ಪಾದಟಿಪ್ಪಣಿ
b ಸಾಮಾನ್ಯವಾಗಿ ಕಾರ್ಮೆಲ್ ಹುಲುಸಾದ ಹಸಿರು ಪ್ರದೇಶವಾಗಿದೆ. ಸಮುದ್ರದ ತೇವಭರಿತ ಗಾಳಿ ಅದರ ಇಳಕಲುಗಳಲ್ಲಿ ಮೇಲೇರುವಾಗ ಪದೇ ಪದೇ ಮಳೆ ಮತ್ತು ಧಾರಾಳ ಮಂಜನ್ನು ತರುತ್ತದೆ. ಮಳೆ ಬರುವಂತೆ ಮಾಡುವ ಕೀರ್ತಿ ಬಾಳನಿಗಿದೆಯೆಂದು ಜನರು ನಂಬುತ್ತಿದ್ದುದರಿಂದ ಈ ಬೆಟ್ಟವು ಬಾಳನ ಆರಾಧನೆಯ ಪ್ರಮುಖ ಸ್ಥಳವಾಗಿತ್ತೆಂಬುದು ವ್ಯಕ್ತ. ಈ ಕಾರಣದಿಂದ, ಬಾಳನ ಆರಾಧನೆ ಒಂದು ವಂಚನೆಯೆಂಬುದನ್ನು ಬಯಲುಪಡಿಸಲು ಕಾರ್ಮೆಲ್ ಯೋಗ್ಯ ಸ್ಥಳವಾಗಿತ್ತು.