ಅಧ್ಯಾಯ 35
ನಾನು ಹೇಗೆ ದೇವರ ಫ್ರೆಂಡ್ ಆಗೋದು?
ಜೀವನದಲ್ಲಾದ ಕಹಿ ಘಟನೆಯಿಂದ ಜೆರೆಮಿಗೆ ಯೆಹೋವ ದೇವರ ಫ್ರೆಂಡ್‌ಶಿಪ್ ಎಷ್ಟು ಅಮೂಲ್ಯ ಅಂತ ಗೊತ್ತಾಯ್ತು. ಜೆರೆಮಿ ಹೇಳಿದ್ದು: “ನನ್ಗೆ 12 ವರ್ಷ ಇದ್ದಾಗ ಅಪ್ಪ ಮನೆ ಬಿಟ್ಟು ಹೋದ್ರು. ಅದಕ್ಕೆ ಒಂದು ರಾತ್ರಿ ಯೆಹೋವ ದೇವರ ಹತ್ತಿರ ‘ಅಪ್ಪ ಮನೆಗೆ ಬರೋ ಹಾಗೆ ಮಾಡು’ ಅಂತ ಪ್ರಾರ್ಥಿಸಿದೆ.”
ಜೆರೆಮಿಗೆ ತುಂಬ ನಿರಾಶೆ ಆದಾಗ ಬೈಬಲ್ ಓದೋಕೆ ಶುರು ಮಾಡಿದ. ಅವನಿಗೆ ಕೀರ್ತನೆ 10:14 ತುಂಬ ಹಿಡಿಸಿತು. ಆ ವಚನದಲ್ಲಿ ಯೆಹೋವ ದೇವರ ಬಗ್ಗೆ ಹೇಳೋದು: “ನಿಸ್ಸಹಾಯಕ ನಿನ್ನ ಕಡೆ ನೋಡ್ತಾನೆ, ತಂದೆ ಇಲ್ಲದವನಿಗೆ [ಪಾದಟಿಪ್ಪಣಿ] ನೀನೇ ಸಹಾಯಕ.” ಜೆರೆಮಿ ಹೇಳಿದ್ದು: “ಯೆಹೋವ ದೇವರು ನನ್ನ ಹತ್ತಿರ ಮಾತಾಡಿದಂತೆ ಅನಿಸ್ತು. ನನಗೆ ಸಹಾಯ ಮಾಡಿದಂತೆ ಅನಿಸ್ತು. ಆತನೇ ನನ್ನ ಅಪ್ಪ. ಇದಕ್ಕಿಂತ ನನ್ಗೆ ಇನ್ನೇನು ಬೇಕು ಹೇಳಿ?”
ಜೆರೆಮಿ ತರ ಪರಿಸ್ಥಿತಿ ನಿಮ್ಗೆ ಬಂದಿರಲಿ, ಇಲ್ದೇ ಇರಲಿ, ಯೆಹೋವ ನಿಮ್ಮ ಫ್ರೆಂಡ್ ಆಗೋಕೆ ಬಯಸ್ತಾನೆ. ಬೈಬಲ್ ಹೇಳೋದು: “ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ” (ಯಾಕೋಬ 4:8) ಈ ವಚನದ ಬಗ್ಗೆ ಯೋಚಿಸಿ: ಮೊದಲನೇದಾಗಿ, ನಮ್ಗೆ ದೇವರನ್ನ ನೋಡೋಕೆ ಆಗಲ್ಲ. ಎರಡನೇದಾಗಿ, ನಾವು ದೇವರಿಗೆ ಸರಿಸಮಾನರಲ್ಲ. ಹೀಗಿದ್ರೂ ಯೆಹೋವ ದೇವರು ನಮ್ಮನ್ನ ಆತನ ಫ್ರೆಂಡಾಗಿ ಮಾಡ್ಕೊಳ್ಳೋಕೆ ಬಯಸ್ತಾನೆ!
