-
ತಿಳಿದಿರಬೇಕಾದ ಪ್ರಾಮುಖ್ಯ ಕಥೆಕಾವಲಿನಬುರುಜು: ಅಳಿಯದೇ ಉಳಿದ ಬೈಬಲ್
-
-
ಮುಖಪುಟ ಲೇಖನ | ಅಳಿಯದೇ ಉಳಿದ ಬೈಬಲ್
ತಿಳಿದಿರಬೇಕಾದ ಪ್ರಾಮುಖ್ಯ ಕಥೆ
ಬೈಬಲ್ ತರ ಬೇರೆ ಯಾವ ಧಾರ್ಮಿಕ ಪುಸ್ತಕನೂ ಇಲ್ಲ. ಎಷ್ಟೋ ಸಮಯದಿಂದ ಅನೇಕರ ನಂಬಿಕೆಯನ್ನ ಬದಲಾಯಿಸಿದ್ದು ಇದೇ ಬೈಬಲ್. ಎಷ್ಟೋ ಪರೀಕ್ಷೆ ಮತ್ತು ಟೀಕೆಗಳನ್ನ ಸಹಿಸಿಕೊಂಡ ಒಂದೇ ಒಂದು ಪುಸ್ತಕ ಬೈಬಲ್ ಆಗಿದೆ.
ಉದಾಹರಣೆಗೆ, ಕೆಲವು ವಿದ್ವಾಂಸರು ಮೂಲ ಬರಹದಲ್ಲಿರುವ ವಿಷಯಗಳೇ ಈಗಿನ ಬೈಬಲಲ್ಲಿ ಇದೆಯಾ ಇಲ್ವಾ ಅಂಥ ಸಂಶಯ ಪಡ್ತಾರೆ. ಧಾರ್ಮಿಕ ಅಧ್ಯಯನ ಮಾಡಿದ ಒಬ್ಬ ಪ್ರೋಫೆಸರ್ ಹೇಳಿದ್ದು: “ಮೂಲ ಬರಹದಲ್ಲಿ ಇರುವ ನಿಖರ ಮಾಹಿತಿ ಆಧುನಿಕ ಬೈಬಲಲ್ಲೂ ಇದೆಯಾ ಅನ್ನೋ ವಿಷಯದಲ್ಲಿ ಯಾವ ಗ್ಯಾರಂಟಿನೂ ಇಲ್ಲ. ನಮ್ಮ ಹತ್ರ ಇರೋದು ಬರಿ ತಪ್ಪುಗಳಿರೋ ಪ್ರತಿಗಳೇ. ಮೂಲ ಪ್ರತಿಗಳು ಬರೆದು ಎಷ್ಟೋ ಶತಮಾನಗಳಾದ ಮೇಲೆ ಈ ಪ್ರತಿಗಳನ್ನು ಮಾಡಿರೋದು. ಹಾಗಾಗಿ ಈ ಪ್ರತಿಗಳು ಮೂಲ ಪ್ರತಿಗಳಿಗಿಂತ ಎಷ್ಟೋ ಭಿನ್ನವಾಗಿವೆ.”
ಕೆಲವರ ಧರ್ಮ ಬೇರೆ ಆಗಿರೋದರಿಂದ ನಾವು ಬೈಬಲನ್ನ ನಂಬಬಹುದಾ ಅಂತ ಯೋಚಿಸುತ್ತಾರೆ. ಫೈಜ಼ಲ್ ಅವರ ಉದಾಹರಣೆ ನೋಡಿ. ಬೈಬಲ್ ಒಂದು ಪವಿತ್ರ ಪುಸ್ತಕ, ಆದ್ರೆ ಅದರಲ್ಲಿರುವ ವಿಷಯಗಳು ಬದಲಾಗಿವೆ ಅಂತ ಅವರ ಮನೆಯವರು ಹೇಳಿಕೊಟ್ಟಿದ್ರು. ಫೈಜ಼ಲ್ ಹೇಳಿದ್ದು: “ಹಾಗಾಗಿ ಯಾರಾದ್ರು ನನ್ನ ಹತ್ರ ಬೈಬಲ್ ಬಗ್ಗೆ ಹೇಳೋಕೆ ಬಂದಾಗ, ಅದನ್ನ ನಂಬಬೇಕಾ ಬೇಡ್ವಾ ಅಂತ ಸಂಶಯ ಆಗ್ತಿತ್ತು. ಎಷ್ಟೆಂದ್ರೂ ಅವರ ಹತ್ತಿರ ಬದಲಾಗಿರೋ ಬೈಬಲ್ ಬಿಟ್ರೆ ಮೂಲ ಬರಹ ಅಂತೂ ಇಲ್ಲ.”
ಬೈಬಲ್ ಬದಲಾಗಿದೆಯಾ ಇಲ್ವಾ ಅನ್ನೋ ವಿಷಯದ ಬಗ್ಗೆ ತಿಳಿದುಕೊಳ್ಳೋದು ಪ್ರಾಮುಖ್ಯನಾ? ಈ ಪ್ರಶ್ನೆಗಳ ಬಗ್ಗೆ ಸ್ವಲ್ಪ ಯೋಚಿಸಿ: ಭವಿಷ್ಯದ ಬಗ್ಗೆ ಹೇಳಿರೋ ಮಾತುಗಳು ಮೂಲ ಬರಹದಲ್ಲಿ ಇದೆಯಾ ಅಂತ ಗೊತ್ತಿಲ್ದೆ ಇದ್ರೂ ಅದನ್ನ ನಂಬಬಹುದಾ? (ರೋಮನ್ನರಿಗೆ 15:4) ಒಂದುವೇಳೆ ಆಧುನಿಕ ಬೈಬಲಲ್ಲಿ ತಪ್ಪಾಗಿದ್ರೆ, ಕೆಲಸ, ಕುಟುಂಬ ಮತ್ತು ಆರಾಧನೆಗೆ ಸಂಬಂಧಿಸಿದ ಪ್ರಾಮುಖ್ಯ ನಿರ್ಧಾರಗಳನ್ನ ಮಾಡೋಕೆ ಅದರಲ್ಲಿರೋ ತತ್ವಗಳನ್ನ ನೀವು ಬಳಸ್ತೀರಾ?
