ಪಾದಟಿಪ್ಪಣಿ
a ಯೋಹಾನ 7:52–8:11ರ ವರೆಗಿನ ವಚನಗಳು ಮೂಲತಃ ಬೈಬಲಿನ ಭಾಗವಾಗಿರಲಿಲ್ಲ. ಆದ್ದರಿಂದಲೇ ಇದನ್ನು ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯಲ್ಲಿ ಸೇರಿಸಲಾಗಿಲ್ಲ. ಆದರೆ ಬೇರೆ ಕೆಲವೊಂದು ಬೈಬಲ್ ಭಾಷಾಂತರಗಳು ಈ ವಚನಗಳನ್ನು ಸೇರಿಸಿವೆ. ಇವುಗಳನ್ನು ಓದಿ ಕೆಲವರು ಒಂದು ತಪ್ಪು ತೀರ್ಮಾನಕ್ಕೆ ಬಂದಿದ್ದಾರೆ. ಅದೇನೆಂದರೆ, ವ್ಯಭಿಚಾರ ಮಾಡಿರುವ ವ್ಯಕ್ತಿ ಅಪರಾಧಿಯೆಂದು ಪಾಪವಿಲ್ಲದ ವ್ಯಕ್ತಿ ಮಾತ್ರ ತೀರ್ಪುಕೊಡಬಹುದು. ಆದರೆ ದೇವರು ಇಸ್ರಾಯೇಲ್ಯರಿಗೆ ಈ ನಿಯಮವನ್ನು ಕೊಟ್ಟಿದ್ದನು: “ಯಾವನಾದರೂ ಪರನ ಹೆಂಡತಿಯೊಡನೆ ವ್ಯಭಿಚಾರಮಾಡಿದ್ದು ಹೊರಬಿದ್ದರೆ ಆ ಸ್ತ್ರೀಪುರುಷರಿಬ್ಬರಿಗೂ ಮರಣಶಿಕ್ಷೆಯಾಗಬೇಕು.”—ಧರ್ಮೋ. 22:22.