ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g04 4/8 ಪು. 26
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—2004
  • ಅನುರೂಪ ಮಾಹಿತಿ
  • “ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ನೋಡೋದ್ರಲ್ಲಿ ತಪ್ಪೇನಿದೆ?”
    ಕಾವಲಿನಬುರುಜು: ಈ ಜಗತ್ತನ್ನು ನಾನು ಬದಲಾಯಿಸಬೇಕಾಗಿಲ್ಲ
  • ಅಶ್ಲೀಲ ಚಿತ್ರಗಳನ್ನ ನೋಡೋದು ತಪ್ಪು ಯಾಕೆ?
    ಯುವಜನರ ಪ್ರಶ್ನೆಗಳು
  • ಪರಿವಿಡಿ
    ಎಚ್ಚರ!—2003
  • ಅಶ್ಲೀಲ ಸಾಹಿತ್ಯದಿಂದ ಉಂಟಾಗುವ ಹಾನಿ
    ಎಚ್ಚರ!—2003
ಇನ್ನಷ್ಟು
ಎಚ್ಚರ!—2004
g04 4/8 ಪು. 26

ನಮ್ಮ ವಾಚಕರಿಂದ

ಅಶ್ಲೀಲ ಸಾಹಿತ್ಯ “ಅಶ್ಲೀಲ ಸಾಹಿತ್ಯ​—⁠ಹಾನಿರಹಿತವೋ ಅಥವಾ ಹಾನಿಕಾರಕವೋ?” (ಅಕ್ಟೋಬರ್‌ - ಡಿಸೆಂಬರ್‌, 2003) ಎಂಬ ಲೇಖನಮಾಲೆಗಾಗಿ ನಿಮಗೆ ತುಂಬ ಉಪಕಾರ. ನನಗೆ ಈ ನೇರವಾದ ಸಲಹೆಯ ಅಗತ್ಯವಿತ್ತು. ಕ್ರೈಸ್ತನಾಗುವುದಕ್ಕೆ ಮೊದಲು ಬಹಳ ದೀರ್ಘ ಸಮಯದಿಂದಲೂ ನಾನು ಅಶ್ಲೀಲ ಸಾಹಿತ್ಯದ ವೀಕ್ಷಕನಾಗಿದ್ದೆ. ಇದೆಷ್ಟು ಹಾನಿಕರವಾಗಿದೆ ಮತ್ತು ಇದರ ಬಿಗಿಮುಷ್ಟಿಯಿಂದ, ಆಯಸ್ಕಾಂತದಂಥ ಸೆಳೆತದಿಂದ ತಪ್ಪಿಸಿಕೊಳ್ಳಲು ಯಾವ ನಿರ್ಣಾಯಕ ಹೆಜ್ಜೆಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಲೇಖನಗಳು ನನಗೆ ಇನ್ನಷ್ಟು ಸಹಾಯಮಾಡಿದವು.

ಇ. ಪಿ., ಅಮೆರಿಕ (g04 3/22)

