ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಸಮಸ್ಯೆಗಳ ಮಧ್ಯೆ ನಿರೀಕ್ಷೆ
    ಕಾವಲಿನಬುರುಜು: ಆರು ಬೈಬಲ್‌ ಭವಿಷ್ಯವಾಣಿಗಳ ನೆರವೇರಿಕೆಯನ್ನ ನೀವು ಕಣ್ಣಾರೆ ನೋಡುತ್ತಿದ್ದೀರಿ
    • ಸಮಸ್ಯೆಗಳ ಮಧ್ಯೆ ನಿರೀಕ್ಷೆ

      “ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ.”—2 ತಿಮೊತಿ 3:1.

      ಕೆಳಗಡೆ ಕೊಟ್ಟಿರುವ ದುಃಖಕರ ಘಟನೆಯಲ್ಲಿ ಯಾವುದನ್ನಾದರೂ ನೀವು ಕೇಳಿದ್ದೀರಾ? ಅಥವಾ ಕಣ್ಣಾರೆ ನೋಡಿದ್ದೀರಾ?

      ● ಮಾರಣಾಂತಿಕ ರೋಗ ಸಾವಿರಾರು ಜನರ ಜೀವವನ್ನು ಬಲಿ ತಗೊಂಡಿದೆ.

      ● ಬರಗಾಲದಿಂದ ನೂರಾರು ಜನ ಬಾಧಿತರಾಗಿ ಹೊಟ್ಟೆಗಿಲ್ಲದೆ ಸಾವನ್ನಪ್ಪಿದ್ದಾರೆ.

      ● ಭೂಕಂಪದಿಂದ ಸಾವಿರಾರು ಜನ ಸತ್ತಿದ್ದಾರೆ ಮತ್ತು ಮನೆ ಕಳೆದುಕೊಂಡು ಪರದಾಡುತ್ತಿದ್ದಾರೆ.

      ಇಂಥ ಎಷ್ಟೋ ಕಷ್ಟಗಳಿಂದ ಜನ ಎಷ್ಟು ನರಳುತ್ತಿದ್ದಾರೆ ಅನ್ನೋದರ ಬಗ್ಗೆ ಮುಂದಿನ ಲೇಖನಗಳಲ್ಲಿ ನೋಡಿ. ಅಲ್ಲದೆ, ಈ ರೀತಿಯ ಘಟನೆಗಳು “ಕೊನೇ ದಿನಗಳಲ್ಲಿ” ನಡೆಯುತ್ತೆ ಅಂತ ಬೈಬಲ್‌ ಸಾವಿರಾರು ವರ್ಷಗಳ ಹಿಂದೆನೇ ಹೇಳಿರುವುದನ್ನು ನೀವು ಗಮನಿಸಬಹುದು.

      ಈ ಲೇಖನಗಳ ಉದ್ದೇಶ ನೀವು ಕಷ್ಟ ತುಂಬಿರೋ ಲೋಕದಲ್ಲಿ ಜೀವಿಸುತ್ತಿದ್ದೀರ ಅಂತ ತೋರಿಸಲಿಕ್ಕಿಲ್ಲ. ಏಕೆಂದ್ರೆ ನಿಮಗೆ ಅದು ಗೊತ್ತಿದೆ, ನೀವೇ ಆ ಕಷ್ಟಗಳನ್ನು ಅನುಭವಿಸುತ್ತಿದ್ದೀರ. ಈ ಲೇಖನಗಳು ಬೈಬಲಿನ ಆರು ಭವಿಷ್ಯವಾಣಿಗಳು ಹೇಗೆ ನಮ್ಮ ಕಣ್ಮುಂದೆ ನಿಜ ಆಗ್ತಿದೆ ಅನ್ನೋದನ್ನ ತೋರಿಸುತ್ತವೆ. ಈ ಪುರಾವೆಗಳಿಗೆ ಸಾಮಾನ್ಯವಾಗಿ ಯಾವ ವಿರೋಧಗಳಿವೆ ಅನ್ನೋದನ್ನ ಕೂಡ ಈ ಲೇಖನಗಳು ಚರ್ಚಿಸುತ್ತವೆ. ‘ಕೊನೇ ದಿನಗಳಿಗೆ’ ಒಂದು ಕೊನೆ ಇದೆ, ಮುಂದೆ ಒಳ್ಳೇ ಕಾಲ ಬರುತ್ತದೆ ಅಂತನೂ ತೋರಿಸುತ್ತೆ.