ಮೂಲ ಬರಹ ಈಗ ಕಣ್ಮರೆಯಾಗಿದ್ರೂ ಬೈಬಲಿನ ಸಾವಿರಾರು ಹಸ್ತಪ್ರತಿಗಳು ಉಳಿದುಕೊಂಡಿವೆ. ಹಾಳಾಗೋ ಸಾಧ್ಯತೆ ಇದ್ರೂ, ವಿರೋಧ ಇದ್ರೂ, ವಿಷಯಗಳನ್ನ ತಿರುಚೋಕೆ ಪ್ರಯತ್ನ ನಡೆದ್ರೂ ಈ ಹಸ್ತಪ್ರತಿಗಳು ಹೇಗೆ ಉಳಿದುಕೊಳ್ತು? ಆಧುನಿಕ ಬೈಬಲ್ ಸತ್ಯವಾಗಿದೆ ಅಂತ ನಂಬೋಕೆ ಈಗ ಉಳಿದುಕೊಂಡಿರೋ ಹಸ್ತಪ್ರತಿಗಳು ಹೇಗೆ ಸಹಾಯ ಮಾಡುತ್ತೆ? ಈ ಪ್ರಶ್ನೆಗಳಿಗೆ ಉತ್ತರ ಮುಂದಿನ ಕಥೆ ಹೇಳುತ್ತೆ.
-
-
ಬೈಬಲ್ ಹಾಳಾಗದೆ ಹೇಗೆ ಉಳೀತು?ಕಾವಲಿನಬುರುಜು: ಅಳಿಯದೇ ಉಳಿದ ಬೈಬಲ್
-
-
ಮುಖಪುಟ ಲೇಖನ | ಅಳಿಯದೇ ಉಳಿದ ಬೈಬಲ್
ಬೈಬಲ್ ಹಾಳಾಗದೆ ಹೇಗೆ ಉಳೀತು?
ಅಪಾಯ: ಬೈಬಲ್ ಬರಹಗಾರರು ಮತ್ತು ನಕಲುಗಾರರು ಪಪೈರಸ್ ಮತ್ತು ಚರ್ಮದ ಹಾಳೆಗಳ ಮೇಲೆ ಬೈಬಲ್ ಬರಹಗಳನ್ನ ಬರೆದರು.a (2 ತಿಮೊತಿ 4:13) ಅವರು ಈ ವಸ್ತುಗಳ ಮೇಲೆ ಬರೆದರೂ ಇಲ್ಲಿ ತನಕ ಬೈಬಲ್ ಹೇಗೆ ಉಳ್ಕೊಳ್ತು?
ಪಪೈರಸ್ ಹರಿಯುತ್ತೆ, ಅದರ ಬಣ್ಣ ಮಾಸಿಹೋಗುತ್ತೆ ಮತ್ತು ಸುಲಭವಾಗಿ ಹಾಳಾಗುತ್ತೆ. “ಹೋಗ್ತಾ ಹೋಗ್ತಾ ಈ ಹಾಳೆಗಳು ನಾರುಗಳನ್ನು ಬಿಟ್ಟುಕೊಳ್ಳುತ್ತೆ ಮತ್ತು ಅವು ಪುಡಿಪುಡಿಯಾಗುತ್ತೆ. ಸುರುಳಿಗಳನ್ನು ತೆಗೆದಿಡುವಾಗ ಅವು ಕೊಳೆತು ಹೋಗಬಹುದು ಮತ್ತು ತೇವಾಂಶದಿಂದ ಹಾಳಾಗಬಹುದು. ಇದನ್ನು ಮಣ್ಣಲ್ಲಿ ಹುಗಿದಿಟ್ಟಾಗಿ ಇಲಿಗಳು, ಕ್ರಿಮಿಕೀಟಗಳು ಮತ್ತು ಬಿಳಿ ಇರುವೆಗಳು ತಿಂದು ಹಾಕುತ್ತವೆ” ಅಂತ ಈಜಿಪ್ಟಿನ ಶಾಸ್ತ್ರಜ್ಞರಾದ ರಿಚರ್ಡ್ ಪಾರ್ಕಿನ್‌ಸನ್ ಮತ್ತು ಸ್ಟೀಫನ್ ಕ್ವಿರ್ಕ್ ಹೇಳುತ್ತಾರೆ. ತೆಗೆದಿಟ್ಟ ಕೆಲವು ಪಪೈರಸ್ ಪ್ರತಿಗಳನ್ನು ಹೊರಗೆ ತೆಗೆದಾಗ ಅದು ಬೆಳಕು ಮತ್ತು ಗಾಳಿಗೆ ಇನ್ನೂ ಬೇಗ ಹಾಳಾಯ್ತು.
ಚರ್ಮದ ಹಾಳೆಗಳು ಪಪೈರಸ್ ಹಾಳೆಗಳಿಗಿಂತ ಹೆಚ್ಚು ಬಾಳಿಕೆ ಬರುತ್ತೆ. ಆದ್ರೆ ಇವನ್ನು ಚೆನ್ನಾಗಿ ಇಡದಿದ್ರೆ ಅತಿಯಾದ ತಾಪಮಾನದಿಂದ, ತೇವಾಂಶದಿಂದ ಅಥವಾ ಸೂರ್ಯನ ಕಿರಣಗಳಿಂದ ಹಾಳಾಗಿ ಹೋಗಬಹುದು.b ಈ ಹಾಳೆಗಳನ್ನು ಕ್ರಿಮಿಕೀಟಗಳೂ ತಿನ್ನಬಹುದು. “ಈ ಕಾರಣದಿಂದ ಇಲ್ಲಿ ತನಕ ಕೆಲವೇ ಹಸ್ತಪ್ರತಿಗಳು ಉಳಿದುಕೊಂಡಿವೆ” ಅಂತ ಎವೆರಿಡೇ ರೈಟಿಂಗ್ ಇನ್ ದ ಗ್ರೀಕೋ ರೋಮನ್ ಪುಸ್ತಕ ಹೇಳುತ್ತೆ. ಒಂದುವೇಳೆ ಬೈಬಲ್ ಹಾಳಾಗಿ ಹೋಗಿದ್ರೆ ಅದ್ರಲ್ಲಿರೋ ಸಂದೇಶ ಕೂಡ ಹಾಳಾಗಿ ಹೋಗ್ತಿತ್ತು. ಅದು ನಮ್ಗೆ ಸಿಗುತ್ತಿರಲಿಲ್ಲ.