ಇಪ್ಪತ್ತೆರಡು ವರ್ಷಗಳಿಂದ ಸಂತೋಷಭರಿತವಾಗಿದ್ದ ನನ್ನ ವಿವಾಹವು ಎರಡು ವರ್ಷಗಳ ಹಿಂದೆಯಷ್ಟೇ ವಿಚ್ಛೇದದಲ್ಲಿ ಕೊನೆಗೊಂಡಿತು. ಅಶ್ಲೀಲ ಸಾಹಿತ್ಯವು, ತುಂಬ ಒಳ್ಳೆಯ ಗಂಡನೂ ಪ್ರೀತಿಭರಿತ ತಂದೆಯೂ ಆಗಿದ್ದವನನ್ನು ನಮ್ಮಿಂದ ಕಸಿದುಕೊಂಡಿತು. ಈ ಭಯಾನಕ ಚಟವು, ಅವನ ದಯಾಭರಿತ ವ್ಯಕ್ತಿತ್ವವನ್ನು ಕೋಪಭರಿತವಾದ, ಸುಳ್ಳಾಡುವ ಹಾಗೂ ಮೃಗೀಯ ಸ್ವಭಾವಕ್ಕೆ ಮಾರ್ಪಡಿಸಿತು. ಅಶ್ಲೀಲ ಸಾಹಿತ್ಯದ ಫಲಿತಾಂಶಗಳಿಂದ ಕಷ್ಟಾನುಭವಿಸುತ್ತಿರುವುದು ನಾನೊಬ್ಬಳೇ ಎಂಬ ಅನಿಸಿಕೆ ನನಗಿತ್ತಾದರೂ, ಇದು ಅನೇಕರನ್ನು ಬಾಧಿಸುವಂಥ ವಿಷಮ ಸ್ಥಿತಿಯಾಗಿದೆ ಎಂಬುದು ಈಗ ನನಗೆ ಅರ್ಥವಾಗಿದೆ. ಉತ್ಕೃಷ್ಟ ರೀತಿಯಲ್ಲಿ ಬರೆಯಲ್ಪಟ್ಟಿರುವ ಈ ಲೇಖನಗಳಿಗಾಗಿ ನಿಮಗೆ ತುಂಬ ಉಪಕಾರ.

ಎಲ್‌. ಟಿ., ಅಮೆರಿಕ (g04 3/22)

ಬೈಬಲ್‌ ಅಧ್ಯಯನ ಮಾಡುವುದಕ್ಕೆ ಮುಂಚೆ ನಾನು ಒಂದು ದಶಕಕ್ಕಿಂತಲೂ ಹೆಚ್ಚಿನ ಕಾಲಾವಧಿಯ ವರೆಗೆ ಅಶ್ಲೀಲ ಸಾಹಿತ್ಯಕ್ಕೆ ಶರಣಾಗಿದ್ದೆ. ಇದರ ಸಮರ್ಥಕರು ಏನೇ ಪ್ರತಿಪಾದಿಸಲಿ, ಇದರ ವಿಷಯದಲ್ಲಿ ಸಕಾರಾತ್ಮಕವಾದದ್ದು ಏನೂ ಇಲ್ಲ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುವುದಕ್ಕೆ ಮುಂಚೆ ನಾನು ಹೆಚ್ಚುಕಡಿಮೆ ಪ್ರತಿಯೊಂದು ನಿಷಿದ್ಧ ಅಮಲೌಷಧದ ಚಟಹಿಡಿದವನಾಗಿದ್ದೆ. ನನ್ನ ಎಲ್ಲಾ ಚಟಗಳಲ್ಲೇ ಅಶ್ಲೀಲ ಸಾಹಿತ್ಯದ ಚಟವನ್ನು ಬಿಟ್ಟುಬಿಡುವುದು ನನಗೆ ಅತ್ಯಂತ ಕಷ್ಟಕರವಾದದ್ದಾಗಿತ್ತು. ಇಂಥ ಲೇಖನಗಳನ್ನು ಪ್ರಕಾಶಿಸುವುದನ್ನು ದಯವಿಟ್ಟು ಮುಂದುವರಿಸಿ.

ಜೆ. ಎ., ಅಮೆರಿಕ (g04 3/22)

