ಪಾದಟಿಪ್ಪಣಿ
a ಇಲ್ಲಿ “ನಕ್ಷತ್ರಗಳು” ಅಕ್ಷರಾರ್ಥ ದೇವದೂತರನ್ನು ಸೂಚಿಸುವುದಿಲ್ಲ. ಏಕೆಂದರೆ ಅದೃಶ್ಯ ಆತ್ಮಜೀವಿಗಳಿಗಾಗಿ ಮಾಹಿತಿಯನ್ನು ದಾಖಲಿಸಿಡುವಂತೆ ಯೇಸು ಒಬ್ಬ ಮಾನವನನ್ನು ಉಪಯೋಗಿಸುತ್ತಿರಲಿಲ್ಲ. ಆದಕಾರಣ, ಈ “ನಕ್ಷತ್ರಗಳು” ಯೇಸುವಿನ ಸಂದೇಶವಾಹಕರಾಗಿ ವೀಕ್ಷಿಸಲ್ಪಡುವ, ಸಭೆಗಳ ಮಾನವ ಮೇಲ್ವಿಚಾರಕರನ್ನು ಅಥವಾ ಹಿರಿಯರನ್ನು ಪ್ರತಿನಿಧಿಸಲೇಬೇಕು. ಏಳು ಆಗಿರುವ ಅವರ ಸಂಖ್ಯೆ ದೈವಿಕವಾಗಿ ನಿರ್ಣಯಿಸಲ್ಪಟ್ಟಿರುವ ಸಂಪೂರ್ಣತೆಯನ್ನು ಸೂಚಿಸುತ್ತದೆ.