ಪಾದಟಿಪ್ಪಣಿ
b ಪದವಿವರಣೆ: “ಆಧ್ಯಾತ್ಮಿಕ ಪರದೈಸ್” ಅನ್ನೋದು ನಾವೆಲ್ಲರೂ ಯೆಹೋವನನ್ನು ಒಗ್ಗಟ್ಟಿಂದ, ಸಂತೋಷದಿಂದ ಆರಾಧಿಸೋದನ್ನ ಸೂಚಿಸುತ್ತೆ. ಇಲ್ಲಿ ದೇವರ ಬಗ್ಗೆ ಸತ್ಯ ಕಲಿತಾ ಇದ್ದೀವಿ. ಯೆಹೋವ ದೇವರೇ ಇದನ್ನೆಲ್ಲ ಕಲಿಸಿಕೊಡ್ತಿದ್ದಾನೆ. ನಾವು ಆತನ ಸರಕಾರದ ಬಗ್ಗೆ ಜನ್ರಿಗೆ ಸಿಹಿಸುದ್ದಿ ಸಾರ್ತಾ ಇದ್ದೀವಿ. ಆತನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಂಡಿದ್ದೀವಿ, ಸಹೋದರ ಸಹೋದರಿಯರ ಜೊತೆಗೂ ನಮಗೆ ಒಳ್ಳೇ ಸಂಬಂಧ ಇದೆ. ಜೀವನದಲ್ಲಿ ಬರೋ ಕಷ್ಟಗಳನ್ನ ನಾವು ಸಂತೋಷದಿಂದ ಸಹಿಸಿಕೊಳ್ಳೋಕೆ ಇವರು ನಮಗೆ ಸಹಾಯ ಮಾಡ್ತಾರೆ. ನಾವು ಯೆಹೋವನಿಗೆ ಇಷ್ಟ ಆಗೋ ತರ ಆತನನ್ನ ಆರಾಧಿಸೋಕೆ ಮತ್ತು ಜೀವಿಸೋಕೆ ಶುರುಮಾಡಿದಾಗ ಈ ಆಧ್ಯಾತ್ಮಿಕ ಪರದೈಸಲ್ಲಿ ಕಾಲಿಡ್ತೀವಿ.