ಬೈಬಲ್ ಹೇಗೆ ಉಳಿದುಕೊಳ್ತು? ಇಸ್ರಾಯೇಲಿನ ರಾಜರು “ನಿಯಮ ಪುಸ್ತಕ ತಗೊಂಡು ಅದ್ರಲ್ಲಿರೋ ಎಲ್ಲ ವಿಷ್ಯಗಳನ್ನ ಒಂದು ಪುಸ್ತಕದಲ್ಲಿ ಬರಿಬೇಕು.” ಅಂತ ಮೋಶೆಯ ನಿಯಮ ಹೇಳಿತ್ತು. ಅವರು ಬೈಬಲಿನ ಮೊದಲ ಐದು ಪುಸ್ತಕಗಳನ್ನ ಬರೆಯಬೇಕಿತ್ತು. (ಧರ್ಮೋಪದೇಶಕಾಂಡ 17:18) ಅಷ್ಟೇ ಅಲ್ಲ ಕ್ರಿಸ್ತ ಶಕ ಒಂದನೇ ಶತಮಾನದಲ್ಲಿ ನಿಪುಣ ನಕಲುಗಾರರು ಅನೇಕ ಹಸ್ತಪ್ರತಿಗಳನ್ನ ಮಾಡಿದ್ರಿಂದ ಇಸ್ರಾಯೇಲಿನ ಎಲ್ಲಾ ಸಭಾಮಂದಿರಗಳಲ್ಲಿ ಮತ್ತು ಮಕೆದೋನ್ಯದ ಬೇರೆಬೇರೆ ಕಡೆಗಳಲ್ಲಿ ಶಾಸ್ತ್ರವಚನಗಳು ಜನರಿಗೆ ಸಿಗ್ತಿತ್ತು. (ಲೂಕ 4:16, 17; ಅಪೊಸ್ತಲರ ಕಾರ್ಯ 17:11) ಹಾಗಾದ್ರೆ ಇಷ್ಟೊಂದು ಹಳೆಯ ಹಸ್ತಪ್ರತಿಗಳು ಇಲ್ಲಿ ತನಕ ಹೇಗೆ ಉಳ್ಕೊಳ್ತು?
ಮೃತ ಸಮುದ್ರ ಸುರುಳಿಗಳು ಅಂತ ಕರೆಯುವ ಹಸ್ತಪ್ರತಿಗಳನ್ನ ಅನೇಕ ವರ್ಷ ಮಣ್ಣಿನ ಜಾಡಿಗಳಲ್ಲಿ ಇಟ್ಟು ತೇವಾಂಶ ಇಲ್ಲದ ಗುಹೆಗಳಲ್ಲಿ ಸಂರಕ್ಷಿಸಿ ಇಟ್ರು.
“ಯೆಹೂದ್ಯರು ಶಾಸ್ತ್ರವಚನಗಳಿದ್ದ ಸುರುಳಿಗಳನ್ನ ಜಾಡಿಗಳಲ್ಲಿ ಸಂರಕ್ಷಿಸಿ ಇಡ್ತಿದ್ರು” ಅಂತ ಹೊಸ ಒಡಂಬಡಿಕೆಯ ತತ್ವಜ್ಞಾನಿಯಾದ ಫಿಲಿಪ್ ಡಬ್ಲೂ ಕಂಫರ್ಟ್ ಹೇಳ್ತಾರೆ. ಕ್ರೈಸ್ತರು ಈ ರೀತಿಯಲ್ಲಿ ಸುರುಳಿಗಳನ್ನ ಸಂರಕ್ಷಿಸಿ ಇಡುತಿದ್ರು. ಹಾಗಾಗಿ ಕೆಲವು ಹಳೆಯ ಹಸ್ತಪ್ರತಿಗಳು ಮಣ್ಣಿನ ಜಾಡಿಗಳಲ್ಲಿ, ಕತ್ತಲೆ ಕೋಣೆಗಳಲ್ಲಿ, ಗುಹೆಗಳಲ್ಲಿ ಮತ್ತು ತೇವಾಂಶ ಇಲ್ಲದಿರೋ ಜಾಗಗಳಲ್ಲಿ ಸಿಕ್ತು.
ಇದರಿಂದ ಏನು ಪ್ರಯೋಜನವಾಯ್ತು? 2000 ವರ್ಷಕ್ಕಿಂತ ಹೆಚ್ಚು ಹಳೇದಾದ ಬೈಬಲಿನ ಹಸ್ತಪ್ರತಿಗಳ ಸಾವಿರಾರು ಭಾಗಗಳು ಇಲ್ಲಿ ತನಕ ಉಳ್ಕೊಂಡಿವೆ. ತುಂಬ ಹಳೇದಾದ ಮತ್ತು ತುಂಬ ಹಸ್ತಪ್ರತಿಗಳಿರೋ ಪುಸ್ತಕ ಅಂದ್ರೆ ಅದು ಬೈಬಲ್ ಮಾತ್ರ. ಬೇರೆ ಯಾವುದೂ ಇಲ್ಲ.
-
-
ಬೈಬಲ್ ವಿರೋಧವನ್ನು ಎದುರಿಸಿತುಕಾವಲಿನಬುರುಜು: ಅಳಿಯದೇ ಉಳಿದ ಬೈಬಲ್
-
-
ಮುಖಪುಟ ಲೇಖನ | ಅಳಿಯದೇ ಉಳಿದ ಬೈಬಲ್
ಬೈಬಲ್ ವಿರೋಧವನ್ನು ಹೇಗೆ ಎದುರಿಸಿತು?
ಅಪಾಯ: ಅನೇಕ ಧಾರ್ಮಿಕ ಮತ್ತು ರಾಜಕೀಯ ನಾಯಕರು ಬೈಬಲಿಗೆ ವಿರುದ್ಧವಾಗಿ ನಡ್ಕೊಂಡ್ರು. ಅಷ್ಟೇ ಅಲ್ಲ, ಅವರು ತಮ್ಮ ಅಧಿಕಾರ ದುರಪಯೋಗಿಸಿ ಸಾಮಾನ್ಯ ಜನರು ಬೈಬಲ್ ತಗೊಳ್ಳದೆ ಇರೋ ತರ, ಅದನ್ನ ಮುದ್ರಿಸದೆ ಇರೋ ತರ ಮತ್ತು ಅನುವಾದಿಸದೆ ಇರೋ ತರ ಮಾಡಿದ್ರು. ಅದಕ್ಕಿರೋ ಎರಡು ಕಾರಣಗಳನ್ನು ನೋಡೋಣ.
ಸುಮಾರು ಕ್ರಿಸ್ತ ಪೂರ್ವ 167ರಲ್ಲಿ: ಸೆಲ್ಯೂಸಿಡ್ ರಾಜ ಅಂಟಿಯೋಕಸ್ ಎಪಿಫಾನಿಸ್, ಯೆಹೂದ್ಯರು ಗ್ರೀಕ್ ಧರ್ಮ ಸ್ವೀಕರಿಸಬೇಕು ಅಂತ ನಿರ್ಬಂಧ ಹಾಕಿದ. ಅಷ್ಟೇ ಅಲ್ಲ, ಹೀಬ್ರು ಶಾಸ್ತ್ರವಚನಗಳ ಎಲ್ಲಾ ಪ್ರತಿಗಳನ್ನು ನಾಶ ಮಾಡೋಕೆ ಆಜ್ಞೆ ಕೊಟ್ಟ. ಅವನ ಸೇವಕರು “ನಿಯಮದ ಸುರುಳಿಗಳನ್ನ ಹರಿದು ಹಾಕಿದ್ರು ಮತ್ತು ಸುಟ್ಟು ಹಾಕಿದ್ರು. ಅಷ್ಟೇ ಅಲ್ಲ ಅದನ್ನು ಓದೋಕೆ ಬಯಸಿದವರನ್ನು ಕೊಂದು ಹಾಕಿದ್ರು” ಅಂತ ಇತಿಹಾಸಗಾರನಾದ ಹೆನ್ರಿಕ್ ಗ್ರೇಟ್ಸ್ ಬರೆದ್ರು.