ಆದ್ರೆ ಯೆಹೋವ ದೇವರ ಫ್ರೆಂಡ್ ಆಗಬೇಕಾದ್ರೆ ನಾವು ಪ್ರಯತ್ನ ಹಾಕಬೇಕು. ಉದಾಹರಣೆಗೆ, ನೀವು ಮನೆಯಲ್ಲಿ ಬೆಳೆಸೋ ಗಿಡಗಳು ತನ್ನಿಂದ ತಾನೇ ಬೆಳೆಯಲ್ಲ. ಅವು ಬೆಳೆಯಬೇಕಂದ್ರೆ ನೀರು ಹಾಕಬೇಕು ಮತ್ತು ಗಾಳಿ ಬೆಳಕು ಚೆನ್ನಾಗಿ ಸಿಗೋ ತರ ನೋಡ್ಕೋಬೇಕು. ಇದೇ ತರ ನಾವು ದೇವರ ಸ್ನೇಹ ಬೆಳೆಸೋಕೂ ಮಾಡ್ಬೇಕು. ಅದಕ್ಕೆ ಯಾವ ವಿಷಯಗಳು ಸಹಾಯ ಮಾಡುತ್ತೆ?
ಬೈಬಲ್ ಅಧ್ಯಯನ
ಫ್ರೆಂಡ್‌ಶಿಪ್ಪಲ್ಲಿ ಮಾತಾಡೋದು, ಕೇಳಿಸಿಕೊಳ್ಳೋದು ತುಂಬ ಮುಖ್ಯ. ಯೆಹೋವ ದೇವರ ಜೊತೆ ಫ್ರೆಂಡ್‌ಶಿಪ್ ಮಾಡುವಾಗ್ಲೂ ಇದನ್ನೇ ಮಾಡ್ಬೇಕು. ದೇವರು ನಮ್ಮ ಹತ್ರ ಏನ್ ಹೇಳ್ತಿದ್ದಾನೆ ಅಂತ ಕೇಳಿಸ್ಕೊಬೇಕಂದ್ರೆ ಬೈಬಲನ್ನು ಓದಿ ಅಧ್ಯಯನ ಮಾಡ್ಬೇಕು.—ಕೀರ್ತನೆ 1:2, 3.
ಓದೋದು ಕೆಲವೊಮ್ಮೆ ನಿಮ್ಗೆ ಅಷ್ಟು ಇಷ್ಟ ಆಗಿರಲಿಕ್ಕಿಲ್ಲ. ಕೆಲವು ಯುವಕರಿಗೆ ಓದೋದಕ್ಕಿಂತ ಟಿವಿ ನೋಡೋಕೆ, ಆಟ ಆಡೋಕೆ, ಫ್ರೆಂಡ್ಸ್ ಜೊತೆ ಸಮಯ ಕಳೆಯೋಕೆ ತುಂಬ ಇಷ್ಟ. ಆದ್ರೆ ನೀವು ದೇವರ ಫ್ರೆಂಡ್ ಆಗ್ಬೇಕಂದ್ರೆ ದೇವರ ವಾಕ್ಯವನ್ನು ಅಧ್ಯಯನ ಮಾಡ್ಲೇಬೇಕು. ಆಗ್ಲೇ ನಿಮ್ಗೆ ದೇವರು ಹೇಳೋದನ್ನ ಕೇಳಿಸಿಕೊಳ್ಳೋಕೆ ಆಗುತ್ತೆ.
ಹಾಗಂತ ಚಿಂತೆ ಮಾಡ್ಬೇಡಿ. ಬೈಬಲ್ ಅಧ್ಯಯನವನ್ನ ಒಂದು ಹೊರೆ ತರ ನೋಡ್ಬೇಡಿ. ನಿಮ್ಗೆ ಓದೋದಂದ್ರೆ ಅಷ್ಟಕಷ್ಟೆ ಇರಬಹುದು. ಆದ್ರೆ ಬೈಬಲ್ ಓದೋದಾದ್ರೆ ಹೋಗ್ತಾಹೋಗ್ತಾ ನೀವದನ್ನ ಎಂಜಾಯ್ ಮಾಡ್ತೀರ. ಬೈಬಲ್ ಓದೋಕಾಗಿ ಒಂದು ಸಮಯವನ್ನ ನಿಶ್ಚಯಿಸಿ. ಲೈಸಾ ಅನ್ನೋ ಹುಡುಗಿ ಹೇಳೋದು: “ಬೈಬಲ್ ಓದೋಕೆ ನಾನೊಂದು ಶೆಡ್ಯೂಲ್ ಮಾಡ್ಕೊಂಡಿದ್ದೀನಿ. ಬೆಳಿಗ್ಗೆ ಎದ್ದ ತಕ್ಷಣ ನಾನು ಮೊದಲು ಬೈಬಲ್ ಓದ್ತೀನಿ.” 15 ವರ್ಷದ ಮರಿಯಾ ಬೇರೆ ಸಮಯ ಆರಿಸಿಕೊಂಡಿದ್ದಾಳೆ. ಅವಳು ಹೇಳೋದು: “ನಾನು ರಾತ್ರಿ ಮಲಗೋ ಮುಂಚೆ ಬೈಬಲ್ ಓದ್ತೀನಿ.”
