ಪಾದಟಿಪ್ಪಣಿ
a ಗರ್ಭದಲ್ಲಿ ಬೆಳೆಯುತ್ತಿರುವ ಪಿಂಡಗೂಸಿನಲ್ಲಿ ಏನೋ ವೈಕಲ್ಯ ಇರುವಂತೆ ತೋರಿದರೆ ಇಲ್ಲವೆ ಒಂದಕ್ಕಿಂತ ಹೆಚ್ಚು ಭ್ರೂಣಗಳು ಗರ್ಭದಲ್ಲಿ ನಿಂತರೆ ಆಗೇನು ಮಾಡುವುದು? ಗರ್ಭದಿಂದ ಬೇಕುಬೇಕೆಂದೇ ಭ್ರೂಣ ತೆಗೆಸುವುದು ಗರ್ಭಪಾತ ಮಾಡಿಸಿದಂತೆ. ಐವಿಎಫ್ ಚಿಕಿತ್ಸೆಯಿಂದ ಒಂದಕ್ಕಿಂತ ಹೆಚ್ಚು ಶಿಶುಗಳು (ಅವಳಿ, ತ್ರಿವಳಿ ಅಥವಾ ಇನ್ನೂ ಹೆಚ್ಚು) ಹುಟ್ಟುವುದು ಸಾಮಾನ್ಯ. ಹೆಚ್ಚಿನ ಅಪಾಯಗಳು, ಉದಾಹರಣೆಗೆ ಅವಧಿಗೆ ಮುಂಚಿನ ಹೆರಿಗೆ ಆಗುವ ಇಲ್ಲವೆ ತಾಯಿಗೆ ರಕ್ತಸ್ರಾವ ಆಗುವ ಸಾಧ್ಯತೆಯಿದೆ. ಗರ್ಭದಲ್ಲಿ ಒಂದಕ್ಕಿಂತ ಹೆಚ್ಚು ಶಿಶು ಬೆಳೆಯುತ್ತಿರುವಾಗ ಒಂದನ್ನಿಟ್ಟು ಉಳಿದ ಭ್ರೂಣಗಳನ್ನು ಸಾಯಿಸುವಂತೆ ಸಲಹೆ ಕೊಡಲಾಗುತ್ತದೆ. ಆದರೆ ಇದು ಉದ್ದೇಶಪೂರ್ವಕ ಗರ್ಭಪಾತ. ಕೊಲೆಗೆ ಸಮ.—ವಿಮೋ. 21:22, 23; ಕೀರ್ತ. 139:16.