ಮಧುಮೇಹ “ಮಧುಮೇಹದೊಂದಿಗೆ ಜೀವಿಸುವುದು” (ಜನವರಿ - ಮಾರ್ಚ್‌, 2004) ಎಂಬ ಮುಖಪುಟ ಲೇಖನಗಳಿಗಾಗಿ ನಿಮಗೆ ಉಪಕಾರಗಳು. ಸುಮಾರು 12 ವರ್ಷಗಳಿಂದ ನನಗೆ ಟೈಪ್‌ 1 ಮಧುಮೇಹವಿದೆ, ಮತ್ತು ಅನೇಕಾವರ್ತಿ ಇನ್ಸುಲಿನ್‌ ಇಂಜೆಕ್ಷನ್‌ಗಳನ್ನು ಕೊಡುವ ಮೂಲಕ ಚಿಕಿತ್ಸೆ ನಡೆಯುತ್ತಿದೆ. ನನ್ನ ಪತ್ನಿಯು ನನಗೆ ಬಹುತೇಕ ಬೆಂಬಲವನ್ನು ನೀಡುತ್ತಾಳೆ. ನಾವಿಬ್ಬರೂ ಈ ರೋಗದ ಕುರಿತು ಹೆಚ್ಚೆಚ್ಚನ್ನು ತಿಳಿದುಕೊಳ್ಳುತ್ತಿದ್ದೇವೆ, ನಾವಿಬ್ಬರೂ ಒಟ್ಟಿಗೆ ವೈದ್ಯರನ್ನು ಭೇಟಿಯಾಗುತ್ತೇವೆ, ಮತ್ತು ನಾನು ಇನ್ನಷ್ಟು ಸಕಾರಾತ್ಮಕವಾದ ಮನೋಭಾವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನು ಒಬ್ಬ ಸಂಚರಣ ಮೇಲ್ವಿಚಾರಕನಾಗಿ ಸೇವೆಮಾಡುತ್ತಿರುವುದರಿಂದ, ಒಬ್ಬ ಅಸ್ವಸ್ಥ ವ್ಯಕ್ತಿಯು ಜೀವನದ ಪಂಥಾಹ್ವಾನಗಳನ್ನು ಎದುರಿಸುವಂತೆ ಸಹಾಯಮಾಡಲಿಕ್ಕಾಗಿ ಅವನಿಗೆ ಹೆಚ್ಚು ದಯೆ ಹಾಗೂ ತಾಳ್ಮೆಯನ್ನು ತೋರಿಸುವ ಅಗತ್ಯವಿದೆ ಎಂಬ ಹೆಚ್ಚಿನ ಅರಿವು ಜೊತೆ ಕ್ರೈಸ್ತರಲ್ಲಿ ಇರುವುದನ್ನು ನಾನು ಗಮನಿಸಿದ್ದೇನೆ. ಇಂಥ ಮನೋಭಾವವು, ಸಭೆಗಳಿಗೆ ನಾನು ಮಾಡುವ ಶುಶ್ರೂಷೆಯನ್ನು ಮುಂದುವರಿಸುವಂತೆ ನನಗೆ ಸಹಾಯಮಾಡುತ್ತದೆ. ಈ ಲೇಖನಮಾಲೆಯು ತಕ್ಕ ಸಮಯದಲ್ಲಿ ನನ್ನ ಕೈಸೇರಿದೆ. ನಿಮಗೆ ಪುನಃ ಒಮ್ಮೆ ಉಪಕಾರ ಹೇಳುತ್ತೇನೆ.

ಡಬ್ಲ್ಯೂ. ಬಿ., ಪೋಲೆಂಡ್‌ (g04 3/8)

