ಪಾದಟಿಪ್ಪಣಿ
a ನಾವು ಎಷ್ಟೇ ಸಮಯದಿಂದ ಯೆಹೋವನ ಸೇವೆ ಮಾಡುತ್ತಿದ್ದರೂ ಆತನ ಆರಾಧನೆಯನ್ನು ಇನ್ನೂ ಚೆನ್ನಾಗಿ ಮಾಡಲು ಮತ್ತು ಉತ್ತಮ ಕ್ರೈಸ್ತರಾಗಲು ಪ್ರಯತ್ನ ಮಾಡುತ್ತಲೇ ಇರಬೇಕು. ಈ ಪ್ರಯತ್ನವನ್ನು ಯಾವತ್ತೂ ಬಿಟ್ಟುಬಿಡದಿರಲು ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳಿಗೆ ಉತ್ತೇಜಿಸಿದನು. ಫಿಲಿಪ್ಪಿ ಸಭೆಯವರಿಗೆ ಆತನು ಬರೆದ ಪತ್ರದಿಂದ ಜೀವಕ್ಕಾಗಿ ನಾವು ಓಡುತ್ತಿರುವ ಓಟದಲ್ಲಿ ಕೊನೆವರೆಗೆ ಓಡಲು ಪ್ರೋತ್ಸಾಹ ಸಿಗುತ್ತದೆ. ಪೌಲನು ಬರೆದ ಆ ಮಾತುಗಳನ್ನು ನಾವು ಹೇಗೆ ಅನ್ವಯಿಸಬಹುದೆಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.