ಪಾದಟಿಪ್ಪಣಿ
a ದೇವದರ್ಶನಗುಡಾರದಲ್ಲಿ ಮಂಜೂಷವು ನಿಗದಿತ ಸ್ಥಾನದಲ್ಲಿ ಇಡಲ್ಪಟ್ಟಿದ್ದಾಗಲೂ ಈ ಕೋಲುಗಳನ್ನು ಬಳೆಗಳಿಂದ ತೆಗೆಯಲಾಗುತ್ತಿರಲಿಲ್ಲ. ಆದುದರಿಂದ, ಈ ಕೋಲುಗಳನ್ನು ಬೇರೆ ಯಾವುದೇ ಕೆಲಸಕ್ಕಾಗಿ ಉಪಯೋಗಿಸಸಾಧ್ಯವಿರಲಿಲ್ಲ. ಇದಲ್ಲದೆ, ಮಂಜೂಷವನ್ನು ಯಾರೂ ಮುಟ್ಟಬಾರದಾಗಿತ್ತು; ಒಂದುವೇಳೆ ಬಳೆಗಳಿಂದ ಕೋಲುಗಳನ್ನು ಹೊರತೆಗೆಯುವಲ್ಲಿ, ಪ್ರತಿಬಾರಿ ಪವಿತ್ರ ಮಂಜೂಷವನ್ನು ಬೇರೆ ಕಡೆಗೆ ಒಯ್ಯುವಾಗ ಬಳೆಗಳೊಳಗೆ ಕೋಲುಗಳನ್ನು ತೂರಿಸಲಿಕ್ಕಾಗಿ ಅದನ್ನು ಮುಟ್ಟಬೇಕಾಗುತ್ತಿತ್ತು. ‘ಕೋಲುಗಳನ್ನು ಸೇರಿಸುವುದರ’ ಕುರಿತು ಅರಣ್ಯಕಾಂಡ 4:6ರಲ್ಲಿರುವ ಹೇಳಿಕೆಯು, ಭಾರವಾದ ಮಂಜೂಷವನ್ನು ಹೊಸ ಪಾಳೆಯಕ್ಕೆ ಕೊಂಡೊಯ್ಯುವ ಸಿದ್ಧತೆಯಲ್ಲಿ ಕೋಲುಗಳನ್ನು ಸರಿಮಾಡುವುದು ಅಥವಾ ಸರಿಹೊಂದಿಸುವುದನ್ನು ಸೂಚಿಸಬಹುದು.