-
1 ನಾವು ಯಾಕೆ ಪ್ರಾರ್ಥನೆ ಮಾಡಬೇಕು?ಕಾವಲಿನಬುರುಜು: ಪ್ರಾರ್ಥನೆಯ ಬಗ್ಗೆ ಗೊತ್ತಿರಬೇಕಾದ ಏಳು ವಿಷಯಗಳು
-
-
1 ನಾವು ಯಾಕೆ ಪ್ರಾರ್ಥನೆ ಮಾಡಬೇಕು?
ಪ್ರಾರ್ಥನೆ. ಜನರಲ್ಲಿ ಕುತೂಹಲ ಮತ್ತು ಆಸಕ್ತಿ ತರೋ ವಿಷ್ಯನೇ ಪ್ರಾರ್ಥನೆ. ಈ ಸರಣಿಯಲ್ಲಿ, ಪ್ರಾರ್ಥನೆ ಬಗ್ಗೆ ಇರೋ ಏಳು ಪ್ರಶ್ನೆಗಳು ಮತ್ತು ಇದರ ಬಗ್ಗೆ ಬೈಬಲ್ ಕೊಡೋ ಉತ್ತರಗಳನ್ನ ತಿಳಿದುಕೊಳ್ಳಿ. ಪ್ರಾರ್ಥನೆ ಹೇಗೆ ಮಾಡೋದು, ನೀವು ಈಗಾಗಲೇ ಪ್ರಾರ್ಥನೆ ಮಾಡುತ್ತಿದ್ದರೆ, ಇನ್ನೂ ಚೆನ್ನಾಗಿ ಮಾಡೋಕೆ ಈ ಲೇಖನ ನಮಗೆ ಸಹಾಯ ಮಾಡುತ್ತೆ.
ಭೂಮಿಯಾದ್ಯಂತ ಪ್ರತಿಯೊಂದು ಸಂಸ್ಕೃತಿಯಲ್ಲಿ ಮತ್ತು ಧರ್ಮದಲ್ಲಿ ಜನರು ಪ್ರಾರ್ಥನೆ ಮಾಡುತ್ತಾರೆ. ಒಬ್ಬರೇ ಇರುವಾಗ, ಗುಂಪಾಗಿ ಇರುವಾಗ ಪ್ರಾರ್ಥನೆ ಮಾಡುತ್ತಾರೆ. ಚರ್ಚುಗಳಲ್ಲಿ, ದೇವಾಲಯದಲ್ಲಿ, ಸಭಾಮಂದಿರಗಳಲ್ಲಿ, ಮಸೀದಿಗಳಲ್ಲಿ, ಗುಡಿಗಳಲ್ಲಿಯೂ ಮಾಡುತ್ತಾರೆ. ಅವರು ಪ್ರಾರ್ಥನೆ ಮಾಡುವಾಗ ಮಣಿಗಳುಳ್ಳ ಜಪಸರವನ್ನ, ಪ್ರಾರ್ಥನಾ ಚಕ್ರಗಳನ್ನ, ಮೂರ್ತಿಗಳನ್ನ, ಪ್ರಾರ್ಥನೆ ಪುಸ್ತಕಗಳನ್ನ ಅಥವಾ ಬೋರ್ಡ್‌ಗಳಲ್ಲಿ ಬರೆದ ಪ್ರಾರ್ಥನೆಗಳನ್ನ ಶೆಲ್ಫ್ ಮೇಲೆ ನೇತುಹಾಕ್ತಾರೆ.
ಕೇವಲ ಮನುಷ್ಯರು ಮಾತ್ರ ಪ್ರಾರ್ಥನೆ ಮಾಡೋಕೆ ಆಗುತ್ತೆ. ಆದರೆ ಪ್ರಾಣಿಗಳ ತರ ನಾವೂ ಊಟ ಮಾಡ್ತೀವಿ, ಉಸಿರಾಡ್ತೀವಿ, ನೀರು ಕುಡ್ತೀವಿ. ಅವುಗಳ ತರ ನಾವು ಹುಟ್ತೀವಿ, ಸಾಯ್ತೀವಿ. (ಪ್ರಸಂಗಿ 3:19) ಆದರೆ ಪ್ರಾರ್ಥನೆ ಮಾಡೋ ವಿಷಯಕ್ಕೆ ಬಂದರೆ ಕೇವಲ ಮನುಷ್ಯರು ಮಾತ್ರ ಮಾಡೋಕೆ ಆಗುತ್ತೆ. ಯಾಕೆ?
ಪ್ರಾರ್ಥನೆ ಮಾಡೋ ಜನರು ಅದೃಶ್ಯ ವ್ಯಕ್ತಿ ಜೊತೆ ಮಾತಾಡ್ತಾರೆ, ಆ ವ್ಯಕ್ತಿ ತುಂಬ ಶ್ರೇಷ್ಠ ಮತ್ತು ಪವಿತ್ರ ಆಗಿದ್ದಾನೆ. ಪ್ರಾರ್ಥನೆ ಮಾಡೋದು ತುಂಬ ಅಗತ್ಯ ಅಂತ ನಮ್ಮನ್ನ ಸೃಷ್ಟಿ ಮಾಡಿರೋ ರೀತಿಯಿಂದ ಗೊತ್ತಾಗುತ್ತೆ ಅಂತ ಬೈಬಲ್ ಹೇಳುತ್ತೆ. (ಪ್ರಸಂಗಿ 3:11) ಯೇಸು ಹೀಗೆ ಹೇಳಿದನು: “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು ಖುಷಿಯಾಗಿ ಇರ್ತಾರೆ.”—ಮತ್ತಾಯ 5:3.
ನಮಗೆ “ದೇವರಿಂದ ಮಾರ್ಗದರ್ಶನ ಪಡೆಯೋಕೆ ಆಸೆ ಇದೆ.” ಜನರು ಆರಾಧನಾ ಸ್ಥಳಗಳನ್ನ ಮಾಡಿ ದೇವರಿಗೆ ಪ್ರಾರ್ಥನೆ ಮಾಡ್ತಾರೆ. ಇನ್ನೂ ಕೆಲವರಿಗೆ, ಬೇರೆಯವರಿಂದ ಮಾರ್ಗದರ್ಶನ ಪಡೆಯೋ ಅಗತ್ಯ ಇಲ್ಲ, ಅವರೇ ಸ್ವಂತ ನಿರ್ಣಯ ತಗೊಳ್ಳಬಹುದು ಅಂತ ಅನಿಸುತ್ತೆ. ಅದೇ ಸಮಯದಲ್ಲಿ, ಇನ್ನು ಕೆಲವರಿಗೆ, ಬೇರೆಯವರು ತಮಗೆ ಸರಿಯಾದ ದಾರಿಯನ್ನ ತೋರಿಸಿದ್ರೆ ಚೆನ್ನಾಗಿರುತ್ತೆ ಅಂತ ಅಂದುಕೊಳ್ಳುತ್ತಾರೆ. ಆದರೆ ನಿಜವಾಗಲೂ ಬೇರೆಯವರು ನಮಗೆ ಸರಿಯಾದ ದಾರಿಯನ್ನ ತೋರಿಸೋಕೆ ಆಗುತ್ತಾ? ಒಂದಲ್ಲ ಒಂದು ದಿನ ಅವರು ಕೂಡ ಸತ್ತುಹೋಗ್ತಾರೆ. ಮುಂದೆ ಏನಾಗುತ್ತೆ, ಏನಾಗಲ್ಲ ಅಂತ ಒಬ್ಬ ವ್ಯಕ್ತಿ ಹೇಳೋಕೆ ಆಗುತ್ತಾ? ಖಂಡಿತ ಇಲ್ಲ. ಕೇವಲ ದೇವರು ಮಾತ್ರ ನಮಗೆ ಸರಿಯಾದ ದಾರಿಯನ್ನ ತೋರಿಸೋಕೆ ಆಗುತ್ತೆ. ಯಾಕಂದ್ರೆ ಆತನು ನಮಗಿಂತ ಹೆಚ್ಚು ಬುದ್ಧಿ, ಶಕ್ತಿ ಮತ್ತು ಶಾಶ್ವತವಾಗಿ ಇರೋ ದೇವರಾಗಿದ್ದಾನೆ. ಆದರೆ ನಮಗೆ ಯಾವಾಗ ಮಾರ್ಗದರ್ಶನ ಬೇಕಾಗಬಹುದು?
ಯೋಚನೆ ಮಾಡಿ: ಒಂದು ವಿಷ್ಯದ ಬಗ್ಗೆ ನಿರ್ಣಯ ಮಾಡಬೇಕಾದಾಗ ಅದನ್ನ ಹೇಗೆ ಮಾಡೋದು ಅನ್ನೋ ಸನ್ನಿವೇಶ ನಿಮಗೆ ಯಾವತ್ತಾದ್ರೂ ಬಂದಿದ್ಯಾ? ನಿಮ್ಮ ಮನಸ್ಸಲ್ಲಿ ಒಂದು ಪ್ರಶ್ನೆ ಇದೆ, ಆದರೆ ಅದಕ್ಕೆ ಯಾರೂ ಉತ್ತರ ಕೊಡ್ತಿಲ್ಲ. ನೀವು ತುಂಬ ಪ್ರೀತಿಸೋ ವ್ಯಕ್ತಿ ತೀರಿಹೋಗಿದ್ದಾರೆ ಆಗ ನಿಮಗೆ ಸಮಾಧಾನ ಮಾಡೋಕೆ ಯಾರಾದ್ರೂ ಬೇಕಿತ್ತಾ? ನೀವು ತಪ್ಪು ಮಾಡಿದ್ದೀರಾ, ನಿಮಗೆ ಕ್ಷಮೆ ಸಿಗಬೇಕು ಅಂತ ಬಯಸ್ತೀರಾ?
ನಮಗೆ ಈ ತರ ಸನ್ನಿವೇಶಗಳು ಬಂದಾಗ ನಾವು ಪ್ರಾರ್ಥನೆ ಮಾಡಬಹುದು ಅಂತ ಬೈಬಲ್ ಹೇಳುತ್ತೆ. ಪ್ರಾರ್ಥನೆ ಬಗ್ಗೆ ಬೈಬಲ್‌ನಲ್ಲಿ ತುಂಬ ವಿಷ್ಯಗಳಿವೆ. ಅದರಲ್ಲಿ, ದೇವರ ನಂಬಿಗಸ್ತ ಸೇವಕರು ಮಾಡಿದ ಪ್ರಾರ್ಥನೆಗಳಿವೆ. ಅವರು ಸಾಂತ್ವನ, ಮಾರ್ಗದರ್ಶನ, ಕ್ಷಮೆ, ಪ್ರಶ್ನೆಗಳಿಗೆ ಉತ್ತರ ತಿಳಿಯೋಕೆ ಪ್ರಾರ್ಥನೆ ಮಾಡಿದ್ದಾರೆ.—ಕೀರ್ತನೆ 23:3; 71:21; ದಾನಿಯೇಲ 9:4, 5, 19; ಹಬಕ್ಕೂಕ 1:3.
ಇವರೆಲ್ಲರು ಬೇರೆ-ಬೇರೆ ಕಾರಣಗಳಿಗೆ ಪ್ರಾರ್ಥನೆ ಮಾಡಿದ್ದಾರೆ. ಆದರೆ ಯಾರಿಗೆ ಪ್ರಾರ್ಥನೆ ಮಾಡಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಈಗಿನ ಜನರು ಯಾರಿಗೆ ಪ್ರಾರ್ಥನೆ ಮಾಡಬೇಕು ಅನ್ನೋ ವಿಷ್ಯದ ಬಗ್ಗೆ ಗಮನ ಕೊಡಲ್ಲ. ಆದರೆ ಈ ವಿಷ್ಯನ ನಾವು ತಿಳಿದುಕೊಳ್ಳೋದು ತುಂಬ ಮುಖ್ಯ. ಯಾಕಂದ್ರೆ ಆಗ ಮಾತ್ರ ನಮ್ಮ ಪ್ರಾರ್ಥನೆಗೆ ಉತ್ತರ ಸಿಗುತ್ತೆ.
-
-
2 ಯಾರಿಗೆ ಮಾಡಬೇಕು?ಕಾವಲಿನಬುರುಜು: ಪ್ರಾರ್ಥನೆಯ ಬಗ್ಗೆ ಗೊತ್ತಿರಬೇಕಾದ ಏಳು ವಿಷಯಗಳು
-
-
2 ಯಾರಿಗೆ ಮಾಡಬೇಕು?