ಮಧ್ಯ ಯುಗದಲ್ಲಿ: ಚರ್ಚಲ್ಲಿದ್ದ ಸಾಮಾನ್ಯ ಜನರು ಕ್ಯಾಥೋಲಿಕ್ ಬೋಧನೆಗಳಿಗೆ ಬದಲು ಬೈಬಲಲ್ಲಿ ಇರೊದನ್ನು ಕಲಿಸಿದ್ರಿಂದ ಕ್ಯಾಥೋಲಿಕ್ ನಾಯಕರು ಅವರ ಮೇಲೆ ತುಂಬ ಕೋಪಗೊಂಡ್ರು. ಯಾರಾದ್ರೂ ಲ್ಯಾಟಿನ್ ಭಾಷೆಯ ಕೀರ್ತನೆ ಪುಸ್ತಕಗಳನ್ನು ಬಿಟ್ಟು ಬೈಬಲಿನ ಬೇರೆ ಯಾವುದೇ ಪುಸ್ತಕವನ್ನು ಹೊಂದಿದ್ರೆ ಅವರನ್ನು ಧರ್ಮಭ್ರಷ್ಟರು ಅಂತ ಪರಿಗಣಿಸುತ್ತಿದ್ದರು. ಒಂದು ಚರ್ಚ್ ಕೂಟದಲ್ಲಿ ಧಾರ್ಮಿಕ ನಾಯಕರು ಕೆಲವು ಜನರ ಹತ್ತಿರ “ಸಂಶಯ ಬರೋ ಎಲ್ಲ ಮನೆಗಳನ್ನು ಮತ್ತು ನೆಲಮಾಳಿಗೆಗಳನ್ನ ಶ್ರದ್ಧೆಯಿಂದ, ಚೆನ್ನಾಗಿ ಮತ್ತು ಆಗಾಗ ಹುಡುಕ್ತಾ ಇರಿ. ಅಂಥ ಮನೆಗಳಲ್ಲಿ ಏನಾದ್ರು ಸಿಕ್ಕಿದ್ರೆ ಅದನ್ನು ಕೂಡ್ಲೆ ನಾಶಮಾಡಿ” ಅಂತ ಹೇಳಿದ್ರು.
ಒಂದುವೇಳೆ ಬೈಬಲ್ ವಿರೋಧಿಗಳು ಬೈಬಲನ್ನು ಸಂಪೂರ್ಣವಾಗಿ ನಾಶ ಮಾಡಿಬಿಟ್ಟಿದ್ರೆ ಅದರಲ್ಲಿರೋ ಸಂದೇಶನೂ ನಮ್ಮ ಕೈಗೆ ಸಿಗುತ್ತಿರಲಿಲ್ಲ.
ವಿಲಿಯಂ ಟಿಂಡೆಲ್ ಮಾಡಿದ ಇಂಗ್ಲಿಷ್ ಭಾಷಾಂತರದ ಬೈಬಲ್ ಉಳಿದುಕೊಳ್ತು. ಎಷ್ಟೇ ನಿಷೇಧ ಇದ್ರೂ, ಬೈಬಲ್‌ಗಳನ್ನು ಸುಟ್ಟು ಹಾಕಿದ್ರೂ ಮತ್ತು 1536ರಲ್ಲಿ ಟಿಂಡೆಲನ್ನೇ ಕೊಂದು ಹಾಕಿದ್ರೂ ಅದನ್ನು ನಾಶ ಮಾಡೋಕೆ ಆಗ್ಲಿಲ್ಲ.
ಬೈಬಲ್ ಹೇಗೆ ಉಳಿದುಕೊಳ್ತು? ರಾಜ ಅಂಟಿಯೋಕ ಇಸ್ರಾಯೇಲಿನಲ್ಲಿದ್ದ ಎಲ್ಲಾ ಶಾಸ್ತ್ರವಚನಗಳನ್ನ ನಾಶ ಮಾಡೋಕೆ ಪ್ರಯತ್ನಿಸಿದ. ಆದ್ರೆ ಆ ಸಮಯದಲ್ಲಿ ಇಸ್ರಾಯೇಲಿನ ತುಂಬ ಯೆಹೂದಿಗಳು ಇಸ್ರಾಯೇಲಿನ ಹೊರಗಡೆ ಜೀವಿಸ್ತಾ ಇದ್ರು. ಕ್ರಿಸ್ತ ಶಕ ಒಂದನೇ ಶತಮಾನದಲ್ಲಿ ಸುಮಾರು 60 ಶೇಕಡದಷ್ಟು ಯೆಹೂದಿಗಳು ಇಸ್ರಾಯೇಲಿನ ಹೊರಗಡೆ ಜೀವಿಸ್ತಾ ಇದ್ರು ಅಂತ ಕೆಲವು ತತ್ವಜ್ಞಾನಿಗಳು ಹೇಳ್ತಾರೆ. ಈ ಇಸ್ರಾಯೇಲ್ಯರು ತಮ್ಮ ಸಭಾಮಂದಿರಗಳಲ್ಲಿ ಶಾಸ್ತ್ರವಚನಗಳ ಪ್ರತಿಗಳನ್ನು ಇಟ್ಟುಕೊಂಡಿದ್ರು. ಇದೇ ಪ್ರತಿಗಳನ್ನು ಅವರ ಮುಂದಿನ ತಲೆಮಾರಿನವರು ಮತ್ತು ಕ್ರೈಸ್ತರು ಬಳಸಿದ್ರು.—ಅಪೊಸ್ತಲರ ಕಾರ್ಯ 15:21.
ಮಧ್ಯ ಯುಗದಲ್ಲಿ ಬೈಬಲನ್ನು ತುಂಬ ಇಷ್ಟಪಡುತ್ತಿದ್ದ ಜನರು ಹಿಂಸೆ ಇದ್ರೂ ಬೈಬಲನ್ನು ಭಾಷಾಂತರಿಸಿ ಅದರ ಪ್ರತಿಗಳನ್ನು ಮಾಡಿದ್ರು. 15ನೇ ಶತಮಾನದ ಮಧ್ಯದಷ್ಟಕ್ಕೆ ಸಾಗಿಸಬಹುದಾದ ಮುದ್ರಣ ಯಂತ್ರವನ್ನು ಕಂಡುಹಿಡಿಯಲಾಯಿತು. ಆದ್ರೆ ಇದನ್ನ ಕಂಡುಹಿಡಿಯೋಕೆ ಮುಂಚೆನೇ ಬೈಬಲಿನ ಭಾಗಗಳು 33 ಭಾಷೆಗಳಲ್ಲಿ ಲಭ್ಯವಿತ್ತು. ಈ ಯಂತ್ರ ಬಂದ ಮೇಲೆ ಬೈಬಲ್ ಭಾಷಾಂತರ ಮತ್ತು ಮುದ್ರಣ ಜಾಸ್ತಿ ಆಯ್ತು.
