ಪಾದಟಿಪ್ಪಣಿ
b ಚಿತ್ರ ವಿವರಣೆ ಪುಟ: ಚಿಕ್ಕವಯಸ್ಸಿಂದಾನೂ ಒಬ್ಬ ಸಹೋದರಿ ಯೆಹೋವ ದೇವರಿಗೆ ಪ್ರಾರ್ಥಿಸುತ್ತಾ ಬಂದಿದ್ದಾಳೆ. ಆ ಸಹೋದರಿ ಚಿಕ್ಕವಳಿದ್ದಾಗ ಅವಳ ಅಪ್ಪ-ಅಮ್ಮ ಹೇಗೆ ಪ್ರಾರ್ಥನೆ ಮಾಡಬೇಕು ಅಂತ ಹೇಳಿಕೊಟ್ಟಿದ್ರು. ದೊಡ್ಡವಳಾದ ಮೇಲೆ ಪಯನೀಯರ್ ಸೇವೆ ಮಾಡುವಾಗ ‘ಸೇವೆನ ಚೆನ್ನಾಗಿ ಮಾಡೋಕೆ ಸಹಾಯ ಮಾಡಪ್ಪಾ’ ಅಂತ ಪ್ರಾರ್ಥನೆ ಮಾಡ್ತಿದ್ದಾಳೆ. ಮದುವೆಯಾದ ಮೇಲೆ ಅವಳ ಗಂಡನಿಗೆ ಹುಷಾರಿಲ್ಲದೆ ಇದ್ದಾಗ ‘ಈ ಕಷ್ಟನ ತಾಳಿಕೊಳ್ಳೋಕೆ ಶಕ್ತಿಕೊಡಪ್ಪಾ’ ಅಂತ ಬೇಡಿಕೊಳ್ತಾ ಇದ್ದಾಳೆ. ಅವಳ ಗಂಡ ತೀರಿಕೊಂಡ ಮೇಲೂ ಆಕೆ ಪ್ರಾರ್ಥನೆ ಮಾಡ್ತಾ ಇದ್ದಾಳೆ. ಇಷ್ಟು ದಿನ ಯೆಹೋವ ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟಿದ್ದನ್ನ ನೆನಸಿಕೊಂಡು ಮುಂದೆನೂ ತನ್ನ ಪ್ರಾರ್ಥನೆಗೆ ಉತ್ತರ ಕೊಡ್ತಾರೆ ಅಂತ ನಂಬಿಕೆ ಇಟ್ಟಿದ್ದಾಳೆ.