ನೀವು ಯಾರಿಗೆ ಪ್ರಾರ್ಥನೆ ಮಾಡಿದರೂ, ದೇವರು ಅದನ್ನ ಕೇಳುತ್ತಾನೆ ಅಂತ ಕೆಲವರ ಅನಿಸಿಕೆ. ನಿಮಗೆ ಇಷ್ಟವಾದ ಯಾವುದೇ ಧರ್ಮವನ್ನ ನಂಬಬಹುದು ಎಲ್ಲಾ ಧರ್ಮಗಳು ದೇವರ ಹತ್ತಿರ ನಡಿಸುತ್ತೆ ಅಂತ ಕೆಲವರು ಹೇಳುತ್ತಾರೆ. ಆದರೆ ಈ ಮಾತು ನಿಜನಾ?
ಹೆಚ್ಚಿನ ಜನರ ಪ್ರಾರ್ಥನೆಗಳನ್ನ ಕೇಳೋದಿಲ್ಲ ಅಂತ ಬೈಬಲ್ ಹೇಳುತ್ತೆ. ಹಿಂದಿನ ಕಾಲದಲ್ಲಿ, ಜನರು ಮೂರ್ತಿಗಳಿಗೆ ಅಥವಾ ವಿಗ್ರಹಗಳಿಗೆ ಪ್ರಾರ್ಥನೆ ಮಾಡುತ್ತಿದ್ದರು. ಆದರೆ ಈ ವಿಷಯ ದೇವರಿಗೆ ಒಂಚೂರು ಇಷ್ಟ ಇರಲಿಲ್ಲ. ಉದಾಹರಣೆಗೆ, ವಿಗ್ರಹಗಳ ಬಗ್ಗೆ ಕೀರ್ತನೆ 115:4-6ರಲ್ಲಿ ಹೀಗೆ ಹೇಳುತ್ತೆ, ‘ಅವಕ್ಕೆ ಕಿವಿ ಇದ್ರೂ ಕೇಳಿಸ್ಕೊಳ್ಳೋಕೆ ಆಗಲ್ಲ.’ ಹಾಗಾದ್ರೆ, ಪ್ರಾರ್ಥನೆಯನ್ನ ಕೇಳದೆ ಇರೋ ದೇವರಿಗೆ ಪ್ರಾರ್ಥನೆ ಮಾಡಿದರೆ ಏನಾದರೂ ಪ್ರಯೋಜನ ಇದೆಯಾ?
ಬೈಬಲಿನ ಒಂದು ಕಥೆಯಿಂದ ಈ ವಿಷಯವನ್ನ ನಾವು ಅರ್ಥ ಮಾಡಿಕೊಳ್ಳೋಣ. ಕೆಲವರು ಬಾಳ್ ಅನ್ನೋ ದೇವರನ್ನ ಆರಾಧನೆ ಮಾಡೋಕೆ ಶುರು ಮಾಡಿದರು. ಆಗ ದೇವರ ಸೇವಕನಾದ ಎಲೀಯ ಅವರಿಗೆ ‘ನೀವು ನಿಮ್ಮ ದೇವರಿಗೆ ಪ್ರಾರ್ಥಿಸಿ ನಾವು ಯೆಹೋವನಿಗೆ ಪ್ರಾರ್ಥಿಸ್ತೀವಿ, ಯಾವ ದೇವರು ಪ್ರಾರ್ಥನೆಯನ್ನ ಕೇಳಿಸಿಕೊಳ್ಳುತ್ತಾನೋ ಆತನೇ ಸತ್ಯ ದೇವರು’ ಅಂತ ಹೇಳಿದನು. ಬಾಳ್ ಪ್ರವಾದಿಗಳು ಇಡೀ ದಿನ ಜೋರಾಗಿ ಕೂಗಿ ಆಳುತ್ತಾ ಪ್ರಾರ್ಥಿಸಿದರು ಆದರೆ ಯಾವ ಪ್ರಯೋಜನನೂ ಆಗಲಿಲ್ಲ. ಬೈಬಲ್ ಹೀಗೆ ಹೇಳುತ್ತೆ, “ಯಾವ ಉತ್ತರನೂ ಬರಲಿಲ್ಲ ಮತ್ತು ಅವ್ರ ಕಡೆಗೆ ಯಾರೂ ಗಮನ ಕೊಡಲಿಲ್ಲ.” (1 ಅರಸು 18:29) ಈಗ ಎಲೀಯನ ಸರದಿ ಬಂತು. ದೇವರು ಅವನು ಮಾಡಿದ ಪ್ರಾರ್ಥನೆಯನ್ನ ಕೇಳಿದನಾ?
ಎಲೀಯ ಪ್ರಾರ್ಥನೆ ಮಾಡಿದಾಗ ಅವನು ಆರಾಧಿಸುತ್ತಿದ್ದ ದೇವರು ತಕ್ಷಣ ಉತ್ತರ ಕೊಟ್ಟನು. ಹೇಗಂದ್ರೆ ದೇವರು ಸ್ವರ್ಗದಿಂದ ಬೆಂಕಿಯನ್ನ ಕಳಿಸಿ ಎಲೀಯ ಅರ್ಪಿಸಿದ ಬಲಿಯನ್ನ ಸ್ವೀಕರಿಸಿದನು. ದೇವರು ಯಾಕೆ ಎಲೀಯ ಪ್ರಾರ್ಥನೆಯನ್ನ ಕೇಳಿದನು? ಎಲೀಯ ಮಾಡಿದ ಪ್ರಾರ್ಥನೆ ತುಂಬ ಚಿಕ್ಕದಾಗಿತ್ತು. ಇಬ್ರಿಯ ಭಾಷೆಯಲ್ಲಿ ಅವನು ಮಾಡಿದ ಪ್ರಾರ್ಥನೆಯಲ್ಲಿ ಕೇವಲ 30 ಪದಗಳು ಇತ್ತು. ಹಾಗಿದ್ರೂ ಮೂರು ಸಲ ಯೆಹೋವ ಅನ್ನೋ ದೇವರ ಹೆಸರನ್ನ ಅವನು ಬಳಸಿದನು.—1 ಅರಸು 18:36, 37.
ಬಾಳ್ ಅನ್ನೋದು ಕಾನಾನ್ಯರ ದೇವರ ಹೆಸರು. ಇದರ ಅರ್ಥ “ಮಾಲೀಕ” ಅಂತ. ಆಗಿನ ಕಾಲದಲ್ಲಿ ಬೇರೆ-ಬೇರೆ ಜಾಗಗಳಲ್ಲಿ ಚಿಕ್ಕ-ಚಿಕ್ಕ ದೇವರುಗಳನ್ನ ಮಾಡಿಕೊಂಡು ಅವಕ್ಕೆ ಬಾಳ್ ಅನ್ನೋ ಹೆಸರು ಇಡುತ್ತಿದ್ದರು. ಆದರೆ ನಮ್ಮ ದೇವರಾದ ಯೆಹೋವನ ಬಗ್ಗೆ ಹೇಳೋದಾದ್ರೆ ಇಡೀ ವಿಶ್ವಕ್ಕೆ ಆತನೊಬ್ಬನೇ ದೇವರು. ಆತನು ತನ್ನ ಜನರಿಗೆ: “ನಾನು ಯೆಹೋವ. ಇದು ನನ್ನ ಹೆಸ್ರು, ನನಗೆ ಸಿಗಬೇಕಾದ ಮಹಿಮೆಯನ್ನ ನಾನು ಬೇರೆ ಯಾರ ಜೊತೆನೂ ಹಂಚ್ಕೊಳ್ಳಲ್ಲ” ಅಂತ ಹೇಳಿದ್ದಾನೆ.—ಯೆಶಾಯ 42:8.
ಬಾಳನ ಆರಾಧಕರ ಪ್ರಾರ್ಥನೆಯನ್ನ ದೇವರು ಯಾಕೆ ಕೇಳಲಿಲ್ಲ? ಯಾಕೆ ಎಲೀಯನ ಪ್ರಾರ್ಥನೆಯನ್ನ ಮಾತ್ರ ಕೇಳಿದನು? ಯಾಕೆಂದ್ರೆ ಬಾಳನ ಆರಾಧಕರು ಅನೈತಿಕ ಕೆಲಸಗಳನ್ನ ಮಾಡುತ್ತಿದ್ದರು. ಮನುಷ್ಯರನ್ನ ಬಲಿಗಳಾಗಿ ಕೊಡುತ್ತಿದ್ದರು. ತನ್ನ ಜನರು ಯಾವಾಗಲೂ ಒಳ್ಳೇ ಕೆಲಸಗಳನ್ನ ಮಾಡಬೇಕು ಅನ್ನೋದು ಯೆಹೋವ ದೇವರ ಆಸೆಯಾಗಿತ್ತು. ಆಗ ಅವರ ಆರಾಧನೆಯನ್ನ ಯೆಹೋವನು ಸ್ವೀಕರಿಸುತ್ತಿದ್ದನು. ನಾವು ಸಹ ದೇವರಾದ ಯೆಹೋವನ ಹೆಸರೆತ್ತಿ ಪ್ರಾರ್ಥನೆ ಮಾಡಿದಾಗ ಆತನು ನಮ್ಮ ಪ್ರಾರ್ಥನೆಯನ್ನ ಕೇಳುತ್ತಾನೆ. ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆಯನ್ನ ನೋಡೋಣ. ನೀವು ನಿಮ್ಮ ಫ್ರೆಂಡ್‌ಗೆ ಒಂದು ಲೆಟರ್ ಬರೀಬೇಕು ಅಂತ ಇಷ್ಟಪಡ್ತೀರ. ಅದನ್ನ ಬರೆದು ಬೇರೆಯವರ ಅಡ್ರೆಸ್‌ಗೆ ಕಳುಹಿಸಿದ್ರೆ ನಿಮ್ಮ ಫ್ರೆಂಡ್‌ಗೆ ಆ ಲೆಟರ್ ಸಿಗುತ್ತಾ? ಖಂಡಿತ ಇಲ್ಲ!
ಎಲೀಯ ಮತ್ತು ಬಾಳನ ಆರಾಧಕರ ಕಥೆಯಿಂದ ನಮಗೇನು ಗೊತ್ತಾಗುತ್ತೆ ಅಂದರೆ, ಸತ್ಯ ದೇವರಿಗೆ ಪ್ರಾರ್ಥನೆ ಮಾಡಿದರೆ ಮಾತ್ರ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗುತ್ತೆ.
ಯೆಹೋವನು ಇಡೀ ವಿಶ್ವದ ಸೃಷ್ಟಿ ಕರ್ತನಾಗಿರೋದ್ರಿಂದ ಆತನಿಗೇ ಪ್ರಾರ್ಥನೆ ಮಾಡೋದು ಸರಿ.a ಯೆಶಾಯ ಅನ್ನೋ ದೇವರ ಸೇವಕ ಪ್ರಾರ್ಥನೆಯಲ್ಲಿ, ‘ಯೆಹೋವನೇ ನೀನು ನಮ್ಮ ತಂದೆ’ ಅಂತ ಹೇಳಿದ್ದಾನೆ. (ಯೆಶಾಯ 63:16) ಯೇಸು ಕೂಡ ಯೆಹೋವನನ್ನ ತಂದೆ ಅಂತ ಕರೆದನು. ತನ್ನ ಶಿಷ್ಯರ ಜೊತೆ ಮಾತಾಡುತ್ತಾ ಯೇಸು ಹೇಳಿದ್ದು: “ನನ್ನ ತಂದೆ ನಿಮ್ಮ ತಂದೆ, ನನ್ನ ದೇವರು ನಿಮ್ಮ ದೇವರು ಆಗಿರುವವನ ಹತ್ರ ಹೋಗ್ತಾ ಇದ್ದೀನಿ.” ತಂದೆ ಅಂತ ಹೇಳಿದಾಗ ಯೇಸು ಯೆಹೋವನ ಬಗ್ಗೆ ಮಾತಾಡುತ್ತಿದ್ದನು. (ಯೋಹಾನ 20:17) ಯೇಸು ಯಾವಾಗಲೂ ಯೆಹೋವನಿಗೆ ಪ್ರಾರ್ಥಿಸುತ್ತಿದ್ದನು ಮತ್ತು ತನ್ನ ಶಿಷ್ಯರು ಸಹ ಯೆಹೋವನಿಗೇ ಪ್ರಾರ್ಥಿಸಬೇಕು ಅಂತನೂ ಹೇಳಿಕೊಟ್ಟನು.—ಮತ್ತಾಯ 6:9.
