ಪಾದಟಿಪ್ಪಣಿ
a ತುಂಬ ವರ್ಷದಿಂದ ಸೇವೆ ಮಾಡಿರೋ ಸಹೋದರ ಅಥವಾ ಸಹೋದರಿ ‘ಇಷ್ಟು ವರ್ಷ ಈ ದುಷ್ಟಲೋಕದಲ್ಲಿ ನಾನು ಬದುಕಿರುತ್ತೀನಿ ಅಂತ ಕನಸುಮನಸ್ಸಲ್ಲೂ ಅಂದ್ಕೊಂಡಿರಲಿಲ್ಲ’ ಅಂತ ಹೇಳಿದ್ದು ನಿಮಗೆ ನೆನಪಿದ್ಯಾ? ಯೆಹೋವ ದೇವರು ಬೇಗ ಅಂತ್ಯ ತರಬೇಕು ಅಂತ ನಾವೆಲ್ಲಾ ಆಸೆಪಡ್ತೀವಿ. ಕಷ್ಟ ಬಂದಾಗಂತೂ ದೇವರ ಸರ್ಕಾರ ಬೇಗ ಬರಬೇಕು ಅಂತ ಯೋಚಿಸ್ತೀವಿ. ಆದ್ರೂ ನಾವೆಲ್ಲರೂ ತಾಳ್ಮೆಯಿಂದ ಕಾಯಬೇಕಾಗುತ್ತೆ. ಈ ಲೇಖನದಲ್ಲಿ, ತಾಳ್ಮೆಯಿಂದ ಕಾಯೋ ಗುಣ ಬೆಳೆಸಿಕೊಳ್ಳೋಕೆ ಸಹಾಯ ಮಾಡೋ ಬೈಬಲ್ ತತ್ವಗಳ ಬಗ್ಗೆ ಕಲಿತೀವಿ. ಜೊತೆಗೆ ನಾವು ತಾಳ್ಮೆಯಿಂದ ಇರಬೇಕಾದ ಎರಡು ಸನ್ನಿವೇಶಗಳ ಬಗ್ಗೆ ನೋಡುತ್ತೀವಿ ಮತ್ತು ತಾಳ್ಮೆಯಿಂದ ಕಾಯುವಾಗ ಸಿಗೋ ಆಶೀರ್ವಾದಗಳ ಬಗ್ಗೆನೂ ಚರ್ಚಿಸ್ತೀವಿ.