  • ಭವಿಷ್ಯವಾಣಿ 1. ಭೂಕಂಪಗಳು
    ಕಾವಲಿನಬುರುಜು: ಆರು ಬೈಬಲ್‌ ಭವಿಷ್ಯವಾಣಿಗಳ ನೆರವೇರಿಕೆಯನ್ನ ನೀವು ಕಣ್ಣಾರೆ ನೋಡುತ್ತಿದ್ದೀರಿ
    • ಭವಿಷ್ಯವಾಣಿ 1. ಭೂಕಂಪಗಳು

      “ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಭೂಕಂಪ ಆಗುತ್ತೆ.”—ಲೂಕ 21:11.

      ● ಹೈಟಿಯಲ್ಲಿ ನಡೆದ ಒಂದು ಭೂಕಂಪದಲ್ಲಿ ನೂರಾರು ಮನೆಗಳು ಕುಸಿದು ಬಿದ್ದವು. ಅದರ ಕೆಳಗಿಂದ ಒಂದು ಹೆಣ್ಣುಮಗುವಿನ ಅಳು ಅಲ್ಲಿ ಬಂದಿದ್ದ ನ್ಯೂಸ್‌ ರಿಪೋಟರ್ಸ್‌ಗೆ ಕೇಳಿಬಂತು. ಆ ಮಗುಗೆ ಬರೀ 16 ತಿಂಗಳು. ಹೇಗೋ ಆ ಮಗುನ ಕಾಪಾಡಿದರು, ಆದ್ರೆ ಅವಳ ಅಪ್ಪಅಮ್ಮ ಉಳಿಲಿಲ್ಲ.

      ನಿಜ ಏನು? ಜನವರಿ 2010 ರಲ್ಲಿ ಹೈಟಿಯಲ್ಲಿ ನಡೆದ ಆ ಭೂಕಂಪದ ತೀವ್ರತೆ 7.0 ರಷ್ಟಿತ್ತು. ಆ ಭಾರೀ ಭೂಕಂಪದಿಂದ 3 ಲಕ್ಷಕ್ಕಿಂತ ಹೆಚ್ಚು ಜನ ಸತ್ತು ಹೋದ್ರು. ಕಣ್ಣು ಮುಚ್ಚಿ ತೆರೆಯೋದ್ರೊಳಗೆ 13 ಲಕ್ಷ ಜನ ಮನೆ ಕಳ್ಕೊಂಡು ಬೀದಿಗೆ ಬಂದರು. ಈ ತರ ಎಷ್ಟೋ ದೊಡ್ಡದೊಡ್ಡ ಭೂಕಂಪ ಆಗಿದೆ. ಉದಾಹರಣೆಗೆ 2009 ಏಪ್ರಿಲ್‌ ಇಂದ 2010 ಏಪ್ರಿಲ್‌ ಒಳಗೆ ಸುಮಾರು 18 ದೊಡ್ಡ ಭೂಕಂಪಗಳು ಲೋಕದ ಬೇರೆಬೇರೆ ಜಾಗದಲ್ಲಿ ಆಗಿವೆ.

      ತಪ್ಪು ಅಭಿಪ್ರಾಯಗಳು: ಆಗಿನ ಕಾಲದಲ್ಲಿ ನ್ಯೂಸ್‌ ಪೇಪರ್‌, ಟೀವಿ ಇವೆಲ್ಲ ಇರಲಿಲ್ಲ ಅದಕ್ಕೆ ಭೂಕಂಪ ಆದ್ರೂ ಆಗದೇ ಇದ್ದರೂ ನಮಗೆ ಗೊತ್ತಾಗ್ತಾ ಇರಲಿಲ್ಲ. ತಂತ್ರಜ್ಞಾನ ಈಗ ತುಂಬ ಮುಂದುವರೆದಿದೆ. ಅದಕ್ಕೆ ಭೂಕಂಪ ಆದಾಗೆಲ್ಲ ನಮಗೆ ಗೊತ್ತಾಗ್ತಾ ಇದೆ.