ನಾವು ಯೇಸುವಿಗೆ, ಮರಿಯಳಿಗೆ, ಸಂತರಿಗೆ ಅಥವಾ ದೇವದೂತರಿಗೆ ಪ್ರಾರ್ಥನೆ ಮಾಡಬೇಕಾ? ಇಲ್ಲ ನಾವು ಯೆಹೋವನನ್ನ ಮಾತ್ರ ಆರಾಧಿಸಬೇಕು. ಯಾಕಂದ್ರೆ ಪ್ರಾರ್ಥನೆ ಅನ್ನೋದು ಆರಾಧನೆಯ ಭಾಗ ಆಗಿದೆ. ಅಷ್ಟೇ ಅಲ್ಲ, ಯೆಹೋವನನ್ನ ಮಾತ್ರ ಆರಾಧಿಸಬೇಕು ಅಂತ ಬೈಬಲ್ ಹೇಳುತ್ತೆ. (ವಿಮೋಚನಕಾಂಡ 20:5) ಯೆಹೋವನನ್ನ ‘ಪ್ರಾರ್ಥನೆಯನ್ನ ಕೇಳುವವನು’ ಅಂತನೂ ಬೈಬಲ್ ಹೇಳುತ್ತೆ. (ಕೀರ್ತನೆ 65:2) ಯೆಹೋವನು ಬೇರೆಯವರಿಗೆ ಅನೇಕ ಜವಾಬ್ದಾರಿಗಳನ್ನ ಕೊಟ್ಟಿರೋದಾದ್ರೂ ಪ್ರಾರ್ಥನೆಗಳನ್ನ ಕೇಳುವ ಜವಾಬ್ದಾರಿಯನ್ನ ಮಾತ್ರ ಯಾರಿಗೂ ಕೊಟ್ಟಿಲ್ಲ. ನಮ್ಮ ಪ್ರಾರ್ಥನೆಯನ್ನ ಕೇಳೋದು ಆತನು ಮಾತ್ರ.
ದೇವರು ನಿಮ್ಮ ಪ್ರಾರ್ಥನೆಯನ್ನ ಕೇಳಬೇಕು ಅಂತ ನೀವು ಬಯಸುವುದಾದರೆ ಬೈಬಲ್‌ನಲ್ಲಿರುವ ಈ ಮಾತನ್ನ ಮನಸ್ಸಲ್ಲಿಡಿ: “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.” (ಅಪೊಸ್ತಲರ ಕಾರ್ಯ 2:21) ಹಾಗಂತ ದೇವರು ಎಲ್ಲರ ಪ್ರಾರ್ಥನೆಗಳನ್ನ ಕೇಳ್ತಾನಾ? ನಿಮ್ಮ ಪ್ರಾರ್ಥನೆಯನ್ನ ಕೇಳಬೇಕು ಅಂತ ನೀವು ಬಯಸೋದಾದ್ರೆ ಇನ್ನು ಯಾವ ವಿಷಯಗಳನ್ನ ಮನಸ್ಸಲ್ಲಿಡಬೇಕು?
a ಕೆಲವು ಧರ್ಮಗುರುಗಳು ದೇವರ ಹೆಸರನ್ನ, ಪ್ರಾರ್ಥನೆ ಮಾಡುವಾಗ ಆಗಲಿ ಅಥವಾ ಬೇರೆ ಸಮಯದಲ್ಲಿ ಆಗಲಿ ಬಳಸಬಾರದು ಅಂತ ಕಲಿಸುತ್ತಾರೆ. ಆದರೆ 7,000ಕ್ಕಿಂತ ಹೆಚ್ಚು ಬಾರಿ ದೇವರು ತನ್ನ ಹೆಸರನ್ನ ಬೈಬಲ್‌ನಲ್ಲಿ ಬರೆಸಿದ್ದಾನೆ. ದೇವರ ಹೆಸರನ್ನ ಬಳಸಿರೋ ಅನೇಕ ಪ್ರಾರ್ಥನೆಗಳು ಮತ್ತು ಕೀರ್ತನೆಗಳು ಬೈಬಲ್‌ನಲ್ಲಿವೆ.
-
-
3 ಹೇಗೆ ಮಾಡಬೇಕು?ಕಾವಲಿನಬುರುಜು: ಪ್ರಾರ್ಥನೆಯ ಬಗ್ಗೆ ಗೊತ್ತಿರಬೇಕಾದ ಏಳು ವಿಷಯಗಳು
-
-
3 ಹೇಗೆ ಮಾಡಬೇಕು?
ಅನೇಕ ಧರ್ಮಗಳಲ್ಲಿ ನಾವು ಮಂಡಿಯೂರಿ, ನಿಂತುಕೊಂಡು ಅಥವಾ ಕೂತುಕೊಂಡು ಪ್ರಾರ್ಥನೆ ಮಾಡಬೇಕು ಅನ್ನೋದಕ್ಕೆ ಜಾಸ್ತಿ ಗಮನಕೊಡ್ತಾರೆ. ಪ್ರಾರ್ಥನೆ ಮಾಡುವಾಗ ನಾವು ವಿಶೇಷ ಪದಗಳನ್ನ ಬಳಸಬೇಕು ಅಂತನೂ ಹೇಳ್ತಾರೆ. ಆದರೆ “ನಾವು ಹೇಗೆ ಪ್ರಾರ್ಥನೆ ಮಾಡಬೇಕು” ಅನ್ನೋದ್ರ ಬಗ್ಗೆ ಬೈಬಲ್‌ನಲ್ಲಿ ಏನಿದೆ ಅಂತ ನೋಡೋಣ?
ದೇವರ ಸೇವಕರು ಬೇರೆ-ಬೇರೆ ವಿಧಗಳಲ್ಲಿ ಪ್ರಾರ್ಥನೆ ಮಾಡಿದ್ರ ಬಗ್ಗೆ ಬೈಬಲ್‌ನಲ್ಲಿದೆ. ಕೆಲವರು ಮನಸ್ಸಲ್ಲಿ ಪ್ರಾರ್ಥನೆ ಮಾಡಿದ್ರು, ಇನ್ನು ಕೆಲವರು ಜನರ ಮುಂದೆ ಜೋರಾಗಿ ಪ್ರಾರ್ಥನೆ ಮಾಡಿದ್ರು. ಇನ್ನು ಕೆಲವರು ಆಕಾಶದ ಕಡೆಗೆ ನೋಡುತ್ತಾ ಪ್ರಾರ್ಥನೆ ಮಾಡಿದ್ರು, ಇನ್ನೂ ಕೆಲವರು ತಲೆಬಗ್ಗಿಸಿ ಪ್ರಾರ್ಥನೆ ಮಾಡಿದ್ರು. ಆದರೆ ಇವರು ಯಾರೂ ಒಂದು ಫೋಟೋ ಮುಂದೆ ಆಗಲಿ, ಜಪಮಾಲೆಯನ್ನ ಬಳಸಿಕೊಂಡು ಆಗಲಿ ಅಥವಾ ಒಂದು ಪುಸ್ತಕವನ್ನ ಓದ್ತಾ ಆಗಲಿ ಪ್ರಾರ್ಥನೆ ಮಾಡಿಲ್ಲ. ಈ ದೇವರ ಸೇವಕರು ಮನಸ್ಸಲ್ಲಿ ಇರೋದನ್ನೆಲ್ಲ ತಮ್ಮ ಪ್ರಾರ್ಥನೆಯಲ್ಲಿ ದೇವರ ಹತ್ತಿರ ಹೇಳಿಕೊಂಡರು. ಅವರ ಪ್ರಾರ್ಥನೆಯನ್ನ ದೇವರು ಕೇಳಿದನು ಅಂತ ನಾವು ಹೇಗೆ ಹೇಳಬಹುದು?
ಈ ಮುಂಚೆ ನಾವು ನೋಡಿರೋ ಹಾಗೆ ದೇವರ ಸೇವಕರೆಲ್ಲರು ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿರೋದ್ರಿಂದ ಆತನು ಅವರು ಪ್ರಾರ್ಥನೆಗಳನ್ನ ಕೇಳಿದನು. ದೇವರು ಅವರ ಪ್ರಾರ್ಥನೆಗಳನ್ನ ಕೇಳಿದನು ಅನ್ನೋದಕ್ಕೆ 1 ಯೋಹಾನ 5:14 ರಲ್ಲಿ ಇನ್ನೊಂದು ಕಾರಣ ಇದೆ. ಅಲ್ಲಿ ಹೀಗಿದೆ: “ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ ಅನ್ನೋ ನಂಬಿಕೆ ನಮಗಿದೆ.” ಇದರಿಂದ ನಮಗೇನು ಗೊತ್ತಾಗುತ್ತೆ ಅಂದರೆ ನಮ್ಮ ಪ್ರಾರ್ಥನೆ ದೇವರ ಇಷ್ಟದ ಪ್ರಕಾರ ಇರಬೇಕು. ಇದರ ಅರ್ಥವೇನು?
ದೇವರ ಇಷ್ಟದ ಪ್ರಕಾರ ನಾವು ಪ್ರಾರ್ಥನೆ ಮಾಡಬೇಕಂದ್ರೆ ಆತನ ಇಷ್ಟ ಏನು ಅಂತ ಮೊದಲು ಅರ್ಥ ಮಾಡಿಕೊಳ್ಳಬೇಕು. ನಾವು ಬೈಬಲ್ ಓದಿದಾಗ, ಬೈಬಲ್ ಅಧ್ಯಯನ ಮಾಡಿದಾಗ ದೇವರ ಇಷ್ಟ ಏನು ಅಂತ ನಮಗೆ ಗೊತ್ತಾಗುತ್ತೆ. ಹಾಗಂತ ನಾವು ಬೈಬಲ್‌ನ ವಿದ್ವಾಂಸರೇ ಆಗಬೇಕಂತ ದೇವರು ಬಯಸಲ್ಲ. ಆತನ ಇಷ್ಟವನ್ನ ಅರ್ಥ ಮಾಡಿಕೊಂಡು ಅದರ ಪ್ರಕಾರ ಜೀವನ ಮಾಡಿದರೆ ದೇವರಿಗೆ ತುಂಬ ಖುಷಿ ಆಗುತ್ತೆ. (ಮತ್ತಾಯ 7:21-23) ಕಲಿತ ವಿಷಯದ ಪ್ರಕಾರ ನಮ್ಮ ಪ್ರಾರ್ಥನೆ ಇದ್ರೆ ದೇವರು ಅದನ್ನ ಖಂಡಿತ ಕೇಳುತ್ತಾನೆ.
ನಮ್ಮ ಪ್ರಾರ್ಥನೆ ದೇವರ ಇಷ್ಟದ ಪ್ರಕಾರ ಇದ್ದು, ನಂಬಿಕೆ ತೋರಿಸಿ, ಯೇಸುವಿನ ಹೆಸರಿನ ಮೂಲಕ ದೇವರಿಗೆ ಪ್ರಾರ್ಥನೆ ಮಾಡಿದಾಗ ಆತನು ಅದನ್ನ ಖಂಡಿತ ಕೇಳುತ್ತಾನೆ.
ಯೆಹೋವ ದೇವರ ಬಗ್ಗೆ ಮತ್ತು ಆತನ ಇಷ್ಟದ ಬಗ್ಗೆ ನಾವು ಕಲಿಯುತ್ತಾ ಹೋದಹಾಗೆ ನಮ್ಮಲ್ಲಿ ನಂಬಿಕೆನೂ ಬೆಳೆಯುತ್ತೆ. ಈ ಗುಣ ದೇವರು ನಮ್ಮ ಪ್ರಾರ್ಥನೆಯನ್ನ ಕೇಳ್ತಾನೆ ಅನ್ನೋದಕ್ಕೆ ತುಂಬ ಪ್ರಾಮುಖ್ಯ. ಯೇಸು: “ನಂಬಿಕೆಯಿಂದ ಏನೇ ಬೇಡ್ಕೊಂಡ್ರೂ ಅದೆಲ್ಲ ಸಿಗುತ್ತೆ” ಅಂದನು. (ಮತ್ತಾಯ 21:22) ನಂಬಿಕೆ ಅಂದರೆ ಕಣ್ಣ ಮುಚ್ಚಿಕೊಂಡು ಎಲ್ಲಾ ವಿಷಯಗಳನ್ನ ನಂಬೋದು ಅಂತಲ್ಲ. ನಾವು ನಂಬುವಂಥ ವಿಷಯಗಳು ಕಣ್ಣಿಗೆ ಕಾಣದೆ ಇದ್ರೂ ಯಾಕೆ ನಂಬುತ್ತೀವಿ ಅನ್ನೋದರ ಬಗ್ಗೆ ನಮ್ಮ ಹತ್ತಿರ ಬಲವಾದ ಆಧಾರ ಇರಬೇಕು. (ಇಬ್ರಿಯ 11:1) ಯೆಹೋವ ದೇವರನ್ನ ನೋಡೋಕಾಗಲ್ಲ. ಆದರೆ ದೇವರು ಇದ್ದಾನೆ, ಆತನನ್ನ ನಂಬುವವರ ಪ್ರಾರ್ಥನೆಗಳನ್ನ ಆತನು ಕೇಳುತ್ತಾನೆ ಅನ್ನೋದಕ್ಕೆ ಬೈಬಲ್‌ನಲ್ಲಿ ಅನೇಕ ಪುರಾವೆಗಳಿವೆ. ನಮ್ಮ ನಂಬಿಕೆಯನ್ನ ಹೆಚ್ಚಿಸುವಂತೆ ನಾವು ದೇವರ ಹತ್ತಿರ ಬೇಡಿಕೊಂಡರೆ ಆತನು ಅದಕ್ಕೂ ಉತ್ತರ ಕೊಡುತ್ತಾನೆ.—ಲೂಕ 17:5; ಯಾಕೋಬ 1:17.
