ಪಾದಟಿಪ್ಪಣಿ
a ಯೇಸುವಿನ ದೃಷ್ಟಾಂತಗಳು ಬದುಕಿನ ರೀತಿರಿವಾಜುಗಳನ್ನು, ಪದ್ಧತಿಗಳನ್ನು ಆಧರಿಸಿ ಇರುತ್ತಿತ್ತು. ಯೆಹೂದಿಗಳ ದೃಷ್ಟಿಯಲ್ಲಿ ಅತಿಥಿಸತ್ಕಾರ ಮಾಡೋದು ಒಂದು ಪವಿತ್ರ ಕರ್ತವ್ಯವಾಗಿತ್ತು. ಪ್ರತಿ ದಿನ ತಮ್ಮತಮ್ಮ ಕುಟುಂಬಕ್ಕೆ ಆಗುವಷ್ಟು ರೊಟ್ಟಿ ಸಿದ್ಧಪಡಿಸಿ ಇಡುತ್ತಿದ್ದರು. ಒಂದುವೇಳೆ ರೊಟ್ಟಿ ಕಮ್ಮಿಯಾಗಿ ಸಾಲದೆ ಹೋದರೆ ಪಕ್ಕದ ಮನೆಯಿಂದ ತರುವುದು ವಾಡಿಕೆಯಾಗಿತ್ತು. ಇನ್ನೊಂದೇನೆಂದರೆ, ಬಡವರು ಒಂದೇ ಕೋಣೆಯಲ್ಲಿ ನೆಲದ ಮೇಲೆಯೇ ಒಟ್ಟಿಗೆ ಮಲಗುತ್ತಿದ್ದರು.