ಪಾದಟಿಪ್ಪಣಿ
c ಮೂಲಪಿತೃ ಪದ್ಧತಿಯ ಕಾಲಗಳಲ್ಲಿ, ಪ್ರತಿ ಕುಟುಂಬದ ಯಜಮಾನನು ತನ್ನ ಹೆಂಡತಿ ಮಕ್ಕಳನ್ನು ಯೆಹೋವನ ಮುಂದೆ ಪ್ರತಿನಿಧಿಸಿ, ಅವರ ಪರವಾಗಿ ಯಜ್ಞಗಳನ್ನೂ ಅರ್ಪಿಸುತ್ತಿದ್ದನು. (ಆದಿಕಾಂಡ 8:20; 46:1; ಯೋಬ 1:5) ಆದರೆ ಧರ್ಮಶಾಸ್ತ್ರವು ಬಂದಾಗ, ಯೆಹೋವನು ಆರೋನನ ಕುಟುಂಬದ ಪುರುಷರನ್ನು ಯಾಜಕರಾಗಿ ನೇಮಿಸಿ ಅವರ ಮುಖಾಂತರ ಯಜ್ಞಗಳು ಅರ್ಪಿಸಲ್ಪಡುವಂತೆ ನೇಮಿಸಿದನು. ಆದುದರಿಂದ ಆ 250 ಮಂದಿ ದಂಗೆಕೋರರು, ಕಾರ್ಯವಿಧಾನದಲ್ಲಿ ಆದ ಈ ಹೊಂದಾಣಿಕೆಯೊಂದಿಗೆ ಸಹಕರಿಸಲು ಸಮ್ಮತಿಸಲಿಲ್ಲವೆಂಬುದು ವ್ಯಕ್ತವಾಗುತ್ತದೆ.