ಪಾದಟಿಪ್ಪಣಿ
a ಯಜ್ಞಾರ್ಪಿತ ಪ್ರಾಣಿಯ ದೋಷಪರಿಹಾರಕ ಮೌಲ್ಯವು ಅದರ ರಕ್ತದಲ್ಲಿತ್ತು. ದೇವರು ರಕ್ತವನ್ನು ಪರಿಶುದ್ಧವೆಂದೆಣಿಸಿದನು. (ಯಾಜಕಕಾಂಡ 17:11) ಹೀಗಿರಲಾಗಿ ಬಡವರು ಅರ್ಪಿಸುತ್ತಿದ್ದ ಆ ಹಿಟ್ಟು ಏನೂ ಬೆಲೆಯಿಲ್ಲದ್ದಾಗಿತ್ತೋ? ಖಂಡಿತ ಇಲ್ಲ. ಆ ಅರ್ಪಣೆಗಳನ್ನು ಮಾಡಿದವರ ದೀನ ಹಾಗೂ ಸಿದ್ಧ ಮನಸ್ಸನ್ನು ಯೆಹೋವನು ಅಮೂಲ್ಯವೆಂದೆಣಿಸಿದನು ನಿಶ್ಚಯ. ಅದಲ್ಲದೆ ಬಡವರೂ ಸೇರಿದಂತೆ ಇಡೀ ಜನಾಂಗದ ಪಾಪಗಳು ವಾರ್ಷಿಕ ದೋಷಪರಿಹಾರಕ ದಿನದಲ್ಲಿ ದೇವರಿಗೆ ಅರ್ಪಿಸಲಾಗುತ್ತಿದ್ದ ಪ್ರಾಣಿಗಳ ರಕ್ತದಿಂದ ನಿವಾರಿಸಲ್ಪಡುತ್ತಿದ್ದವು.—ಯಾಜಕಕಾಂಡ 16:29, 30.