“ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವಂತಹ ಒಂದು ಪುಸ್ತಕ”
ಕಳೆದ ಬೇಸಗೆಯಲ್ಲಿ ಅರ್ಕನ್ಸಾಸ್ ಡೆಮೊಕ್ರ್ಯಾಟ್ ಗಸೆಟ್ ಎಂಬ ವಾರ್ತಾಪತ್ರಿಕೆಯು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಅನೇಕ ಪುಸ್ತಕಗಳನ್ನು ವಿಮರ್ಶಿಸಿತು. ಆ ಪುಸ್ತಕಗಳಲ್ಲಿ ಒಂದರ ಬಗ್ಗೆ ಅದು ಹೇಳಿದ್ದು: “ಯುವ ಜನರ ಪ್ರಶ್ನೆಗಳು ಎಂಬ ಪುಸ್ತಕವು, ಕುಟುಂಬಗಳಿಗೆ ವಾಸ್ತವಿಕವೂ ಪ್ರಾಯೋಗಿಕವೂ ಆಗಿರುವಂತಹ ಒಂದು ಪುಸ್ತಕವಾಗಿದೆ. ಆ ಕುಟುಂಬಗಳು ಯಾವುದೇ ಧರ್ಮಕ್ಕೆ ಸೇರಿದವುಗಳಾಗಿರಲಿ, ಇದು ಅವುಗಳಿಗೆ ಅನ್ವಯಿಸುತ್ತದೆ . . . .
“ಈ ಪುಸ್ತಕವು ತನ್ನ ಓದುಗರಿಗೆ ಬಹಳಷ್ಟು ನೈತಿಕ ಹಾಗೂ ಭಾವನಾತ್ಮಕ ಬುದ್ಧಿವಾದವನ್ನು ನೀಡುತ್ತದೆ. ಉದಾಹರಣೆಗೆ, ಎಲ್ಲ ಯುವ ಜನರು ತಮ್ಮ ಹೆತ್ತವರ ನಿರ್ಬಂಧದಿಂದ ಸ್ವತಂತ್ರರಾಗಿರಲು ಬಯಸುತ್ತಾರೆ ಎಂಬುದನ್ನು ಲೇಖಕರು ಅರ್ಥಮಾಡಿಕೊಳ್ಳುತ್ತಾರಾದರೂ, ಈ ಪುಸ್ತಕವು ಯುವ ಜನರಿಗೆ ಕೆಳಗಿನ ಸಲಹೆಯನ್ನು ಕೊಡುತ್ತದೆ:
“‘ನಿಮಗೆ ಹೆಚ್ಚು ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಬೇಕೊ? ಹಾಗಾದರೆ ನೀವು ಜವಾಬ್ದಾರಿಯುತರಾಗಿದ್ದೀರಿ ಎಂಬುದನ್ನು ತೋರಿಸಿಕೊಡಿ. ನಿಮ್ಮ ಹೆತ್ತವರು ನಿಮಗೆ ನೇಮಿಸುವಂತಹ ಯಾವುದೇ ಕೆಲಸಗಳನ್ನು ಗಂಭೀರವಾಗಿ ತೆಗೆದುಕೊಳ್ಳಿರಿ.’
“ವೈಯಕ್ತಿಕ ಹೊಣೆಗಾರಿಕೆಯ ತತ್ವವನ್ನು ಸುಸಂಗತವಾಗಿ ಸಾರುವಂತಹ ಹಾಗೂ ತಮ್ಮ ವಿಷಯದಲ್ಲಿ ಮತ್ತು ಇತರರ ವಿಷಯದಲ್ಲಿ ತುಂಬ ಗೌರವಭಾವವುಳ್ಳವರಾಗಿರುವಂತೆ ಯುವ ಜನರಿಗೆ ಬುದ್ಧಿಹೇಳುವಂತಹ ಒಂದು ಕೃತಿಯನ್ನು ಗಣ್ಯಮಾಡದಿರುವ ಹೆತ್ತವರು ತುಂಬ ವಿರಳ. ಈ ಪುಸ್ತಕವು ಯಾವಾಗಲೂ ತನ್ನ ಬುದ್ಧಿವಾದಕ್ಕಾಗಿ ಬೈಬಲಿನ ಆಧಾರವನ್ನು ಕೊಡುತ್ತದಾದರೂ, ಹೆಚ್ಚಾಗಿ ಇದು ಪ್ರಾಯೋಗಿಕ ಜ್ಞಾನ ಹಾಗೂ ಸೂಕ್ಷ್ಮದೃಷ್ಟಿಯ ಮೇಲಾಧಾರಿತವಾದದ್ದಾಗಿದೆ. . . . ಆತ್ಮಾಭಿಮಾನದ ಕುರಿತು ತಿಳಿಸಲ್ಪಟ್ಟಿರುವ ವಿಭಾಗವು ವಿಶೇಷವಾಗಿ ಪ್ರಭಾವಕಾರಿಯಾಗಿದೆ, ಏಕೆಂದರೆ ಯಾವುದೇ ಹತೋಟಿಯಿಲ್ಲದ ಆತ್ಮಪ್ರಶಂಸೆಯು ತುಂಬ ಪ್ರಯೋಜನದಾಯಕವಾಗಿದೆ ಎಂಬ ಅನಿಸಿಕೆಯಿಂದ ಅನೇಕ ಯುವ ಜನರು ತಪ್ಪು ಮಾರ್ಗವನ್ನು ಹಿಡಿಯುತ್ತಿದ್ದಾರೆ.”
