-
ನಿಜ ಕ್ರೈಸ್ತರನ್ನ ಗುರುತಿಸೋದು ಹೇಗೆ?ಯೇಸು ಕ್ರಿಸ್ತನ ಬಗ್ಗೆ ತಿಳಿದುಕೊಳ್ಳೋಕೆ ನಿಮಗೆ ಇಷ್ಟ ಇದೆಯಾ?
-
-
ನಿಜ ಕ್ರೈಸ್ತರನ್ನ ಗುರುತಿಸೋದು ಹೇಗೆ?
ಇಡೀಭೂಮಿಯಲ್ಲಿ ಎಷ್ಟು ಕ್ರೈಸ್ತರಿದ್ದಾರೆ? ಅಟ್ಲಾಸ್ ಆಫ್ ಗ್ಲೋಬಲ್ ಕ್ರಿಸ್ಟಿಯಾನಿಟಿ ಅನ್ನೋ ಪುಸ್ತಕದ ಪ್ರಕಾರ 2010ರಲ್ಲಿ ಇಡೀ ಭೂಮಿಯಲ್ಲಿ ಸುಮಾರು 230 ಕೋಟಿಯಷ್ಟು ಕ್ರೈಸ್ತರಿದ್ರು. ಅಷ್ಟೇ ಅಲ್ಲ, ಲೋಕವ್ಯಾಪಕವಾಗಿ ಕ್ರೈಸ್ತರಲ್ಲಿ 41, 000ಕ್ಕಿಂತ ಹೆಚ್ಚು ಪಂಗಡಗಳಿವೆ. ಪ್ರತಿಯೊಂದಕ್ಕೂ ಅವರದ್ದೇ ಆದ ನಂಬಿಕೆಗಳು ಮತ್ತು ನಿಯಮಗಳು ಇವೆ ಅಂತ ಆ ಪುಸ್ತಕ ಹೇಳುತ್ತೆ. “ಕ್ರೈಸ್ತ” ಧರ್ಮದಲ್ಲೇ ಇಷ್ಟೊಂದು ಪಂಗಡಗಳು ಇರೋದನ್ನ ನೋಡಿ, ‘ಇವರಲ್ಲಿ ನಿಜ ಕ್ರೈಸ್ತರು ಯಾರು’ ಅನ್ನೋ ಜನರಿಗೆ ಗೊಂದಲ ಇದೆ. ಅಷ್ಟೇ ಅಲ್ಲ, ‘ಕ್ರೈಸ್ತರು ಅಂತ ಹೇಳಿಕೊಳ್ಳೋರೆಲ್ಲ ನಿಜವಾಗ್ಲೂ ಕ್ರೈಸ್ತರಾ?‘ ಅಂತ ಅವರು ಯೋಚಿಸುತ್ತಾರೆ.
ಇದನ್ನ ಅರ್ಥಮಾಡಿಕೊಳ್ಳೋಕೆ ಒಂದು ಉದಾಹರಣೆಯನ್ನ ನೋಡೋಣ. ಬೇರೆ ದೇಶಕ್ಕೆ ಹೋಗುವ ವ್ಯಕ್ತಿ ತಾನು ಯಾವ ದೇಶದವನು ಅಂತ ಗಡಿ ಭಾಗದಲ್ಲಿರುವ ಅಧಿಕಾರಿಗೆ ತಿಳಿಸಬೇಕು. ಅದಕ್ಕಾಗಿ ತನ್ನ ಗುರುತಿನ ಚೀಟಿಯನ್ನ ಅಥವಾ ಪಾಸ್‌ಪೋರ್ಟ್‌ನ್ನ ತೋರಿಸಬೇಕು. ಅದೇ ರೀತಿಯಲ್ಲಿ ಒಬ್ಬ ಕ್ರೈಸ್ತ ಬರೀ ಬಾಯಿಮಾತಲ್ಲಿ ತಾನು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದೀನಿ ಅಂತ ಹೇಳಿದ್ರೆ ಸಾಕಾಗಲ್ಲ. ಬದಲಿಗೆ ಅವನು ಒಬ್ಬ ಕ್ರೈಸ್ತನಾಗಿದ್ದಾನೆ ಅಂತ ತನ್ನ ನಡೆನುಡಿಯಲ್ಲಿ ತೋರಿಸಬೇಕು.
ಯೇಸು ಸತ್ತು ಸುಮಾರು 10 ವರ್ಷಗಳಾದ ಮೇಲೆ ಅಂದರೆ ಕ್ರಿಸ್ತಶಕ 44ರ ನಂತರ ಮೊದಲ ಬಾರಿಗೆ “ಕ್ರೈಸ್ತರು” ಅನ್ನೋ ಹೆಸರು ಬಂತು. ಇದರ ಬಗ್ಗೆ ಲೂಕ ಹೀಗೆ ಹೇಳುತ್ತಾನೆ: “ಶಿಷ್ಯರನ್ನ ‘ಕ್ರೈಸ್ತರು’ ಅಂತ ಮೊದಮೊದಲು ಕರೆದಿದ್ದು ಅಂತಿಯೋಕ್ಯದಲ್ಲೇ. ದೇವರೇ ಅವ್ರಿಗೆ ಈ ಹೆಸ್ರನ್ನ ಕೊಟ್ಟನು.” (ಅಪೊಸ್ತಲರ ಕಾರ್ಯ 11:26) ಯೇಸು ಕ್ರಿಸ್ತನ ಶಿಷ್ಯರನ್ನೇ ಕ್ರೈಸ್ತರು ಅಂತ ಕರೆದಿದ್ದು ಅನ್ನೋದನ್ನ ಮರೆಯಬೇಡಿ. ಹಾಗಾದ್ರೆ ಒಬ್ಬ ವ್ಯಕ್ತಿ ಯೇಸು ಕ್ರಿಸ್ತನ ಶಿಷ್ಯನಾಗಬೇಕಾದ್ರೆ ಏನು ಮಾಡಬೇಕು? ದ ನ್ಯೂ ಇಂಟರ್‌ನ್ಯಾಷನಲ್ ಡಿಕ್ಷನರಿ ಆಫ್ ನ್ಯೂ ಟೆಸ್ಟಮೆಂಟ್ ಥಿಯಾಲಜಿ ಹೀಗೆ ಹೇಳುತ್ತೆ: “ಒಬ್ಬ ವ್ಯಕ್ತಿ ಕ್ರೈಸ್ತನಾಗಬೇಕಾದ್ರೆ ತನ್ನ ಜೀವನಪೂರ್ತಿ ಯೇಸುವಿನ ಮಾದರಿಯನ್ನ ಅನುಕರಿಸಬೇಕು ಮತ್ತು ಆತನು ಹೇಳಿದ ಹಾಗೇ ತನ್ನ ಜೀವನವನ್ನ ನಡೆಸಬೇಕು.” ಅಂದರೆ ಅವನು ಯಾವುದೇ ಸ್ವಾರ್ಥದಿಂದಲ್ಲ, ಪೂರ್ಣ ಮನಸ್ಸಿನಿಂದ ಯೇಸು ಕಲಿಸಿದ್ದನ್ನ ತನ್ನ ಜೀವನದಲ್ಲಿ ಪಾಲಿಸಬೇಕು.