ಪ್ರಾರ್ಥನೆ ಮಾಡುವಾಗ ನಾವು ಇನ್ನೊಂದು ವಿಷಯವನ್ನ ನೆನಪಿನಲ್ಲಿಡಬೇಕು. ಅದರ ಬಗ್ಗೆ ಯೇಸು ಹೀಗಂದನು: “ನನ್ನ ಮೂಲಕ ಅಲ್ಲದೆ ಯಾರೂ ತಂದೆ ಹತ್ರ ಬರೋಕಾಗಲ್ಲ.” (ಯೋಹಾನ 14:6) ಯೆಹೋವ ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಬೇಕು ಅಂತ ನಾವು ಆಸೆ ಪಡುವುದಾದರೆ ನಮ್ಮ ಪ್ರಾರ್ಥನೆಗಳನ್ನ ಯೇಸುವಿನ ಮೂಲಕ ಮಾಡಬೇಕು. ಹೇಗೆ ಮಾಡಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾನ 14:13; 15:16) ಇದರ ಅರ್ಥ ಅವರು ಯೇಸುವಿಗೆ ಪ್ರಾರ್ಥನೆ ಮಾಡಬೇಕು ಅಂತ ಆಗಿರಲಿಲ್ಲ. ಅವರು ಯೆಹೋವನಿಗೇ ಪ್ರಾರ್ಥಿಸಬೇಕಿತ್ತು. ಆದರೆ ಯೇಸುವಿನ ಮೂಲಕ ಪ್ರಾರ್ಥನೆ ಮಾಡಬೇಕಿತ್ತು. ಯೆಹೋವನ ಜೊತೆ ಮಾತಾಡೋ ಅವಕಾಶವನ್ನ ಯೇಸುನೇ ಮಾಡಿಕೊಟ್ಟಿರೋದು ಅನ್ನೋದನ್ನ ಅವರು ಮರಿಬಾರ್ದಿತ್ತು.
ಒಂದು ಸಲ ಯೇಸುವಿನ ಶಿಷ್ಯರು: “ಸ್ವಾಮಿ, ನಮಗೂ ಪ್ರಾರ್ಥನೆ ಮಾಡೋದನ್ನ ಕಲಿಸು” ಅಂತ ಕೇಳಿದರು. (ಲೂಕ 11:1) ಅಂದರೆ ನಾವು ಯಾರಿಗೆ ಪ್ರಾರ್ಥನೆ ಮಾಡಬೇಕು, ಯಾವ ರೀತಿ ಮಾಡಬೇಕು ಅಂತ ಅವರು ಕೇಳ್ತಿರಲಿಲ್ಲ. ಬದಲಿಗೆ ಪ್ರಾರ್ಥನೆಯಲ್ಲಿ ಏನು ಹೇಳಬೇಕು ಅಂತ ಯೇಸುವಿನ ಹತ್ತಿರ ಕೇಳಿದರು.
-
-
4 ಯಾವುದಕ್ಕಾಗಿ ಪ್ರಾರ್ಥಿಸಬೇಕು?ಕಾವಲಿನಬುರುಜು: ಪ್ರಾರ್ಥನೆಯ ಬಗ್ಗೆ ಗೊತ್ತಿರಬೇಕಾದ ಏಳು ವಿಷಯಗಳು
-
-
4 ಯಾವುದಕ್ಕಾಗಿ ಪ್ರಾರ್ಥಿಸಬೇಕು?
ಯೇಸು ಭೂಮಿ ಮೇಲೆ ಇದ್ದಾಗ ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡೋದನ್ನ ಕಲಿಸಿದನು. ಜನರು ಇದನ್ನ ಕರ್ತನ ಪ್ರಾರ್ಥನೆ ಅಂತನೂ ಕರಿತಾರೆ. ತುಂಬ ಜನರಿಗೆ ಈ ಪ್ರಾರ್ಥನೆ ಬಾಯಿಪಾಠ ಆಗಿದೆ. ಜನರು ಈ ಪ್ರಾರ್ಥನೆಯನ್ನ ಒಂದು ಪದನೂ ಬಿಡದೆ ಪ್ರತಿ ದಿನ ಹೇಳ್ತಾನೇ ಇರುತ್ತಾರೆ. ನಾವು ಪ್ರಾರ್ಥನೆಯನ್ನ ಬಾಯಿಪಾಠ ಮಾಡಬೇಕು, ಹೇಳಿದ್ದನ್ನ ಹೇಳ್ತಾ ಇರಬೇಕು ಅನ್ನೋದು ಯೇಸುವಿನ ಉದ್ದೇಶ ಆಗಿರಲಿಲ್ಲ. ಇದು ನಮಗೆ ಹೇಗೆ ಗೊತ್ತು?
ಯೇಸು ಈ ಪ್ರಾರ್ಥನೆಯನ್ನ ಕಲಿಸೋಕೆ ಸ್ವಲ್ಪ ಮುಂಚೆ, ಹೀಗೆ ಹೇಳಿದನು: “ನೀನು ಪ್ರಾರ್ಥನೆ ಮಾಡುವಾಗ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡ.” (ಮತ್ತಾಯ 6:7) ಇದರಿಂದ ನಮಗೇನು ಗೊತ್ತಾಗುತ್ತೆ ಅಂದರೆ ಯೇಸು ಕಲಿಸಿದ ಈ ಪ್ರಾರ್ಥನೆಯನ್ನ ಬಾಯಿಪಾಠ ಮಾಡಬೇಕು, ಹೇಳಿದ್ದನ್ನ ಹೇಳ್ತಾನೇ ಇರಬೇಕು ಅನ್ನೋದು ಆತನ ಉದ್ದೇಶ ಆಗಿರಲಿಲ್ಲ. ಬದಲಿಗೆ ಕೆಲವು ಪ್ರಾಮುಖ್ಯ ವಿಷಯಗಳಿಗೆ ನಾವು ಪ್ರಾರ್ಥನೆ ಮಾಡಬೇಕು ಅಂತ ಅವನು ಕಲಿಸಿಕೊಟ್ಟನು. ಆ ವಿಷಯಗಳನ್ನ ನಾವು ಮತ್ತಾಯ 6:9-13 ರಲ್ಲಿ ನೋಡಬಹುದು. ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ.
“ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.”
ತಂದೆಯಾದ ಯೆಹೋವನಿಗೆ ಮಾತ್ರ ಪ್ರಾರ್ಥಿಸಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿಕೊಟ್ಟನು. ಆದರೆ ದೇವರ ಹೆಸರು ಮತ್ತು ಅದನ್ನ ಪವಿತ್ರೀಕರಿಸೋದು ಯಾಕೆ ಪ್ರಾಮುಖ್ಯ ಅಂತ ನಿಮಗೆ ಅನಿಸುತ್ತೆ?
ಮೊದಲ ಸ್ತ್ರೀ-ಪುರುಷ ಸೃಷ್ಟಿ ಆದಾಗಿಂದ ದೇವರ ವಿರೋಧಿಯಾದ ಸೈತಾನನು ಆತನ ಹೆಸರಿನ ಮೇಲೆ ಮಸಿ ಬಳಿತಾನೇ ಇದ್ದಾನೆ. ದೇವರು ಒಬ್ಬ ಸುಳ್ಳುಗಾರ, ಸ್ವಾರ್ಥಿ, ಜನರನ್ನ ಚೆನ್ನಾಗಿ ನೋಡಿಕೊಳ್ತಾ ಇಲ್ಲ ಅನ್ನೋ ಆರೋಪವನ್ನ ಸೈತಾನ ಯೆಹೋವ ದೇವರ ಮೇಲೆ ಹಾಕಿದ್ದಾನೆ. (ಆದಿಕಾಂಡ 3:1-6) ಸೈತಾನನು ಹಾಕಿದ ಈ ಆರೋಪವನ್ನ ತುಂಬ ಜನ ನಂಬುತ್ತಾರೆ. ದೇವರು ಕ್ರೂರಿಯಾಗಿದ್ದಾನೆ, ಜನರ ಮೇಲೆ ಒಂಚೂರೂ ಪ್ರೀತಿ ಇಲ್ಲ ಅಂತ ಅಂದುಕೊಂಡಿದ್ದಾರೆ. ಇನ್ನೂ ಕೆಲವು ಜನರು ದೇವರೇ ಇಲ್ಲ ಅಂತ ಹೇಳುತ್ತಾರೆ. ಇನ್ನು ಕೆಲವರು ದೇವರ ಹೆಸರನ್ನ ಬೈಬಲ್‌ನಿಂದ ತೆಗೆದುಹಾಕಿದ್ದಾರೆ ಮತ್ತು ಆತನ ಹೆಸರನ್ನ ಬಳಸೋ ಅಗತ್ಯ ಇಲ್ಲ ಅಂತನೂ ಹೇಳ್ತಾರೆ. ಜನರು ದೇವರ ಹೆಸರಿಗೆ ಕಳಂಕವನ್ನ ತಂದಿದ್ದಾರೆ.
ಆದರೆ ತನ್ನ ಹೆಸರನ್ನ ಪವಿತ್ರ ಮಾಡ್ತೀನಿ ಅಂತ ಯೆಹೋವ ದೇವರು ಬೈಬಲ್‌ನಲ್ಲಿ ಹೇಳಿದ್ದಾರೆ. (ಯೆಹೆಜ್ಕೇಲ 39:7) ಅದರ ಜೊತೆಗೆ, ಮನುಷ್ಯರಿಗಿರೋ ಎಲ್ಲಾ ಕಷ್ಟಗಳನ್ನ ದೇವರು ತೆಗೆದುಹಾಕ್ತಾನೆ. ಇದನ್ನ ಆತನು ಹೇಗೆ ಮಾಡುತ್ತಾನೆ? ಯೇಸು ಕಲಿಸಿದ ಪ್ರಾರ್ಥನೆಯಿಂದ ಇದಕ್ಕೆ ಉತ್ತರ ತಿಳಿದುಕೊಳ್ಳೋಣ.
“ನಿನ್ನ ಆಳ್ವಿಕೆ ಬರಲಿ.”