      ಈ ಅಭಿಪ್ರಾಯ ಸರಿನಾ? ಕೊನೇ ದಿನಗಳಲ್ಲಿ ಇಷ್ಟೇ ಭೂಕಂಪಗಳು ಆಗುತ್ತೆ ಅಂತ ಬೈಬಲ್‌ ಹೇಳಲ್ಲ ಅನ್ನೋದನ್ನ ನಾವು ಗಮನಿಸಬೇಕು. ಆದ್ರೆ ‘ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಮಹಾ ಭೂಕಂಪಗಳು ಆಗುತ್ತೆ’ ಅಂತ ಬೈಬಲ್‌ ಹೇಳುತ್ತೆ. ಕೊನೇ ದಿನಗಳಲ್ಲಿ ನಡೆಯೋ ಎಷ್ಟೋ ವಿಷಯಗಳಲ್ಲಿ ಇದೂ ಒಂದು.—ಮಾರ್ಕ 13:8; ಲೂಕ 21:11.

      ನಿಮ್ಮ ಅಭಿಪ್ರಾಯ ಏನು? ಬೈಬಲ್‌ ತಿಳಿಸಿರುವ ಈ ಮಹಾಭೂಕಂಪಗಳನ್ನ ನೀವು ಈಗ ನೋಡ್ತಾ ಇದ್ದೀರಾ?

      ಭೂಕಂಪಗಳು ಮಾತ್ರ ನಾವು ಕೊನೇ ದಿನಗಳಲ್ಲಿ ಇದ್ದೀವಿ ಅನ್ನೋದಕ್ಕೆ ಸೂಚನೆ ಅಲ್ಲ. ನೆರವೇರುತ್ತಾ ಇರುವ ಭವಿಷ್ಯವಾಣಿಗಳಲ್ಲಿ ಇದು ಒಂದಷ್ಟೇ. ಎರಡನೇ ಭವಿಷ್ಯವಾಣಿ ಯಾವುದು ಅಂತ ಈಗ ನೋಡೋಣ.

      [ಪುಟ 4ರಲ್ಲಿರುವ ಸಂಕ್ಷಿಪ್ತ ವಿವರ]

      “ನಾವು (ಭೂ ಭೌತಶಾಸ್ತ್ರಜ್ಞರು) ಇದನ್ನ ಮಹಾಭೂಕಂಪಗಳು ಅಂತ ಕರಿತೀವಿ. ಆದ್ರೆ ಎಲ್ರೂ ಇದನ್ನ ಭಯಾನಕ ಅಂತ ಕರಿತಾರೆ.”—ಕೆನ್‌ ಹುಡ್ನಟ್‌, ಯು.ಎಸ್‌ ಜಿಯಾಲಜಿಕಲ್‌ ಸರ್ವೆ.

      [ಪುಟ 4ರಲ್ಲಿರುವ ಚಿತ್ರ ಕೃಪೆ]

      © William Daniels/Panos Pictures

  • ಭವಿಷ್ಯವಾಣಿ 2. ಬರಗಾಲ
    ಕಾವಲಿನಬುರುಜು: ಆರು ಬೈಬಲ್‌ ಭವಿಷ್ಯವಾಣಿಗಳ ನೆರವೇರಿಕೆಯನ್ನ ನೀವು ಕಣ್ಣಾರೆ ನೋಡುತ್ತಿದ್ದೀರಿ
    • ಭವಿಷ್ಯವಾಣಿ 2. ಬರಗಾಲ

      “ಆಹಾರದ ಕೊರತೆ ಇರುತ್ತೆ.”—ಮಾರ್ಕ 13:8.