ಅಧ್ಯಯನ ಮಾಡೋಕೆ ಏನು ಮಾಡ್ಬೇಕು ಅಂತ ತಿಳಿಯೋಕಾಗಿ ಬೈಬಲನ್ನ ಪರೀಕ್ಷಿಸಿ ಚೌಕ ನೋಡಿ. ಒಂದು ದಿನಕ್ಕೆ ಹೆಚ್ಚುಕಡಿಮೆ 30 ನಿಮಿಷ ಬೈಬಲ್ ಓದೋಕೆ ನಿಮ್ಗೆ ಆಗುತ್ತಾ? ಆಗೋದಾದ್ರೆ ಅದು ಯಾವಾಗ ಅಂತ ಕೆಳಗೆ ಬರೆಯಿರಿ.
..............
ಶೆಡ್ಯೂಲ್ ಮಾಡ್ಕೊಳ್ಳೋದು ಒಂದು ಆರಂಭ ಅಷ್ಟೇ. ಆದ್ರೆ ನೀವು ಓದೋಕೆ ಶುರುಮಾಡಿದ ಮೇಲೆ ಅದನ್ನ ಮುಂದುವರಿಸೋಕೆ ಕಷ್ಟ ಆಗ್ಬಹುದು. ಇದರ ಬಗ್ಗೆ 11 ವರ್ಷದ ಜೆಸ್ರೇಲ್ ಹೇಳಿದ್ದು: “ಬೈಬಲಿನ ಕೆಲವು ಭಾಗಗಳು ಕಷ್ಟವಾಗಿರುತ್ತೆ. ಓದೋಕೂ ಬೋರ್ ಆಗುತ್ತೆ.” ನಿಮ್ಗೆ ಹೀಗೆ ಅನಿಸೋದಾದ್ರೆ ಓದೋದನ್ನು ನಿಲ್ಲಿಸಬೇಡಿ. ಯಾಕಂದ್ರೆ ನೀವು ಬೈಬಲ್ ಅಧ್ಯಯನ ಮಾಡುವಾಗ ನಿಮ್ಮ ಫ್ರೆಂಡ್ ಆದ ಯೆಹೋವ ದೇವರು ಹೇಳೋದನ್ನು ಕೇಳಿಸಿಕೊಳ್ತೀರ. ಬೈಬಲ್ ಅಧ್ಯಯನ ಮಾಡೋಕೆ ಪ್ರಯತ್ನ ಹಾಕಿದಷ್ಟು ನಿಮ್ಮ ಆಸಕ್ತಿನೂ ಹೆಚ್ಚಾಗುತ್ತೆ, ಪ್ರಯೋಜನನೂ ಸಿಗುತ್ತೆ.
ಪ್ರಾರ್ಥನೆ
ಪ್ರಾರ್ಥನೆ ದೇವರ ಜೊತೆ ಮಾತಾಡೋಕೆ ಇರೋ ಒಂದು ವಿಧ. ಪ್ರಾರ್ಥನೆ ನಿಜವಾಗ್ಲೂ ಒಂದು ಅದ್ಭುತ ಉಡುಗೊರೆ ಅಲ್ವಾ! ನೀವು ಯೆಹೋವ ದೇವರ ಹತ್ತಿರ ಹಗಲು-ರಾತ್ರಿ ಪ್ರಾರ್ಥಿಸಬಹುದು. ಆತನು ಪ್ರಾರ್ಥನೆ ಕೇಳೋಕೆ ಯಾವಾಗ್ಲೂ ರೆಡಿ ಇರ್ತಾನೆ. ಅದಕ್ಕಿಂತ ಹೆಚ್ಚಾಗಿ ನಾವು ಏನ್ ಹೇಳ್ತೀವಿ ಅಂತ ಕೇಳೋಕೆ ಆತನು ಕಾಯ್ತಾ ಇರ್ತಾನೆ. ಅದಕ್ಕೆ ಬೈಬಲ್ ಹೇಳೋದು: “ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ.”—ಫಿಲಿಪ್ಪಿ 4:6.
