ಪಾದಟಿಪ್ಪಣಿ
a ಲಾ ಸಾಗ್ರಾತಾ ಎಸ್‌ಕ್ರೀಟೂರಾ—ಟೆಕ್ಸ್‌ಟೋ ಈ ಕೋಮೆನ್ಟೇರ್ಯೋ ಪೋರ್ ಪ್ರೋಫೆಸೋರೆಸ್ ಡೆ ಲಾ ಕೊಮ್ಪೇನ್ಯೀಆ ಡೆ ಕೇಸ್ಯೂಸ್ (ಪವಿತ್ರ ಶಾಸ್ತ್ರ—ಯೇಸು ಸಂಘದ ಪ್ರೋಫೆಸರುಗಳಿಂದ ಗ್ರಂಥಪಾಠ ಮತ್ತು ವ್ಯಾಖ್ಯಾನ) ವಿವರಿಸುವುದೇನೆಂದರೆ, “ಪಾರಸಿಯರು, ಮೇದ್ಯರು, ಮತ್ತು ಕಸ್ದೀಯರಲ್ಲಿ ಮೇಜೈ ಎಂಬವರು ಪುರೋಹಿತವರ್ಗದವರನ್ನು ಸೂಚಿಸುತ್ತಾರೆ ಮತ್ತು ಅವರು ಇಂದ್ರಜಾಲವಿದ್ಯೆ, ಜೋತಿಷ್ಯಶಾಸ್ತ್ರ, ಹಾಗೂ ಮಾಟಮಂತ್ರಗಳಿಗೆ ಇಂಬುಕೊಡುತ್ತಿದ್ದರು.” ಹಾಗಿದ್ದರೂ ಮಧ್ಯಪೂರ್ವ ಯುಗಗಳಷ್ಟಕ್ಕೆ, ಯೇಸುವನ್ನು ಭೇಟಿಮಾಡಲು ಹೋದ ಮೇಜೈಯರನ್ನು ಸಂತರನ್ನಾಗಿ ಮಾಡಲಾಯಿತು ಮತ್ತು ಅವರಿಗೆ ಮೆಲ್ಕಿಯೊರ್, ಗಾಸ್‌ಪಾರ್, ಹಾಗೂ ಬಾಲ್ಟಾಜಾರ್ ಎಂಬ ಹೆಸರುಗಳು ಸಹ ಕೊಡಲ್ಪಟ್ಟವು. ಅವರ ಅವಶೇಷಗಳನ್ನು ಜರ್ಮನಿಯ ಕೊಲೋನ್ ನಗರದ ಕತೀಡ್ರಲ್‌ನಲ್ಲಿ ಇಡಲಾಗಿವೆಯೆಂದು ಹೇಳಲಾಗುತ್ತದೆ.