ಇವತ್ತು ಅನೇಕ ಧರ್ಮಗುರುಗಳಿಗೆ ದೇವರ ಆಳ್ವಿಕೆ ಏನಂತನೇ ಗೊತ್ತಿಲ್ಲ. ಇದರ ಬಗ್ಗೆ ಅವರಿಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಆದರೆ ಯೇಸುವಿನ ಶಿಷ್ಯರಿಗೆ ದೇವರ ರಾಜ್ಯ ಅಂದರೆ ದೇವರ ಸರ್ಕಾರ ಅಂತ ಗೊತ್ತಿತ್ತು. ಅನೇಕ ಪ್ರವಾದಿಗಳು ಹೇಳಿದ ತರ ಈ ರಾಜ್ಯದ ರಾಜನು ಮೆಸ್ಸೀಯನಾಗಿದ್ದಾನೆ ಮತ್ತು ಇವನನ್ನ ದೇವರೇ ಆರಿಸಿದ್ದಾನೆ. (ಯೆಶಾಯ 9:6, 7; ದಾನಿಯೇಲ 2:44) ದೇವರ ರಾಜ್ಯ ಸೈತಾನನ ಎಲ್ಲಾ ಕೆಟ್ಟ ಕೆಲಸಗಳನ್ನ ಬಯಲು ಮಾಡುತ್ತೆ. ಅದರ ಜೊತೆಗೆ ದೇವರ ಹೆಸರಿಗೆ ಬಂದ ಕಳಂಕವನ್ನ ತೆಗೆದುಹಾಕುತ್ತೆ ಮತ್ತು ಸೈತಾನನ್ನು ಕೂಡ ನಾಶ ಮಾಡುತ್ತೆ. ದೇವರ ರಾಜ್ಯ ಬಂದಾಗ ಯಾವುದೇ ಕೆಟ್ಟತನ, ಯುದ್ಧಗಳು, ಯಾರಿಗೂ ಕಾಯಿಲೆಗಳು ಬರಲ್ಲ. ತಿನ್ನೋಕೆ-ಉಣ್ಣೋಕೆ ಏನೂ ಕಮ್ಮಿ ಇರಲ್ಲ. ಸಾವು ಕೂಡ ಇರಲ್ಲ. (ಕೀರ್ತನೆ 46:9; 72:12-16; ಯೆಶಾಯ 25:8; 33:24) ದೇವರ ರಾಜ್ಯ ಬರಲಿ ಅಂತ ನೀವು ಪ್ರಾರ್ಥಿಸ್ತಾ ಇರುವಾಗ ದೇವರು ಕೊಟ್ಟ ಈ ಎಲ್ಲಾ ಮಾತುಗಳು ನೆರವೇರಲಿ ಅಂತ ಬಯಸುತ್ತೀರ.
“ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ.”
ದೇವರ ಇಷ್ಟ ಯಾವ ರೀತಿಯಲ್ಲಿ ಸ್ವರ್ಗದಲ್ಲಿ ನೆರವೇರಿದೆಯೋ ಅದೇ ರೀತಿ ಭೂಮಿಯಲ್ಲೂ ನೆರವೇರುತ್ತೆ ಅಂತ ಯೇಸುವಿನ ಮಾತುಗಳಿಂದ ಗೊತ್ತಾಗುತ್ತೆ. ನಾವು ಇದನ್ನ ಹೇಗೆ ಹೇಳಬಹುದು? ಯೇಸು ಸೈತಾನನ ಮತ್ತು ಅವನ ಕೆಟ್ಟದೂತರನ್ನ ಸ್ವರ್ಗದಿಂದ ಭೂಮಿಗೆ ತಳ್ಳಿಬಿಟ್ಟಿದ್ದಾನೆ. ಆವಾಗಿಂದ ಸ್ವರ್ಗದಲ್ಲಿ ದೇವರ ಇಷ್ಟ ನೆರವೇರುತ್ತಾ ಇದೆ. ದೇವರ ಇಷ್ಟ ಈ ಭೂಮಿ ಮೇಲೆನೂ ಖಂಡಿತ ನೆರವೇರುತ್ತೆ ಅಂತ ನಮಗೆ ಇದರಿಂದ ಗೊತ್ತಾಗುತ್ತೆ. (ಪ್ರಕಟನೆ 12:9-12) ಯೇಸು ಮಾಡಿದ ಈ ಮೂರು ಬೇಡಿಕೆಗಳಿಂದ ನಮ್ಮ ಜೀವನದಲ್ಲಿ ಯಾವುದು ತುಂಬ ಮುಖ್ಯ ಅಂತ ಗೊತ್ತಾಗುತ್ತೆ. ಅದು ನಮ್ಮ ಇಷ್ಟ ಇಲ್ಲ ದೇವರ ಇಷ್ಟ ನೆರವೇರೋದೇ ತುಂಬ ಮುಖ್ಯ. ದೇವರ ಇಷ್ಟ ನೆರವೇರಿದ್ರೆ ಮಾತ್ರ ನಮ್ಮೆಲ್ಲರಿಗೆ ಒಳ್ಳೇದಾಗೋದು. ಅದಕ್ಕೆ ಯೇಸು: “ನನ್ನ ಇಷ್ಟ ಅಲ್ಲ, ನಿನ್ನ ಇಷ್ಟಾನೇ ಆಗಲಿ” ಅಂತ ಹೇಳಿದ.—ಲೂಕ 22:42.
“ಇವತ್ತಿಗೆ ಬೇಕಾಗಿರೋ ಊಟನ ದಯವಿಟ್ಟು ಕೊಡು.”
ನಮ್ಮ ಅಗತ್ಯಗಳಿಗೋಸ್ಕರನೂ ನಾವು ಪ್ರಾರ್ಥನೆ ಮಾಡಬಹುದು ಅಂತ ಯೇಸುವಿನ ಈ ಮಾತುಗಳಿಂದ ಗೊತ್ತಾಗುತ್ತೆ. ನಾವು ಈ ರೀತಿ ಪ್ರಾರ್ಥನೆ ಮಾಡೋದ್ರಿಂದ ಯೆಹೋವನೇ ನಮ್ಮ ಎಲ್ಲಾ ಅಗತ್ಯಗಳನ್ನ ಪೂರೈಸುತ್ತಾನೆ ಅಂತ ತೋರಿಸಿಕೊಡ್ತೀವಿ. ಯಾಕಂದ್ರೆ “ಆತನೇ ಎಲ್ರಿಗೂ ಜೀವವನ್ನ, ಉಸಿರನ್ನ, ಎಲ್ಲವನ್ನೂ ಕೊಡ್ತಾನೆ.” (ಅಪೊಸ್ತಲರ ಕಾರ್ಯ 17:25) ಯಾವ ತರ ಅಪ್ಪಅಮ್ಮ ತಮ್ಮ ಮಕ್ಕಳ ಅಗತ್ಯಗಳನ್ನ ಪ್ರೀತಿಯಿಂದ ಪೂರೈಸುತ್ತಾರೋ, ಅದೇ ತರ ಯೆಹೋವ ತನ್ನ ಸೇವಕರ ಅಗತ್ಯಗಳನ್ನ ಪೂರೈಸುತ್ತಾನೆ. ಯಾವ ರೀತಿ ಅಪ್ಪಅಮ್ಮ ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸಲ್ಲವೋ, ಅದೇ ತರ ನಮಗೆ ಹಾನಿ ಆಗೋ ವಿಷಯ ಅಥವಾ ಪ್ರಯೋಜನ ಇಲ್ಲದೇ ಇರೋ ವಿಷಯಗಳನ್ನ ಯೆಹೋವ ಪೂರೈಸುವುದಿಲ್ಲ.
‘ನಮ್ಮ ತಪ್ಪುಗಳನ್ನ ಕ್ಷಮಿಸು.’
ನಮ್ಮ ಪಾಪಗಳಿಗೆ ದೇವರ ಹತ್ತಿರ ಕ್ಷಮೆ ಕೇಳೋದು ಸರಿ ಅಂತ ನಿಮಗೆ ಅನಿಸುತ್ತಾ? ಇವತ್ತು ತುಂಬ ಜನರಿಗೆ ಪಾಪ ಅಂದರೇನು ಮತ್ತು ಅದರಿಂದ ಎಷ್ಟು ಕೆಟ್ಟ ಪರಿಣಾಮಗಳು ಆಗುತ್ತೆ ಅನ್ನೋದು ಅವರಿಗೆ ಗೊತ್ತೇ ಇಲ್ಲ. ನಾವು ಹುಟ್ಟಿದಾಗಿಂದ ಪಾಪಿಗಳು ಅಂತ ಬೈಬಲ್ ಹೇಳುತ್ತೆ. ಈ ಕಾರಣದಿಂದಾನೇ ಕೆಲವೊಂದು ಸರಿ ನಾವು ತಪ್ಪುತಪ್ಪಾಗಿ ಮಾತಾಡುತ್ತೀವಿ, ತಪ್ಪು ಕೆಲಸಗಳನ್ನ ಮಾಡುತ್ತೀವಿ. ನಮ್ಮಲ್ಲಿ ಪಾಪ ಇರೋದ್ರಿಂದಾನೇ ನಮಗೆ ವಯಸ್ಸಾಗುತ್ತೆ, ಮರಣವೂ ಬರುತ್ತೆ. ಆದರೆ ದೇವರು ನಮ್ಮನ್ನ ಕ್ಷಮಿಸಿದ್ರೆ ಮಾತ್ರ ನಮಗೆ ಶಾಶ್ವತ ಜೀವನ ಸಿಗುತ್ತೆ. (ರೋಮನ್ನರಿಗೆ 3:23; 5:12; 6:23) ದೇವರ ಬಗ್ಗೆ ಬೈಬಲ್ ಹೀಗೆ ಹೇಳುತ್ತೆ: “ಯೆಹೋವನೇ, ನೀನು ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ.”—ಕೀರ್ತನೆ 86:5.
“ಸೈತಾನನಿಂದ ನಮ್ಮನ್ನ ರಕ್ಷಿಸು.”
ಸೈತಾನನಿಂದ ನಮ್ಮನ್ನ ಕಾಪಾಡು ಅಂತ ಬೈಬಲ್‌ನಲ್ಲಿದೆ. ಅದರ ಅರ್ಥ ದೇವರಿಂದ ಮಾತ್ರ ನಮ್ಮನ್ನ ಸೈತಾನನಿಂದ ಕಾಪಾಡೋಕೆ ಸಾಧ್ಯ. ತುಂಬ ಜನ ಸೈತಾನ ಇದ್ದಾನೆ ಅಂತ ನಂಬಲ್ಲ. ಆದರೆ ಸೈತಾನ ಇದ್ದಾನೆ ಅಂತ ಯೇಸು ಹೇಳಿದನು. ಅಷ್ಟೇ ಅಲ್ಲ, ಅವನೇ ಈ ‘ಲೋಕದ ನಾಯಕ’ ಅಂತನೂ ಕರೆದಿದ್ದಾನೆ. (ಯೋಹಾನ 12:31; 16:11) ಸೈತಾನನು ಈ ಲೋಕವನ್ನ ದೇವರಿಂದ ತುಂಬ ದೂರ ಮಾಡಿದ್ದಾನೆ. ಆತನು ನಿಮ್ಮನ್ನೂ ಕೂಡ ದೇವರಿಂದ ದೂರ ಮಾಡೋಕೆ ಪ್ರಯತ್ನಿಸುತ್ತಿದ್ದಾನೆ. ಯಾಕಂದ್ರೆ ನೀವು ದೇವರಿಗೆ ಹತ್ತಿರ ಆಗೋದು ಆತನಿಗೆ ಒಂಚೂರು ಇಷ್ಟ ಇಲ್ಲ. (1 ಪೇತ್ರ 5:8) ಯೆಹೋವನಿಗೆ ಸೈತಾನನಿಗಿಂತ ತುಂಬ ಶಕ್ತಿ ಇದೆ. ತನ್ನನ್ನ ಪ್ರೀತಿಸುವವರನ್ನ ಆತನು ಖಂಡಿತ ಕಾಪಾಡುತ್ತಾನೆ.
ಯೇಸು ಕಲಿಸಿಕೊಟ್ಟ ಪ್ರಾರ್ಥನೆಯಿಂದ ನಾವು ಯಾವೆಲ್ಲ ವಿಷಯಗಳಿಗೆ ಪ್ರಾರ್ಥನೆ ಮಾಡಬೇಕು ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ, ನಾವು ಬೇರೆ ವಿಷಯಗಳಿಗೂ ಪ್ರಾರ್ಥನೆ ಮಾಡಬಹುದು. 1 ಯೋಹಾನ 5:14 ದೇವರ ಬಗ್ಗೆ ಹೀಗೆ ಹೇಳುತ್ತೆ: “ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ.” ಇದು ತುಂಬ ಚಿಕ್ಕ ವಿಷಯ ಇದರ ಬಗ್ಗೆ ದೇವರಿಗೆ ಹೇಗೆ ಪ್ರಾರ್ಥನೆ ಮಾಡಲಿ ಅಂತ ಯಾವತ್ತೂ ಯೋಚಿಸಬೇಡಿ.—1 ಪೇತ್ರ 5:7.
ಹಾಗಾದರೆ ನಾವು ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿ ಪ್ರಾರ್ಥಿಸಬೇಕು?
-
-
5 ನಾವು ಯಾವಾಗ ಮತ್ತು ಎಲ್ಲಿ ಪ್ರಾರ್ಥಿಸಬೇಕು?ಕಾವಲಿನಬುರುಜು: ಪ್ರಾರ್ಥನೆಯ ಬಗ್ಗೆ ಗೊತ್ತಿರಬೇಕಾದ ಏಳು ವಿಷಯಗಳು
-
-
5 ನಾವು ಯಾವಾಗ ಮತ್ತು ಎಲ್ಲಿ ಪ್ರಾರ್ಥಿಸಬೇಕು?