ಈ ವಚನದಲ್ಲಿ ಹೇಳಿದ ಹಾಗೆ ಯೆಹೋವ ದೇವರ ಹತ್ತಿರ ಮಾತಾಡೋಕೆ ನಿಮ್ಗೆ ತುಂಬ ವಿಷಯಗಳಿವೆ. ನಿಮಗಾಗುತ್ತಿರೋ ಚಿಂತೆ, ಸಮಸ್ಯೆಗಳ ಬಗ್ಗೆ ಹೇಳ್ಕೊಬಹುದು. ಆತನಿಗೆ ಥ್ಯಾಂಕ್ಸ್ ಕೂಡ ಹೇಳಬಹುದು. ನಿಮ್ಮ ಫ್ರೆಂಡ್ಸ್ ಒಳ್ಳೇದು ಮಾಡಿದ್ರೆ ನೀವು ಅವ್ರಿಗೆ ಥ್ಯಾಂಕ್ಸ್ ಹೇಳ್ತೀರಲ್ವಾ? ಹಾಗೇ ಯೆಹೋವನಿಗೂ ಥ್ಯಾಂಕ್ಸ್ ಹೇಳಿ. ಯೆಹೋವನಷ್ಟು ಸಹಾಯ ಮಾಡೋ ಫ್ರೆಂಡ್ ಬೇರೆ ಯಾರೂ ಇಲ್ಲ.—ಕೀರ್ತನೆ 106:1.
ನೀವು ಯಾವ ವಿಷಯಕ್ಕೆ ಯೆಹೋವನಿಗೆ ಥ್ಯಾಂಕ್ಸ್ ಹೇಳೋಕೆ ಬಯಸ್ತೀರಾ ಅಂತ ಕೆಳಗೆ ಬರೆಯಿರಿ.
..............
ಪ್ರತಿದಿನ ಬರೋ ಸಮಸ್ಯೆಯಿಂದ, ಚಿಂತೆಯಿಂದ ನಿಮ್ಮ ಮನಸ್ಸು ಕುಗ್ಗಿ ಹೋಗಬಹುದು. ಕೀರ್ತನೆ 55:22 ಹೇಳೋದು: “ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು, ಆತನೇ ನಿನಗೆ ಆಧಾರವಾಗಿ ಇರ್ತಾನೆ. ನೀತಿವಂತ ಬಿದ್ದುಹೋಗೋಕೆ ಆತನು ಯಾವತ್ತೂ ಬಿಡಲ್ಲ.”
ನೀವು ಪ್ರಾರ್ಥಿಸುವಾಗ ಯೆಹೋವ ದೇವರ ಹತ್ತಿರ ಯಾವ ಸಮಸ್ಯೆ ಬಗ್ಗೆ ಹೇಳೋಕೆ ಬಯಸ್ತೀರಾ ಅಂತ ಕೆಳಗೆ ಬರೆದಿಡಿ.
..............
ನೀವೇ ಅನುಭವಿಸಿ ನೋಡಿ
ಯೆಹೋವ ದೇವರ ಜೊತೆ ಸ್ನೇಹ ಬೆಳೆಸೋಕೆ ಸಹಾಯ ಮಾಡೋ ಇನ್ನೊಂದು ವಿಷಯದ ಬಗ್ಗೆ ಕೀರ್ತನೆಗಾರ ದಾವೀದ ಹೇಳಿದ್ದು: “ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ.” (ಕೀರ್ತನೆ 34:8) ದಾವೀದನ ಜೀವ ಅಪಾಯದಲ್ಲಿದ್ದಾಗ ಈ ಕೀರ್ತನೆಯನ್ನು ರಚಿಸಿದ. ರಾಜ ಸೌಲ ದಾವೀದನನ್ನ ಕೊಲ್ಲೋಕೆ ಕಾಯ್ತಾ ಇದ್ದ. ಹಾಗಾಗಿ ದಾವೀದ ತನ್ನ ಜೀವವನ್ನ ಕೈಯಲ್ಲಿ ಇಟ್ಕೊಂಡು ಓಡಾಡಬೇಕಿತ್ತು. ಎಷ್ಟರಮಟ್ಟಿಗೆ ಅಂದ್ರೆ ಅವನು ಆಶ್ರಯ ಪಡೆಯೋಕಾಗಿ ತಮ್ಮ ಶತ್ರುಗಳಾದ ಫಿಲಿಷ್ಟಿಯರ ಹತ್ರನೇ ಹೋಗ್ಬೇಕಾಯ್ತು. ಅಲ್ಲಿ ತನ್ನ ಪ್ರಾಣವನ್ನು ಉಳಿಸಿಕೊಳ್ಳೋಕಾಗಿ ಹುಚ್ಚನಂತೆ ನಟಿಸಿ ಪಾರಾಗಬೇಕಾಯ್ತು.—1 ಸಮುವೇಲ 21:10-15.