      ● ನೈಗರನಲ್ಲಿರೋ ಕ್ವಾರಟಾರ್ಜಿ ಅನ್ನೋ ಹಳ್ಳಿಗೆ ಒಬ್ಬ ವ್ಯಕ್ತಿ ಆಶ್ರಯ ಕೇಳ್ಕೊಂಡು ಬಂದ. ಅವನು ಮಾತ್ರ ಅಲ್ಲ, ಅವನ ಕುಟುಂಬದವರು ಕೂಡ ಬರಗಾಲದಿಂದ ತಪ್ಪಿಸಿಕೊಳ್ಳೋಕೆ ಅದೇ ದೇಶಕ್ಕೆ ಬೇರೆಬೇರೆ ಸ್ಥಳಗಳಿಂದ ಬಂದ್ರು. ಹೀಗೆ ಆ ವ್ಯಕ್ತಿಯ ಬಂಧು-ಬಳಗ ಒಂದೇ ಕಡೆ ಇದ್ದರೂ ಆ ವ್ಯಕ್ತಿ ಆ ದೇಶದಲ್ಲಿ ಒಂಟಿಯಾಗಿದ್ದಾನೆ. ಯಾಕೆ? ಯಾಕಂದ್ರೆ “ಅವ್ರಿಗೆ ಊಟ ಕೊಡೋಕೆ ಅವನ ಕೈಯಲ್ಲಿ ಆಗ್ಲಿಲ್ಲ, ಅದಕ್ಕೆ ಅವನ ಮುಖನ ಅವ್ರಿಗೆ ತೋರಿಸೋಕೂ ಇಷ್ಟ ಇರಲಿಲ್ಲ” ಅಂತ ಆ ಹಳ್ಳಿಯ ಮುಖ್ಯಸ್ಥ ಸೀಡಿ ಹೇಳಿದ.

      ನಿಜ ಏನು? ಇಡೀ ಲೋಕದಲ್ಲಿ ಏಳು ಜನರಲ್ಲಿ ಒಬ್ರಿಗೆ ಪ್ರತಿ ದಿನ ಊಟ ಸಿಗಲ್ಲ. ಅದ್ರಲ್ಲೂ ಸಬ್‌ ಸಹಾರನ್‌ ಆಫ್ರಿಕಾದಲಂತೂ ಮೂರರಲ್ಲಿ ಒಬ್ರು ಹೊಟ್ಟೆಗಿಲ್ಲದೆ ಇರೋ ಪರಿಸ್ಥಿತಿಯಲ್ಲಿ ಇದ್ದಾರೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ, ನೆನೆಸಿ ಒಂದು ಕುಟುಂಬದಲ್ಲಿ ಅಪ್ಪ, ಅಮ್ಮ ಮತ್ತು ಒಂದು ಮಗು ಇದ್ರೆ ಅದ್ರಲ್ಲಿ ಇಬ್ರಿಗಷ್ಟೆ ಊಟ ಸಿಗುತ್ತೆ. ಒಬ್ರು ಉಪವಾಸ ಇರಬೇಕಾಗುತ್ತೆ. ಹೀಗಿರೋವಾಗ, ಪ್ರತಿ ದಿನ ಅವ್ರು ಅಪ್ಪ ಉಪವಾಸ ಇರಬೇಕಾ? ಅಮ್ಮ ಉಪವಾಸ ಇರಬೇಕಾ? ಅಥವಾ ಮಗು ಉಪವಾಸ ಇರಬೇಕಾ? ಅನ್ನೋದನ್ನ ಅವ್ರು ನಿರ್ಧಾರ ಮಾಡಬೇಕಾಗುತ್ತೆ.

      ತಪ್ಪು ಅಭಿಪ್ರಾಯಗಳು: ಭೂಮಿಯಲ್ಲಿ, ನಮ್ಗೆ ಅಗತ್ಯ ಇರೋದಕ್ಕಿಂತ ಹೆಚ್ಚು ಆಹಾರನ ಬೆಳಿತಾಯಿದ್ದಾರೆ. ಆದ್ರೆ ಭೂಮಿಯಲ್ಲಿ ಬೆಳೆಯೊ ಆಹಾರನ ಚೆನ್ನಾಗಿ ಉಪಯೋಗಿಸೋದನ್ನ ಕಲಿಬೇಕು.