ಇಷ್ಟೆಲ್ಲಾ ಕ್ರೈಸ್ತ ಪಂಗಡಗಳಿರೋದ್ರಿಂದ ಇವರಲ್ಲಿ ನಿಜ ಕ್ರೈಸ್ತರನ್ನ ಗುರುತಿಸೋದು ಹೇಗೆ? ಇವರನ್ನ ಕಂಡುಹಿಡಿಯಲಿಕ್ಕೆ ಯೇಸು ಯಾವ ಗುರುತುಗಳನ್ನ ಕೊಟ್ಟನು? ಈ ಪ್ರಶ್ನೆಗಳಿಗೆ ಉತ್ತರವನ್ನ ನಾವು ಬೈಬಲಿನಿಂದ ನೋಡೋಣ. ಮುಂದಿನ ಲೇಖನಗಳಲ್ಲಿ, ನಿಜ ಕ್ರೈಸ್ತರನ್ನ ಗುರುತಿಸಲಿಕ್ಕೆ ಯೇಸು ನಮಗೆ ಸಹಾಯ ಮಾಡಿದ 5 ವಿಷಯಗಳನ್ನ ನೋಡೋಣ. ಒಂದನೇ ಶತಮಾನದ ಕ್ರೈಸ್ತರು ಈ ಗುರುತುಗಳನ್ನ ಹೇಗೆ ತೋರಿಸಿದರು ಅಂತ ನೋಡೋಣ. ಅಷ್ಟೇ ಅಲ್ಲ, ಈ ಗುರುತುಗಳ ಸಹಾಯದಿಂದ ಈಗಿನ ಕಾಲದಲ್ಲಿರುವ ನಿಜ ಕ್ರೈಸ್ತರು ಯಾರು ಅಂತ ಕಂಡುಹಿಡಿಯೋಣ.
-
-
‘ನಾನು ಕಲಿಸಿದ್ದನ್ನ ಮಾಡ್ತಾ ಇರಿ’ಯೇಸು ಕ್ರಿಸ್ತನ ಬಗ್ಗೆ ತಿಳಿದುಕೊಳ್ಳೋಕೆ ನಿಮಗೆ ಇಷ್ಟ ಇದೆಯಾ?
-
-
‘ನಾನು ಕಲಿಸಿದ್ದನ್ನ ಮಾಡ್ತಾ ಇರಿ’
“ನಾನು ಕಲಿಸಿದ್ದನ್ನ ಯಾವಾಗ್ಲೂ ಮಾಡ್ತಾ ಇದ್ರೆ ನೀವು ನನ್ನ ನಿಜ ಶಿಷ್ಯರಾಗ್ತೀರ. ಸತ್ಯ ಏನಂತ ನಿಮಗೆ ಗೊತ್ತಾಗುತ್ತೆ. ಆ ಸತ್ಯ ನಿಮ್ಮನ್ನ ಬಿಡುಗಡೆ ಮಾಡುತ್ತೆ.”—ಯೋಹಾನ 8:31, 32.
ಈ ಮಾತಿನ ಅರ್ಥ: ಯೆಹೋವ ದೇವರು ಕಲಿಸಿದ ವಿಷಯಗಳನ್ನೇ ಯೇಸು ಕಲಿಸಿದನು. “ನಾನು ನನಗೆ ಇಷ್ಟ ಬಂದಿದ್ದನ್ನ ಮಾತಾಡಲಿಲ್ಲ. ನನ್ನನ್ನ ಕಳಿಸಿದ ನನ್ನ ಅಪ್ಪ ನಾನೇನು ಹೇಳಬೇಕು, ಏನು ಕಲಿಸಬೇಕು” ಅಂತ ಹೇಳಿಕೊಟ್ಟಿದ್ದಾನೆ ಅಂದನು. (ಯೋಹಾನ 12:49) ಅವನು ಸೃಷ್ಟಿಕರ್ತನಾದ ದೇವರಿಗೆ ಪ್ರಾರ್ಥಿಸುವಾಗ “ನಿನ್ನ ಮಾತುಗಳೇ ಸತ್ಯ” ಅಂತ ಹೇಳಿದನು. ಯೇಸು ಜನ್ರಿಗೆ ಕಲಿಸಿದಾಗೆಲ್ಲ ದೇವರ ವಾಕ್ಯದಲ್ಲಿರುವ ಮಾತುಗಳನ್ನು ಹೇಳ್ತಾ ಇದ್ದನು. (ಯೋಹಾನ 17:17; ಮತ್ತಾಯ 4:4, 7, 10) ನಿಜ ಕ್ರೈಸ್ತರು ಯೇಸು ‘ಕಲಿಸಿದ್ದನ್ನ ಯಾವಾಗಲೂ ಮಾಡ್ತಾ ಇರುತ್ತಾರೆ’ ಅಂದ್ರೆ ಬೈಬಲಲ್ಲಿರೋ ದೇವರ ಮಾತುಗಳೇ “ಸತ್ಯ” ಅಂತ ನಂಬುತ್ತಾರೆ. ಬೈಬಲ್ ಹೇಳಿರೋ ಪ್ರಕಾರನೇ ತಮ್ಮ ಜೀವನವನ್ನು ನಡೆಸುತ್ತಾರೆ.
ಒಂದನೇ ಶತಮಾನದ ಕ್ರೈಸ್ತರು ದೇವರ ವಾಕ್ಯವನ್ನ ಗೌರವಿಸುತ್ತಿದ್ದರು: ಅಪೊಸ್ತಲ ಪೌಲ ಯೇಸುವಿನಂತೆ ದೇವರ ವಾಕ್ಯವನ್ನ ಗೌರವಿಸುತ್ತಿದ್ದನು. ಅದಕ್ಕೆ ಪೌಲ “ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.” ಅದು ನಮಗೆ ಸಹಾಯಮಾಡುತ್ತೆ ಅಂತ ಹೇಳಿದನು. (2 ತಿಮೊತಿ 3:16) ಹಿರಿಯರು ಕಲಿಸುವಾಗ, ‘ಭರವಸೆಗೆ ಯೋಗ್ಯವಾದ ದೇವರ ಮಾತುಗಳನ್ನ ಚಾಚೂತಪ್ಪದೆ’ ಪಾಲಿಸಿದರು. (ತೀತ 1:7, 9) “ಈ ಲೋಕದ ಜ್ಞಾನದಿಂದ, ಅರ್ಥವಾಗದ ಮೋಸದ ಮಾತುಗಳಿಂದ . . . ಅವು ಕ್ರಿಸ್ತ ಕಲಿಸಿದ ವಿಷ್ಯಗಳಿಗೆ ತಕ್ಕ ಹಾಗಿಲ್ಲ, ಮಾನವ ಸಂಪ್ರದಾಯಗಳಿಗೆ, ಲೋಕದ ವಿಷ್ಯಗಳಿಗೆ ತಕ್ಕ ಹಾಗಿವೆ.” (ಕೊಲೊಸ್ಸೆ 2:8) ಅದಕ್ಕೆ ಅದರಿಂದ ದೂರ ಇರಬೇಕು ಅಂತ ಆಗಿನ ಕಾಲದ ಕ್ರೈಸ್ತರಿಗೆ ಪೌಲ ಎಚ್ಚರಿಕೆ ಕೊಟ್ಟನು.