ಯಾವ ಜಾಗದಲ್ಲಿ ಪ್ರಾರ್ಥನೆ ಮಾಡಬೇಕು, ಎಷ್ಟೊತ್ತು ಮಾಡಬೇಕು, ಯಾವ್ಯಾವ ಟೈಮಲ್ಲಿ ಮಾಡಬೇಕು ಅನ್ನೋದ್ರ ಬಗ್ಗೆ ತುಂಬಾ ಧರ್ಮಗಳು ಹೇಳಿರೋದನ್ನ ಮತ್ತು ಅವರು ಮಾಡ್ತಿರೋದನ್ನ ನೀವು ನೋಡಿರಬಹುದು. ಅವರು ಹೇಳೋ ತರನೇ ಪ್ರಾರ್ಥನೆ ಮಾಡಬೇಕು ಅಂತ ಬೈಬಲ್ ಹೇಳುತ್ತಾ?
ನಾವು ಯಾವ-ಯಾವ ಸಂದರ್ಭಗಳಲ್ಲಿ ಪ್ರಾರ್ಥನೆ ಮಾಡಬೇಕು ಅನ್ನೋದರ ಬಗ್ಗೆ ಬೈಬಲ್ ಹೇಳುತ್ತೆ. ಉದಾಹರಣೆಗೆ, ಯೇಸು ತನ್ನ ಶಿಷ್ಯರ ಜೊತೆ ಊಟ ಮಾಡೋದಕ್ಕಿಂತ ಮುಂಚೆ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದನು. (ಲೂಕ 22:17) ಆತನ ಶಿಷ್ಯರು ಆರಾಧನೆ ಮಾಡುವುದಕ್ಕೋಸ್ಕರ ಒಟ್ಟಿಗೆ ಸೇರಿದಾಗ ಕೂಡ ಪ್ರಾರ್ಥನೆ ಮಾಡಿದರು. ಈ ತರ ಪ್ರಾರ್ಥನೆ ಮಾಡೋ ರೂಢಿ ಯೆಹೂದಿ ಸಭಾಮಂದಿರಗಳಲ್ಲಿ ಮತ್ತು ಯೆರೂಸಲೇಮ್‌ನಲ್ಲಿದ್ದ ದೇವಾಲಯದಲ್ಲಿ ಇತ್ತು. ಈ ಪದ್ಧತಿಯನ್ನ ಯೇಸುವಿನ ಶಿಷ್ಯರು ಕೂಡ ಪಾಲಿಸುತ್ತಿದ್ದರು. ‘ದೇವಾಲಯ ಎಲ್ಲ ದೇಶದ ಜನ್ರ ಪ್ರಾರ್ಥನಾ ಮಂದಿರ’ ಆಗಬೇಕು ಅನ್ನೋದು ಯೆಹೋವನ ಆಸೆ ಆಗಿತ್ತು.—ಮಾರ್ಕ 11:17.
ದೇವರ ಸೇವಕರು, ಆತನ ಚಿತ್ತಕ್ಕನುಸಾರ ಒಟ್ಟಿಗೆ ಸೇರಿ ಒಂದೇ ಮನಸ್ಸಿನಿಂದ ಪ್ರಾರ್ಥನೆ ಮಾಡಿದಾಗ ಅವರ ಪ್ರಾರ್ಥನೆಗೆ ತುಂಬಾ ಶಕ್ತಿ ಇರುತ್ತೆ. ಇಂತಹ ಪ್ರಾರ್ಥನೆಗಳು ದೇವರಿಗೆ ಎಷ್ಟು ಇಷ್ಟ ಆಗುತ್ತೆ ಅಂದ್ರೆ ಆ ಪ್ರಾರ್ಥನೆಗಳಿಗೆ ದೇವರು ಖಂಡಿತ ಉತ್ತರ ಕೊಟ್ಟೆ ಕೊಡುತ್ತಾನೆ. ಕೆಲವೊಂದು ಸಲ ಅವನು ಯೋಚನೆ ಮಾಡದೇ ಇರೋದನ್ನ ಕೂಡ ನಾವು ಪ್ರಾರ್ಥನೆ ಮಾಡಿದಾಗ ನಮಗೆ ಕೊಡುತ್ತಾನೆ. (ಇಬ್ರಿಯ 13:18, 19) ಪ್ರತಿ ಕೂಟಗಳಲ್ಲಿ ಯೆಹೋವನ ಸಾಕ್ಷಿಗಳು ಪ್ರಾರ್ಥನೆ ಮಾಡ್ತಾರೆ. ನೀವು ಕೂಡ ನಿಮ್ಮ ಮನೆ ಹತ್ತಿರ ಇರೋ ಅವರ ಸಭೆಗೆ ಹೋಗಿ, ಅವರು ಹೇಗೆ ಪ್ರಾರ್ಥಿಸುತ್ತಾರೆ ಅಂತ ನೋಡಬಹುದು.
ಆದ್ರೆ ನೀವು ಈ ಟೈಮಲ್ಲಿ, ಈ ಸ್ಥಳದಲ್ಲೇ ಪ್ರಾರ್ಥನೆ ಮಾಡಬೇಕು ಅಂತ ಬೈಬಲ್ ಹೇಳಲ್ಲ. ದೇವರ ಸೇವಕರು ಬೇರೆ-ಬೇರೆ ಟೈಮಲ್ಲಿ, ಸ್ಥಳಗಳಲ್ಲಿ ಪ್ರಾರ್ಥನೆ ಮಾಡಿರೋ ಉದಾಹರಣೆಗಳು ಬೈಬಲ್‌ನಲ್ಲಿವೆ. ಯೇಸು ಹೀಗಂದನು: “ನೀನು ಪ್ರಾರ್ಥನೆ ಮಾಡುವಾಗ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿ ರಹಸ್ಯ ಸ್ಥಳದಲ್ಲಿರೋ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಆಗ ರಹಸ್ಯ ಸ್ಥಳದಿಂದ ನೋಡೋ ನಿನ್ನ ತಂದೆ ನಿನ್ನನ್ನ ಆಶೀರ್ವದಿಸ್ತಾನೆ.”—ಮತ್ತಾಯ 6:6.
ನಾವು ಎಲ್ಲಿ ಬೇಕಾದ್ರೂ ಯಾವ ಸಮಯದಲ್ಲಿ ಬೇಕಾದ್ರೂ ಪ್ರಾರ್ಥನೆ ಮಾಡಬಹುದು
ಈ ಆಮಂತ್ರಣದ ಬಗ್ಗೆ ತಿಳಿದುಕೊಂಡ ಮೇಲೆ ನಿಮಗೂ ಪ್ರಾರ್ಥನೆ ಮಾಡಬೇಕು ಅಂತ ಅನಿಸ್ತಿದ್ಯಾ? ಹೌದು, ಇಡೀ ಭೂಮಿಯನ್ನೇ ಸೃಷ್ಟಿ ಮಾಡಿದ ದೇವರನ್ನ ನೀವು ಯಾವಾಗ ಬೇಕಾದ್ರೂ, ಯಾವ ಸಮಯದಲ್ಲಿ ಬೇಕಾದ್ರೂ, ಒಂಟಿಯಾಗಿ ಇರೋವಾಗಲೂ ಪ್ರಾರ್ಥನೆ ಮಾಡಬಹುದು. ಹೀಗೆ ನೀವು ಯಾವಾಗ ಪ್ರಾರ್ಥನೆ ಮಾಡಿದ್ರೂ ದೇವರು ಕೇಳೇ ಕೇಳ್ತಾನೆ ಅನ್ನೋ ಭರವಸೆ ನಿಮಗಿರಲಿ. ಯೇಸು ಒಂಟಿಯಾಗಿದ್ದಾಗ ತುಂಬಾ ಸಲ ದೇವರಿಗೆ ಪ್ರಾರ್ಥನೆ ಮಾಡೋದ್ರಲ್ಲಿ ಸಮಯ ಕಳೆಯುತ್ತಿದ್ದ. ಒಂದು ಸಂದರ್ಭದಲ್ಲಿ, ಯೇಸು ಒಂದು ಮುಖ್ಯವಾದ ನಿರ್ಣಯ ಮಾಡೋದಕ್ಕಿಂತ ಮುಂಚೆ ಇಡೀ ರಾತ್ರಿ ದೇವರ ಹತ್ರ ಪ್ರಾರ್ಥನೆ ಮಾಡ್ತಾ ಕಳೆದ.—ಲೂಕ 6:12, 13.
ಬೈಬಲ್‌ನಲ್ಲಿರುವ ನಂಬಿಗಸ್ತ ಸ್ತ್ರೀ-ಪುರುಷರು ಮುಖ್ಯವಾದ ನಿರ್ಧಾರ ಮಾಡೋವಾಗ ಅಥವಾ ಯಾವುದೊ ಒಂದು ಸಂಕಷ್ಟವನ್ನ ಎದುರಿಸುತ್ತಿರುವಾಗ ಪ್ರಾರ್ಥನೆ ಮಾಡ್ತಿದ್ರು. ಕೆಲವು ಸಲ ಎಲ್ಲರಿಗೂ ಕೇಳೋ ತರ ಮಾಡ್ತಿದ್ರು, ಕೆಲವು ಸಲ ಮೌನವಾಗಿ ಮಾಡ್ತಿದ್ರು. ಕೆಲವು ಸಲ ಗುಂಪಲ್ಲಿ ಪ್ರಾರ್ಥನೆ ಮಾಡಿದ್ರೆ ಇನ್ನು ಕೆಲವು ಸಲ ಒಂಟಿಯಾಗಿದ್ದಾಗ ಮಾಡ್ತಿದ್ರು. ಒಟ್ನಲ್ಲಿ ಇವರೆಲ್ರೂ ತಪ್ಪದೇ ದೇವರಿಗೆ ಪ್ರಾರ್ಥನೆ ಮಾಡ್ತಿದ್ರು. “ಯಾವಾಗ್ಲೂ ಪ್ರಾರ್ಥನೆ ಮಾಡಿ” ಅಂತ ದೇವರು ತನ್ನ ಸೇವಕರನ್ನ ಆಮಂತ್ರಿಸುತ್ತಾನೆ. (1 ಥೆಸಲೊನೀಕ 5:17) ಆತನ ಚಿತ್ತ ಮಾಡುವವರ ಪ್ರಾರ್ಥನೆಯನ್ನ ಕೇಳೋಕೆ ದೇವರು ಯಾವಾಗಲೂ ಸಿದ್ಧನಿರುತ್ತಾನೆ. ದೇವರಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅಲ್ವಾ?
ಆದ್ರೆ ಇವತ್ತಿನ ಲೋಕದಲ್ಲಿ ತುಂಬಾ ಜನ ಪ್ರಾರ್ಥನೆ ಮಾಡೋದ್ರಿಂದ ನಮಗೇನು ಪ್ರಯೋಜನ ಸಿಗಲ್ಲ ಅಂತ ಹೇಳ್ತಾರೆ. ನಿಮಗೂ ಈ ತರ ಅನಿಸಿದ್ಯಾ?
-
-
6 ಪ್ರಾರ್ಥನೆ ಮಾಡೋದರಿಂದ ಪ್ರಯೋಜನ ಇದೆಯಾ?ಕಾವಲಿನಬುರುಜು: ಪ್ರಾರ್ಥನೆಯ ಬಗ್ಗೆ ಗೊತ್ತಿರಬೇಕಾದ ಏಳು ವಿಷಯಗಳು
-
-
6 ಪ್ರಾರ್ಥನೆ ಮಾಡೋದರಿಂದ ಪ್ರಯೋಜನ ಇದೆಯಾ?
ದೇವರಿಗೆ ನಾವು ಪ್ರಾರ್ಥನೆ ಮಾಡೋದರಿಂದ ಏನಾದ್ರೂ ಪ್ರಯೋಜನ ಇದೆಯಾ? ದೇವರ ಸೇವಕರು ಪ್ರಾರ್ಥನೆ ಮಾಡಿದಾಗ ಅವರಿಗೆ ತುಂಬ ಪ್ರಯೋಜನ ಆಯ್ತು ಅಂತ ಬೈಬಲ್ ಹೇಳುತ್ತೆ. (ಲೂಕ 22:40; ಯಾಕೋಬ 5:13) ಪ್ರಾರ್ಥನೆ ಮಾಡೋದರಿಂದ ದೇವರ ಜೊತೆಗಿರೋ ನಮ್ಮ ಸಂಬಂಧ ಗಟ್ಟಿಯಾಗುತ್ತೆ, ಧೈರ್ಯ ಸಿಗುತ್ತೆ, ಖುಷಿಯಾಗಿ ಇರ್ತೀವಿ ಮತ್ತು ನಮ್ಮ ಆರೋಗ್ಯನೂ ಚೆನ್ನಾಗಿರುತ್ತೆ. ಅದು ಹೇಗೆ ಅಂತ ನಾವು ಮುಂದೆ ನೋಡೋಣ?
