ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g05 1/8 ಪು. 32
  • ಯುವ ಜನರಿಗೆ ಬೇಕಾದದ್ದು ಇದೇ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯುವ ಜನರಿಗೆ ಬೇಕಾದದ್ದು ಇದೇ
  • ಎಚ್ಚರ!—2005
ಎಚ್ಚರ!—2005
g05 1/8 ಪು. 32

ಯುವ ಜನರಿಗೆ ಬೇಕಾದದ್ದು ಇದೇ

ಅನೇಕ ವರ್ಷಗಳಿಂದ, ಆಬಾಲವೃದ್ಧರೆನ್ನದೆ ಎಲ್ಲರೂ ಸಮಾನವಾಗಿ ಹೇಳುತ್ತಾ ಬಂದಿರುವ ಸಂಗತಿಯೇನೆಂದರೆ, ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವು, ಯುವ ಜನರು ತಿಳಿದಿರಬೇಕಾದದ್ದೆಲ್ಲವನ್ನೂ ತಿಳಿಸುತ್ತದೆಂದೇ. ಮೆಕ್ಸಿಕೊ ದೇಶದ ಸೀನಲೋಅ ರಾಜ್ಯದ ಒಬ್ಬ ಹದಿಪ್ರಾಯದ ಹುಡುಗಿಯು, ತನ್ನ ಕೆಲವು ಮಂದಿ ಸ್ನೇಹಿತರಿಗಾಗಿ ಈ ಪುಸ್ತಕದ ಹತ್ತು ಪ್ರತಿಗಳನ್ನು ವಿನಂತಿಸಿದಳು. ತಾನೊಬ್ಬ ಯೆಹೋವನ ಸಾಕ್ಷಿಯಾಗಿಲ್ಲದಿದ್ದರೂ, ಆ ಪುಸ್ತಕವನ್ನು ತಾನು ನಿಜವಾಗಿಯೂ ಇಷ್ಟಪಡುತ್ತೇನೆಂದು ಅವಳು ಹೇಳಿದಳು. ಅವಳು ವಿವರಿಸಿದ್ದು: “ನನಗೆ ನಿಮ್ಮ ಬಗ್ಗೆ ತುಂಬ ಅಭಿಮಾನವಿದೆ.”

ಅವಳು ಹೇಳಿದ್ದು: “ನನ್ನ ಅನೇಕ ಸ್ನೇಹಿತರಿಗೆ ಇಂದು ತಮ್ಮ ಜೀವನದ ಬಗ್ಗೆ ಹಲವಾರು ಪ್ರಶ್ನೆಗಳಿವೆ. ನಾನು ಅವರಿಗೆ ಈ ಪುಸ್ತಕವನ್ನು ತೋರಿಸಿದೆ, ಮತ್ತು ಅವರದನ್ನು ತುಂಬ ಇಷ್ಟಪಟ್ಟರು. ಈ ಪುಸ್ತಕವು ಅತಿ ಉತ್ತಮವಾದದ್ದಾಗಿದೆ, ಮತ್ತು ಒಬ್ಬ ಯುವ ವ್ಯಕ್ತಿಗೆ ತಿಳಿಯಲು ಮನಸ್ಸಿರುವ ಎಲ್ಲವೂ ಅದರಲ್ಲಿದೆ.” ಬೇಸಗೆಯ ರಜಾ ದಿನಗಳ ಮುಂಚೆಯೇ ಆ ಪುಸ್ತಕಗಳನ್ನು ತಲಪಿಸಸಾಧ್ಯವೊ ಎಂದು ಅವಳು ಕೇಳಿಕೊಂಡಳು.

ಯುವ ಜನರ ಪ್ರಶ್ನೆಗಳು ಪುಸ್ತಕದಲ್ಲಿ 39 ಅಧ್ಯಾಯಗಳಿವೆ. “ನನ್ನ ಹೆತ್ತವರು ನನಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡುವಂತೆ ಮಾಡುವುದು ಹೇಗೆ?” “ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?” “ವಿವಾಹಕ್ಕೆ ಮುಂಚಿನ ಸಂಭೋಗದ ಕುರಿತೇನು?” “ಅದು ನಿಜ ಪ್ರೀತಿಯೆಂದು ನಾನು ಹೇಗೆ ತಿಳಿಯಬಲ್ಲೆ?” ಎಂಬ ಅಧ್ಯಾಯಗಳು ಅದರಲ್ಲಿವೆ. ಈ ಪುಟದಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಕೊಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸುವ ಮೂಲಕ, ಈ 320 ಪುಟದ ಪುಸ್ತಕದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನೀವು ವಿನಂತಿಸಬಹುದು. (g04 10/8)

□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವಂತೆ ನಾನು ವಿನಂತಿಸಿಕೊಳ್ಳುತ್ತಿದ್ದೇನೆ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