ಪಾದಟಿಪ್ಪಣಿ
a ಮೂರು ಮೊಳದಷ್ಟು ಎತ್ತರವಿರುವ ಕಲ್ಲಿನ ವಿಸ್ತಾರವಾದ ಹೂಜಿಗಂಬಗಳ ಸಾಲು, ಅನ್ಯರ ಅಂಗಣವನ್ನು ಒಳಾಂಗಣದಿಂದ ವಿಭಾಗಿಸಿತ್ತು. ಈ ಗೋಡೆಯ ಮೇಲೆ ನಿರ್ದಿಷ್ಟ ಅಂತರದಲ್ಲಿ, ಕೆಲವು ಗ್ರೀಕ್ ಭಾಷೆಯ ಹಾಗೂ ಕೆಲವು ಲ್ಯಾಟಿನ್ ಭಾಷೆಯ ಈ ರೀತಿಯ ಎಚ್ಚರಿಕೆಗಳು ಕಂಡುಬರುತ್ತಿದ್ದವು: “ಯಾವ ಪರದೇಶಸ್ಥನೂ ಈ ತಡೆಗಟ್ಟಿನಿಂದ ಮತ್ತು ಪವಿತ್ರಾಲಯದ ಸುತ್ತಲಿರುವ ಬೇಲಿಯಿಂದ ಒಳಗೆ ಪ್ರವೇಶಿಸಲು ಪ್ರಯತ್ನಿಸದಿರಲಿ. ಹೀಗೆ ಅತಿಕ್ರಮ ಪ್ರವೇಶ ಮಾಡುವ ಯಾರನ್ನಾದರೂ ಹಿಡಿಯುವಲ್ಲಿ, ಇದರ ಪರಿಣಾಮವಾಗಿ ಅವನು ತನ್ನ ಮರಣಕ್ಕೆ ತಾನೇ ಜವಾಬ್ದಾರನಾಗಿರುವನು.”