ಇವತ್ತು ಯಾರು ದೇವರ ವಾಕ್ಯವನ್ನ ಗೌರವಿಸುತ್ತಿದ್ದಾರೆ? ಕ್ಯಾಥೋಲಿಕ್ ಚರ್ಚಿನ ಬೋಧನೆ ಬಗ್ಗೆ ಕ್ಯಾಟೆಕಿಸಂ ಆಫ್ ಕ್ಯಾಥೋಲಿಕ್ ಚರ್ಚ್ ಹೀಗೆ ಹೇಳುತ್ತೆ: ‘ಕ್ಯಾಥೋಲಿಕ್ ಚರ್ಚಿನವರು, ಬೈಬಲಿನಲ್ಲಿರೋದ್ರ ಜೊತೆಗೆ ತಮ್ಮ ಪವಿತ್ರ ಸಂಪ್ರದಾಯದ ಬಗ್ಗೆನೂ ಬೋಧಿಸುತ್ತಾರೆ. ಯಾಕಂದ್ರೆ ಅವರಿಗೆ, ತಮ್ಮ ಪವಿತ್ರ ಸಂಪ್ರದಾಯ ಬೈಬಲಿನಷ್ಟೇ ಪ್ರಾಮುಖ್ಯ.’ ಕೆನಡಾದ ಮ್ಯಾಕ್ಲೀನ್ಸ್ ಪತ್ರಿಕೆಯ ಒಂದು ಲೇಖನ ಹೀಗೆ ಹೇಳುತ್ತೆ: “ನಮಗೀಗ ಒಳ್ಳೊಳ್ಳೆ ಐಡಿಯಾಗಳು ಇರುವಾಗ ಯಾಕೆ ಎರಡು ಸಾವಿರ ವರ್ಷಗಳ ಹಿಂದೆ ಯೇಸು ಹೇಳಿರೋದನ್ನ ಪಾಲಿಸಬೇಕು. ಅವರು ಕಲಿಸಿದ ವಿಷಯನ ಈಗಿನ ವಿಷಯಗಳಿಗೆ ಸೇರಿಸಿ ಇದರ ಮೌಲ್ಯವನ್ನ ಯಾಕೆ ಕಡಿಮೆ ಮಾಡಬೇಕು.”
ಯೆಹೋವನ ಸಾಕ್ಷಿಗಳ ಬಗ್ಗೆ ನ್ಯೂ ಕ್ಯಾಥೊಲಿಕ್ ಎನ್‌ಸೈಕ್ಲಪೀಡಿಯ ಹೀಗೆ ಹೇಳುತ್ತೆ: “ಯೆಹೋವನ ಸಾಕ್ಷಿಗಳು ಬೈಬಲಿನಲ್ಲಿ ಇರೋದನ್ನ ಮಾತ್ರ ನಂಬುತ್ತಾರೆ ಮತ್ತು ಅದರಲ್ಲಿ ಇರೋದನ್ನೇ ಪಾಲಿಸೋಕೆ ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತಾರೆ.” ಇತ್ತೀಚಿಗೆ ಒಬ್ಬ ಯೆಹೋವನ ಸಾಕ್ಷಿ ಕೆನಡಾದಲ್ಲಿ ಇರುವ ಒಬ್ಬ ವ್ಯಕ್ತಿಗೆ ತನ್ನನ್ನ ಪರಿಚಯಿಸುತ್ತಿದ್ದಾಗ ಅವನು ಮಧ್ಯದಲ್ಲಿ ಬಾಯಿ ಹಾಕಿ, “ನಿಮ್ಮ ಕೈಯಲ್ಲಿರೋ ಬೈಬಲ್ ನೋಡಿ ನೀವು ಯಾರು ಅಂತ ನನಗೆ ಗೊತ್ತಾಯ್ತು” ಅಂತ ಹೇಳುತ್ತಾನೆ.
-
-
“ಲೋಕದವರ ತರ ಇಲ್ಲ”ಯೇಸು ಕ್ರಿಸ್ತನ ಬಗ್ಗೆ ತಿಳಿದುಕೊಳ್ಳೋಕೆ ನಿಮಗೆ ಇಷ್ಟ ಇದೆಯಾ?
-
-
“ಲೋಕದವರ ತರ ಇಲ್ಲ”
‘ಇವರು ಈ ಲೋಕದವರ ತರ ಇಲ್ಲ. ಅದಕ್ಕೇ ಲೋಕ ಇವ್ರನ್ನ ದ್ವೇಷಿಸ್ತಾ ಇದೆ.’—ಯೋಹಾನ 17:14.
ಈ ಮಾತಿನ ಅರ್ಥ: ಯೇಸು ಈ ಲೋಕದ ಭಾಗ ಅಲ್ಲ. ಅದಕ್ಕೆ ಆತನು ಸಾಮಾಜಿಕ ಮತ್ತು ರಾಜಕೀಯ ಗಲಭೆಗಳಲ್ಲಿ ತಲೆಹಾಕುತ್ತಿರಲಿಲ್ಲ. “ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ. ಆ ತರ ಇದ್ದಿದ್ರೆ ನಾನು ಯೆಹೂದ್ಯರ ಕೈಗೆ ಸಿಗದ ಹಾಗೆ ನನ್ನ ಸೇವಕರು ಯುದ್ಧ ಮಾಡ್ತಿದ್ರು. ಆದ್ರೆ ನನ್ನ ಆಳ್ವಿಕೆ ಈ ಲೋಕದ್ದಲ್ಲ” ಅಂತ ಯೇಸು ಹೇಳಿದನು. (ಯೋಹಾನ 18:36) ದೇವರು ಇಷ್ಟಪಡದ ರೀತಿಯಲ್ಲಿ ಮಾತಾಡಬಾರದು, ನಡೆದುಕೊಳ್ಳಬಾರದು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು.—ಮತ್ತಾಯ 20:25-27.
ಒಂದನೇ ಶತಮಾನದ ಕ್ರೈಸ್ತರು ಈ ಲೋಕದವರ ತರ ಇರಲಿಲ್ಲ: ಒಂದನೇ ಶತಮಾನದ ಕ್ರೈಸ್ತರ ಬಗ್ಗೆ ಧಾರ್ಮಿಕ ಬರಹಗಾರನಾದ ಜೊನಾಥನ್ ಡೈಮಂಡ್ ಹೇಳೋದು: ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು “ಯುದ್ಧ ಮಾಡುತ್ತಿರಲಿಲ್ಲ. ಎಷ್ಟೇ ಕಷ್ಟ ಆದರೂ ಅವಮಾನ ಆದರೂ ಜೈಲಿಗೆ ಹಾಕಿದ್ರೂ ಅಥವಾ ಸಾಯಿಸಿದ್ರೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ, ತಟಸ್ಥರಾಗಿರುತ್ತಿದ್ದರು.” ಅವರು ಬೈಬಲಿನಲ್ಲಿರುವ ನೀತಿನಿಯಮಗಳನ್ನು ಪಾಲಿಸಿದ್ರಿಂದ ಬೇರೆಯವರ ತರ ಇರಲಿಲ್ಲ. “ಈಗ ನೀವು ಜನ್ರ ಜೊತೆ ಸೇರಿ ಅವ್ರ ಅಸಹ್ಯ ಕೆಲಸಗಳಲ್ಲಿ ಕೈಜೋಡಿಸ್ತಾ ಇಲ್ಲ ಅಂತ ಅವರು ಆಶ್ಚರ್ಯ ಪಡ್ತಾರೆ. ಅದಕ್ಕೇ ನಿಮ್ಮ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡ್ತಾರೆ” ಅಂತ ಕ್ರೈಸ್ತರಿಗೆ ಹೇಳಲಾಗಿತ್ತು. (1 ಪೇತ್ರ 4:4) ಇತಿಹಾಸಗಾರನಾದ ವಿಲ್ ಡ್ಯುರಂಟ್ ಹೇಳೋ ಪ್ರಕಾರ, ಕ್ರೈಸ್ತರು ‘ಬೈಬಲಿನಲ್ಲಿದ್ದ ನೀತಿ ನಿಯಮಗಳನ್ನ ಮಾತ್ರ ಪಾಲಿಸುತ್ತಿದ್ದರು. ಅದಕ್ಕೆ ಅನೈತಿಕ ಜೀವನ ನಡೆಸುತ್ತಾ ಇದ್ದವರಿಗೆ ಕ್ರೈಸ್ತರನ್ನ ಕಂಡರೆ ಆಗುತ್ತಿರಲಿಲ್ಲ.’