ದಾವೀದ ಪಾರಾಗಿದ್ದು ತನ್ನ ಸ್ವಂತ ಬುದ್ಧಿಯಿಂದಲ್ಲ, ಯೆಹೋವನ ಸಹಾಯದಿಂದ ಅಂತ ಅವನೇ ಹೇಳಿದ. 34ನೇ ಕೀರ್ತನೆಯಲ್ಲಿ ಬರೆದಿದ್ದು: “ನಾನು ಯೆಹೋವನ ಹತ್ರ ಕೇಳಿದೆ, ಆತನು ನನಗೆ ಉತ್ರ ಕೊಟ್ಟ. ಎಲ್ಲ ಭಯಗಳಿಂದ ನನ್ನನ್ನ ಕಾಪಾಡಿದ.” (ಕೀರ್ತನೆ 34:4) ಇದು ದಾವೀದನ ಸ್ವಂತ ಅನುಭವ. ಹಾಗಾಗಿ ದಾವೀದ, “ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ”a ಅನ್ನೋ ಸಲಹೆ ಕೊಟ್ಟಿದ್ದಾನೆ.
ಯೆಹೋವ ದೇವರು ನಿಮ್ಗೆ ಮಾಡಿರೋ ಸಹಾಯವನ್ನ ನೆನಪಿಸಿಕೊಳ್ಳೋಕೆ ನಿಮ್ಗೆ ಆಗ್ತಿದೆಯಾ? ಹಾಗಿದ್ರೆ ಅದನ್ನು ಕೆಳಗೆ ಬರೆದಿಡಿ. ಕಿವಿಮಾತು: ನೀವು ದೊಡ್ಡದೊಡ್ಡ ಅನುಭವಗಳನ್ನು ಬರೆಯಬೇಕಂತಿಲ್ಲ. ನಿಮ್ಮ ದಿನನಿತ್ಯದ ಜೀವನದಲ್ಲಿ ನಡೆಯೋ ಚಿಕ್ಕಪುಟ್ಚ ಅನುಭವಗಳನ್ನ ಬರೆದ್ರೂ ಸಾಕು.
..............
ನಿಮ್ಮ ಅಪ್ಪಅಮ್ಮ ಬೈಬಲ್ ಬಗ್ಗೆ ಈಗಾಗ್ಲೇ ನಿಮ್ಗೆ ಕಲಿಸಿರೋದಾದ್ರೆ ಅದೊಂದು ಆಶೀರ್ವಾದನೇ. ಹಾಗಿದ್ರೂ ನೀವು ದೇವರ ಜೊತೆ ವೈಯಕ್ತಿಕ ಸ್ನೇಹ ಬೆಳೆಸಬೇಕು. ಇಲ್ಲಿವರೆಗೆ ಅದನ್ನ ಮಾಡದೇ ಇದ್ರೆ, ಇನ್ಮುಂದೆ ಮಾಡೋಕೆ ಈ ಅಧ್ಯಾಯ ನಿಮ್ಗೆ ಸಹಾಯ ಮಾಡುತ್ತೆ. ನೀವು ಮಾಡೋ ಪ್ರಯತ್ನವನ್ನ ಯೆಹೋವ ದೇವರು ಆಶೀರ್ವದಿಸುತ್ತಾನೆ. ಬೈಬಲ್ ಹೇಳೋದು: “ಕೇಳ್ತಾ ಇರಿ, ದೇವರು ನಿಮಗೆ ಕೊಡ್ತಾನೆ. ಹುಡುಕ್ತಾ ಇರಿ, ನಿಮಗೆ ಸಿಗುತ್ತೆ.”—ಮತ್ತಾಯ 7:7.
