ಪಾದಟಿಪ್ಪಣಿ
b ತದ್ರೀತಿಯಲ್ಲಿ, ದೇವರು ಮತ್ತು ಆತನ ಆತ್ಮಾಭಿಷಿಕ್ತ “ಪುತ್ರರ” ನಡುವಣ ಹೊಸ ಸಂಬಂಧವನ್ನು ವಿವರಿಸುತ್ತಾ ಪೌಲನು, ರೋಮನ್ ಸಾಮ್ರಾಜ್ಯದಲ್ಲಿದ್ದ ತನ್ನ ವಾಚಕರಿಗೆ ಬಹಳಷ್ಟು ಪರಿಚಿತವಾಗಿದ್ದ ಒಂದು ಕಾನೂನುಸಂಬಂಧಿತ ವಿಚಾರವನ್ನು ಉಪಯೋಗಿಸಿದನು. (ರೋಮಾಪುರ 8:14-17, NW) “ದತ್ತುಸ್ವೀಕಾರವು ನಿಜವಾಗಿಯೂ ಒಂದು ರೋಮನ್ ಪದ್ಧತಿಯಾಗಿತ್ತು ಮತ್ತು ಕುಟುಂಬದ ಕುರಿತಾದ ರೋಮನ್ ವಿಚಾರಧಾರೆಗಳಿಗೆ ನಿಕಟವಾಗಿ ಸಂಬಂಧಿಸಿದ್ದಾಗಿತ್ತು” ಎಂದು ರೋಮ್‌ನಲ್ಲಿ ಸಂತ ಪೌಲ (ಇಂಗ್ಲಿಷ್) ಎಂಬ ಪುಸ್ತಕವು ತಿಳಿಸುತ್ತದೆ.