ಊಹಿಸಿ, ನಿಮ್ಮ ಮಗುಗೆ ಯಾರಾದ್ರೂ ಒಂದು ಗಿಫ್ಟ್ ಕೊಡ್ತಾರೆ. ಆಗ ನೀವೇನು ಮಾಡ್ತೀರಾ? ‘ಕಂದ ಅವರಿಗೆ ಥ್ಯಾಂಕ್ಸ್ ಹೇಳು’ ಅಂತ ಹೇಳಿ ಕೊಡ್ತೀರಾ. ನೀವು ಇದನ್ನ ಯಾಕೆ ಮಾಡ್ತೀರಾ? ಮಗು ಆ ಗಿಫ್ಟ್‌ನ್ನ ತಗೊಂಡು ಬರೀ ಖುಷಿ ಪಡೋದಲ್ಲ ಬದಲಿಗೆ ಮಾತಲ್ಲಿ ವ್ಯಕ್ತಿಪಡಿಸಬೇಕು ಅನ್ನೋದು ನಿಮ್ಮ ಇಷ್ಟ. ಮಕ್ಕಳು ಇನ್ನೊಬ್ಬರಿಗೆ ಥ್ಯಾಂಕ್ಸ್ ಹೇಳುವಾಗ ಅವರು ಕೊಟ್ಟಂಥ ಗಿಫ್ಟ್‌ನ್ನ ತುಂಬ ಮಾನ್ಯ ಮಾಡ್ತಾರೆ ಅಂತ ತೋರಿಸಿ ಕೊಡ್ತಾರೆ. ನಾವು ದೇವರಿಗೆ ಪ್ರಾರ್ಥನೆ ಮಾಡಿದಾಗ ಇದೇ ರೀತಿಯ ಮನೋಭಾವವನ್ನ ತೋರಿಸಬೇಕು. ಅದು ಹೇಗಂತ ನೋಡೋಣ.
ಧನ್ಯವಾದ ಹೇಳುವ ಪ್ರಾರ್ಥನೆ. ನಾವು ಪ್ರಾರ್ಥನೆಯಲ್ಲಿ ದೇವರಿಗೆ ಧನ್ಯವಾದ ಹೇಳ್ತಾ ಇದ್ರೆ ನಮ್ಮ ಗಮನ ಯಾವಾಗ್ಲೂ ಒಳ್ಳೇ ವಿಷಯಗಳ ಮೇಲೆನೇ ಇರುತ್ತೆ. ನಾವು ಇದ್ರಿಂದ ತುಂಬ ಖುಷಿಯಾಗಿ ಇರ್ತೀವಿ ಮತ್ತು ಆತನ ಕೊಟ್ಟಿರೋ ಆಶೀರ್ವಾದಗಳನ್ನ ತುಂಬ ಮಾನ್ಯ ಮಾಡ್ತೀವಿ ಅಂತ ತೋರಿಸಿಕೊಡ್ತೀವಿ.—ಫಿಲಿಪ್ಪಿ 4:6.
ಉದಾಹರಣೆಗೆ: ಯೆಹೋವ ದೇವರು ಯೇಸುವಿನ ಪ್ರಾರ್ಥನೆಯನ್ನ ಕೇಳಿದರು. ಅದಕ್ಕೆ ಯೇಸು ಆತನಿಗೆ ಧನ್ಯವಾದ ಹೇಳಿದನು.—ಯೋಹಾನ 11:41.
ಕ್ಷಮೆಗಾಗಿ ಪ್ರಾರ್ಥನೆ. ನಾವು ಯಾವುದಾದ್ರೂ ಒಂದು ತಪ್ಪನ್ನ ಮಾಡಿ ಯೆಹೋವ ದೇವರಿಗೆ ಕ್ಷಮೆ ಕೇಳಿದಾಗ ಆ ತಪ್ಪಿನ ಅರಿವು ನಮಗಾಗುತ್ತೆ. ದೇವರ ಮನಸ್ಸನ್ನ ನೋಯಿಸಿದೀವಿ ಅನ್ನೋ ಬೇಜಾರ್ ಕೂಡ ಆಗುತ್ತೆ. ಆಗ ನಾವು ಈ ತಪ್ಪನ್ನ ಇನ್ನೊಂದು ಸರಿ ಮಾಡಲೇ ಬಾರದು ಅನ್ನೋ ದೃಢನಿರ್ಧಾರನು ಮಾಡಿಕೊಳ್ತೀವಿ. ದೇವರಿಗೆ ಕ್ಷಮೆ ಕೇಳಿದ ಮೇಲೆ ಆ ತಪ್ಪಿನ ಬಗ್ಗೇನೇ ಮೂರು ಹೊತ್ತು ಯೋಚನೆ ಮಾಡ್ತಾ ಬೇಜಾರ್ ಮಾಡಿಕೊಳ್ತಾ ಕೂತುಕೊಳ್ಳಲ್ಲ.
ಉದಾಹರಣೆಗೆ: ದಾವೀದ ತಪ್ಪು ಮಾಡಿದಾಗ ಅವನಿಗೆ ತುಂಬ ಬೇಜಾರಾಯ್ತು. ಆಗ ಅವನು ದೇವರಿಗೆ ಪ್ರಾರ್ಥನೆ ಮಾಡಿ ಕ್ಷಮೆ ಕೇಳಿದ.—ಕೀರ್ತನೆ 51.
ಮಾರ್ಗದರ್ಶನೆ ಮತ್ತು ಬುದ್ಧಿಗಾಗಿ ಮಾಡೋ ಪ್ರಾರ್ಥನೆ. ನಾವು ಯಾವುದೇ ನಿರ್ಣಯಗಳನ್ನ ಮಾಡೋಕ್ಕಿಂತ ಮುಂಚೆ ಮಾರ್ಗದರ್ಶನೆ ಮತ್ತು ಬುದ್ಧಿಗಾಗಿ ಪ್ರಾರ್ಥನೆ ಮಾಡೋದು ನಮ್ಮಲ್ಲಿ ದೀನತೆ ಇದೆ ಅಂತ ತೋರಿಸಿಕೊಡ್ತೀವಿ. ಯಾಕಂದ್ರೆ ನಮ್ಮ ಸ್ವಂತ ಬುದ್ಧಿಯಿಂದ ನಮಗೇನು ಮಾಡೋಕ್ಕಾಗಲ್ಲ ದೇವರ ಸಹಾಯ ಬೇಕೇ ಬೇಕು ಅಂತ ನಮಗೆ ಗೊತ್ತಿದೆ. ಈ ರೀತಿ ನಾವು ದೇವರ ಮೇಲೆ ಸಂಪೂರ್ಣ ಭರವಸೆ ಇಡೋದನ್ನ ಕಲಿತೀವಿ.—ಜ್ಞಾನೋಕ್ತಿ 3:5, 6.
ಉದಾಹರಣೆಗೆ: ರಾಜ ಸೊಲೊಮೋನ ಇಸ್ರಾಯೇಲ್ಯರನ್ನ ಚೆನ್ನಾಗಿ ಆಳ್ವಿಕೆ ಮಾಡೋಕೆ ಮಾರ್ಗದರ್ಶನ ಮತ್ತು ಬುದ್ಧಿಗಾಗಿ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದ.—1 ಅರಸು 3:5-12.
ಸಹಾಯಕ್ಕಾಗಿ ಮಾಡೋ ಪ್ರಾರ್ಥನೆ. ನಾವು ಯಾವುದಾದ್ರೂ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಾಗ, ನಮಗೇನು ಮಾಡಬೇಕು ಅಂತ ಗೊತ್ತಾಗದೇ ಇರುವಾಗ ನಮ್ಮ ದುಃಖವನ್ನೆಲ್ಲ ಯೆಹೋವನ ಹತ್ತಿರ ಹೇಳಿಕೊಳ್ಳಬೇಕು. ಆಗ ನಮಗೆ ಮನಃಶಾಂತಿ ಸಿಗುತ್ತೆ. ಆಗ ನಮ್ಮ ಮೇಲಲ್ಲ ಯೆಹೋವನ ಮೇಲೆ ಸಂಪೂರ್ಣ ನಂಬಿಕೆಯನ್ನ ಇಡ್ತೀವಿ.—ಕೀರ್ತನೆ 62:8.
ಉದಾಹರಣೆಗೆ: ಶತ್ರು ಸೈನ್ಯಗಳು ಇಸ್ರಾಯೇಲ್ಯರ ಮೇಲೆ ದಾಳಿ ಮಾಡೋಕೆ ಬಂದಾಗ ರಾಜ ಆಸ ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥನೆ ಮಾಡಿದ.—2 ಪೂರ್ವಕಾಲವೃತ್ತಾಂತ 14:11.
ಬೇರೆಯವರಿಗೋಸ್ಕರ ಮಾಡೋ ಪ್ರಾರ್ಥನೆ. ನಾವು ಬೇರೆಯವರಿಗೋಸ್ಕರ ಪ್ರಾರ್ಥನೆ ಮಾಡುವಾಗ ನಮ್ಮ ಬಗ್ಗೆ ಅಷ್ಟೇ ಅಲ್ಲ ಅವರ ಬಗ್ಗೆನೂ ಯೋಚನೆ ಮಾಡ್ತೀವಿ ಅಂತ ತೋರಿಸಿಕೊಡ್ತೀವಿ.
ಉದಾಹರಣೆಗೆ: ಯೇಸು ತನ್ನ ಶಿಷ್ಯರಿಗೋಸ್ಕರ ಯೆಹೋವನ ಹತ್ತಿರ ಪ್ರಾರ್ಥನೆ ಮಾಡಿದನು.—ಯೋಹಾನ 17:9-17.
ಯೆಹೋವನನ್ನ ಸ್ತುತಿಸಲು ಮಾಡೋ ಪ್ರಾರ್ಥನೆ. ನಾವು ಯೆಹೋವನ ಅದ್ಭುತ ಗುಣಗಳು ಮತ್ತು ಆತನ ಕೆಲಸಗಳ ಬಗ್ಗೆ ಪ್ರಾರ್ಥನೆಯಲ್ಲಿ ಸ್ತುತಿಸಿದಾಗ ಆತನ ಮೇಲಿರುವ ಪ್ರೀತಿ ಮತ್ತು ಗೌರವ ಹೆಚ್ಚಾಗುತ್ತೆ. ಈ ರೀತಿ ಮಾಡೋದ್ರಿಂದ ನಾವು ಆತನಿಗೆ ಇನ್ನೂ ಹೆಚ್ಚು ಹತ್ತಿರ ಆಗ್ತೀವಿ.
ಉದಾಹರಣೆಗೆ: ಯೆಹೋವನ ಸೃಷ್ಟಿಯನ್ನ ನೋಡಿ ದಾವೀದನು ಆತನನ್ನ ಮನಸಾರೆ ಸ್ತುತಿಸಿದನು.—ಕೀರ್ತನೆ 8.
ನಮಗೆ ತುಂಬ ನೋವಾದಾಗ ಯೆಹೋವನಿಗೆ ಪ್ರಾರ್ಥನೆ ಮಾಡಿದ್ರೆ ‘ನಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಮಗೆ ಕೊಡ್ತಾನೆ.’ (ಫಿಲಿಪ್ಪಿ 4:7) ಆಗ ನಮ್ಮ ಆರೋಗ್ಯನೂ ಚೆನ್ನಾಗಿ ಇರುತ್ತೆ. (ಜ್ಞಾನೋಕ್ತಿ 14:30) ನಾವು ಬರೀ ಪ್ರಾರ್ಥನೆ ಮಾಡಿದ್ರೆ ಸಾಕಾ ಅಥವಾ ಇನ್ನೇನಾದ್ರೂ ಮಾಡಬೇಕಾ?
