ಪಾದಟಿಪ್ಪಣಿ
a ಈ ಮುಂದಿನ ವಿವರಣೆಯನ್ನು ಕಡೆಗಣಿಸಸಾಧ್ಯವಿಲ್ಲ, ಅದೇನೆಂದರೆ: ಮೆಕ್ಸಿಕನ್ ನ್ಯಾಸಿಮಯಂಟೋದಲ್ಲಿ ಶಿಶು “ದೇವಶಿಶು” ಅನ್ನು ಚಿತ್ರಿಸುತ್ತದೆ. ಅಂದರೆ, ಒಂದು ಶಿಶುವೋಪಾದಿ ದೇವರು ತಾನೇ ಈ ಭೂಮಿಗೆ ಬಂದನು ಎಂಬ ವಿಚಾರವನ್ನು ಇದು ತಿಳಿಸುತ್ತದೆ. ಆದರೆ ಬೈಬಲು ಯೇಸು, ಈ ಭೂಮಿಯಲ್ಲಿ ಜನಿಸಿದ ದೇವರ ಮಗನಾಗಿದ್ದಾನೆ ಎಂದು ಹೇಳುತ್ತದೆ. ಹಾಗೂ ಸರ್ವಶಕ್ತನಾದ ದೇವರಾದ ಯೆಹೋವನಂತೆ ಇದ್ದಾನೆ ಇಲ್ಲವೆ ಆತನಿಗೆ ಸಮಾನನಾದವನು ಇವನು ಎಂದು ಹೇಳುವುದಿಲ್ಲ. ಇದರ ಕುರಿತಾದ ಸತ್ಯಾಂಶವನ್ನು ಲೂಕ 1:35; ಯೋಹಾನ 3:16; 5:37; 14:1, 6, 9, 28; 17:1, 3; 20:17ರ ವಚನಗಳಲ್ಲಿ ಪರೀಕ್ಷಿಸಿನೋಡಿರಿ.