ಪಾದಟಿಪ್ಪಣಿ
a ಅಪೊಸ್ತಲ ಪೌಲನು ಬಳಸಿದ ಪದವನ್ನು ಕೇವಲ ಒಂದೇ ಪದದಿಂದ ಭಾಷಾಂತರಿಸಲು ಕಷ್ಟ. ಒಂದು ಪರಾಮರ್ಶನ ಗ್ರಂಥವು ಹೇಳುವುದು: “ನ್ಯಾಯಸಮ್ಮತತೆಯಲ್ಲಿ, ಒಬ್ಬನು ಮಣಿದು ತನಗಿರುವ ಹಕ್ಕುಗಳನ್ನು ಬಿಟ್ಟುಕೊಡಲು ಮತ್ತು ಇತರರಿಗೆ ಪರಿಗಣನೆ ಹಾಗೂ ಸೌಮ್ಯತೆಯನ್ನು ತೋರಿಸಲು ಮನಸ್ಸುಳ್ಳವನಾಗಿರುವುದು ಒಳಗೂಡಿದೆ.” ಅಂದರೆ ಆ ಪದವು ಮಣಿಯುವುದು ಮತ್ತು ನ್ಯಾಯಸಮ್ಮತರಾಗಿರುವುದನ್ನು ಅರ್ಥೈಸುತ್ತದೆಯೇ ಹೊರತು, ಧರ್ಮಶಾಸ್ತ್ರವನ್ನು ಎಳೆಯಷ್ಟೂ ಬಿಡದೆ ಪಾಲಿಸಬೇಕೆಂದು ಒತ್ತಾಯಿಸುವುದನ್ನು ಅಥವಾ ತನಗೆ ಹಕ್ಕಿರುವುದರಿಂದ ಮಾಡೇತೀರುವನೆಂದು ಹಠಹಿಡಿಯುವುದನ್ನು ಅರ್ಥೈಸುವುದಿಲ್ಲ.