ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 103 ಪು. 238-ಪು. 239 ಪ್ಯಾ. 2
  • “ನಿನ್ನ ಆಳ್ವಿಕೆ ಬರಲಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಿನ್ನ ಆಳ್ವಿಕೆ ಬರಲಿ”
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ದೇವರು ನಮ್ಮನ್ನು ಯಾಕೆ ಸೃಷ್ಟಿ ಮಾಡಿದನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಕಷ್ಟದ ಜೀವನ ಆರಂಭ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಭೂಮಿಗಾಗಿರುವ ದೇವರ ಉದ್ದೇಶವು ಶೀಘ್ರದಲ್ಲೇ ನೆರವೇರಲಿದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಭೂಮಿಗಾಗಿ ದೇವರ ಉದ್ದೇಶವೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 103 ಪು. 238-ಪು. 239 ಪ್ಯಾ. 2
ಪರದೈಸಿನಲ್ಲಿ ದೊಡ್ಡವರು ಮತ್ತು ಮಕ್ಕಳು ಆನಂದಿಸುತ್ತಿದ್ದಾರೆ

ಪಾಠ 103

“ನಿನ್ನ ಆಳ್ವಿಕೆ ಬರಲಿ”

‘ಇನ್ನು ಮುಂದೆ ಕಣ್ಣೀರು, ದುಃಖ, ಕಾಯಿಲೆ ಮತ್ತು ಸಾವು ಯಾವುದೂ ಇರಲ್ಲ. ನಾನು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತೀನಿ. ಮೊದಲಿದ್ದ ಕೆಟ್ಟ ವಿಷ್ಯಗಳು ಇಲ್ಲದೆ ಹೋಗುತ್ತೆ’ ಎಂದು ಯೆಹೋವನು ಮಾತುಕೊಟ್ಟಿದ್ದಾನೆ.

ಆದಾಮ ಹವ್ವ ಶಾಂತಿಯಿಂದ ಮತ್ತು ಸಂತೋಷದಿಂದ ಜೀವಿಸಬೇಕು ಎಂದು ಯೆಹೋವನು ಅವರನ್ನು ಏದೆನ್‌ ತೋಟದಲ್ಲಿ ಇಟ್ಟನು. ಅವರು ಸ್ವರ್ಗೀಯ ತಂದೆಯಾದ ಯೆಹೋವನನ್ನು ಆರಾಧಿಸಬೇಕಿತ್ತು, ಇಡೀ ಭೂಮಿಯನ್ನು ತಮ್ಮ ಮಕ್ಕಳಿಂದ ತುಂಬಿಸಬೇಕಿತ್ತು. ಬೇಜಾರಿನ ವಿಷಯ ಏನೆಂದರೆ ಆದಾಮ ಮತ್ತು ಹವ್ವ ಯೆಹೋವನಿಗೆ ಅವಿಧೇಯರಾದರು. ಆದರೆ ಯೆಹೋವನ ಉದ್ದೇಶ ಮಾತ್ರ ಬದಲಾಗಲಿಲ್ಲ. ಯೆಹೋವನು ಕೊಟ್ಟ ಪ್ರತಿಯೊಂದು ಮಾತು ನೆರವೇರಿತು ಎನ್ನುವುದನ್ನು ನಾವು ಈ ಪುಸ್ತಕದಿಂದ ಕಲಿತಿದ್ದೇವೆ. ಯೆಹೋವನು ಅಬ್ರಹಾಮನಿಗೆ ಮಾತುಕೊಟ್ಟಂತೆ ಆತನ ಆಳ್ವಿಕೆ ಈ ಭೂಮಿಗೆ ಅದ್ಭುತಕರವಾದ ಆಶೀರ್ವಾದಗಳನ್ನು ತರುವುದು.

