ಪಾದಟಿಪ್ಪಣಿ
a ಇಸವಿ 1917ರ ಅಕ್ಟೋಬರ್‌ನಲ್ಲಿ ನಡೆದ ಕ್ರಾಂತಿಗೆ ಮುಂಚೆ ರಷ್ಯವು ಹಳೆಯ ಜೂಲಿಯನ್ ಕ್ಯಾಲೆಂಡರನ್ನು ಉಪಯೋಗಿಸುತ್ತಿತ್ತು, ಆದರೆ ಹೆಚ್ಚಿನ ದೇಶಗಳು ಅದಕ್ಕೆ ಬದಲಾಗಿ ಗ್ರಿಗೋರಿಯನ್ ಕ್ಯಾಲೆಂಡರನ್ನು ಉಪಯೋಗಿಸುತ್ತಿದ್ದವು. 1917ರಲ್ಲಿ ಜೂಲಿಯನ್ ಕ್ಯಾಲೆಂಡರ್ ಅದರ ಪ್ರತಿರೂಪವಾಗಿರುವ ಗ್ರಿಗೋರಿಯನ್ ಕ್ಯಾಲೆಂಡರ್‌ಗಿಂತ 13 ದಿನ ಹಿಂದೆಯಿತ್ತು. ಕ್ರಾಂತಿಯ ಬಳಿಕ, ಸೋವಿಯಟ್‌ನವರು ಗ್ರಿಗೋರಿಯನ್ ಕ್ಯಾಲೆಂಡರನ್ನು ಉಪಯೋಗಿಸಲು ಆರಂಭಿಸಿದರು; ಅಂದಿನಿಂದ ರಷ್ಯವು ಸಹ ಜಗತ್ತಿನ ಉಳಿದ ಭಾಗದವರೆಲ್ಲರೂ ಉಪಯೋಗಿಸುತ್ತಿದ್ದ ಗ್ರಿಗೋರಿಯನ್ ಕ್ಯಾಲೆಂಡರನ್ನೇ ಉಪಯೋಗಿಸತೊಡಗಿತು. ಆದರೆ ಜೂಲಿಯನ್ ಕ್ಯಾಲೆಂಡರ್‌ಗೆ “ಹಳೆಯ ಶೈಲಿಯ” ಕ್ಯಾಲೆಂಡರ್ ಎಂಬ ವರ್ಣನೆಯನ್ನು ನೀಡುತ್ತಾ, ಆರ್ತಡಾಕ್ಸ್ ಚರ್ಚ್ ತನ್ನ ಆಚರಣೆಗಳಿಗಾಗಿ ಈ ಕ್ಯಾಲೆಂಡರನ್ನೇ ಉಪಯೋಗಿಸುವುದನ್ನು ಮುಂದುವರಿಸಿತು. ರಷ್ಯದಲ್ಲಿ ಕ್ರಿಸ್ಮಸ್ ಹಬ್ಬವು ಜನವರಿ 7ರಂದು ಆಚರಿಸಲ್ಪಡುವ ವಿಷಯವನ್ನು ನೀವು ಕೇಳಿಸಿಕೊಳ್ಳಬಹುದು. ಆದರೆ ಗ್ರಿಗೋರಿಯನ್ ಕ್ಯಾಲೆಂಡರ್‌ನಲ್ಲಿ ಯಾವುದು ಜನವರಿ 7ನೇ ತಾರೀಖು ಆಗಿದೆಯೊ ಅದು ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಡಿಸೆಂಬರ್ 25 ಆಗಿದೆ ಎಂಬುದು ನಿಮಗೆ ನೆನಪಿರಲಿ. ಹೀಗಿರುವುದರಿಂದ, ರಷ್ಯದ ಅನೇಕರು ತಮ್ಮ ಹಬ್ಬದ ಕಾಲವನ್ನು ಈ ಮುಂದಿನಂತೆ ಸಂಘಟಿಸುತ್ತಾರೆ: ಡಿಸೆಂಬರ್ 25, ಪಾಶ್ಚಾತ್ಯ ಕ್ರಿಸ್ಮಸ್; ಜನವರಿ 1, ಅಧಾರ್ಮಿಕ ಹೊಸ ವರ್ಷ; ಜನವರಿ 7, ಆರ್ತಡಾಕ್ಸ್ ಕ್ರಿಸ್ಮಸ್; ಜನವರಿ 14, ಹಳೆಯ ಶೈಲಿಯ ಹೊಸ ವರ್ಷ.