯೇಸು ಹೇಳಿದ ಗೋದಿ ಮತ್ತು ಹಣಜಿಯ ಸಾಮ್ಯದಲ್ಲಿ ಹಾಗೂ ಅಗಲವಾದ ಮತ್ತು ಇಕ್ಕಟ್ಟಾದ ದಾರಿಗಳ ಕುರಿತು ಅವನು ನೀಡಿದ ದೃಷ್ಟಾಂತದಲ್ಲಿ (ಮತ್ತಾಯ 7:13,14) ಅವನು ಪ್ರಕಟಿಸಿದಂತೆ, ನಿಜ ಕ್ರೈಸ್ತತ್ವವು ಶತಮಾನಗಳಿಂದಲೂ ಕೆಲವೇ ಕೆಲವರಿಂದ ಆಚರಿಸಲ್ಪಡುವುದು. ಇವರು ಹಣಜಿಯಂತಿರುವ ಅಧಿಕಾಂಶ ಜನರಿಂದ ಮರೆಮಾಡಲ್ಪಡಲಿದ್ದರು. ಇವರು ತಮ್ಮನ್ನು ಮತ್ತು ತಮ್ಮ ಬೋಧನೆಗಳನ್ನು ಪ್ರವರ್ಧಿಸುತ್ತಾ, ಇದೇ ಕ್ರೈಸ್ತತ್ವದ ನಿಜ ಸ್ವರೂಪವಾಗಿದೆಯೆಂದು ತೋರಿಸಲಿದ್ದರು. ನಮ್ಮ ಈ ಲೇಖನವು ಕ್ರೈಸ್ತತ್ವದ ಇದೇ ಸ್ವರೂಪದ ಕುರಿತು ಮಾತಾಡುತ್ತದೆ.