ಇವತ್ತು ಯಾರು ಲೋಕದವರ ತರ ಇಲ್ಲ? ಕ್ರೈಸ್ತ ತಾಟಸ್ಥ್ಯದ ಬಗ್ಗೆ ನ್ಯೂ ಕ್ಯಾಥೊಲಿಕ್ ಎನ್‌ಸೈಕ್ಲಪೀಡಿಯ ಹೀಗೆ ಹೇಳುತ್ತೆ: “ಆಯುಧಗಳನ್ನ ಇಟ್ಟುಕೊಳ್ಳಲ್ಲ ಅಂತ ಹೇಳಿದ್ರೆ ಅದೊಂದು ಮಹಾ ಅಪರಾಧ.” ಮಾನವ ಹಕ್ಕುಗಳ ಸಂಘಟನೆಯಾದ ಆಫ್ರಿಕನ್ ರೈಟ್ಸ್ ಹೇಳೋ ಪ್ರಕಾರ, 1994ರಲ್ಲಿ ರುವಾಂಡದಲ್ಲಾದ ಹತ್ಯಾಕಾಂಡದಲ್ಲಿ ಎಲ್ಲಾ ಚರ್ಚಿನವರು ಭಾಗವಹಿಸಿದ್ರು. “ಆದರೆ ಯೆಹೋವನ ಸಾಕ್ಷಿಗಳು ಮಾತ್ರ ಅದರಲ್ಲಿ ಭಾಗವಹಿಸಲಿಲ್ಲ.”
ನಾಜಿ ಹತ್ಯಾಕಾಂಡದ ಬಗ್ಗೆ ಮಾತಾಡುತ್ತಾ ಒಬ್ಬ ಹೈಸ್ಕೂಲ್ ಟೀಚರ್, “ಅವರ ಕ್ರೂರ ಕೃತ್ಯಗಳ ಬಗ್ಗೆ ಮತ್ತು ಅವರು ಹೇಳಿದ ಸುಳ್ಳುಗಳ ಬಗ್ಗೆ ಯಾವ ವ್ಯಕ್ತಿಯಾಗಲಿ, ಸಂಘಟನೆಯಾಗಲಿ ಪ್ರಶ್ನೆ ಮಾಡಲಿಲ್ಲ” ಅಂತ ಬೇಜಾರು ಮಾಡಿಕೊಂಡರು. ಆದರೆ ಅವರು ಅಮೆರಿಕದಲ್ಲಿರುವ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಮ್‌ಗೆ ಹೋಗಿ ಇದರ ಬಗ್ಗೆ ವಿಚಾರಿಸಿದಾಗ, ಈ ನಾಜಿಗಳು ಎಷ್ಟೇ ಕ್ರೂರವಾಗಿ ನಡೆದುಕೊಂಡ್ರೂ ಯೆಹೋವನ ಸಾಕ್ಷಿಗಳು ಮಾತ್ರ ಅವರ ನಂಬಿಕೆಯನ್ನ ಬಿಟ್ಟುಕೊಡದೆ ತಟಸ್ಥರಾಗಿದ್ದರು ಅಂತ ಅರ್ಥಮಾಡಿಕೊಂಡರು.
ಲೈಂಗಿಕತೆ ಮತ್ತು ಮದುವೆ ಬಗ್ಗೆ ಏನು? “ಮದುವೆ ಮುಂಚೆ ಲೈಂಗಿಕತೆಯಲ್ಲಿ ಒಳಗೂಡೋದು, ಮದುವೆ ಆಗದೆ ಒಟ್ಟಿಗೆ ಇರೋದು ಮತ್ತು ಇನ್ನಿತರ ವಿಷಯಗಳಲ್ಲಿ ಚರ್ಚ್ ಹೇಳೋದನ್ನ ಹೆಚ್ಚಿನ ಕ್ಯಾಥೊಲಿಕ್ ಯುವಕರು ಒಪ್ಪಿಕೊಳ್ಳುತ್ತಿರಲಿಲ್ಲ” ಅಂತ ಯು.ಎಸ್. ಕ್ಯಾಥೊಲಿಕ್ ಪತ್ರಿಕೆ ಹೇಳುತ್ತೆ. ಅದೇ ಪತ್ರಿಕೆಯಲ್ಲಿ ಒಬ್ಬ ಚರ್ಚಿನ ಅಧಿಕಾರಿ ಹೀಗೆ ಹೇಳುತ್ತಾನೆ: ‘ಮದುವೆಯಾಗೋಕೆ ಚರ್ಚಿಗೆ ಬಂದವರಲ್ಲಿ 50 ಪ್ರತಿಶತಕ್ಕಿಂತ ಹೆಚ್ಚು ಜನರು ಈಗಾಗಲೇ ಒಟ್ಟಿಗೆ ಜೀವನ ಮಾಡಿರುತ್ತಾರೆ.’ ಆದರೆ “ಯೆಹೋವನ ಸಾಕ್ಷಿಗಳು ಮದುವೆ ಮತ್ತು ಲೈಂಗಿಕತೆಯ ಬಗ್ಗೆ ಬೈಬಲಿನಲ್ಲಿರುವ ನೀತಿನಿಯಮಗಳನ್ನೇ ಪಾಲಿಸುತ್ತಾರೆ, ಅದನ್ನ ಕಡೆಗಣಿಸಲ್ಲ” ಅಂತ ದ ನ್ಯೂ ಎನ್‌ಸೈಕ್ಲಪೀಡಿಯ ಬ್ರಿಟಾನಿಕ ಹೇಳುತ್ತೆ.
-
-
“ನಿಮ್ಮ ಮಧ್ಯ ಪ್ರೀತಿ ಇರಲಿ”ಯೇಸು ಕ್ರಿಸ್ತನ ಬಗ್ಗೆ ತಿಳಿದುಕೊಳ್ಳೋಕೆ ನಿಮಗೆ ಇಷ್ಟ ಇದೆಯಾ?
-
-
“ನಿಮ್ಮ ಮಧ್ಯ ಪ್ರೀತಿ ಇರಲಿ”
“ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು. ಅದೇ ಆ ಆಜ್ಞೆ. ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ.”—ಯೋಹಾನ 13:34, 35.
ಈ ಮಾತಿನ ಅರ್ಥ: ಯೇಸು ತನ್ನ ಶಿಷ್ಯರನ್ನ ತುಂಬ ಪ್ರೀತಿಸಿದನು. ಅದೇ ತರ ಶಿಷ್ಯರು ಎಲ್ಲರನ್ನ ಪ್ರೀತಿಸಬೇಕು ಅಂತ ಹೇಳಿದನು. ಹಾಗಾದ್ರೆ ಯೇಸು ಹೇಗೆ ತನ್ನ ಪ್ರೀತಿಯನ್ನು ತೋರಿಸಿದನು? ಆಗಿನ ಕಾಲದ ಜನರು ಬೇರೆ ದೇಶದವರಿಗೆ, ಸ್ತ್ರೀಯರಿಗೆ ಮರ್ಯಾದೆ ಕೊಡುತ್ತಿರಲಿಲ್ಲ. ಆದರೆ ಯೇಸು ಅವರನ್ನೆಲ್ಲ ಪ್ರೀತಿಸಿದನು. (ಯೋಹಾನ 4:7-10) ಯೇಸು ಜನರನ್ನ ಪ್ರೀತಿಸಿದ್ರಿಂದ ಅವರಿಗೆ ತನ್ನ ಸಮಯ, ಶಕ್ತಿಯನ್ನ ಕೊಟ್ಟು ಸಹಾಯ ಮಾಡಿದನು. (ಮಾರ್ಕ 6:30-34) ಅಷ್ಟೇ ಅಲ್ಲ “ನಾನು ಒಳ್ಳೇ ಕುರುಬ. ಒಳ್ಳೇ ಕುರುಬ ಕುರಿಗಳಿಗೋಸ್ಕರ ಪ್ರಾಣ ಕೊಡ್ತಾನೆ” ಅಂತ ಹೇಳಿದನು. ಈ ರೀತಿ ಪ್ರೀತಿಯನ್ನ ಯಾರೂ ತೋರಿಸೋಕೆ ಸಾಧ್ಯನೇ ಇರ್ತಿರಲಿಲ್ಲ.—ಯೋಹಾನ 10:11.
