ಪಾದಟಿಪ್ಪಣಿ
a ಈ ತಾರೀಖಿಗೂ ಇಂದಿನ ಯೆಹೂದ್ಯರು ಪಸ್ಕ ಹಬ್ಬವನ್ನು ಆಚರಿಸುವ ದಿನಕ್ಕೂ ವ್ಯತ್ಯಾಸವಿರಬಹುದು. ಅದೇಕೆ? ಅನೇಕ ಯೆಹೂದ್ಯರು ಈ ಹಬ್ಬವನ್ನು ನೈಸಾನ್ 15ರಂದು ಆಚರಿಸುತ್ತಾರೆ. ಇದು ವಿಮೋಚನಕಾಂಡ 12:6ರಲ್ಲಿನ ಆಜ್ಞೆಗೆ ಸಹಮತದಲ್ಲಿದೆ ಎಂದು ಅವರು ನಂಬುತ್ತಾರೆ. (ಕಾವಲಿನಬುರುಜು ಪತ್ರಿಕೆಯ ಫೆಬ್ರವರಿ 1, 1991, ಪುಟ 21ರಲ್ಲಿರುವ ಮಾಹಿತಿ ನೋಡಿ.) ಆದರೆ ಯೇಸು ಅದನ್ನು ನೈಸಾನ್ 14ರಂದೇ ಆಚರಿಸಿದನು. ಏಕೆಂದರೆ ಧರ್ಮಶಾಸ್ತ್ರದಲ್ಲಿನ ಆಜ್ಞೆ ಅದೇ ಆಗಿತ್ತು. ಈ ತಾರೀಖನ್ನು ಹೇಗೆ ಲೆಕ್ಕಿಸುವುದು ಎನ್ನುವುದಕ್ಕೆ ಹೆಚ್ಚು ಮಾಹಿತಿ ಬೇಕಿರುವುದಾದರೆ ಜೂನ್ 15, 1977ರ ಕಾವಲಿನಬುರುಜು ಪತ್ರಿಕೆಯ ಇಂಗ್ಲಿಷ್ ಸಂಚಿಕೆಯಲ್ಲಿ ಪುಟ 383-384 ನೋಡಿ.