ಇದರಿಂದ ಏನು ಪ್ರಯೋಜನವಾಯ್ತು? ಪ್ರಬಲ ರಾಜರ ಮತ್ತು ತಪ್ಪಾಗಿ ಬೋಧಿಸುತ್ತಿದ್ದ ಪಾದ್ರಿಗಳ ವಿರೋಧ ಇದ್ರೂ ಇತಿಹಾಸದಲ್ಲೇ ಬೈಬಲಷ್ಟು ಭಾಷಾಂತರ ಆಗಿ ವಿತರಣೆಯಾದ ಪುಸ್ತಕ ಬೇರೊಂದಿಲ್ಲ. ಬೈಬಲ್ ಅನೇಕರ ಜೀವನವನ್ನೇ ಬದಲಾಯಿಸಿದೆ. ಕೆಲವು ದೇಶಗಳು ತಮ್ಮ ಕಾನೂನಿಗೆ ಬೈಬಲಲ್ಲಿರೋ ನಿಯಮಗಳನ್ನು ಸೇರಿಸಿವೆ. ಅಷ್ಟೇ ಅಲ್ಲ ಬೈಬಲಲ್ಲಿರೋ ಭಾಷೆಯನ್ನೂ ಬಳಸುತ್ತಿವೆ.
-
-
ಬೈಬಲ್ ಸಂದೇಶವನ್ನು ಬದಲಾಯಿಸಲು ಪ್ರಯತ್ನಿಸಿದ್ರೂ ಅದು ಉಳಿಯಿತುಕಾವಲಿನಬುರುಜು: ಅಳಿಯದೇ ಉಳಿದ ಬೈಬಲ್
-
-
ಮಸೋರೇಟ್ಸ್ ತುಂಬ ಜಾಗ್ರತೆಯಿಂದ ವಚನಗಳನ್ನು ನಕಲು ಮಾಡಿದ್ರು
ಮುಖಪುಟ ಲೇಖನ | ಅಳಿಯದೇ ಉಳಿದ ಬೈಬಲ್
ಬೈಬಲ್ ಸಂದೇಶವನ್ನು ಬದಲಾಯಿಸಲು ಪ್ರಯತ್ನಿಸಿದ್ರೂ ಅದು ಹೇಗೆ ಉಳಿಯಿತು?
ಅಪಾಯ: ಎಷ್ಟೇ ಅಪಾಯ ಮತ್ತು ವಿರೋಧ ಬಂದ್ರೂ ಬೈಬಲನ್ನು ನಾಶ ಮಾಡೋಕೆ ಆಗ್ಲಿಲ್ಲ. ಆದ್ರೂ ಕೆಲವು ನಕಲುಗಾರರು ಮತ್ತು ಅನುವಾದಗಾರರು ಬೈಬಲಿನ ಸಂದೇಶವನ್ನು ಬದಲಾಯಿಸೋಕೆ ಪ್ರಯತ್ನಿಸಿದ್ರು. ಕೆಲವೊಮ್ಮೆ ಅವರು ತಮ್ಮ ನಂಬಿಕೆಗೆ ತಕ್ಕಂತೆ ಬೈಬಲನ್ನು ಬದಲಾಯಿಸೋಕೆ ಪ್ರಯತ್ನಿಸಿದ್ರು. ಅದರ ಬಗ್ಗೆ ತಿಳಿಯೋಕೆ ಕೆಲವು ಉದಾಹರಣೆಗಳನ್ನು ನೋಡೋಣ.
ಆರಾಧನೆಯ ಸ್ಥಳ: ಕ್ರಿಸ್ತ ಪೂರ್ವ 4ರಿಂದ 2ನೇ ಶತಮಾನದ ಸಮಯದಲ್ಲಿ ಸಮಾರಿಟನ್ ಪೆಂಟಟ್ಯೂಕ್ ಬರಹಗಾರರು ವಿಮೋಚನಕಾಂಡ 20:17ರಲ್ಲಿ “ಗೆರಿಜ್ಜೀಮ್ ಬೆಟ್ಟ. ಮತ್ತು ಅಲ್ಲಿ ನೀವು ಒಂದು ಯಜ್ಞವೇದಿ ಕಟ್ಟಬೇಕು” ಅನ್ನೋ ಪದಗಳನ್ನು ಸೇರಿಸಿದ್ರು. ಹೀಗೆ ಈ ಗೆರಿಜ್ಜೀಮ್ ಬೆಟ್ಟದ ಮೇಲೆ ಯಜ್ಞವೇದಿಯನ್ನು ಸ್ಥಾಪಿಸಬೇಕು ಅನ್ನೋ ವಿಷ್ಯವನ್ನು ಬೆಂಬಲಿಸೋಕಾಗಿ ಸಮಾರ್ಯದವರು ವಚನಗಳಲ್ಲಿ ಬದಲಾವಣೆ ಮಾಡಿದ್ರು.
ತ್ರೈಯೇಕ ಬೋಧನೆ: ಬೈಬಲ್ ಬರೆದು ಮುಗಿಸಿ 300 ವರ್ಷ ಆಗೋದ್ರ ಒಳಗೆ ತ್ರೈಯೇಕದ ಬರಹಗಾರನೊಬ್ಬ 1 ಯೋಹಾನ 5:7ರಲ್ಲಿ “ಪರಲೋಕದಲ್ಲಿ, ತಂದೆಯು, ವಾಕ್ಯವು ಮತ್ತು ಪರಿಶುದ್ಧಾತ್ಮನು: ಮೂವರಾಗಿರುವ ಇವರು ಒಂದಾಗಿದ್ದಾರೆ” ಅನ್ನೋ ಕೆಲವು ಪದಗಳನ್ನು ಸೇರಿಸಿದನು. ಆದ್ರೆ ಈ ಹೇಳಿಕೆ ಮೂಲ ಬರಹದಲ್ಲಿ ಇರ್ಲಿಲ್ಲ. ಬೈಬಲ್ ವಿದ್ವಾಂಸರಾದ ಬ್ರೂಸ್ ಮ್ಯಾಟ್ಸ್‌ಗರ್ ಹೇಳಿದ್ದು: “6ನೇ ಶತಮಾನದಿಂದ ಲ್ಯಾಟಿನ್ ಭಾಷೆಯ ಅನೇಕ ಬೈಬಲ್‌ಗಳಲ್ಲಿ ಈ ಹೇಳಿಕೆ ಕಂಡುಬಂದಿದೆ.”