ಒಂದನೇ ಶತಮಾನದ ಕ್ರೈಸ್ತರು ಹೇಗೆ ಪ್ರೀತಿ ತೋರಿಸಿದರು: ಅವರು ಒಬ್ಬರನ್ನೊಬ್ಬರು “ಸಹೋದರ” ಅಥವಾ “ಸಹೋದರಿ” ಅಂತ ಕರೆದರು. (ಫಿಲೆಮೋನ 1, 2) ಶಿಷ್ಯರಿಗೆ “ಯೆಹೂದ್ಯ ಗ್ರೀಕ ಅನ್ನೋ ಭೇದಭಾವ ಇಲ್ಲ. ಯಾಕಂದ್ರೆ ನಮ್ಮೆಲ್ಲರಿಗೂ ಒಬ್ಬನೇ ಒಡೆಯ” ಅಂತ ಅವರು ನಂಬುತ್ತಿದ್ದರು. ಹಾಗಾಗಿ ಎಲ್ಲ ಜನಾಂಗದವರನ್ನ ತಮ್ಮ ಸಭೆಗೆ ಸೇರಿಸಿಕೊಳ್ಳುತ್ತಿದ್ದರು. (ರೋಮನ್ನರಿಗೆ 10:11, 12) ಕ್ರಿಸ್ತಶಕ 33ರ ನಂತರ ಯೆರೂಸಲೇಮಿನಲ್ಲಿದ್ದ ಶಿಷ್ಯರು “ತಮ್ಮ ಜಮೀನು, ಆಸ್ತಿಪಾಸ್ತಿ ಮಾರಿ ಬಂದ ಹಣವನ್ನ ಎಲ್ರಿಗೂ ಅವರವ್ರ ಅಗತ್ಯಕ್ಕೆ ತಕ್ಕಂತೆ ಹಂಚ್ಕೊಡ್ತಾ ಇದ್ರು.” ಹೊಸದಾಗಿ ಶಿಷ್ಯರಾದವರು ಯೆರೂಸಲೇಮಿನಲ್ಲೇ ಇದ್ದು ‘ಅಪೊಸ್ತಲರು ಕಲಿಸ್ತಿದ್ದ ವಿಷ್ಯಗಳಿಗೆ ಅವರು ಯಾವಾಗ್ಲೂ ಚೆನ್ನಾಗಿ ಗಮನಕೊಡಲಿ’ ಅಂತ ಅವರು ಹೀಗೆ ಮಾಡುತ್ತಿದ್ದರು. (ಅಪೊಸ್ತಲರ ಕಾರ್ಯ 2:41-45) ಅವರು ಹೀಗೆ ಮಾಡೋಕೆ ಕಾರಣ ಏನು? ಅಪೊಸ್ತಲರು ಸತ್ತು ಸುಮಾರು 200 ವರ್ಷಗಳ ನಂತರ ಕ್ರೈಸ್ತರ ಬಗ್ಗೆ ಜನರಿಗಿದ್ದ ಅಭಿಪ್ರಾಯದ ಬಗ್ಗೆ ಇತಿಹಾಸಗಾರನಾದ ಟರ್ಟಲಿಯನ್ ಹೀಗೆ ಹೇಳ್ತಾನೆ: “ಕ್ರೈಸ್ತರು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತಾರಂದ್ರೆ . . . ಅವರು ಒಬ್ಬರು ಇನ್ನೊಬ್ಬರಿಗೋಸ್ಕರ ಪ್ರಾಣ ಕೊಡಕ್ಕೂ ರೆಡಿ ಇದ್ದರು.”
ಇವತ್ತು ಒಬ್ಬರನ್ನೊಬ್ಬರು ಯಾರು ಪ್ರೀತಿಸುತ್ತಿದ್ದಾರೆ? ದ ಹಿಸ್ಟರಿ ಆಫ್ ದ ಡಿಕ್ಲೈನ್ ಆ್ಯಂಡ್ ಫಾಲ್ ಆಫ್ ದ ರೋಮನ್ ಎಂಪೈರ್ (1837) ಅನ್ನೋ ಪುಸ್ತಕ ಹೀಗೆ ಹೇಳುತ್ತೆ: ಅನೇಕ ಶತಮಾನಗಳಿಂದ ತಾವು ಕ್ರೈಸ್ತರು ಅಂತ ಹೇಳಿಕೊಂಡವರೇ, “ಒಬ್ಬರಿಗೊಬ್ಬರು ತುಂಬ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ಬೇರೆ ಜನಾಂಗದಿಂದ ಅವರಿಗೆ ಆಗೋ ಸಮಸ್ಯೆಗಳಿಗಿಂತ ಇವರ ಮಧ್ಯಾನೇ ಹೊಡೆದಾಟಗಳು ಜಾಸ್ತಿ.” ಇತ್ತೀಚಿಗೆ ಅಮೆರಿಕದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಅನೇಕ ಜಾತಿಯ ಜನರು ಬೇರೆ ಜಾತಿಯ ಜನರನ್ನ ತುಂಬ ಕೀಳಾಗಿ ನೋಡುತ್ತಾರೆ ಅಥವಾ ಭೇದಭಾವ ಮಾಡುತ್ತಾರೆ. ತಮ್ಮದೇ ಜಾತಿಯ ಜನರು ಬೇರೆ ದೇಶದಲ್ಲಿದ್ರೆ ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಅಥವಾ ಕಷ್ಟಗಳಿದ್ರೆ ಅವರಿಗೆ ಯಾವ ಸಹಾಯನೂ ಮಾಡುತ್ತಿರಲಿಲ್ಲ.
2004 ಫ್ಲಾರಿಡಾದಲ್ಲಿ ಎರಡು ತಿಂಗಳಲ್ಲೇ ನಾಲ್ಕು ಚಂಡಮಾರುತಗಳು ಬಂದವು. ಆಗ ಫ್ಲಾರಿಡಾದ ಎಮರ್ಜೆನ್ಸಿ ಆಪರೇಷನ್ಸ್ ಕಮಿಟಿಯ ಅಧಿಕಾರಿಯೊಬ್ಬರು, ವಿಪತ್ತು ಪರಿಹಾರ ಕೆಲಸಕ್ಕಾಗಿ ಬಳಸುತ್ತಿದ್ದ ವಸ್ತುಗಳೆಲ್ಲ ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿದೆಯಾ ಅಂತ ಪರೀಕ್ಷಿಸೋಕೆ ಬಂದರು. ಆಗ ಅವರು ಹೀಗೆ ಹೇಳ್ತಾರೆ: ಪರಿಹಾರಕ್ಕಾಗಿ ಕೊಡಲಾದ ವಸ್ತುಗಳನ್ನ ಬೇರೆಯವರಿಗಿಂತ ಯೆಹೋವನ ಸಾಕ್ಷಿಗಳು ವ್ಯವಸ್ಥಿತವಾದ ಮತ್ತು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಹಾಗಾಗಿ ಅವರು ಕೇಳುವ ಯಾವ ಅಗತ್ಯ ವಸ್ತುಗಳನ್ನು ಕೊಡಲಿಕ್ಕೂ ನಾನು ರೆಡಿ ಇದ್ದೀನಿ ಅಂದರು. 1997ರಲ್ಲಿ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ವಿಪತ್ತು ಸಂಭವಿಸಿತು. ಆಗ ಯೆಹೋವನ ಸಾಕ್ಷಿಗಳು ಅಲ್ಲಿರುವ ತಮ್ಮ ಸಹೋದರರಿಗೆ ಮತ್ತು ಬೇರೆಯವರಿಗೆ ಸಹಾಯ ಮಾಡಲಿಕ್ಕಾಗಿ ಔಷಧಿ, ಆಹಾರ ಮತ್ತು ಬಟ್ಟೆಗಳನ್ನ ಕೊಟ್ಟರು. ಯುರೋಪಿನಲ್ಲಿರುವ ತಮ್ಮ ಸಹೋದರರಿಗೆ ಅಗತ್ಯ ವಸ್ತುಗಳನ್ನ ಖರೀದಿಸಲಿಕ್ಕಾಗಿ ಯೆಹೋವನ ಸಾಕ್ಷಿಗಳು ಸುಮಾರು ಮೂರುವರೆ ಕೋಟಿ ಖರ್ಚು ಮಾಡಿದ್ದಾರೆ.