ಈ ಪುಸ್ತಕದಿಂದ ಉದ್ಧರಿಸಿ ಹೇಳಿದ ಬಳಿಕ ಈ ಲೇಖನವು ಮುಂದುವರಿಸಿದ್ದು: “ಹೆಮ್ಮೆಯಿಂದ ಬೀಗುವುದು ಒಂದು ರೀತಿಯ ಅಹಂಕಾರವಾಗಿದೆ ಮತ್ತು ದೀನಭಾವವು ಕ್ರೈಸ್ತ ಜೀವಿತದ ಮೂಲೆಗಲ್ಲಾಗಿದೆ ಎಂಬ ಈ ದಯಾಪರ ಜ್ಞಾಪನಗಳು, ಸದುದ್ದೇಶವುಳ್ಳ ಸ್ನೇಹಿತರು ಹಾಗೂ ಸಲಹೆಗಾರರಿಂದ ಯುವ ಜನರ ಮೇಲೆ ಹೇರಲ್ಪಡುವ ಜನಪ್ರಿಯ-ಮನೋವಿಜ್ಞಾನದ ಅಸಂಬದ್ಧ ವಿಚಾರಗಳಲ್ಲಿ ಕೆಲವಕ್ಕೆ ಪರಿಹಾರಗಳಾಗಿರಸಾಧ್ಯವಿದೆ.”
ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಈ ಪ್ರಕಾಶನದ ಕುರಿತು ಹೆಚ್ಚನ್ನು ತಿಳಿದುಕೊಳ್ಳುವಂತೆ ನಿಮಗೆ ಸಹಾಯಮಾಡಲು ನಾವು ತುಂಬ ಸಂತೋಷಪಡುವೆವು. ನಿಮ್ಮ ಸ್ಥಳಿಕ ಕ್ಷೇತ್ರದಲ್ಲಿರುವ ನಮ್ಮ ಪ್ರತಿನಿಧಿಗಳಲ್ಲಿ ಒಬ್ಬರು ನಿಮ್ಮನ್ನು ಭೇಟಿಮಾಡುವಂತೆ ಏರ್ಪಡಿಸುವೆವು. ನೀವು ಇದರ ಬಗ್ಗೆ ತಿಳಿದುಕೊಳ್ಳಲು ಬಯಸುವಲ್ಲಿ, ದಯವಿಟ್ಟು ಇದರ ಜೊತೆಯಲ್ಲಿರುವ ಕೂಪನ್ ಅನ್ನು ಭರ್ತಿಮಾಡಿ, ಕೊಡಲ್ಪಟ್ಟಿರುವ ವಿಳಾಸಕ್ಕೆ ಕಳುಹಿಸಿರಿ ಅಥವಾ ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಪತ್ರ ಬರೆಯಿರಿ.
◻ ದಯವಿಟ್ಟು ನಿಮ್ಮ ಪ್ರತಿನಿಧಿಗಳಲ್ಲಿ ಒಬ್ಬರು ನನ್ನನ್ನು ಭೇಟಿಮಾಡುವಂತೆ ಏರ್ಪಡಿಸಿರಿ.
◻ ದಯವಿಟ್ಟು ಒಂದು ಉಚಿತ ಗೃಹ ಬೈಬಲ್ ಅಭ್ಯಾಸಕ್ಕಾಗಿ ನನ್ನನ್ನು ಸಂಪರ್ಕಿಸಿರಿ.