ನಾನು 28 ವರ್ಷಗಳಿಂದ ಮಧುಮೇಹ ರೋಗಿಯಾಗಿದ್ದೇನೆ. ನನ್ನ ಕುಟುಂಬದಲ್ಲಿ ಹತ್ತು ಮಂದಿ ಈ ರೋಗದಿಂದ ಕಷ್ಟಾನುಭವಿಸುತ್ತಿದ್ದಾರೆ. ನಿಮ್ಮ ಲೇಖನಮಾಲೆಯು, ಇಷ್ಟರ ತನಕ ನಾನು ನೋಡಿರುವವುಗಳಲ್ಲೇ ಅತಿ ಹೆಚ್ಚು ಗ್ರಹಣಸಾಧ್ಯ ಮಾಹಿತಿಯನ್ನು ಒಳಗೂಡಿದೆ. ಈ ಲೇಖನಗಳು ನಮ್ಮ ಸೃಷ್ಟಿಕರ್ತನ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ; ಆದರೆ ಈ ವಿಷಯವು ಐಹಿಕ ಲೇಖನಗಳಲ್ಲಿ ಇರುವುದಿಲ್ಲ. ನಾನು ನನ್ನ ಕುಟುಂಬದ ಮೇಲೆ ಅವಲಂಬಿತಳಾಗಲು ಬಯಸದಿದ್ದ ಕಾರಣ, ನಾನು ಅಸ್ವಸ್ಥಳು ಎಂಬುದನ್ನು ಇತರರಿಗೆ ತೋರಿಸಿಕೊಡದಿರುವಂತೆ ಜಾಗ್ರತೆವಹಿಸುತ್ತಿದ್ದೆ. ಇತರರ ಆರೈಕೆಮಾಡುವುದರಿಂದ ನನಗೆ ತುಂಬ ಸಂತೋಷ ಸಿಗುತ್ತದೆ. ಆದರೆ, ನಾನು ಇತರರನ್ನು ಹೆಚ್ಚು ಚೆನ್ನಾಗಿ ನೋಡಿಕೊಳ್ಳಸಾಧ್ಯವಾಗುವಂತೆ ಸ್ವತಃ ನನ್ನ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವ ಅಗತ್ಯವಿದೆ ಎಂಬುದನ್ನು ಮನಗಾಣಲು ಈ ಲೇಖನವು ನನಗೆ ಸಹಾಯಮಾಡಿತು.

ಎಲ್‌. ಪಿ., ಫ್ರಾನ್ಸ್‌ (g04 3/8)

ಯುವ ಜನರು ಪ್ರಶ್ನಿಸುವುದು ನಾನು 16 ವರ್ಷ ಪ್ರಾಯದವಳಾಗಿದ್ದೇನೆ ಮತ್ತು ಪ್ರೌಢ ಶಾಲೆಯ ಮೊದಲ ವರ್ಷದಲ್ಲಿದ್ದೇನೆ. ಈ ಮುಂಚೆ ಎಂದೂ ಎದುರಿಸೇ ಇಲ್ಲದಿರುವಂಥ ಪಂಥಾಹ್ವಾನಗಳು ಮತ್ತು ಒತ್ತಡಗಳನ್ನು ನಾನು ಎದುರಿಸುತ್ತಿದ್ದೇನೆ. ಸಮಾನಸ್ಥರ ಒತ್ತಡದ ಪರಿಣಾಮಗಳನ್ನು ನಾನು ನಿಜವಾಗಿಯೂ ಅನುಭವಿಸುತ್ತಿದ್ದೇನೆ. “ಯುವ ಜನರು ಪ್ರಶ್ನಿಸುವುದು” ಎಂಬ ಲೇಖನಗಳು, ಬೈಬಲ್‌ ವಾಚನ ಮತ್ತು ಅಧ್ಯಯನದ ಮಹತ್ವವನ್ನು ಅರ್ಥಮಾಡಿಕೊಳ್ಳುವಂತೆ ನನಗೆ ಸಹಾಯಮಾಡಿವೆ. ಹದಿವಯಸ್ಕರಿಗೆ ನೀವು ತೋರಿಸುವ ಹಿತಾಸಕ್ತಿಯನ್ನು​—⁠ಕೆಲವೊಮ್ಮೆ ನನಗನಿಸುತ್ತದೆ ವೈಯಕ್ತಿಕವಾಗಿ ನನಗೇ ಈ ರೀತಿಯ ಹಿತಾಸಕ್ತಿಯು ತೋರಿಸಲ್ಪಡುತ್ತಿದೆ​—⁠ನಾನು ನಿಜವಾಗಿಯೂ ಗಣ್ಯಮಾಡುತ್ತೇನೆ!

ಎಸ್‌. ಆರ್‌., ಅಮೆರಿಕ (g04 1/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