ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 102 ಪು. 236-ಪು. 237 ಪ್ಯಾ. 2
  • ಯೋಹಾನನು ಕಂಡ ದರ್ಶನಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೋಹಾನನು ಕಂಡ ದರ್ಶನಗಳು
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಯೆಹೋವನ ದಿವ್ಯ ಸಿಂಹಾಸನದ ಶೋಭೆ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ವಿಜಯೋತ್ಸವದ ಹೊಸ ಹಾಡನ್ನು ಹಾಡುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ಯೋಹಾನನು ಮಹಿಮಾಭರಿತ ಯೇಸುವನ್ನು ನೋಡುತ್ತಾನೆ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ದೇವರ ರಾಜ್ಯ ಎಂದರೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 102 ಪು. 236-ಪು. 237 ಪ್ಯಾ. 2
ಪ್ರಕಟನೆ ಪುಸ್ತಕವನ್ನು ಬರೆಯುತ್ತಿರುವ ಅಪೊಸ್ತಲ ಯೋಹಾನ

ಪಾಠ 102

ಯೋಹಾನನು ಕಂಡ ದರ್ಶನಗಳು

ಅಪೊಸ್ತಲ ಯೋಹಾನನು ಪತ್ಮೋಸ್‌ ದ್ವೀಪದ ಜೈಲಿನಲ್ಲಿದ್ದನು. ಆಗ ಯೇಸು ಅವನಿಗೆ ಭವಿಷ್ಯತ್ತಿನ ಬಗ್ಗೆ ಒಂದರ ನಂತರ ಒಂದಂತೆ 16 ದರ್ಶನಗಳನ್ನು ಅಥವಾ ಚಿತ್ರಗಳನ್ನು ತೋರಿಸಿದನು. ಯೆಹೋವನ ಹೆಸರು ಹೇಗೆ ಪವಿತ್ರ ಆಗುವುದು, ಆತನ ಆಳ್ವಿಕೆ ಹೇಗೆ ಬರುವುದು ಮತ್ತು ಸ್ವರ್ಗದಲ್ಲಿ ನೆರವೇರಿದಂತೆ ಭೂಮಿಯಲ್ಲೂ ಆತನ ಇಷ್ಟ ಹೇಗೆ ನೆರವೇರುವುದು ಎಂದು ಈ ದರ್ಶನಗಳು ತಿಳಿಸಿದವು.

ಒಂದು ದರ್ಶನದಲ್ಲಿ, ಯೋಹಾನನು ಸ್ವರ್ಗದಲ್ಲಿರುವ ಯೆಹೋವನ ಮಹಿಮಾಭರಿತ ಸಿಂಹಾಸನವನ್ನು ಕಂಡನು. ಅದರ ಸುತ್ತಲು ಬಿಳೀ ಬಟ್ಟೆಗಳನ್ನು ಧರಿಸಿರುವ 24 ಹಿರಿಯರು ಇದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. ಸಿಂಹಾಸನದ ಒಳಗಿಂದ ಮಿಂಚು, ಗುಡುಗುಗಳ ಶಬ್ದ ಕೇಳಿ ಬರುತ್ತಿತ್ತು. ಆಗ ಆ 24 ಹಿರಿಯರು ಯೆಹೋವನನ್ನು ಆರಾಧಿಸಿದರು. ಇನ್ನೊಂದು ದರ್ಶನದಲ್ಲಿ, ಯೋಹಾನನು ಎಲ್ಲ ಜನಾಂಗ, ಕುಲ, ಭಾಷೆಯಿಂದ ಬಂದ ಒಂದು ದೊಡ್ಡ ಗುಂಪು ಯೆಹೋವನನ್ನು ಆರಾಧಿಸುತ್ತಿರುವುದನ್ನು ಕಂಡನು. ಕುರಿಮರಿಯಾದ ಯೇಸು ಅವರನ್ನು ಜೀವಜಲಕ್ಕೆ ನಡೆಸಿದನು. ನಂತರದ ದರ್ಶನದಲ್ಲಿ, 24 ಹಿರಿಯರೊಟ್ಟಿಗೆ ಯೇಸು ಸ್ವರ್ಗದಲ್ಲಿ ರಾಜನಾಗಿ ಆಳುವುದನ್ನು ಕಂಡನು. ಮತ್ತೊಂದು ದರ್ಶನದಲ್ಲಿ, ಯೇಸು ಘಟಸರ್ಪನಾದ ಸೈತಾನ ಮತ್ತವನ ಕೆಟ್ಟ ದೂತರೊಂದಿಗೆ ಯುದ್ಧ ಮಾಡುವುದನ್ನು ಯೋಹಾನ ನೋಡಿದನು. ಯೇಸು ಅವರೆಲ್ಲರನ್ನು ಸ್ವರ್ಗದಿಂದ ಭೂಮಿಗೆ ದೊಬ್ಬಿಬಿಟ್ಟನು.

