ಪಾದಟಿಪ್ಪಣಿ
a ಯೇಸು ಕಲಿಸಿದ ಕರ್ತನ ಪ್ರಾರ್ಥನೆಯಲ್ಲಿರುವಂತೆಯೇ ಕ್ಯಾಡಿಷ್ ಪ್ರಾರ್ಥನಾ ಗೀತೆಯಲ್ಲೂ ದೇವರ ನಾಮವು ಪವಿತ್ರವಾಗಲಿ ಎಂಬ ಬೇಡಿಕೆಯಿದೆ. ಕ್ಯಾಡಿಷ್ ಪ್ರಾರ್ಥನೆಯು ಕ್ರಿಸ್ತನ ಕಾಲದ್ದೋ ಅದಕ್ಕಿಂತ ಹಳೆಯದ್ದೋ ಎಂಬ ವಿಷಯದಲ್ಲಿ ವಾಗ್ವಾದ ನಡೆಯುತ್ತಿದೆ. ಹಾಗಿದ್ದರೂ ಕ್ಯಾಡಿಷ್ ಪ್ರಾರ್ಥನೆಗೆ ಕರ್ತನ ಪ್ರಾರ್ಥನೆಯೊಂದಿಗಿರುವ ಹೋಲಿಕೆಯು ನಮ್ಮನ್ನು ಅಚ್ಚರಿಗೊಳಿಸಬಾರದು. ಯೇಸು ಪ್ರಾರ್ಥನೆಯನ್ನು ಹೇಳಿಕೊಟ್ಟಾಗ ಅದು ವಿನೂತನವಾದದ್ದಾಗಿರಬೇಕೆಂದು ಉದ್ದೇಶಿಸಲಿಲ್ಲ. ಅದರ ಒಂದೊಂದು ಬೇಡಿಕೆಯೂ ಆಗಿನ ಎಲ್ಲ ಯೆಹೂದ್ಯರಿಗೆ ಲಭ್ಯವಾಗಿದ್ದ ಗ್ರಂಥದ ಮೇಲೆ ಪೂರ್ಣವಾಗಿ ಆಧರಿತವಾಗಿತ್ತು. ತನ್ನ ಜೊತೆಗಿದ್ದ ಯೆಹೂದ್ಯರು ತಾವು ಮುಂಚಿನಿಂದ ಪ್ರಾರ್ಥಿಸುತ್ತಿರಬೇಕಾಗಿದ್ದ ವಿಷಯಗಳಿಗಾಗಿ ಪ್ರಾರ್ಥಿಸಬೇಕೆಂದು ಯೇಸು ಪ್ರೋತ್ಸಾಹಿಸಿದನು.