ಗುರುವಾರ, ಸೆಪ್ಟೆಂಬರ್ 11
ನೀವು ಅವ್ರನ್ನ ಪ್ರೀತಿಸ್ತೀರ ಅಂತ ತೋರಿಸಿ.—2 ಕೊರಿಂ. 8:24.
ನಾವು ಸಭೆಯಲ್ಲಿ ಕೆಲವ್ರನ್ನ ಫ್ರೆಂಡ್ಸ್ ಮಾಡ್ಕೊಂಡು ಬರೀ ಅವ್ರ ಜೊತೆನೇ ಮಾತಾಡೋದಲ್ಲ, ಬೇರೆಯವ್ರನ್ನೂ ಸೇರಿಸ್ಕೊಬೇಕು. ಹೀಗೆ ನಮ್ಮ ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸಬೇಕು. (2 ಕೊರಿಂ. 6:11-13) ನಮ್ಮ ಸಭೆಗಳಲ್ಲೂ ಕೆಲವು ಸಹೋದರ ಸಹೋದರಿಯರ ಹಿನ್ನೆಲೆ, ಸ್ವಭಾವ ಬೇರೆ ಬೇರೆ ಇರುತ್ತೆ. ಆದ್ರೂ ನಾವು ಅವ್ರಿಗೆ ಪ್ರೀತಿ ತೋರಿಸಬೇಕು. ಯೆಹೋವನ ತರ ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೋಡಬೇಕು. ಯಾಕಂದ್ರೆ ಮಹಾ ಸಂಕಟದ ಸಮಯದಲ್ಲಿ ನಾವು ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸೋದು ತುಂಬಾ ಪ್ರಾಮುಖ್ಯ. ಆ ಸಮಯದಲ್ಲಿ ಯೆಹೋವ ನಮ್ಮನ್ನ ಹೇಗೆ ಕಾಪಾಡ್ತಾನೆ? ಹಿಂದಿನ ಕಾಲದಲ್ಲಿ ಬಾಬೆಲ್ ಮೇಲೆ ದಾಳಿ ಆದಾಗ ಯೆಹೋವ ತನ್ನ ಜನ್ರಿಗೆ ಏನು ಹೇಳಿದನು ನೋಡಿ: “ನನ್ನ ಜನ್ರೇ, ನಿಮ್ಮನಿಮ್ಮ ಒಳಗಿನ ಕೋಣೆಗಳಿಗೆ ಹೋಗಿ, ಬಾಗಿಲು ಹಾಕೊಳ್ಳಿ, ಸ್ವಲ್ಪಹೊತ್ತು ಬಚ್ಚಿಟ್ಕೊಳ್ಳಿ. ನನ್ನ ಕೋಪ ತೀರೋ ತನಕ ಅಲ್ಲೇ ಇರಿ.” (ಯೆಶಾ. 26:20) ಮಹಾ ಸಂಕಟದಲ್ಲಿ ನಮಗೆ ಇದೇ ತರದ ನಿರ್ದೇಶನ ಸಿಗಬಹುದು. w23.07 6-7 ¶14-16
ಶುಕ್ರವಾರ, ಸೆಪ್ಟೆಂಬರ್ 12
ಈ ಲೋಕ ಬದಲಾಗ್ತಾನೇ ಇದೆ.—1 ಕೊರಿಂ. 7:31.
ನಾವು ನಮ್ಮನ್ನೇ ಹೀಗೆ ಕೇಳ್ಕೊಬೇಕು: “ಜನ ನನ್ನನ್ನ ತುಂಬ ಕಟ್ಟುನಿಟ್ಟು, ಒರಟು, ಹಠಮಾರಿ ಅಂತ ಅಂದ್ಕೊಂಡಿದ್ದಾರಾ? ಅಥವಾ ಬಿಟ್ಕೊಡೋ ಸ್ವಭಾವದವನು, ಹೊಂದ್ಕೊಳ್ತಾನೆ, ಬೇರೆಯವ್ರನ್ನ ಅರ್ಥ ಮಾಡ್ಕೊಳ್ತಾನೆ ಅಂತ ಅಂದ್ಕೊಂಡಿದ್ದಾರಾ? ಬೇರೆಯವರು ಹೇಳೋದನ್ನ ಕೇಳ್ತೀನಾ? ಅವ್ರಿಗೆ ಏನು ಇಷ್ಟಾನೋ ಅದನ್ನ ಮಾಡೋಕೆ ಬಿಟ್ಕೊಡ್ತೀನಾ?” ನಾವು ಬಿಟ್ಕೊಟ್ಟಷ್ಟು ಯೆಹೋವ ಮತ್ತು ಯೇಸು ತರ ಆಗ್ತೀವಿ. ನಮ್ಮ ಜೀವನ ತಲೆಕೆಳಗೆ ಆದಾಗ್ಲೂ ನಾವು ಪರಿಸ್ಥಿತಿಗೆ ಹೊಂದ್ಕೊಬೇಕು. ಪರಿಸ್ಥಿತಿ ಬದಲಾದಾಗ ನಮಗೆ ತುಂಬ ಕಷ್ಟ ಆಗುತ್ತೆ. ಉದಾಹರಣೆಗೆ ನಮಗೆ ದಿಢೀರಂತ ಆರೋಗ್ಯ ಹಾಳಾದಾಗ, ನಾವಿರೋ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಬದಲಾದಾಗ ಅಥವಾ ಸರ್ಕಾರದಲ್ಲಿ ಏನೋ ಬದಲಾವಣೆ ಆದಾಗ ನಮಗೆ ಕಷ್ಟ ಆಗುತ್ತೆ. (ಪ್ರಸಂ. 