ಪ್ರಾರ್ಥನೆ ಮಾಡೋದರಿಂದ ದೇವರ ಜೊತೆಗಿರೋ ನಮ್ಮ ಸಂಬಂಧ ಗಟ್ಟಿಯಾಗುತ್ತೆ, ಧೈರ್ಯ ಸಿಗುತ್ತೆ, ಖುಷಿಯಾಗಿ ಇರ್ತೀವಿ ಮತ್ತು ನಮ್ಮ ಆರೋಗ್ಯನೂ ಚೆನ್ನಾಗಿರುತ್ತೆ
-
-
7 ದೇವರು ನಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನಾ?ಕಾವಲಿನಬುರುಜು: ಪ್ರಾರ್ಥನೆಯ ಬಗ್ಗೆ ಗೊತ್ತಿರಬೇಕಾದ ಏಳು ವಿಷಯಗಳು
-
-
7 ದೇವರು ನಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನಾ?
ದೇವರು ನಮ್ಮ ಪ್ರಾರ್ಥನೆಯನ್ನ ಕೇಳ್ತಾನಾ ಇಲ್ವಾ ಅಂತ ತುಂಬಾ ಜನರಿಗೆ ಪ್ರಶ್ನೆ ಬರುತ್ತೆ. ಯೆಹೋವ ದೇವರು ನಮ್ಮ ಪ್ರಾರ್ಥನೆಯನ್ನ ಕೇಳ್ತಾರೆ ಅಂತ ಬೈಬಲ್ ನಮಗೆ ಹೇಳುತ್ತೆ. ಆದರೆ ಆತನು ನಮ್ಮ ಪ್ರಾರ್ಥನೆಯನ್ನ ಕೇಳ್ತಾನಾ ಇಲ್ವಾ ಅನ್ನೋದು ನಮ್ಮ ಕೈಯಲ್ಲಿದೆ.
ಯೇಸು ತನ್ನ ಸಮಯದಲ್ಲಿ ಜೀವಿಸುತ್ತಿದ್ದ ಧಾರ್ಮಿಕ ಗುರುಗಳನ್ನ ಖಂಡಿಸಿದನು. ಯಾಕೆಂದರೆ ಅವರು ಮನಸಾರೆ ಅಲ್ಲ ಜನರ ಗಮನ ಸೆಳೆಯೋಕೆ ಪ್ರಾರ್ಥನೆ ಮಾಡುತ್ತಿದ್ದರು. ಅದಕ್ಕೆ ಯೇಸು “ಅವ್ರಿಗೆ ಸಿಗಬೇಕಾಗಿದ್ದ ಆಶೀರ್ವಾದ ಆಗಲೇ ಸಿಕ್ಕಿರುತ್ತೆ” ಅಂತ ಹೇಳಿದನು. ಅಂದ್ರೆ ಅವರಿಗೆ ಜನರಿಂದ ಹೊಗಳಿಕೆ ಸಿಕ್ತು, ಆದರೆ ದೇವರು ಅವರ ಪ್ರಾರ್ಥನೆಯನ್ನ ಕೇಳಲಿಲ್ಲ. (ಮತ್ತಾಯ 6:5) ಇವತ್ತು ಕೂಡ ತುಂಬ ಜನರು ದೇವರ ಇಷ್ಟದ ಪ್ರಕಾರ ಪ್ರಾರ್ಥನೆ ಮಾಡಲ್ಲ ಬದಲಿಗೆ ತಮ್ಮ ಇಷ್ಟದ ಪ್ರಕಾರ ಮಾಡುತ್ತಾರೆ. ಇಂಥವರ ಪ್ರಾರ್ಥನೆಯನ್ನ ದೇವರು ಖಂಡಿತ ಕೇಳಲ್ಲ.
ನಿಮ್ಮ ಪ್ರಾರ್ಥನೆಯನ್ನ ದೇವರು ಕೇಳ್ತಾನಾ? ನೀವು ಯಾವ ದೇಶದವರು, ಯಾವ ಜಾತಿ, ನಿಮ್ಮ ಬಗ್ಗೆ ಜನರು ಏನು ಯೋಚನೆ ಮಾಡುತ್ತಾರೆ ಅನ್ನೋದನ್ನ ದೇವರು ಯಾವತ್ತು ನೋಡಲ್ಲ. ಇದರ ಬಗ್ಗೆ ಬೈಬಲ್ ಹೀಗೆ ಹೇಳುತ್ತೆ “ದೇವರು ಭೇದಭಾವ ಮಾಡಲ್ಲ ಅಂತ ಈಗ ಚೆನ್ನಾಗಿ ಅರ್ಥ ಆಗಿದೆ. ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.” (ಅಪೊಸ್ತಲರ ಕಾರ್ಯ 10:34, 35) ನಿಮಗೆ ಯೆಹೋವನ ಮೇಲೆ ಭಯಭಕ್ತಿ ಇದ್ದರೆ ನೀವು ಯಾವಾಗಲೂ ಒಳ್ಳೇ ಕೆಲಸಗಳನ್ನೇ ಮಾಡ್ತೀರ. ದೇವರ ಮೇಲೆ ನಿಮಗೆ ಭಯ ಇದ್ದರೆ ಆತನಿಗೆ ನೋವಾಗುವ ಯಾವ ಕೆಲಸವನ್ನೂ ನೀವು ಮಾಡಲ್ಲ. ಬದಲಿಗೆ ನೀವು ಅವನನ್ನ ಗೌರವಿಸ್ತೀರ. ಒಳ್ಳೇ ಕೆಲಸಗಳೆಂದರೆ ನಮಗೆ ಯಾವುದು ಸರಿ ಕಾಣಿಸುತ್ತೋ ಅಥವಾ ಬೇರೆಯವರಿಗೆ ಯಾವುದು ಸರಿ ಅನಿಸುತ್ತೋ ಅದು ಅಲ್ಲ ಬದಲಿಗೆ ದೇವರ ದೃಷ್ಟಿಯಲ್ಲಿ ಯಾವುದು ಸರಿ ಇದೆಯೋ ಅದನ್ನ ಮಾಡಬೇಕು. ನಾವು ದೇವರ ಮೇಲೆ ಭಯಭಕ್ತಿ ತೋರಿಸಿ ಒಳ್ಳೇದನ್ನ ಮಾಡಿದರೆ, ದೇವರು ಖಂಡಿತ ನಮ್ಮ ಪ್ರಾರ್ಥನೆಯನ್ನ ಕೇಳುತ್ತಾನೆ.a
ದೇವರು ಏನಾದ್ರೂ ಅದ್ಭುತ ಮಾಡಿ ನಮ್ಮ ಪ್ರಾರ್ಥನೆ ಕೇಳಬೇಕು ಅಂತ ತುಂಬ ಜನ ನೆನಸುತ್ತಾರೆ. ಆದರೆ ನಾವು ಈ ರೀತಿ ಅಂದುಕೊಳ್ಳೋದು ಸರಿಯಲ್ಲ. ಹಿಂದಿನ ಕಾಲದಲ್ಲಿ ಕೇವಲ ಕೆಲವೇ ಸಂದರ್ಭಗಳಲ್ಲಿ ದೇವರು ಅದ್ಭುತ ಮಾಡಿ ಅವರ ಪ್ರಾರ್ಥನೆಗೆ ಉತ್ತರ ಕೊಟ್ಟನು. ಕೆಲವೊಮ್ಮೆ ಶತಮಾನಗಳು ಕಳೆದ್ರೂ ದೇವರು ಯಾವದೇ ಅದ್ಭುತ ಮಾಡಲಿಲ್ಲ. ಅಪೊಸ್ತಲರು ತೀರಿಹೋದ ಮೇಲೆ ಅದ್ಭುತಗಳು ಆಗೋದೆ ನಿಂತುಹೋಯ್ತು. (1 ಕೊರಿಂಥ 13:8-10) ಇವತ್ತು ನಮ್ಮ ಪ್ರಾರ್ಥನೆಗಳನ್ನ ದೇವರು ಕೇಳಲ್ಲ ಅಂತ ಇದರ ಅರ್ಥನಾ? ಖಂಡಿತ ಇಲ್ಲ. ದೇವರು ಯಾವ ರೀತಿಯ ಪ್ರಾರ್ಥನೆಯನ್ನ ಕೇಳ್ತಾನೆ ಅಂತ ನೊಡೋಣ.
ದೇವರು ವಿವೇಕವನ್ನ ಕೊಡುತ್ತಾನೆ. ಬುದ್ಧಿ, ವಿವೇಕ ಇರೋದು ಯೆಹೋವನಿಗೆ ಮಾತ್ರ ಅಂತ ಬೈಬಲ್ ಹೇಳುತ್ತೆ. ಯಾರು ಯೆಹೋವನಿಗೆ ವಿವೇಕಕ್ಕಾಗಿ ಬೇಡಿಕೊಳ್ಳುತ್ತಾರೋ ಮತ್ತು ಆತನ ಇಷ್ಟದ ಪ್ರಕಾರ ನಡೆಯುತ್ತಾರೋ ಅಂಥವರಿಗೆ ಉದಾರವಾಗಿ ವಿವೇಕವನ್ನ ಕೊಡುತ್ತಾನೆ.—ಯಾಕೋಬ 1:5.
ದೇವರು ತನ್ನ ಶಕ್ತಿಯನ್ನ ಅಂದ್ರೆ ಪವಿತ್ರ ಶಕ್ತಿಯನ್ನ ಕೊಡುತ್ತಾನೆ. ವಿಶ್ವದಲ್ಲಿ ಇದಕ್ಕಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ. ಈ ಶಕ್ತಿಯಿಂದ ನಮ್ಮ ಕಷ್ಟಗಳನ್ನ ಎದುರಿಸೋಕೆ ಸಹಾಯ ಆಗುತ್ತೆ. ನಮಗೆ ಬೇಜಾರಾದಾಗ ಸಮಾಧಾನ ಸಿಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಮನಃಶಾಂತಿ ಸಿಗುತ್ತೆ. ಅಷ್ಟೇ ಅಲ್ಲ, ದೇವರ ಪವಿತ್ರ ಶಕ್ತಿಯಿಂದ ನಾವು ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಕೂ ಸಹಾಯ ಆಗುತ್ತೆ. (ಗಲಾತ್ಯ 5:22, 23) ಪವಿತ್ರ ಶಕ್ತಿಯನ್ನ ಕೇಳಿದ್ರೆ ದೇವರು ಖಂಡಿತ ಕೊಟ್ಟೇ ಕೊಡುತ್ತಾನೆ ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು.—ಲೂಕ 11:13.
ಯಾರು ದೇವರ ಬಗ್ಗೆ ತಿಳಿದುಕೊಳ್ಳೋಕೆ ಇಷ್ಟಪಡುತ್ತಾರೋ ದೇವರು ಅವರಿಗೆ ಸಹಾಯ ಮಾಡ್ತಾನೆ. (ಅಪೊಸ್ತಲರ ಕಾರ್ಯ 17:26, 27) ಅನೇಕ ಜನರು ದೇವರ ಹೆಸರೇನು, ಆತನು ಮನುಷ್ಯನನ್ನ ಯಾಕೆ ಸೃಷ್ಟಿ ಮಾಡಿದ್ದಾನೆ ಮತ್ತು ಆತನ ಜೊತೆ ಫ್ರೆಂಡ್ ಆಗೋಕೆ ಏನು ಮಾಡಬೇಕು ಅಂತ ತಿಳಿದುಕೊಳ್ಳೋಕೆ ಬಯಸುತ್ತಾರೆ. (ಯಾಕೋಬ 4:8) ಈ ಎಲ್ಲಾ ಪ್ರಶ್ನೆಗಳಿಗೆ ಯೆಹೋವನ ಸಾಕ್ಷಿಗಳು ಬೈಬಲಿನಿಂದ ಉತ್ತರ ಕೊಡುತ್ತಾರೆ.
ಬೈಬಲ್ ಬಗ್ಗೆ ತಿಳಿದುಕೊಳ್ಳೋಕೆ ನೀವು ಇಷ್ಟಪಡ್ತಿರಾ? ಬಹುಶಃ ದೇವರು ನಿಮ್ಮ ಪ್ರಾರ್ಥನೆಯನ್ನ ಕೇಳಿ ಈ ಪತ್ರಿಕೆಯ ಮೂಲಕ ಉತ್ತರ ಕೊಟ್ಟಿದ್ದಾನೆ.
a ಹೆಚ್ಚಿನ ಮಾಹಿತಿಗಾಗಿ ಪ್ರಾರ್ಥನೆ ಮಾಡೋದು ಹೇಗೆ ಅಂತ ತಿಳಿದುಕೊಳ್ಳೋಕೆ ಬೈಬಲ್ ನಮಗೆ ಏನು ಕಲಿಸುತ್ತದೆ? ಪುಸ್ತಕದ 17ನೇ ಅಧ್ಯಾಯವನ್ನ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
-