      ಈ ಅಭಿಪ್ರಾಯ ಸರಿನಾ? ನಿಜ, ಹಿಂದಿನ ಕಾಲಕ್ಕೆ ಹೋಲಿಸೋದಾದ್ರೆ ರೈತರ ಕೈಯಲ್ಲಿ ಜಾಸ್ತಿ ಆಹಾರನ ಬೆಳೆದು ಅದನ್ನ ಬೇರೆ ಬೇರೆ ಸ್ಥಳಗಳಿಗೆ ಸಾಗಿಸೋಕ್ಕೆ ಆಗುತ್ತೆ. ಹೀಗಿರೋವಾಗ ನಮ್ಮ ಸರ್ಕಾರ ರೈತರು ಬೆಳೆಯುವಂತ ಆಹಾರನ ಸಮವಾಗಿ ಹಂಚ್ಚಿದ್ರೆ ಆಹಾರದ ಕೊರತೆಯ ಸಮಸ್ಯೆನೇ ಇರಲ್ಲ. ಆದ್ರೆ ಅವರು ಎಷ್ಟೇ ಪ್ರಯತ್ನಪಟ್ರೂ, ಅವರ ಕೈಯಲ್ಲಿ ಸರಿಯಾಗಿ ಆಹಾರನ ಎಲ್ರಿಗೂ ಹಂಚ್ಚೋಕೆ ಆಗ್ತಿಲ್ಲ.

      ನಿಮ್ಮ ಅಭಿಪ್ರಾಯ ಏನು? ಮಾರ್ಕ 13:8 ರಲ್ಲಿ ಇರುವ ಮಾತುಗಳ ನೆರವೇರಿಕೆ ಆಗ್ತಾ ಇದ್ಯಾ? ತಂತ್ರಜ್ಞಾನ ಇಂದು ಮುಂದುವರೆದಿದೆ ನಿಜ, ಹೀಗಿದ್ರೂ ಇಡೀ ಲೋಕದ ಜನರಿಗೆ ಆಹಾರದ ಕೊರತೆಯ ಸಮಸ್ಯೆ ಇದ್ದೇ ಇದೆ ಅಲ್ವಾ?

      ಭೂಕಂಪ ಮತ್ತು ಬರಗಳು ಕಡೇ ದಿನಗಳ ಇನ್ನೊಂದು ಸೂಚನೆ ಕಡೆ ನಡಿಸುತ್ತೆ.

      [ಪುಟ 5ರಲ್ಲಿರುವ ಸಂಕ್ಷಿಪ್ತ ವಿವರ]

      “ನಿಮೋನಿಯಾ, ಭೇದಿ ಮತ್ತು ಇನ್ನಿತರ ಕಾಯಿಲೆಗಳಿಂದ ಸತ್ತು ಹೋದ ಎಷ್ಟೋ ಮಕ್ಕಳಿಗೆ ಒಳ್ಳೆ ಪೌಷ್ಠಿಕ ಆಹಾರ ಸಿಕ್ಕಿದ್ದಿದ್ರೆ ಅವ್ರು ಸಯ್ತಾ ಇರಲಿಲ್ಲ.”—ಆನ್‌ ಎಮ್‌. ವಿನೀಮನ್‌, ಯ್ಯೂ ಎನ್‌ ಚಿಲ್ಡ್ರನ್ಸ್‌ ಫಂಡ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ.

