ಪಾದಟಿಪ್ಪಣಿ
a ಅದೇ ರೀತಿಯ ಪ್ರಯಾಣವನ್ನು ಮಾಡಿದ ರೋಮನ್ ಕವಿ ಹಾರೆಸ್ (ಸಾ.ಶ.ಪೂ. 65-8) ಈ ವಿಭಾಗದಲ್ಲಿ ಪ್ರಯಾಣಿಸುವುದರ ತೊಂದರೆಗಳ ಕುರಿತು ಮಾತಾಡಿದನು. ಅಪ್ಪಿಯ ಪೇಟೆಯು “ದೋಣಿಗರಿಂದಲೂ ಜಿಪುಣರಾದ ಹೆಂಡ ವ್ಯಾಪಾರಸ್ಥರಿಂದಲೂ ಕಿಕ್ಕಿರಿದಿತ್ತು” ಎಂದು ಹಾರೆಸ್ ವರ್ಣಿಸಿದನು. “ಆ ಅನಿಷ್ಟವಾದ ಗುಂಗರೆಗಳು ಮತ್ತು ಕಪ್ಪೆಗಳು” ಹಾಗೂ “ರುಚಿ ಕೆಟ್ಟಿರುವ ನೀರು” ಇವುಗಳ ಕುರಿತು ಅವನು ಗೊಣಗಿದನು.