ಪವಿತ್ರ ಹೆಸರು: ಕೆಲವು ಯೆಹೂದಿಗಳು ದೇವರ ಹೆಸರು ತುಂಬ ಪವಿತ್ರವಾಗಿರೋದ್ರಿಂದ ಅದನ್ನು ಬಳಸಬಾರದು ಅಂತ ಹೇಳಿದ್ರು. ಹಾಗಾಗಿ ಅನೇಕ ಭಾಷಾಂತರಗಾರರು ದೇವರ ಹೆಸರನ್ನ ಬೈಬಲಲ್ಲಿ ಬಳಸಲಿಲ್ಲ. ಅದಕ್ಕೆ ಬದಲು “ದೇವರು” “ಕರ್ತನು” ಅನ್ನೋ ಬಿರುದುಗಳನ್ನು ಬಳಸಿದ್ರು. ಈ ಬಿರುದುಗಳನ್ನು ಸೃಷ್ಟಿಕರ್ತನಿಗೆ ಅಷ್ಟೇ ಅಲ್ಲ ಮನುಷ್ಯರಿಗೆ, ಸುಳ್ಳಾರಾಧನೆಗೆ ಬಳಸುವ ಮೂರ್ತಿಗಳಿಗೆ ಮತ್ತು ಸೈತಾನನಿಗೂ ಬಳಸಲಾಗಿದೆ.—ಯೋಹಾನ 10:34, 35; 1 ಕೊರಿಂಥ 8:5, 6; 2 ಕೊರಿಂಥ 4:4.a
ಬೈಬಲ್ ಹೇಗೆ ಉಳಿದುಕೊಳ್ತು? ಮೊದಲನೇದಾಗಿ, ಕೆಲವು ನಕಲುಗಾರರು ವಚನಗಳನ್ನು ನಿರ್ಲಕ್ಷ್ಯದಿಂದ ನಕಲು ಮಾಡಿದ್ರು ಮತ್ತು ಕೆಲವೊಂದನ್ನು ತಿರುಚಿದ್ರು. ಆದ್ರೆ ಇನ್ನು ಕೆಲವು ನಕಲುಗಾರರು ತುಂಬ ಜಾಗ್ರತೆಯಿಂದ ಮತ್ತು ನಿಷ್ಕೃಷ್ಟವಾಗಿ ನಕಲು ಮಾಡಿದ್ರು. ಕ್ರಿಸ್ತ ಶಕ 6ರಿಂದ 10ನೇ ಶತಮಾನದ ಸಮಯದಲ್ಲಿ ಮಸೋರೀಟ್ಸ್ ಅನ್ನೋ ಒಂದು ಗುಂಪು ಹೀಬ್ರು ಶಾಸ್ತ್ರವಚನಗಳನ್ನು ನಕಲುಮಾಡಿ ಪ್ರತಿಗಳನ್ನು ತಯಾರಿಸಿದ್ರು. ಇದನ್ನು ಮಸೋರೆಟಿಕ್ ಬರಹ ಅಂತ ಹೇಳ್ತಾರೆ. ಅವರು ಪ್ರತಿಯೊಂದು ಪದಗಳನ್ನು ಮತ್ತು ಅಕ್ಷರಗಳನ್ನು ಲೆಕ್ಕಮಾಡಿ ಅದ್ರಲ್ಲಿ ಯಾವುದೇ ತಪ್ಪು ಆಗಿಲ್ಲ ಅಂತ ಖಚಿತಪಡಿಸಿಕೊಂಡ್ರು. ಅದಕ್ಕಾಗಿ ಅವ್ರು ತಾವು ನಕಲು ಮಾಡಿದ ಪ್ರತಿಯಲ್ಲಿ ಏನಾದ್ರೂ ತಪ್ಪು ಇದೆಯಾ ಅಂತ ಹುಡುಕಿ ಆ ತಪ್ಪನ್ನು ಬರೆದಿಟ್ರು. ಇವರು ಬೈಬಲನ್ನು ತಿರುಚೋಕೆ ಒಂಚೂರು ಇಷ್ಟಪಡಲಿಲ್ಲ. “ಬೇಕುಬೇಕಂತ ತಿರುಚೋದನ್ನು ಇವರು ಒಂದು ಅಪರಾಧವಾಗಿ ನೋಡ್ತಿದ್ರು” ಅಂತ ಪ್ರೊಫೆಸರ್ ಮೋಶೆ ಗೋಶೆನ್ ಗೊಟ್ಸೆನ್ ಬರೆದ್ರು.
ಎರಡನೇದಾಗಿ, ಈಗ ಅನೇಕ ಹಸ್ತಪ್ರತಿಗಳು ಲಭ್ಯ ಇರೋದ್ರಿಂದಾಗಿ ಬೈಬಲ್ ವಿದ್ವಾಂಸರಿಗೆ ಬೈಬಲಲ್ಲಿರೋ ತಪ್ಪುಗಳನ್ನು ಕಂಡು ಹಿಡಿಯಲು ಸುಲಭವಾಯ್ತು. ಉದಾಹರಣೆಗೆ, ಅನೇಕ ವರ್ಷಗಳ ವರೆಗೆ ಧಾರ್ಮಿಕ ನಾಯಕರು ಲ್ಯಾಟಿನ್ ಭಾಷಾಂತರದ ಬೈಬಲೇ ಸರಿಯಾಗಿದೆ ಅಂತ ಹೇಳುತ್ತಿದ್ರು. ಆದ್ರೆ ಈ ಲೇಖನದ ಆರಂಭದಲ್ಲಿ ನೋಡಿದ ಹಾಗೆ 1 ಯೋಹಾನ 5:7ರಲ್ಲಿ ಕೆಲವು ಪದಗಳನ್ನು ಈ ಭಾಷಾಂತರದಲ್ಲಿ ಸೇರಿಸಿದ್ದಾರೆ. ಈ ತಪ್ಪು ಇದರಲ್ಲಿ ಅಷ್ಟೇ ಅಲ್ಲ, ಕಿಂಗ್ ಜೇಮ್ಸ್ ವರ್ಶನ್ ಬೈಬಲಿನಲ್ಲೂ ಇದೆ! ಆದ್ರೆ ಹಳೆಯ ಹಸ್ತಪ್ರತಿಗಳನ್ನು ಪರೀಕ್ಷಿಸಿದಾಗ ಬೈಬಲ್ ವಿದ್ವಾಂಸರಿಗೆ ಒಂದು ವಿಷಯ ಗೊತ್ತಾಯ್ತು. ಅದ್ರ ಬಗ್ಗೆ ಬ್ರೂಸ್ ಮ್ಯಾಟ್ಸ್‌ಗರ್ ಹೀಗೆ ಬರೆದ್ರು: “1 ಯೋಹಾನ 5:7ರಲ್ಲಿ ಸೇರಿಸಿದ ಪದಗಳು ಲ್ಯಾಟಿನ್ ಬೈಬಲನ್ನು ಬಿಟ್ಟು ಬೇರೆ ಯಾವುದೇ ಹಳೆಯ (ಸಿರಿಯಾಕ್, ಕೊಪ್ಟಿಕ್, ಅರ್ಮೇನಿಯನ್, ಇತಿಯೋಪಿಕ್, ಅರೇಬಿಕ್, ಸ್ಲಾವೋನಿಕ್) ಹಸ್ತಪ್ರತಿಗಳಲ್ಲಿ ಕಂಡುಬರುವುದಿಲ್ಲ.” ಇದ್ರಿಂದಾಗಿ ಕಿಂಗ್ ಜೇಮ್ಸ್ ವರ್ಶನ್ ಮತ್ತು ಬೇರೆ ಕೆಲವು ಬೈಬಲ್‌ಗಳ ಪರಿಷ್ಕೃತ ಆವೃತ್ತಿಗಳಲ್ಲಿ ಆ ವಚನದಲ್ಲಿ ಸೇರಿಸಿದ ಪದಗಳನ್ನು ತೆಗೆದು ಹಾಕಿದ್ದಾರೆ.