ಪರದೈಸಿನಲ್ಲಿ ದೊಡ್ಡವರು, ಮಕ್ಕಳು ಮತ್ತು ಕ್ರೂರ ಪ್ರಾಣಿಗಳು ಜೊತೆಯಾಗಿದ್ದಾರೆ

ಬೇಗನೇ ಸೈತಾನ, ಅವನ ಕೆಟ್ಟ ದೂತರು ಮತ್ತು ಕೆಟ್ಟ ಜನರು ಸರ್ವನಾಶವಾಗುವರು. ಜೀವಂತವಾಗಿರುವ ಪ್ರತಿಯೊಬ್ಬರು ಯೆಹೋವನನ್ನು ಮಾತ್ರ ಆರಾಧಿಸುತ್ತಾರೆ. ಆಗ ನಮಗೆ ಕಾಯಿಲೆ, ಸಾವು-ನೋವು ಯಾವುದೂ ಇರುವುದಿಲ್ಲ. ಬದಲಿಗೆ, ನಾವು ಪ್ರತಿದಿನ ಬೆಳಿಗ್ಗೆ ಹುಮ್ಮಸ್ಸಿನಿಂದ ಎದ್ದೇಳುತ್ತೇವೆ ಮತ್ತು ಸಂತೋಷದಿಂದ ಜೀವಿಸುತ್ತೇವೆ. ಇಡೀ ಭೂಮಿ ಒಂದು ಸುಂದರ ತೋಟದಂತಾಗುತ್ತದೆ. ಅಲ್ಲಿ ಪ್ರತಿಯೊಬ್ಬರಿಗೆ ಒಳ್ಳೇ ಆಹಾರವಿರುತ್ತದೆ. ಎಲ್ಲರೂ ಸುರಕ್ಷಿತವಾಗಿರುತ್ತಾರೆ. ಕೆಟ್ಟವರು, ಕ್ರೂರಿಗಳು ಯಾರೂ ಇರುವುದಿಲ್ಲ. ಎಲ್ಲರೂ ದಯೆಯಿಂದ ನಡೆದುಕೊಳ್ಳುತ್ತಾರೆ. ಕ್ರೂರ ಪ್ರಾಣಿಗಳು ನಮಗೆ ಯಾವ ತೊಂದರೇನೂ ಮಾಡಲ್ಲ. ಹಾಗಾಗಿ ನಾವು ಅವುಗಳಿಗೆ ಭಯಪಡಬೇಕಾಗಿಲ್ಲ.

ಯೆಹೋವನು ಜನರಿಗೆ ಮತ್ತೆ ಜೀವ ಕೊಡುವ ಸಮಯವಂತೂ ಅತ್ಯದ್ಭುತ! ಆಗ ಯಾರೆಲ್ಲಾ ಮತ್ತೆ ಜೀವ ಪಡೆದುಕೊಳ್ಳುತ್ತಾರೆ ಗೊತ್ತಾ? ಹೇಬೆಲ, ನೋಹ, ಅಬ್ರಹಾಮ, ಸಾರ, ಮೋಶೆ, ರೂತ್‌, ಎಸ್ತೇರ್‌ ಮತ್ತು ದಾವೀದ. ಇವೆರಲ್ಲರನ್ನು ನಾವು ಖುಷಿ ಖುಷಿಯಾಗಿ ಸ್ವಾಗತಿಸಬಹುದು. ಈ ಭೂಮಿಯನ್ನು ಸುಂದರ ತೋಟವಾಗಿ ಮಾಡುವ ಕೆಲಸದಲ್ಲಿ ಅವರು ನಮ್ಮೊಂದಿಗೆ ಕೈಜೋಡಿಸುವರು. ಅಲ್ಲಿ ನಮಗೆ ಇಷ್ಟವಾಗುವ ಎಷ್ಟೋ ಕೆಲಸಗಳಿರುತ್ತವೆ.

ನೀವು ಕೂಡ ಅಲ್ಲಿ ಇರಬೇಕೆನ್ನುವುದು ಯೆಹೋವನ ಇಷ್ಟ. ನೀವು ಇದುವರೆಗೂ ತಿಳಿದಿರದ ವಿಧಗಳಲ್ಲಿ ಯೆಹೋವನ ಬಗ್ಗೆ ತಿಳಿಯುತ್ತೀರ. ಹಾಗಾಗಿ ಇಂದು, ಮುಂದು, ಎಂದೆಂದೂ ನಾವು ಯೆಹೋವನಿಗೆ ಹೆಚ್ಚೆಚ್ಚು ಆಪ್ತರಾಗೋಣ!

“ಯೆಹೋವನೇ, ನಮ್ಮ ದೇವರೇ, ಗೌರವ, ಘನತೆ, ಶಕ್ತಿಯನ್ನ ಪಡ್ಕೊಳ್ಳೋಕೆ ನೀನೇ ಯೋಗ್ಯ. ಯಾಕಂದ್ರೆ ನೀನೇ ಎಲ್ಲವನ್ನೂ ಸೃಷ್ಟಿ ಮಾಡಿದ್ದೀಯ. ನಿನ್ನ ಇಷ್ಟದ ಹಾಗೇ ಅವೆಲ್ಲ ಸೃಷ್ಟಿ ಆದ್ವು ಮತ್ತು ಇವತ್ತು ಇಲ್ಲಿವೆ.”—ಪ್ರಕಟನೆ 4:11

ಪ್ರಶ್ನೆಗಳು: ದೇವರ ಆಳ್ವಿಕೆ ಬಂದಾಗ ಭೂಮಿಯ ಮೇಲೆ ನಮ್ಮ ಜೀವನ ಹೇಗಿರುತ್ತೆ? ಈ ಪುಸ್ತಕದಲ್ಲಿ ನೀನು ಅನೇಕ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡಿದ್ದೀಯ, ಅವರಲ್ಲಿ ಯಾರನ್ನು ನೀನು ಪರದೈಸಿನಲ್ಲಿ ಭೇಟಿಯಾಗಲು ಇಷ್ಟಪಡುತ್ತೀಯಾ?

ಪ್ರಕಟನೆ 21:3, 4; ಯೋಬ 33:25; ಜ್ಞಾನೋಕ್ತಿ 2:21, 22; ಯೆಶಾಯ 11:2-10; 33:24; 65:21; ಮತ್ತಾಯ 6:9, 10; ಯೋಹಾನ 5:28, 29; 17:3

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