ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lfb ಪಾಠ 10 ಪು. 30
  • ಲೋಟನ ಹೆಂಡತಿಯಿಂದ ಪಾಠ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲೋಟನ ಹೆಂಡತಿಯಿಂದ ಪಾಠ
  • ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಅನುರೂಪ ಮಾಹಿತಿ
  • ಲೋಟನ ಪತ್ನಿ ಹಿಂದೆ ನೋಡಿದಳು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಹೊಸ ಲೋಕದೊಳಗೆ ವಿಮೋಚನೆಗೆ ಸಿದ್ಧವಾಗಿರ್ರಿ
    ಕಾವಲಿನಬುರುಜು—1990
  • ಅಬ್ರಹಾಮನೊಂದಿಗೆ ದೇವರು ಮಾಡಿದ ಒಡಂಬಡಿಕೆ
    ಬೈಬಲ್‌—ಅದರಲ್ಲಿ ಏನಿದೆ?
  • ಒತ್ತಡದಲ್ಲಿ ಇರುವವರಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
ಇನ್ನಷ್ಟು
ಬೈಬಲ್‌ ನಮಗೆ ಕಲಿಸುವ ಪಾಠಗಳು
lfb ಪಾಠ 10 ಪು. 30
ಲೋಟನ ಹೆಂಡತಿ ಹಿಂದೆ ತಿರುಗಿದಾಗ ಉಪ್ಪಿನ ಕಂಬವಾದಳು. ಆದರೆ ಲೋಟ ಮತ್ತವನ ಹೆಣ್ಣು ಮಕ್ಕಳು ಸೊದೋಮಿನಿಂದ ತಪ್ಪಿಸಿಕೊಂಡರು

ಪಾಠ 10

ಲೋಟನ ಹೆಂಡತಿಯಿಂದ ಪಾಠ

ಲೋಟನು ಕಾನಾನ್‌ನಲ್ಲಿ ತನ್ನ ಸಂಬಂಧಿಕನಾದ ಅಬ್ರಹಾಮನ ಜೊತೆ ಇದ್ದ. ದಿನಗಳು ಹೋದ ಹಾಗೆ ಅವರ ದನ-ಕುರಿಗಳು ಜಾಸ್ತಿ ಆದವು. ಎಷ್ಟು ಹೆಚ್ಚಾದವೆಂದರೆ ಅವರೆಲ್ಲ ಒಟ್ಟಿಗಿರಲು ಸ್ಥಳ ಸಾಕಾಗಲಿಲ್ಲ. ಹಾಗಾಗಿ ಅಬ್ರಹಾಮ ಲೋಟನಿಗೆ ‘ನಾವಿಬ್ಬರೂ ಇನ್ನು ಮುಂದೆ ಒಂದೇ ಸ್ಥಳದಲ್ಲಿ ಇರಲು ಸಾಧ್ಯವಿಲ್ಲ. ಆದ್ದರಿಂದ ದಯವಿಟ್ಟು ನಿನಗೆ ಯಾವ ಸ್ಥಳ ಬೇಕೋ ಅದನ್ನು ಆರಿಸಿಕೋ. ನೀನೊಂದು ಕಡೆ ಹೋದರೆ ನಾನೊಂದು ಕಡೆ ಹೋಗುತ್ತೇನೆ. ಆಯ್ಕೆ ನಿನ್ನದು’ ಎಂದನು. ಎಂಥ ದೊಡ್ಡ ಮನಸ್ಸು ಅಬ್ರಹಾಮನದು! ಅಲ್ಲವಾ?

ಲೋಟ ಸುತ್ತಲೂ ಕಣ್ಣಾಡಿಸಿದ. ಸುಂದರವಾದ ಹಚ್ಚಹಸಿರಿನ ನೀರಾವರಿ ಸ್ಥಳವೊಂದು ಅವನ ಕಣ್ಣನ್ನು ಸೆಳೆಯಿತು. ಆ ಪಟ್ಟಣದ ಹೆಸರು ಸೊದೋಮ್‌. ಆ ಸ್ಥಳವನ್ನೇ ಆರಿಸಿ ಲೋಟನ ಕುಟುಂಬ ಅಲ್ಲಿಗೆ ಹೋಯಿತು.