[ಪಾದಟಿಪ್ಪಣಿ]
a ಕೆಲವು ಬೈಬಲ್‌ಗಳು “ಸವಿದು ನೋಡಿ” ಅನ್ನೋ ಪದಕ್ಕೆ ಕೊಡೋ ಅರ್ಥ, “ನೀವೇ ಹುಡುಕಿ ನೋಡಿ” “ನೀವೇ ಕಂಡು ಹಿಡಿಯಿರಿ” ಮತ್ತು “ನೀವೇ ಅನುಭವಿಸಿ ನೋಡಿ”—ಕಂಟೆಂಪ್ರರಿ ಇಂಗ್ಲಿಷ್ ವರ್ಶನ್, ಟುಡೇಸ್ ಇಂಗ್ಲಿಷ್ ವರ್ಶನ್ ಮತ್ತು ದ ಬೈಬಲ್ ಇನ್ ಬೇಸಿಕ್ ವರ್ಶನ್.
ಮುಖ್ಯ ವಚನ
“ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು ಖುಷಿಯಾಗಿ ಇರ್ತಾರೆ.”—ಮತ್ತಾಯ 5:3.
ಟಿಪ್
ನೀವು ಪ್ರತಿ ದಿನ ಬೈಬಲಿನ ನಾಲ್ಕು ಪುಟಗಳನ್ನು ಓದೋದಾದ್ರೇ ಒಂದು ವರ್ಷದಲ್ಲಿ ಇಡೀ ಬೈಬಲನ್ನು ಓದಿ ಮುಗಿಸಬಹುದು.
ನಿಮಗೆ ಗೊತ್ತಾ . . . ?
ದೇವರಿಗೆ ನಿಮ್ಮ ಮೇಲೆ ಪ್ರೀತಿ ಇರೋದ್ರಿಂದ ನೀವು ಓದ್ತಾ ಇರೋ ಈ ಪುಸ್ತಕವನ್ನ ಮತ್ತು ನೀವು ಪಾಲಿಸ್ತಾ ಇರೋ ಈ ಸಲಹೆಗಳನ್ನು ಆತನು ಕೊಟ್ಟಿದ್ದಾನೆ.—ಯೋಹಾನ 6:44.
ನಿಮ್ಮ ತೀರ್ಮಾನ!
ಬೈಬಲ್ ಅಧ್ಯಯನದಿಂದ ಹೆಚ್ಚು ಪ್ರಯೋಜನ ಪಡೆಯೋಕೆ ನಾನು ..............
ಯಾವಾಗ್ಲೂ ಪ್ರಾರ್ಥಿಸೋಕೆ ನಾನು ..............
ಈ ವಿಷಯದ ಬಗ್ಗೆ ಅಪ್ಪ ಅಮ್ಮ ಹತ್ರ ನಾನು ಏನು ಕೇಳೋಕೆ ಬಯಸ್ತೇನೆ ಅಂದ್ರೆ ..............
ನೀವೇನು ಹೇಳ್ತೀರಾ?
● ಬೈಬಲ್ ಅಧ್ಯಾಯವನ್ನ ಇನ್ನಷ್ಟು ಎಂಜಾಯ್ ಮಾಡೋಕೆ ನೀವೇನು ಮಾಡ್ತಿರಾ?
● ಪಾಪಿಗಳಾಗಿರೋ ಮನುಷ್ಯರು ಪ್ರಾರ್ಥಿಸೋದನ್ನ ಕೇಳೋಕೆ ದೇವರು ಯಾಕೆ ಬಯಸ್ತಾರೆ?
● ಇನ್ನಷ್ಟು ಚೆನ್ನಾಗಿ ಪ್ರಾರ್ಥಿಸೋಕೆ ನೀವೇನು ಮಾಡಬಹುದು?
[ಸಂಕ್ಷಿಪ್ತ ವಿವರಣೆ]
‘‘ನಾನು ಚಿಕ್ಕವಳಿದ್ದಾಗ ಪ್ರಾರ್ಥನೆಯಲ್ಲಿ ಹೇಳಿದ್ದನ್ನೇ ಪದೇಪದೇ ಹೇಳ್ತಿದ್ದೆ. ಆದ್ರೆ ಈಗ ಪ್ರತಿದಿನ ನಡೆಯೋ ಒಳ್ಳೇ ವಿಷಯಗಳ ಬಗ್ಗೆ, ಬೇಜಾರಾದ ವಿಷಯಗಳ ಬಗ್ಗೆ ಹೇಳ್ತೀನಿ. ಪ್ರತಿದಿನ ಒಂದೇ ತರ ಇರಲ್ಲ. ಹಾಗಾಗಿ ನಮ್ಗೆ ಹೇಳೋಕೆ ಬೇರೆಬೇರೆ ವಿಷ್ಯಗಳಿರೋದ್ರಿಂದ ಹೇಳಿದ್ದನ್ನೇ ಪದೇಪದೇ ಹೇಳಬೇಕಾಗಿಲ್ಲ.”—ಈವ್
[ಚೌಕ/ಚಿತ್ರ]
ಬೈಬಲನ್ನ ಪರೀಕ್ಷಿಸಿ
1. ನಿಮ್ಗೆ ಇಷ್ಟವಾದ ಯಾವುದಾದ್ರು ಒಂದು ಬೈಬಲ್ ಘಟನೆಯನ್ನ ಆಯ್ಕೆ ಮಾಡಿ. ಅದನ್ನ ಅರ್ಥ ಮಾಡ್ಕೊಳ್ಳೋಕೆ ದೇವರ ಹತ್ತಿರ ಸಹಾಯ ಕೇಳಿ.