ಚಿಯೋನ್‌ ಪರ್ವತದ ಮೇಲೆ ಯೇಸು ಮತ್ತು 1,44,000 ಮಂದಿ

ಆಮೇಲೆ, ಕುರಿಮರಿ ಮತ್ತು 1,44,000 ಮಂದಿ ಚಿಯೋನ್‌ ಬೆಟ್ಟದ ಮೇಲೆ ನಿಂತಿರುವ ಸುಂದರ ಚಿತ್ರವನ್ನು ಯೋಹಾನ ನೋಡುತ್ತಾನೆ. ಭೂಮಿಯ ಮೇಲೆ ಹಾರುತ್ತಿದ್ದ ಒಬ್ಬ ದೇವದೂತನನ್ನು ಸಹ ಯೋಹಾನ ನೋಡಿದನು. ಆ ದೇವದೂತನು ಜನರಿಗೆ, ‘ದೇವರಿಗೆ ಭಯಪಡಿ ಆತನಿಗೆ ಗೌರವ ಕೊಡಿ’ ಎಂದು ಹೇಳುತ್ತಿದ್ದನು.

ಮುಂದಿನ ದರ್ಶನದಲ್ಲಿ ಅರ್ಮಗೆದೋನ್‌ ಯುದ್ಧವನ್ನು ಕಂಡನು. ಆ ಯುದ್ಧದಲ್ಲಿ ಯೇಸು ಮತ್ತವನ ಸೈನ್ಯ ಸೈತಾನನ ದುಷ್ಟ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡಿತು. ಕೊನೆಯ ದರ್ಶನದಲ್ಲಿ ಸ್ವರ್ಗ ಮತ್ತು ಭೂಮಿಯಲ್ಲಿ ಶಾಂತಿ ಸಮಾಧಾನ ಇರುವುದನ್ನು ಯೋಹಾನ ಕಾಣುತ್ತಾನೆ. ಸೈತಾನ ಮತ್ತು ಅವನ ಸಂತತಿಯವರು ಸಂಪೂರ್ಣವಾಗಿ ನಾಶವಾದರು. ಸ್ವರ್ಗ ಮತ್ತು ಭೂಮಿಯಲ್ಲಿರುವ ಎಲ್ಲರೂ ಯೆಹೋವನ ಹೆಸರನ್ನು ಪವಿತ್ರವೆಂದು ಎಣಿಸಿ ಆತನನ್ನು ಮಾತ್ರ ಆರಾಧಿಸುತ್ತಿದ್ದರು.

“ನಿನ್ನ ಮತ್ತು ಸ್ತ್ರೀಯ ಮಧ್ಯ, ನಿನ್ನ ಸಂತಾನ ಮತ್ತು ಸ್ತ್ರೀಯ ಸಂತಾನದ ಮಧ್ಯ ದ್ವೇಷ ಇರೋ ಹಾಗೆ ಮಾಡ್ತೀನಿ. ಅವನು ನಿನ್ನ ತಲೆ ಜಜ್ಜುತ್ತಾನೆ, ನೀನು ಅವನ ಹಿಮ್ಮಡಿಗೆ ಗಾಯ ಮಾಡ್ತಿಯ.”—ಆದಿಕಾಂಡ 3:15

ಪ್ರಶ್ನೆಗಳು: ಯೋಹಾನ ಎಷ್ಟು ದರ್ಶನಗಳನ್ನು ಕಂಡನು? ಅರ್ಮಗೆದೋನ್‌ ಯುದ್ಧದಲ್ಲಿ ಯೇಸು ಏನು ಮಾಡುವನು?

ಪ್ರಕಟನೆ 1:1-3; 4:1-11; 7:4, 9-17; 11:15-18; 12:5-12; 14:1, 6, 7; 16:14, 16; 21:5

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