ಸೊದೋಮಿನ ಹತ್ತಿರದಲ್ಲಿ ಗೊಮೋರ ಎಂಬ ಪಟ್ಟಣವಿತ್ತು. ಸೊದೋಮ್‌ ಹಾಗೂ ಗೊಮೋರದಲ್ಲಿದ್ದ ಜನರು ತುಂಬ ಕೆಟ್ಟವರಾಗಿದ್ದರು. ಎಷ್ಟು ಕೆಟ್ಟವರೆಂದರೆ ಯೆಹೋವ ದೇವರು ಅವರನ್ನು ನಾಶಮಾಡಲು ತೀರ್ಮಾನಿಸಿದನು. ಆದರೆ ಲೋಟ ಮತ್ತು ಅವನ ಕುಟುಂಬವನ್ನು ಉಳಿಸಬೇಕೆಂದಿದ್ದನು. ಆದ್ದರಿಂದ ಇಬ್ಬರು ದೇವದೂತರನ್ನು ಕಳುಹಿಸಿ ಅವರನ್ನು ಎಚ್ಚರಿಸಿದನು. ಆ ದೂತರು ಅವರಿಗೆ ‘ಯೆಹೋವ ಈ ಪಟ್ಟಣವನ್ನ ನಾಶಮಾಡ್ತಾನೆ. ಆದ್ದರಿಂದ ಬೇಗ ಇಲ್ಲಿಂದ ಓಡಿಹೋಗಿ’ ಎಂದರು.

ಲೋಟ ಹೊರಡಲು ತಡ ಮಾಡುತ್ತಿದ್ದ. ಆದ್ದರಿಂದ ದೇವದೂತರೇ ಲೋಟನ ಕುಟುಂಬದವರ ಕೈ ಹಿಡಿದು ಊರಾಚೆ ಬಿಟ್ಟು ‘ಬೇಗ ಓಡಿಹೋಗಿ. ಜೀವ ಉಳಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನೋಡಬೇಡಿ. ಹಿಂದೆ ತಿರುಗಿದರೆ ಸಾಯುತ್ತೀರ!’ ಎಂದರು.

ಬೆಂಕಿ ಮಳೆ ಸೊದೋಮ್‌ ಮತ್ತು ಗೊಮೋರ ಪಟ್ಟಣದ ಮೇಲೆ ಬೀಳುತ್ತಿದೆ

ಯೆಹೋವನು ಸೊದೋಮ್‌ ಮತ್ತು ಗೊಮೋರವನ್ನು ನಾಶಮಾಡಲು ಬೆಂಕಿ ಮಳೆ ಸುರಿಸಿದನು. ಅಷ್ಟು ಹೊತ್ತಿಗಾಗಲೇ ಲೋಟ ಮತ್ತು ಅವನ ಹೆಂಡತಿ-ಮಕ್ಕಳು ಚೋಗರ್‌ ಎಂಬ ಸ್ಥಳಕ್ಕೆ ಬಂದಿದ್ದರು. ಬೆಂಕಿ ಮಳೆ ಆ ಪಟ್ಟಣಗಳನ್ನು ಸುಟ್ಟು ಬೂದಿ ಮಾಡಿಬಿಟ್ಟಿತು. ಹಿಂದೆ ತಿರುಗಿ ನೋಡಬೇಡಿ ಎಂದು ಯೆಹೋವನು ಹೇಳಿದ್ದರೂ ಲೋಟನ ಹೆಂಡತಿ ದೇವರಿಗೆ ಅವಿಧೇಯಳಾಗಿ ಹಿಂದೆ ತಿರುಗಿದಳು. ಆ ಕ್ಷಣನೇ ಅವಳು ಉಪ್ಪಿನ ಕಂಬವಾದಳು! ಆದರೆ ಲೋಟ ಮತ್ತವನ ಹೆಣ್ಣು ಮಕ್ಕಳು ದೇವರಿಗೆ ವಿಧೇಯರಾದರು. ಹಿಂದೆ ತಿರುಗಲೇ ಇಲ್ಲ. ಅದರಿಂದ ಅವರ ಜೀವ ಉಳಿಯಿತು. ಲೋಟನ ಹೆಂಡತಿ ದೇವರಿಗೆ ಅವಿಧೇಯಳಾಗಿದ್ದರಿಂದ ಅವರ ಕುಟುಂಬಕ್ಕೆ ಎಷ್ಟು ಬೇಜಾರಾಗಿರಬೇಕಲ್ಲಾ? ಆದರೆ ಲೋಟ ಮತ್ತು ಅವನ ಇಬ್ಬರು ಹೆಣ್ಣು ಮಕ್ಕಳು ಯೆಹೋವನ ಮಾತು ಕೇಳಿ ಆತನನ್ನು ಖುಷಿಪಡಿಸಿದರು.

“ಲೋಟನ ಹೆಂಡತಿಯನ್ನ ನೆನಪಿಸ್ಕೊಳ್ಳಿ.”—ಲೂಕ 17:32

ಪ್ರಶ್ನೆಗಳು: ಯೆಹೋವನು ಸೊದೋಮ್‌ ಹಾಗೂ ಗೊಮೋರವನ್ನು ಯಾಕೆ ನಾಶ ಮಾಡಿದನು? ಲೋಟನ ಹೆಂಡತಿ ಏಕೆ ಉಪ್ಪಿನ ಕಂಬವಾದಳು?

ಆದಿಕಾಂಡ 13:1-13; 19:1-26; ಲೂಕ 17:28, 29, 32; 2 ಪೇತ್ರ 2:6-9

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