2. ಘಟನೆಗಳನ್ನ ಗಮನ ಕೊಟ್ಟು ಓದಿ. ಗಡಿಬಿಡಿಯಲ್ಲಿ ಓದಬೇಡಿ. ಘಟನೆಗಳನ್ನ ಚಿತ್ರಿಸಿಕೊಳ್ತಾ ಓದಿ. ಆ ಘಟನೆಯಲ್ಲಿ ನೀವೇ ಇದ್ದೀರ ಅಂತ ನೆನಸಿ. ಅಲ್ಲಿ ನಡಿಯೋ ವಿಷಯಗಳನ್ನ ನೋಡಿ, ಅಲ್ಲಿ ಮಾತಾಡುವವರ ಶಬ್ಧಗಳನ್ನ ಕೇಳಿ, ಸುವಾಸನೆಯನ್ನು ಗ್ರಹಿಸಿ, ಆಹಾರವನ್ನ ಸವಿಯಿರಿ. ಹೀಗೆ ಮಾಡಿದ್ರೆ ಆ ಘಟನೆಗೆ ಜೀವ ತುಂಬಿಸೋಕೆ ಆಗುತ್ತೆ.
3. ನೀವು ಓದೋ ವಿಷಯದ ಬಗ್ಗೆ ಯೋಚಿಸಿ. ಅದಕ್ಕೆ ಸಹಾಯ ಮಾಡೋ ಕೆಲವು ಪ್ರಶ್ನೆಗಳು:
● ಯೆಹೋವ ದೇವರು ಯಾಕೆ ಈ ಘಟನೆಯನ್ನ ತನ್ನ ವಾಕ್ಯದಲ್ಲಿ ಬರೆಸಿದನು?
● ಇದರಲ್ಲಿ ಯಾರ ಮಾದರಿಯನ್ನು ನಾನು ಅನುಕರಿಸಬೇಕು ಮತ್ತು ಯಾರ ಮಾದರಿಯಿಂದ ಎಚ್ಚರಿಕೆಯ ಪಾಠ ಕಲಿಬೇಕು?
● ಈ ಘಟನೆಯಲ್ಲಿ ನನಗೆ ಪ್ರಯೋಜನ ಆಗೋ ಯಾವ ಪಾಠ ಇದೆ?
● ಈ ಘಟನೆ ಯೆಹೋವ ದೇವರ ಬಗ್ಗೆ, ಆತನು ಮಾಡೋ ವಿಷಯಗಳ ಬಗ್ಗೆ ನನಗೆ ಏನು ಕಲಿಸುತ್ತೆ?
4. ಒಂದು ಚಿಕ್ಕ ಪ್ರಾರ್ಥನೆ ಮಾಡಿ. ನೀವು ಈ ಬೈಬಲ್ ಅಧ್ಯಯನದಿಂದ ಏನು ಕಲಿತ್ರಿ, ನಿಮ್ಮ ಜೀವನದಲ್ಲಿ ಅದನ್ನ ಹೇಗೆ ಅನ್ವಯಿಸಿಕೊಳ್ಳಬೇಕು ಅಂತ ಇದ್ದೀರಾ ಅನ್ನೋದನ್ನ ಯೆಹೋವನ ಹತ್ರ ಹೇಳಿ. ಬೈಬಲನ್ನು ಉಡುಗೊರೆಯಾಗಿ ಕೊಟ್ಟಿದಕ್ಕೆ ಆತನಿಗೆ ಯಾವಾಗ್ಲೂ ಥ್ಯಾಂಕ್ಸ್ ಹೇಳಿ.