-
-
‘ನಾನು ನಿನ್ನ ಹೆಸ್ರನ್ನ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ’ಯೇಸು ಕ್ರಿಸ್ತನ ಬಗ್ಗೆ ತಿಳಿದುಕೊಳ್ಳೋಕೆ ನಿಮಗೆ ಇಷ್ಟ ಇದೆಯಾ?
-
-
‘ನಾನು ನಿನ್ನ ಹೆಸ್ರನ್ನ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ’
“ಲೋಕದಲ್ಲಿ ನೀನು ಕೊಟ್ಟ ಶಿಷ್ಯರಿಗೆ ನಿನ್ನ ಹೆಸ್ರನ್ನ ಚೆನ್ನಾಗಿ ಹೇಳಿಕೊಟ್ಟಿದ್ದೀನಿ. . . . ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ, ಇನ್ನೂ ಹೇಳ್ಕೊಡ್ತೀನಿ.”—ಯೋಹಾನ 17:6, 26.
ಈ ಮಾತಿನ ಅರ್ಥ: ಯೇಸು ಸೇವೆಯಲ್ಲಿ ದೇವರ ಹೆಸರನ್ನ ಬಳಸುವ ಮೂಲಕ ನಮಗೆ ದೇವರ ಹೆಸರನ್ನ ಹೇಳಿಕೊಟ್ಟನು. ಅಷ್ಟೇ ಅಲ್ಲ ದೇವರ ವಾಕ್ಯವನ್ನ ಓದಿದಾಗೆಲ್ಲಾ ದೇವರ ಹೆಸರನ್ನ ಉಚ್ಛರಿಸಿದನು. (ಲೂಕ 4:16-21) ಅವನು ತನ್ನ ಶಿಷ್ಯರಿಗೆ ಹೀಗೆ ಪ್ರಾರ್ಥಿಸೋಕೆ ಹೇಳಿಕೊಟ್ಟನು: “ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.”—ಲೂಕ 11:2.
ಒಂದನೇ ಶತಮಾನದ ಕ್ರೈಸ್ತರು ದೇವರ ಹೆಸರನ್ನ ಉಪಯೋಗಿಸಿದರು: ಅಪೊಸ್ತಲ ಪೇತ್ರ ಯೆರೂಸಲೇಮಿನಲ್ಲಿದ್ದ ದೊಡ್ಡವರಿಗೆ, ದೇವರು ಯೆಹೂದ್ಯರಲ್ಲದ ಜನರನ್ನ ‘ತನ್ನ ಹೆಸರಿಗಾಗಿ ಆರಿಸ್ಕೊಂಡಿದ್ದಾನೆ’ ಅಂತ ಹೇಳಿದ. (ಅಪೊಸ್ತಲರ ಕಾರ್ಯ 15:14) “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ” ಅಂತ ಅಪೊಸ್ತಲರು ಮತ್ತು ಇನ್ನಿತರರು ಸಾರಿದ್ರು. (ಅಪೊಸ್ತಲರ ಕಾರ್ಯ 2:21; ರೋಮನ್ನರಿಗೆ 10:13) ಅವರು ದೇವರ ಹೆಸರನ್ನ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲೂ ಬಳಸಿದರು. ಯೆಹೂದಿ ನಿಯಮಗಳಿರುವ ದ ಟೊಸೆಫ್ಟ ಅನ್ನೋ ಪುಸ್ತಕವನ್ನ ಕ್ರಿಸ್ತಶಕ ಸುಮಾರು 300ರಷ್ಟಕ್ಕೆ ಬರೆದು ಮುಗಿಸಲಾಯಿತು. ಅದರಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವನ್ನ ವಿರೋಧಿಗಳು ಸುಟ್ಟುಹಾಕಿದ್ದರ ಬಗ್ಗೆ ಇದೆ. ಯೆಹೂದಿ ನಿಯಮಗಳಿರೋ ಒಂದು ಹಳೇ ಪುಸ್ತಕ ಹೇಳುವ ಪ್ರಕಾರ, ‘ಕ್ರೈಸ್ತರನ್ನ ವಿರೋಧಿಸುತ್ತಿದ್ದವರು ಕ್ರೈಸ್ತರು ಬರೆದ ಪುಸ್ತಕಗಳನ್ನ ಅಂದರೆ ಇವಾಂಜೆಲಿಸ್ಟ್ ಮತ್ತು ಮಿನಿಮ್ [ಯೆಹೂದ್ಯ ಕ್ರೈಸ್ತರ ಗ್ರಂಥ ಆಗಿರಬಹುದು] ಪುಸ್ತಕಗಳನ್ನ ಸುಟ್ಟು ಹಾಕಿಬಿಟ್ಟರು. ಅದರಲ್ಲಿ ದೇವರ ಹೆಸರು ಇದ್ದರೂ ಅದನ್ನ ನಾಶ ಮಾಡಿದರು. ಅದರಲ್ಲಿ ಕೆಲವು ಪುಸ್ತಕಗಳು ಯಾವುದಂದ್ರೆ ಮತ್ತಾಯ, ಮಾರ್ಕ, ಲೂಕ, ಯೋಹಾನ.’
ಈಗ ಯಾರು ದೇವರ ಹೆಸರನ್ನ ಬಳಸುತ್ತಿದ್ದಾರೆ? ಅಮೆರಿಕದ ನ್ಯಾಷನಲ್ ಕೌನ್ಸಿಲ್ ಆಫ್ ದ ಚರ್ಚಸ್ ಆಫ್ ಕ್ರೈಸ್ಟ್ ಅವರ ದ ರಿವೈಸ್ಡ್ ಸ್ಟಾಂಡರ್ಡ್ ವರ್ಷನ್ ಆಫ್ ದ ಬೈಬಲ್‌ನ ಮುನ್ನುಡಿ ಹೀಗೆ ಹೇಳುತ್ತೆ: ‘ಸತ್ಯ ದೇವರು ಒಬ್ಬನೇ. ಆದ್ದರಿಂದ ಅವನಿಗೂ ಬೇರೆ ದೇವರುಗಳಿಗೂ ಇರೋ ವ್ಯತ್ಯಾಸವನ್ನ ತಿಳಿಸಲಿಕ್ಕಾಗಿ ಚರ್ಚಿನಲ್ಲಿರೋರು ದೇವರಿಗೆ ಯಾವ ಹೆಸರನ್ನ ಬಳಸೋದೂ ತಪ್ಪು. ಹಾಗಾಗಿ ಯೇಸು ಹುಟ್ಟೋಕು ಎಷ್ಟೋ ವರ್ಷಗಳ ಮುಂಚಿನಿಂದಾನೇ ಯೆಹೂದಿಗಳು ದೇವರ ಹೆಸರನ್ನ ಬಳಸೋದನ್ನ ನಿಲ್ಲಿಸಿಬಿಟ್ಟಿದ್ದರು.’ ಅದಕ್ಕೆ ಅವರು ದೇವರ ಹೆಸರು ಇರುವ ಕಡೆಯೆಲ್ಲಾ “ಕರ್ತನು” ಅಂತ ಹಾಕಿದ್ದಾರೆ. ಇತ್ತೀಚಿಗೆ ವ್ಯಾಟಿಕನ್, ಬಿಷಪ್‌ಗಳಿಗೆ, ‘ಪ್ರಾರ್ಥನೆಗಳಲ್ಲಿ ಮತ್ತು ಹಾಡುಗಳಲ್ಲಿ ಯೆಹೋವa ಅನ್ನೋ ದೇವರ ಹೆಸರನ್ನ ಉಪಯೋಗಿಸೋದಾಗಲಿ ಉಚ್ಚರಿಸೋದಾಗಲಿ ಮಾಡಬಾರದು ಅಂತ ಹೇಳಿತು.’