      [ಪುಟ 5ರಲ್ಲಿರುವ ಚಿತ್ರ ಕೃಪೆ]

      © Paul Lowe/Panos Pictures

  • ಭವಿಷ್ಯವಾಣಿ 3. ಕಾಯಿಲೆ
    ಕಾವಲಿನಬುರುಜು: ಆರು ಬೈಬಲ್‌ ಭವಿಷ್ಯವಾಣಿಗಳ ನೆರವೇರಿಕೆಯನ್ನ ನೀವು ಕಣ್ಣಾರೆ ನೋಡುತ್ತಿದ್ದೀರಿ
    • ಭವಿಷ್ಯವಾಣಿ 3. ಕಾಯಿಲೆ

      “ಬೇರೆಬೇರೆ ಸ್ಥಳಗಳಲ್ಲಿ ವ್ಯಾಧಿಗಳೂ ಇರುವುವು”.—ಲೂಕ 21:11, ಪವಿತ್ರ ಗ್ರಂಥ.

      ● ಸಾರ್ವಜನಿಕ ಆರೋಗ್ಯ ಅಧಿಕಾರಿಯಾದ ಬೊನ್‌ಜ಼ಾಲೆ ಇರೋದು ಆಫ್ರಿಕ ದೇಶದಲ್ಲಿ. ಈಗಾಗಲೇ ಅಲ್ಲಿ ಆಂತರಿಕ ಯುದ್ಧ ನಡೆಯುತ್ತಾ ಇದೆ. ಇದರ ಮಧ್ಯೆ ಈ ಅಧಿಕಾರಿ ಅಲ್ಲಿ ಮಾರ್‌ಬರ್ಗ್‌ ವೈರಸ್‌ನಿಂದa ನರಳಿ ಸಾಯ್ತಿರೋ ಗಣಿ ಕೆಲಸಗಾರರಿಗೆ ತನ್ನಿಂದಾದಷ್ಟು ಸಹಾಯ ಮಾಡ್ತಿದ್ದಾನೆ. ಅವನು ಪಟ್ಟಣದಲ್ಲಿರೋ ತುಂಬ ಅಧಿಕಾರಿಗಳ ಹತ್ರ ಸಹಾಯ ಕೇಳ್ಕೊಂಡ. ಆದ್ರೆ ಯಾರೂ ಅವನಿಗೆ ಸಹಾಯ ಮಾಡಲಿಲ್ಲ. ಸುಮಾರು ನಾಲ್ಕು ತಿಂಗಳು ಕಳೆದ ಮೇಲೆ ಅವನಿಗೆ ಸಹಾಯ ಸಿಗುತ್ತೆ. ಅಷ್ಟರಲ್ಲಿ ಅವನ ಪ್ರಾಣನೇ ಹೋಗಿತ್ತು. ಯಾಕಂದ್ರೆ ಗಣಿ ಕೆಲಸ ಮಾಡ್ತಿದ್ದವರನ್ನ ಕಾಪಾಡಲಿಕ್ಕೆ ಹೋಗಿ ಅವನಿಗೂ ಆ ವೈರಸ್‌ ಅಂಟಿಕೊಂಡಿತು.

      ನಿಜ ಏನು? ಶ್ವಾಸಕೋಶದ ಇನ್ಫೆಕ್ಷನ್‌ (ನ್ಯುಮೋನಿಯಾ), ಭೇದಿ, ಏಡ್ಸ್‌/ಹೆಚ್‌ ಐ ವಿ, ಕ್ಷಯರೋಗ (ಟಿಬಿ ಕಾಯಿಲೆ), ಮಲೆರಿಯಾ ಇಂಥ ಕಾಯಿಲೆಗಳಿಂದ ತುಂಬ ಜನ ನರಳ್ತಾ ಇದ್ದಾರೆ, ಪ್ರಾಣನೂ ಕಳ್ಕೊಂಡಿದ್ದಾರೆ. ಇತ್ತೀಚಿಗಿನ ರಿಪೋರ್ಟ್‌ ಪ್ರಕಾರ ಈ ಐದು ಕಾಯಿಲೆಗೆ ಸುಮಾರು 1 ಕೋಟಿ 7 ಲಕ್ಷ ಜನ ಬಲಿಯಾಗಿದ್ದಾರೆ. ಇನ್ನೊಂದು ಮಾತಲ್ಲಿ ಹೇಳುವುದಾದರೆ ಒಂದು ವರ್ಷದಲ್ಲಿ ಪ್ರತಿ ಮೂರು ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಈ ಕಾಯಿಲೆ ಬಂದು ಸತ್ತಿದ್ದಾನೆ.