[ಚಿತ್ರ]
“ನಿನ್ನ ವಾಕ್ಯ ನನ್ನ ಕಾಲಿಗೆ ದೀಪ, ನನ್ನ ದಾರಿಗೆ ಬೆಳಕು.”—ಕೀರ್ತನೆ 119:105.
[ಚೌಕ/ಚಿತ್ರ]
ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಅಂತ ತೀರ್ಮಾನಿಸಿ
ನಿಮಗೆ ಪ್ರಾರ್ಥಿಸೋಕೆ, ಬೈಬಲ್ ಅಧ್ಯಯನ ಮಾಡೋಕೆ ಟೈಮೇ ಇಲ್ವಾ? ಹಾಗಿದ್ರೆ ನೀವು ಯಾವುದಕ್ಕೆ ಪ್ರಾಮುಖ್ಯತೆ ಕೊಡ್ತಿದ್ದೀರ ಅಂತ ಯೋಚಿಸಿ.
ಇದನ್ನ ಮಾಡಿ ನೋಡಿ: ಒಂದು ಬಕೆಟ್ ತಗೊಳ್ಳಿ, ಅದರಲ್ಲಿ ದೊಡ್ಡದೊಡ್ಡ ಕಲ್ಲುಗಳನ್ನ ಹಾಕಿ. ನಂತರ ಆ ಬಕೆಟ್ ತುಂಬ ಮರಳನ್ನ ಹಾಕಿ. ಈಗ ನಿಮ್ಮ ಹತ್ತಿರ ಕಲ್ಲು ಮತ್ತು ಮರಳು ತುಂಬಿರೋ ಬಕೆಟ್ ಇದೆ.
ಈಗ ಆ ಬಕೆಟನ್ನ ಖಾಲಿ ಮಾಡಿ ಮತ್ತು ಆ ಬಕೆಟಲ್ಲಿ ಮೊದಲು ಮರಳು ತುಂಬಿಸಿ ನಂತರ ಕಲ್ಲುಗಳನ್ನ ಹಾಕಿ. ಎಲ್ಲಾ ಕಲ್ಲುಗಳನ್ನ ಅದರಲ್ಲಿ ಹಾಕೋಕೆ ಆಯ್ತಾ? ಇಲ್ಲ ಅಲ್ವಾ? ಯಾಕಂದ್ರೆ ಮೊದಲು ನೀವು ಮರಳನ್ನ ತುಂಬಿಸಿದ್ದೀರ.
ಇದರಿಂದ ಏನ್ ಗೊತ್ತಾಗುತ್ತೆ? ಬೈಬಲ್ ಹೇಳೋದು: “ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು” (ಫಿಲಿಪ್ಪಿ 1:10) ಮನೋರಂಜನೆಯಂಥ ಚಿಕ್ಕ ವಿಷಯಗಳಿಗೆ ನೀವು ಮೊದಲನೆ ಸ್ಥಾನ ಕೊಡೋದಾದ್ರೆ, ತುಂಬ ಪ್ರಾಮುಖ್ಯವಾಗಿರೋ ಯೆಹೋವನ ಸೇವೆಗೆ ನಿಮ್ಮ ಜೀವನದಲ್ಲಿ ಸಮಯ ಕೊಡೋಕೆ ಆಗಲ್ಲ. ಆದ್ರೆ ಈ ಬೈಬಲ್ ಸಲಹೆಯನ್ನ ನೀವು ಪಾಲಿಸೋದಾದ್ರೆ ದೇವರ ಸೇವೆಗೆ ಮತ್ತು ಮನೋರಂಜನೆಗೆ ಸಮಯ ಕೊಡೋಕೆ ಆಗುತ್ತೆ. ಇದೆಲ್ಲ ನಿಮ್ಮ ಬಕೆಟಲ್ಲಿ ಯಾವುದನ್ನ ನೀವು ಮೊದಲು ಹಾಕ್ತಿರಾ ಅನ್ನೋದರ ಮೇಲೆ ಹೊಂದಿಕೊಂಡಿದೆ.
[ಚಿತ್ರ]
ಒಂದು ಗಿಡಕ್ಕೆ ಹೇಗೆ ಪೋಷಣೆ ಮಾಡ್ಬೇಕೊ ಹಾಗೇ ನಾವು ದೇವರ ಜೊತೆ ಸ್ನೇಹ ಬೆಳೆಸೋಕೆ ಪ್ರಯತ್ನ ಮಾಡ್ಬೇಕು