ಇವತ್ತು ಯಾರು ದೇವರ ಹೆಸರನ್ನ ಉಪಯೋಗಿಸುತ್ತಿದ್ದಾರೆ? ಕಿರ್ಗಿಸ್ತಾನದಲ್ಲಿರುವ ಸರ್ಗೆ ಅನ್ನೋ ಹುಡುಗ ಒಂದು ಫಿಲಂ ನೋಡಿದ. ಅದರಲ್ಲಿ ದೇವರ ಹೆಸರು ಯೆಹೋವ ಅಂತ ಕೇಳಿಸಿಕೊಂಡ. ಸುಮಾರು ಹತ್ತು ವರ್ಷಗಳ ತನಕ ಅವನು ದೇವರ ಈ ಹೆಸರನ್ನ ಬೇರೆಲ್ಲೂ ಕೇಳಿಸಿಕೊಂಡಿಲ್ಲ. ಆಮೇಲೆ ಅವನು ಅಮೇರಿಕಕ್ಕೆ ಹೋದ. ಅಲ್ಲಿ ಅವನಿಗೆ ಯೆಹೋವನ ಸಾಕ್ಷಿಗಳ ಭೇಟಿಯಾಯಿತು. ಸರ್ಗೆಗೆ ಅವರು ಬೈಬಲಿನಿಂದ ದೇವರ ಹೆಸರನ್ನು ತೋರಿಸಿಕೊಟ್ಟರು. ಯೆಹೋವ ಅನ್ನೋ ಹೆಸರನ್ನ ಉಪಯೋಗಿಸುವ ಒಂದು ಗುಂಪಿನ ಜನರಿದ್ದಾರೆ ಅಂತ ಗೊತ್ತಾದಾಗ ಸರ್ಗೆಗೆ ತುಂಬ ಖುಷಿಯಾಯಿತು. ವೆಬ್ಟರ್ಸ್ ಥರ್ಡ್ ನ್ಯೂ ಇಂಟರ್‌ನ್ಯಾಷನಲ್ ಡಿಕ್ಷನರಿಯಲ್ಲಿ “ಜೆಹೋವ ಗೋಡ್” ಅನ್ನೋದಕ್ಕೆ ಈ ಅರ್ಥ ಇದೆ: “ಯೆಹೋವನ ಸಾಕ್ಷಿಗಳು ಆರಾಧಿಸುವ ಒಬ್ಬನೇ ಒಬ್ಬ ಸರ್ವೋನ್ನತ ದೇವರು.”
[ಪಾದಟಿಪ್ಪಣಿ]
a ಇಂಗ್ಲಿಷ್‌ನಲ್ಲಿ ದೇವರ ಹೆಸರನ್ನ “ಜೆಹೋವ” ಅಂತ ಹೇಳುತ್ತಾರೆ.
-
-
“ದೇವರ ಆಳ್ವಿಕೆಯ ಈ ಸಿಹಿಸುದ್ದಿ ಸಾರಲಾಗುತ್ತೆ”ಯೇಸು ಕ್ರಿಸ್ತನ ಬಗ್ಗೆ ತಿಳಿದುಕೊಳ್ಳೋಕೆ ನಿಮಗೆ ಇಷ್ಟ ಇದೆಯಾ?
-
-
“ದೇವರ ಆಳ್ವಿಕೆಯ ಈ ಸಿಹಿಸುದ್ದಿ ಸಾರಲಾಗುತ್ತೆ”
“ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ. ಆಮೇಲೆ ಅಂತ್ಯ ಬರುತ್ತೆ.”—ಮತ್ತಾಯ 24:14.
ಈ ಮಾತಿನ ಅರ್ಥ: “ಯೇಸು ಪಟ್ಟಣದಿಂದ ಪಟ್ಟಣಕ್ಕೆ, ಹಳ್ಳಿಯಿಂದ ಹಳ್ಳಿಗೆ ಹೋಗಿ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದನು” ಅಂತ ಲೂಕ ಬರೆದನು. (ಲೂಕ 8:1) “ನಾನು ದೇವರ ಆಳ್ವಿಕೆಯ ಸಿಹಿಸುದ್ದಿನ ಬೇರೆ ಊರುಗಳಿಗೂ ಸಾರಬೇಕಿದೆ. ನನ್ನನ್ನ ಕಳಿಸಿರೋದು ಇದಕ್ಕೇ” ಅಂತ ಯೇಸು ಹೇಳಿದನು. (ಲೂಕ 4:43) ಅವನು ತನ್ನ ಶಿಷ್ಯರನ್ನ ಸುವಾರ್ತೆ ಸಾರೋಕೆ ಪಟ್ಟಣಗಳಿಗೆ ಮತ್ತು ಹಳ್ಳಿಗಳಿಗೆ ಕಳಿಸಿದನು. “ನೀವು . . . ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂತ ಅವರಿಗೆ ಆಜ್ಞೆ ಕೊಟ್ಟನು.—ಅಪೊಸ್ತಲರ ಕಾರ್ಯ 1:8; ಲೂಕ 10:1.
ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಸಿಹಿಸುದ್ದಿಯನ್ನ ಸಾರುತ್ತಿದ್ದರು: ಯೇಸು ತಮಗೆ ಕೊಟ್ಟ ಕೆಲಸವನ್ನ ಆತನ ಶಿಷ್ಯರು ಹುರುಪಿನಿಂದ ಮಾಡುತ್ತಾ ಇದ್ದರು. “ಅವರು ಪ್ರತಿದಿನ ದೇವಾಲಯದಲ್ಲಿ, ಮನೆಮನೆಗೆ ಹೋಗಿ ಜನ್ರಿಗೆ ಕಲಿಸ್ತಾ ಇದ್ರು. ಕ್ರಿಸ್ತನ ಬಗ್ಗೆ ಅಂದ್ರೆ ಯೇಸು ಬಗ್ಗೆ ಸಿಹಿಸುದ್ದಿಯನ್ನ ಹೇಳ್ತಾ ಇದ್ರು.” (ಅಪೊಸ್ತಲರ ಕಾರ್ಯ 5:42) ಸಿಹಿಸುದ್ದಿಯನ್ನ ಸಭೆಯಲ್ಲಿರೋ ವಿಶೇಷವಾದ ಗುಂಪಿನವರು ಮಾತ್ರ ಅಲ್ಲ ಎಲ್ಲರೂ ಸಾರುತ್ತಾ ಇದ್ದರು. ಇತಿಹಾಸಗಾರನಾದ ನಿಯಾಂಡರ್ ಕ್ರೈಸ್ತರ ವಿರುದ್ಧ ಮೊದಲನೆ ಸಲ ಬರೆದ ಸೆಲ್ಸಸ್‌ನ ಬಗ್ಗೆ ಹೀಗೆ ಹೇಳ್ತಾನೆ: “ಹುರುಪಿನಿಂದ ಸುವಾರ್ತೆ ಸಾರಿದವರೆಲ್ಲಾ ಉಣ್ಣೆ ಕೆಲಸಗಾರರು, ಚಮ್ಮಾರರು, ಚರ್ಮದ ಕೆಲಸಗಾರರು, ವಿದ್ಯಾಭ್ಯಾಸ ಇಲ್ಲದವರು ಹಾಗೂ ಸಾಧಾರಣ ಜನರು ಅಂತ ಸೆಲ್ಸಸ್ ವ್ಯಂಗ್ಯವಾಗಿ ಮಾತಾಡುತ್ತಾನೆ.” ದ ಅರ್ಲಿ ಸೆಂಚುರಿಸ್ ಆಫ್ ದ ಚರ್ಚ್ ಅನ್ನೋ ಪುಸ್ತಕದಲ್ಲಿ ಜೀನ್ ಬರ್ನಾಡಿ ಹೀಗೆ ಹೇಳ್ತಾನೆ: “[ಕ್ರೈಸ್ತರು] ರಸ್ತೆಗಳಲ್ಲಿ, ಪಟ್ಟಣಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಮನೆಗಳಲ್ಲಿ ಸಿಗೋ ಎಲ್ಲ ಜನರಿಗೆ ಸಿಹಿಸುದ್ದಿಯನ್ನ ಸಾರಬೇಕಿತ್ತು. ಜನ ಕೇಳಿ ಬಿಡಲಿ . . . ಅವರು ಇಡೀ ಭೂಮಿಯಲ್ಲಿ ಸಾರಬೇಕಾಗಿತ್ತು” ಅಂತ ಹೇಳ್ತಾನೆ.
