ಪಾದಟಿಪ್ಪಣಿ
a ಟಿಂಡೇಲ್ ತಾನು ಭಾಷಾಂತರಿಸಿದ ಬೈಬಲಿನ ಆರಂಭದ ಐದು ಪುಸ್ತಕಗಳಲ್ಲಿ“Iehouah” (ಯೆಹೂವಾ) ಅಂತ ಬಳಸಿದನು. ಸಮಯ ಹೋದಂತೆ ಇಂಗ್ಲಿಷ್ ಭಾಷೆ ಬದಲಾಯಿತು. ದೇವರ ಹೆಸರಿನ ಅಕ್ಷರಗಳೂ ಬದಲಾದವು. ಉದಾಹರಣೆಗೆ, 1612 ರಲ್ಲಿ ಹೆನ್ರಿ ಏನ್ಸ್‌ವರ್ತ್ ಕೀರ್ತನೆ ಪುಸ್ತಕ ಭಾಷಾಂತರ ಮಾಡುವಾಗ ಎಲ್ಲ ಕಡೆ “Iehovah” (ಯೆಹೋವ) ಅಂತ ಬಳಸಿದನು. ಆದರೆ ಅವನು 1639 ರಲ್ಲಿ ಆ ಭಾಷಾಂತರವನ್ನು ಪರಿಷ್ಕರಿಸಿದಾಗ “Jehovah” (ಜೆಹೋವ) ಅಂತ ಬಳಸಿದನು. 1901 ರಲ್ಲಿ ಅಮೆರಿಕನ್ ಸ್ಟ್ಯಾಂಡರ್ಡ್ ವರ್ಷನ್ ಬೈಬಲಿನ ಅನುವಾದಕರು ಹೀಬ್ರು ಗ್ರಂಥದಲ್ಲಿ ದೇವರ ಹೆಸರಿರುವ ಕಡೆಯೆಲ್ಲ “ಜೆಹೋವ” ಅಂತ ಬಳಸಿದರು.