ಪಾದಟಿಪ್ಪಣಿ
b ಯೇಸುವನ್ನ “ದೇವರ ಮಗ” ಅಂತ ಕರಿಯೋದು ಸರಿಯಲ್ಲ ಅಂತಾರೆ ಕೆಲವರು. ಯಾಕಂದ್ರೆ ದೇವರು ಮರಿಯಳ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಂಡನು ಅನ್ನೋ ಅರ್ಥ ಬಂದುಬಿಡುತ್ತೆ ಅಂತ ಅವರು ಹೇಳ್ತಾರೆ. ಆದ್ರೆ ಬೈಬಲ್ ಹೀಗೆ ಕಲಿಸಲ್ಲ. ಬೈಬಲ್ ಯೇಸುವನ್ನ “ದೇವರ ಮಗ,” “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ” ಅಂತಾನೇ ಹೇಳುತ್ತೆ. ಯಾಕಂದ್ರೆ ಯೇಸುವನ್ನೇ ದೇವರು ಮೊದಲು ಸೃಷ್ಟಿ ಮಾಡಿದನು, ತನ್ನ ಕೈಯಾರೆ ಸೃಷ್ಟಿ ಮಾಡಿದನು. (ಕೊಲೊಸ್ಸೆ 1:13-15) ಮೊದಲ ಮನುಷ್ಯನಾದ ಆದಾಮನನ್ನ “ದೇವರ ಮಗ” ಅಂತ ಬೈಬಲ್ ಕರಿಯುತ್ತೆ. (ಲೂಕ 3:38) ಯಾಕಂದ್ರೆ ಆದಾಮನನ್ನ ದೇವರೇ ಸೃಷ್ಟಿ ಮಾಡಿದ್ದು.