ಚೆಸ್ಟರ್ ಬೀಟೀ P46, ಕ್ರಿಸ್ತ ಶಕ ಸುಮಾರು 200ರ ಪಪೈರಸ್ ಬೈಬಲ್ ಹಸ್ತಪ್ರತಿ
ಹಳೆಯ ಹಸ್ತಪ್ರತಿಗಳು ಬೈಬಲಿನ ಸಂದೇಶ ಬದಲಾಗಿಲ್ಲ ಅಂತ ತೋರಿಸುತ್ತಾ? 1947ರಲ್ಲಿ ಕೆಲವು ಹಳೆಯ ಮೃತ ಸಮುದ್ರ ಸುರುಳಿಗಳು ಸಿಗ್ತು. ಇದನ್ನು ಸಾವಿರ ವರ್ಷಗಳ ಹಿಂದೆ ಮಾಡಿದ ಮಸೋರೆಟಿಕ್ ಬರಹದ ಜೊತೆ ಹೋಲಿಸಿ ನೋಡಿದ್ರು. ಒಬ್ಬ ಪರಿಣಿತ ಮೃತ ಸಮುದ್ರ ಸುರುಳಿಗಳಲ್ಲಿ ಒಂದು ಸುರುಳಿಯ ಬಗ್ಗೆ ಹೇಳಿದ್ದು: “ಸಾವಿರ ವರ್ಷದ ಹಿಂದೆ ಯೆಹೂದಿ ನಕಲುಗಾರರಾದ ಮಸೋರೀಟ್ಸ್ ಬೈಬಲ್ ವಚನಗಳನ್ನು ತುಂಬ ಜಾಗ್ರತೆಯಿಂದ ಮತ್ತು ಭಯಭಕ್ತಿಯಿಂದ ನಕಲು ಮಾಡಿದ್ರು ಅಂತ ಹೋಲಿಸಿ ನೋಡಿದಾಗ ಗೊತ್ತಾಯ್ತು.”
ಐರ್ಲೆಂಡಲ್ಲಿರೋ ಚೆಸ್ಟರ್ ಬೀಟೀ ಲೈಬ್ರರಿಯಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ಅನೇಕ ಪುಸ್ತಕಗಳ ಪಪೈರಸ್ ಸುರುಳಿಗಳಿವೆ. ಅದರಲ್ಲಿ ಕೆಲವು ಕ್ರಿಸ್ತ ಶಕ 2ನೇ ಶತಮಾನದ್ದು. ಅಂದ್ರೆ ಬೈಬಲ್ ಬರೆದು ಮುಗಿಸಿ ಸುಮಾರು 100 ವರ್ಷಗಳಾದ ಮೇಲೆ ಬರೆದ ಹಸ್ತಪ್ರತಿಗಳಾಗಿವೆ. ದ ಆ್ಯಕಂರ್ ಬೈಬಲ್ ಡಿಕ್ಷನರಿ ಹೇಳೋದು: “ಬೈಬಲನ್ನು ತುಂಬ ಸಲ ನಕಲು ಮಾಡಿರೋದ್ರಿಂದ ಅದ್ರಲ್ಲಿ ಚಿಕ್ಕಪುಟ್ಟ ಬದಲಾವಣೆಗಳಾಗಿವೆ. ಆದ್ರೆ ಅರ್ಥ ಮಾತ್ರ ಬದಲಾಗಿಲ್ಲ.”
“ಪ್ರಾಚೀನ ಗ್ರಂಥಗಳಲ್ಲೇ ಇಷ್ಟು ನಿಖರವಾಗಿ ಬರೆದ ಗ್ರಂಥ ಬೇರೆ ಯಾವುದೂ ಇಲ್ಲ ಅಂತ ಧೈರ್ಯವಾಗಿ ಹೇಳಬಹುದು.”
ಇದರಿಂದ ಏನು ಪ್ರಯೋಜನವಾಯ್ತು? ಬೈಬಲಲ್ಲಿ ಬದಲಾವಣೆ ಮಾಡದೆ ನಿಷ್ಕೃಷ್ಟವಾಗಿ ಇಡೋಕೆ ಅನೇಕ ಹಳೆಯ ಹಸ್ತಪ್ರತಿಗಳು ಸಹಾಯ ಮಾಡಿವೆ. ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ಬಗ್ಗೆ ಸರ್ ಫ್ರೆಡ್ರಿಕ್ ಕೆನ್ಯನ್ ಹೇಳಿದ್ದು: “ಬೈಬಲನ್ನು ನಕಲು ಮಾಡಿದಷ್ಟು ಹಸ್ತಪ್ರತಿಗಳು ಬೇರೆ ಯಾವ ಪುಸ್ತಕಕ್ಕೂ ಇಲ್ಲ. ಅಷ್ಟೇ ಅಲ್ಲ, ಅದ್ರಲ್ಲಿರೋ ಸಂದೇಶ ಒಂಚೂರು ಬದಲಾಗಿಲ್ಲ ಅನ್ನೋದ್ರಲ್ಲಿ ಯಾವ ಸಂಶಯನೂ ಇಲ್ಲ.” ಹೀಬ್ರೂ ಶಾಸ್ತ್ರಗ್ರಂಥದ ಬಗ್ಗೆ ವಿದ್ವಾಂಸರಾದ ವಿಲಿಯಂ ಹೆನ್ರಿ ಗ್ರೀನ್ ಹೇಳಿದ್ದು: “ಪ್ರಾಚೀನ ಗ್ರಂಥಗಳಲ್ಲೇ ಇಷ್ಟು ನಿಖರವಾಗಿ ಬರೆದ ಗ್ರಂಥ ಬೇರೆ ಯಾವುದೂ ಇಲ್ಲ ಅಂತ ಧೈರ್ಯವಾಗಿ ಹೇಳಬಹುದು.”
a ಹೆಚ್ಚಿನ ಮಾಹಿತಿಗಾಗಿ ಹೊಸಲೋಕ ಭಾಷಾಂತರ ಬೈಬಲಿನ ಪರಿಶಿಷ್ಟ ಎ4 ಮತ್ತು ಎ5ನ್ನು www.pr2711.com ವೆಬ್‌ಸೈಟಲ್ಲಿ ನೋಡಿ.