9:11) ಸಂಘಟನೆಯಿಂದ ನಮಗೆ ಬೇರೆ ನೇಮಕ ಸಿಕ್ಕಿದಾಗ್ಲೂ ಕಷ್ಟ ಆಗಬಹುದು. ಹೀಗಾದಾಗ ಪರಿಸ್ಥಿತಿಗೆ ಹೊಂದ್ಕೊಳ್ಳೋಕೆ ನಾವೇನು ಮಾಡಬೇಕು? (1) ಸನ್ನಿವೇಶ ಬದಲಾಗಿದೆ ಅಂತ ಒಪ್ಕೊಳ್ಳಿ. (2) ಮುಂದೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಯೋಚ್ನೆ ಮಾಡಿ. (3) ಈಗ ಏನು ಒಳ್ಳೇದಾಗ್ತಿದೆ ಅನ್ನೋದಕ್ಕೆ ಗಮನಕೊಡಿ. (4) ಬೇರೆಯವ್ರಿಗೆ ಸಹಾಯ ಮಾಡಿ. w23.07 21-22 ¶7-8
ಶನಿವಾರ, ಸೆಪ್ಟೆಂಬರ್ 13
ನೀನು ತುಂಬ ಅಮೂಲ್ಯ.—ದಾನಿ. 9:23.
ಪ್ರವಾದಿ ದಾನಿಯೇಲನನ್ನ ಬಾಬೆಲಿನವರು ಯೆರೂಸಲೇಮಿನಿಂದ ಕೈದಿಯಾಗಿ ಕರ್ಕೊಂಡು ಬಂದ್ರು. ಆಗ ದಾನಿಯೇಲ ಚಿಕ್ಕವನಾಗಿದ್ದ. ಆದ್ರೂ ಅಲ್ಲಿನ ಅಧಿಕಾರಿಗಳಿಗೆ ದಾನಿಯೇಲನನ್ನ ನೋಡಿದಾಗ ತುಂಬ ಇಷ್ಟ ಆಯ್ತು. ಯಾಕಂದ್ರೆ ದಾನಿಯೇಲನಲ್ಲಿ ‘ಯಾವ ಕುಂದುಕೊರತೆನೂ’ ಇರಲಿಲ್ಲ. ನೋಡೋಕೆ ತುಂಬಾ ಚೆನ್ನಾಗಿದ್ದ. ಅಷ್ಟೇ ಅಲ್ಲ, ಅವನು ಒಂದು ದೊಡ್ಡ ಮನೆತನದಿಂದ ಬಂದಿದ್ದ. (1 ಸಮು. 16:7) ಇದನ್ನೆಲ್ಲ ನೋಡಿ ಬಾಬೆಲಿನವರು ಅವನಿಗೆ ಆಸ್ಥಾನದಲ್ಲಿ ಕೆಲಸ ಮಾಡೋಕೆ ಬೇಕಾದ ತರಬೇತಿ ಕೊಟ್ರು. (ದಾನಿ. 1:3, 4, 6) ಯೆಹೋವ ದೇವರು ದಾನಿಯೇಲನನ್ನ ಪ್ರೀತಿಸೋಕೆ ಕಾರಣ, ಅವನು ಯಾವಾಗ್ಲೂ ಯೆಹೋವನಿಗೆ ಇಷ್ಟ ಆಗೋ ತರ ಇರೋಕೆ ಪ್ರಯತ್ನ ಮಾಡ್ತಿದ್ದ. ಅದಕ್ಕೆ, ತುಂಬ ವರ್ಷ ಸೇವೆ ಮಾಡಿ ತನ್ನ ಹತ್ರ ಒಳ್ಳೇ ಹೆಸ್ರು ಪಡ್ಕೊಂಡಿದ್ದ ನೋಹ ಮತ್ತು ಯೋಬನಂಥ ವ್ಯಕ್ತಿಗಳ ಜೊತೆ ಯೆಹೋವ ದೇವರು ದಾನಿಯೇಲನ ಹೆಸ್ರನ್ನೂ ಸೇರಿಸಿದನು. ಆಗ ದಾನಿಯೇಲನಿಗೆ 19-20 ವರ್ಷ ಇದ್ದಿರಬೇಕು ಅಷ್ಟೇ. (ಆದಿ. 5:32; 6:9, 10; ಯೋಬ 42:16, 17; ಯೆಹೆ. 14:14) ಅವತ್ತಿಂದ ಹಿಡಿದು ಅವನು ಸಾಯೋ ತನಕನೂ ಯೆಹೋವ ಅವನ ಜೊತೆನೇ ಇದ್ದನು, ಅವನನ್ನ ಪ್ರೀತಿಸಿದನು.—ದಾನಿ. 10:11, 19. w23.08 2 ¶1-2