ಪಾದಟಿಪ್ಪಣಿ
c ಚಿತ್ರ ವಿವರಣೆ: ಸೈತಾನ ಹವ್ವಳ ಹತ್ರ ದೇವರೊಬ್ಬ ಸುಳ್ಳುಗಾರ ಅಂತ ಹೇಳಿ ಯೆಹೋವನ ಹೆಸ್ರಿಗೆ ಕಳಂಕ ತಂದ. ಶತಮಾನಗಳುದ್ದಕ್ಕೂ ದೇವರ ಬಗ್ಗೆ ಅಪಪ್ರಚಾರ ಮಾಡ್ತಾ ಬಂದಿದ್ದಾನೆ. ಉದಾಹರಣೆಗೆ ದೇವರು ಕ್ರೂರಿ, ಜನ್ರನ್ನು ನರಕದಲ್ಲಿ ಹಾಕಿ ಸುಡ್ತಾನೆ ಮತ್ತು ಆತ ಮನುಷ್ಯರನ್ನು ಸೃಷ್ಟಿ ಮಾಡಿಲ್ಲ, ಅವ್ರು ವಿಕಾಸವಾಗಿ ಬಂದಿದ್ದಾರೆ ಅನ್ನೋ ಸುಳ್ಳು ವಿಚಾರಗಳನ್ನು ಕಲಿಸುತ್ತಿದ್ದಾನೆ.