-
-
ಬೈಬಲ್ ಯಾಕೆ ಉಳಿದುಕೊಳ್ತುಕಾವಲಿನಬುರುಜು: ಅಳಿಯದೇ ಉಳಿದ ಬೈಬಲ್
-
-
ಮುಖಪುಟ ಲೇಖನ | ಅಳಿಯದೇ ಉಳಿದ ಬೈಬಲ್
ಬೈಬಲ್ ಯಾಕೆ ಉಳಿದುಕೊಳ್ತು?
ಬೈಬಲ್ ಇವತ್ತು ಉಳಿದುಕೊಂಡಿರೋದಕ್ಕೇ ನಿಮ್ಮ ಕೈಯಲ್ಲಿರೋ ಸ್ವಂತ ಬೈಬಲನ್ನು ಓದೋಕೆ ಆಗ್ತಿದೆ. ನೀವು ಒಂದು ಒಳ್ಳೇ ಭಾಷಾಂತರದ ಬೈಬಲನ್ನು ತಗೊಳ್ಳೋದಾದ್ರೆ ಮೂಲ ಬರಹದಲ್ಲಿರೋ ಸಂದೇಶವನ್ನೇ ನಿಮ್ಗೆ ಓದೋಕೆ ಆಗುತ್ತೆ.a ಬೈಬಲ್ ಹಸ್ತಪ್ರತಿಗಳು ಕೊಳೆತು ಹಾಳಾಗುವ ಸಾಧ್ಯತೆ ಇದ್ರೂ, ಕಡು ವಿರೋಧ ಎದುರಿಸಿದ್ರೂ, ಅದರಲ್ಲಿರೋ ಸಂದೇಶವನ್ನು ತಿರುಚುವ ಪ್ರಯತ್ನ ಮಾಡಿದ್ರೂ ಹೇಗೆ ಉಳಿದುಕೊಳ್ತು? ಈ ಪುಸ್ತಕಕ್ಕೆ ಅಂಥದ್ದೇನು ವಿಶೇಷತೆ ಇದೆ?
“ಬೈಬಲ್ ದೇವರಿಂದ ಬಂದ ಉಡುಗೊರೆನೇ ಅಂತ ನನಗೀಗ ಅರ್ಥ ಆಗಿದೆ”
ಬೈಬಲನ್ನು ಓದುವ ಅನೇಕರಿಗೆ “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.” ಅನ್ನೋ ಅಪೊಸ್ತಲ ಪೌಲನ ಮಾತು ನಿಜ ಅಂತ ಅನಿಸಿದೆ. (2 ತಿಮೊತಿ 3:16) ಇವರು ಬೈಬಲನ್ನು ಇಲ್ಲಿ ತನಕ ದೇವರೇ ಉಳಿಸಿದ್ದು ಅಂತನೂ ನಂಬುತ್ತಾರೆ. ಈ ಸಂಚಿಕೆಯ ಆರಂಭದ ಲೇಖನದಲ್ಲಿ ತಿಳಿಸಲಾದ ಫೈಜ಼ಲ್, ಬೈಬಲನ್ನು ನಂಬಬಹುದಾ ಅಂತ ಪರೀಕ್ಷಿಸೋಕೆ ಅದನ್ನು ಓದಿ ನೋಡಿದ್ರು. ಓದಿದಾಗ ಅವರಿಗೆ ತುಂಬ ಆಶ್ಚರ್ಯ ಆಯ್ತು. ಯಾಕಂದ್ರೆ ಚರ್ಚಲ್ಲಿ ಕಲಿಸೋದಕ್ಕೂ ಬೈಬಲಲ್ಲಿ ಇರೋದಕ್ಕೂ ತುಂಬ ವ್ಯತ್ಯಾಸ ಇದೆ ಅಂತ ಅವರಿಗೆ ಅರ್ಥ ಆಯ್ತು. ಅಷ್ಟೇ ಅಲ್ಲ, ಮನುಷ್ಯರಿಗಾಗಿ ದೇವರು ಮುಂದೆ ಏನು ಮಾಡ್ಲಿಕ್ಕಿದ್ದಾರೆ ಅಂತ ತಿಳ್ಕೊಂಡಾಗ ಅವರಿಗೆ ತುಂಬ ಖುಷಿ ಆಯ್ತು.
ಫೈಜ಼ಲ್ ಹೇಳಿದ್ದು: “ಬೈಬಲ್ ದೇವರಿಂದ ಬಂದ ಉಡುಗೊರೆನೇ ಅಂತ ನನಗೀಗ ಅರ್ಥ ಆಗಿದೆ. ಇಡೀ ವಿಶ್ವವನ್ನೇ ಸೃಷ್ಟಿ ಮಾಡಿದ ದೇವರಿಗೆ ನಮಗೋಸ್ಕರ ಒಂದು ಪುಸ್ತಕವನ್ನು ಉಳಿಸಿಕೊಡೋಕೆ ಆಗಲ್ವಾ? ಒಂದುವೇಳೆ ಸರ್ವಶಕ್ತ ದೇವರಿಗೆ ಆಗಲ್ಲ ಅಂತ ಹೇಳಿದ್ರೆ ಆತನಿಗೆ ಶಕ್ತಿನೇ ಇಲ್ಲ ಅಂತ ಹೇಳಿದ ಹಾಗೆ. ಆದ್ರೆ ಹಾಗೆ ಹೇಳೋಕೆ ನಾನ್ಯಾರು?”—ಯೆಶಾಯ 40:8.
a ಹೊಸ ಲೋಕ ಭಾಷಾಂತರ ಬೈಬಲಿನ ಪರಿಶಿಷ್ಟ ಎ1 ಮತ್ತು ಎ2 ನೋಡಿ. ಜೊತೆಗೆ ಮೇ 1, 2008ರ “ಒಳ್ಳೇ ಬೈಬಲ್ ಭಾಷಾಂತರವನ್ನು ನಾನು ಹೇಗೆ ಆಯ್ಕೆ ಮಾಡಲಿ?” ಅನ್ನೋ ಇಂಗ್ಲಿಷ್ ಲೇಖನ ನೋಡಿ.
-