ಪಾದಟಿಪ್ಪಣಿ
a ಕಡೇ ದಿವಸಗಳ ಬಗ್ಗೆ ತಿಳಿಸುತ್ತಿದ್ದಾಗ ಯೇಸು ತನ್ನ ಶಿಷ್ಯರಿಗೆ ಹಲವಾರು ದೃಷ್ಟಾಂತಗಳನ್ನು ಕೊಟ್ಟನು. ಮೊದಲು ಆತನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿಗೆ’ ಅಂದರೆ ದೇವಜನರ ಮಧ್ಯೆ ಮುಂದಾಳತ್ವ ವಹಿಸುವ ಅಭಿಷಿಕ್ತ ಸಹೋದರರ ಚಿಕ್ಕ ಗುಂಪಿಗೆ ಸೂಚಿಸಿದ್ದು ಆಸಕ್ತಿಕರ. (ಮತ್ತಾ. 24:45-47) ನಂತರ ಆತನು ಎಲ್ಲ ಅಭಿಷಿಕ್ತರಿಗೆ ಸೂಚಿಸುವಂಥ ದೃಷ್ಟಾಂತಗಳನ್ನು ಕೊಟ್ಟನು. (ಮತ್ತಾ. 25:1-30) ಕೊನೆಗೆ ಆತನು ಕ್ರಿಸ್ತನ ಸಹೋದರರನ್ನು ಬೆಂಬಲಿಸಿ, ಭೂಮಿ ಮೇಲೆ ಸದಾಕಾಲ ಜೀವಿಸುವವರ ಬಗ್ಗೆ ಮಾತಾಡಿದನು. (ಮತ್ತಾ. 25:31-46) ಅದೇ ರೀತಿಯಲ್ಲಿ ನಮ್ಮ ದಿನಗಳಲ್ಲಿ ಯೆಹೆಜ್ಕೇಲನ ಪ್ರವಾದನೆಯ ನೆರವೇರಿಕೆ ಆರಂಭವಾದಾಗ ಮೊದಲು ಅದು ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯಿದ್ದವರಿಗೆ ಅನ್ವಯವಾಯಿತು. ಇಸ್ರಾಯೇಲಿನ ಹತ್ತು ಕುಲಗಳು ಭೂಮಿ ಮೇಲೆ ಸದಾ ಜೀವಿಸುವವರಿಗೆ ಸಾಮಾನ್ಯವಾಗಿ ಸೂಚಿಸುವುದಿಲ್ಲವಾದರೂ, ಆ ಪ್ರವಾದನೆಯಲ್ಲಿ ವರ್ಣಿಸಲಾಗಿರುವ ಐಕ್ಯವು ಇವರ ಮತ್ತು ಅಭಿಷಿಕ್ತರ ಮಧ್ಯೆ ಇರುವ ಐಕ್ಯವನ್ನು ನೆನಪಿಗೆ ತರುತ್ತದೆ.