ಪಾದಟಿಪ್ಪಣಿ
a ಪೌಲನು ಆಲೀವ್ ಮರವನ್ನು ಉಪಯೋಗಿಸಿದ್ದು ಇಸ್ರಾಯೇಲ್ ಜನಾಂಗವನ್ನು ಸೂಚಿಸಲಿಕ್ಕಲ್ಲ. ಇಸ್ರಾಯೇಲ್ ಜನಾಂಗದಲ್ಲಿ ರಾಜರೂ ಯಾಜಕರೂ ಇದ್ದರು ನಿಜ. ಆದರೆ ಅವರು ಯಾಜಕರಾಜ್ಯವಾಗಲಿಲ್ಲ. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಇಸ್ರಾಯೇಲಿನ ರಾಜರು ಯಾಜಕರಾಗಲು ಸಾಧ್ಯವಿರಲಿಲ್ಲ. ಆದ್ದರಿಂದ ಆಲೀವ್ ಮರ ಈ ಜನಾಂಗವನ್ನು ಸೂಚಿಸಸಾಧ್ಯವಿಲ್ಲ. ಹಾಗಾಗಿ ಪೌಲನು ಆ ದೃಷ್ಟಾಂತವನ್ನು ಉಪಯೋಗಿಸಿದ್ದು, ‘ಯಾಜಕರಾಜ್ಯವನ್ನು’ ಉಂಟುಮಾಡುವ ದೇವರ ಉದ್ದೇಶ ಆಧ್ಯಾತ್ಮಿಕ ಇಸ್ರಾಯೇಲಿನಲ್ಲಿ ಹೇಗೆ ನೆರವೇರಿತು ಎಂಬದನ್ನು ತೋರಿಸಲಿಕ್ಕಾಗಿಯೇ. ಇದು, 1983, ಆಗಸ್ಟ್ 15ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ ಪುಟ 14-19ರಲ್ಲಿರುವ ವಿವರಣೆಯ ಪರಿಷ್ಕರಣೆಯಾಗಿದೆ.