ಇವತ್ತು ಯಾರು ಸಿಹಿಸುದ್ದಿಯನ್ನ ಸಾರುತ್ತಿದ್ದಾರೆ? “ಚರ್ಚಿನವರು ದೇವರ ವಾಕ್ಯದಲ್ಲಿರುವ ಸಿಹಿಸುದ್ದಿಯನ್ನ ಸಾರುತ್ತಿಲ್ಲ ಮತ್ತು ಕಲಿಸುತ್ತಿಲ್ಲ. ಹಾಗಾಗಿ ಇವತ್ತು ಜನರಿಗೆ ದೇವರ ಮೇಲೆ ಆಸಕ್ತಿನೇ ಇಲ್ಲ” ಅಂತ ಆಂಗ್ಲಿಕನ್ ಪಾದ್ರಿ ಡೇವಿಡ್ ವ್ಯಾಟ್ಸನ್ ಹೇಳ್ತಾನೆ. ಹೋಸೆ ಲೂಯಿಸ್ ಪೆರೇಜ್ ಗ್ವಾಡೆಲೋಪ್ ಬರೆದ ವೈ ಆರ್ ದ ಕ್ಯಾಥೊಲಿಕ್ಸ್ ಲೀವಿಂಗ್? ಅನ್ನೋ ಪುಸ್ತಕದಲ್ಲಿ, ಇವಾಂಜೆಲಿಕಲ್ಸ್, ಅಡ್ವೆಂಟಿಸ್ಟ್ ಮತ್ತು ಇತರರು “ಮನೆಮನೆ ಸೇವೆನ ಮಾಡೋದಿಲ್ಲ.” ಆದರೆ ಯೆಹೋವನ ಸಾಕ್ಷಿಗಳು “ತಪ್ಪದೆ ಮನೆಮನೆ ಸೇವೆಯನ್ನ ಮಾಡ್ತಾರೆ” ಅಂತ ಹೇಳ್ತಾನೆ.
ಕ್ಯಾಟೊ ಸುಪ್ರೀಂ ಕೋರ್ಟ್ ರಿವ್ಯೂ, 2001-2002 ಅನ್ನೋ ಪ್ರಕಾಶನದಲ್ಲಿ ಜೊನಾಥನ್ ಟರ್ಲಿ ಹೀಗೆ ಹೇಳ್ತಾನೆ: ‘ಯೆಹೋವನ ಸಾಕ್ಷಿಗಳು ಅಂತ ಕೇಳಿದ ಕೂಡಲೆ ಹೆಚ್ಚಿನವರಿಗೆ ತಾವು ಬ್ಯುಸಿ ಆಗಿರೋ ಸಮಯದಲ್ಲೇ ಬಂದು ಬೈಬಲ್ ಬಗ್ಗೆ ಸಾರೋಕೆ ಬರುವವರು ಅಂತ ನೆನಸುತ್ತಾರೆ. ಸಿಹಿಸುದ್ದಿ ಸಾರೋದು ತಮ್ಮ ನಂಬಿಕೆಯನ್ನ ವ್ಯಕ್ತಪಡಿಸೋ ಕೆಲಸ ಅಂತ ಮಾತ್ರ ಅಲ್ಲ. ಅದು ಜೀವ ಉಳಿಸುವ ಪ್ರಾಮುಖ್ಯ ಸೇವೆ ಅಂತ ಅವರು ನಂಬುತ್ತಾರೆ.’
[ಚೌಕ]
ನಿಜ ಕ್ರೈಸ್ತರು ಯಾರು ಅಂತ ಕಂಡುಹಿಡಿದ್ರಾ?
ಇಲ್ಲಿವರೆಗೂ ನಾವು ನಿಜ ಕ್ರೈಸ್ತರ ಗುರುತುಗಳೇನು ಅಂತ ನೋಡಿದ್ದೀವಿ. ಹಾಗಾದ್ರೆ ಅವರು ಯಾರು ಅಂತ ನಿಮಗೀಗ ಗೊತ್ತಾಯ್ತಾ? ಇವತ್ತು ಸಾವಿರಾರು ಪಂಗಡಗಳು ತಾವು ಕ್ರೈಸ್ತರು ಅಂತ ಹೇಳಿಕೊಳ್ಳುತ್ತವೆ. ಆದ್ರೆ ಯೇಸು ತನ್ನ ಶಿಷ್ಯರಿಗೆ ಏನು ಹೇಳಿದ ಅಂತ ನೆನಪಿಟ್ಟುಕೊಳ್ಳಿ: “ನನ್ನನ್ನ ‘ಸ್ವಾಮಿ, ಸ್ವಾಮಿ’ ಅಂತ ಹೇಳೋರೆಲ್ಲ ದೇವರ ಆಳ್ವಿಕೆಯಲ್ಲಿ ಇರ್ತಾರಂತ ಅಂದ್ಕೊಬೇಡಿ. ಸ್ವರ್ಗದಲ್ಲಿರೋ ನನ್ನ ತಂದೆ ಇಷ್ಟದ ಪ್ರಕಾರ ಯಾರು ಮಾಡ್ತಾರೋ ಅವ್ರೇ ಇರ್ತಾರೆ.” (ಮತ್ತಾಯ 7:21) ಯೆಹೋವ ದೇವರ ಇಷ್ಟವನ್ನ ಯಾರು ಮಾಡ್ತಾರೆ ಅಂತ ತಿಳಿದುಕೊಂಡು ಅವರ ಜೊತೆ ಸಹವಾಸ ಮಾಡೋದಾದ್ರೆ ಆತನ ಆಳ್ವಿಕೆಯಲ್ಲಿ ನೀವು ಶಾಶ್ವತ ಜೀವವನ್ನು ಆನಂದಿಸುತ್ತೀರ. ದೇವರ ಆಳ್ವಿಕೆಯ ಬಗ್ಗೆ ಮತ್ತು ಅದರಿಂದ ಸಿಗೋ ಆಶೀರ್ವಾದಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಯೆಹೋವನ ಸಾಕ್ಷಿಗಳ ಹತ್ತಿರ ಕೇಳಿ.—ಲೂಕ 4:43.
-