      ತಪ್ಪು ಅಭಿಪ್ರಾಯಗಳು: ಜನಸಂಖ್ಯೆ ಜಾಸ್ತಿ ಆದಂಗೆ ರೋಗಗಳು ಜಾಸ್ತಿ ಆಗ್ತವೆ. ಜಾಸ್ತಿ ಜನರು ಕೂಡ ಸೋಂಕಿತರಾಗ್ತಾರೆ.

      ಈ ಅಭಿಪ್ರಾಯ ಸರಿನಾ? ಇವತ್ತು ಜನಸಂಖ್ಯೆ ಜಾಸ್ತಿ ಆಗ್ತಾ ಇದೆ ನಿಜ. ಅದೇ ಸಮಯದಲ್ಲಿ ರೋಗಗಳನ್ನ ಕಂಡುಹಿಡಿಯಲಿಕ್ಕೆ, ಅದನ್ನ ತಡೆಯಲಿಕ್ಕೆ ಮತ್ತು ಅದಕ್ಕೆ ಚಿಕಿತ್ಸೆ ಕೊಡೋಕೆ ಮನುಷ್ಯನಿಗಿರೋ ಸಾಮರ್ಥ್ಯನೂ ಜಾಸ್ತಿ ಆಗಿದೆ. ಹೀಗಿರುವಾಗ ಇಂಥ ಕಾಯಿಲೆಗಳು ಮತ್ತು ಈ ಕಾಯಿಲೆಗಳು ಮನುಷ್ಯರಿಗೆ ಬರೋದು ಕಮ್ಮಿ ಆಗಬೇಕಲ್ವಾ? ಆದರೆ ಅದು ಹಾಗೆ ಆಗ್ತಿಲ್ಲ.

      ನಿಮ್ಮ ಅಭಿಪ್ರಾಯ ಏನು? ಬೈಬಲಲ್ಲಿ ಮುಂಚೆನೆ ಹೇಳಿರೋ ಹಾಗೆ ಇಂದು ಜನರು ಕಾಯಿಲೆಗಳಿಂದ ನರಳ್ತಾ ಇದ್ದಾರಾ?

      ಭೂಕಂಪ, ಬರ ಮತ್ತು ಕಾಯಿಲೆಗಳು ಲಕ್ಷಾಂತರ ಜೀವವನ್ನ, ಜೀವನವನ್ನ ಬಲಿ ತಗೊಂಡಿದೆ. ಇನ್ನೊಂದು ಕಡೆ ಲಕ್ಷಾಂತರ ಜನರು ತಮ್ಮನ್ನ ಸಂರಕ್ಷಿಸಬೇಕಾದವರ ಕೈಯಿಂದಾನೇ ಕಷ್ಟ ಅನುಭವಿಸ್ತಿದ್ದಾರೆ. ಮುಂದೇನಾಗುತ್ತೆ ಅಂತ ಬೈಬಲಲ್ಲಿರೋ ಭವಿಷ್ಯವಾಣಿ ಹೇಳುತ್ತೆ.

      [ಪಾದಟಿಪ್ಪಣಿ]

      a ಮಾರ್‌ಬರ್ಗ್‌ ರಕ್ತ ಹೆಪ್ಪುಗಟ್ಟಿಸುವಿಕೆಯ ಜ್ವರ. ಇದು ಎಬೋಲಾ ವೈರಸ್‌ಗೆ ಸಂಬಂಧಪಟ್ಟಿರೋ ಜ್ವರ.

      [ಪುಟ 6ರಲ್ಲಿರುವ ಸಂಕ್ಷಿಪ್ತ ವಿವರ]

      “ಒಂದು ಸಿಂಹ ನಮ್ಮನ್ನು ಹರಿದು ತಿನ್ನೋದು ಎಷ್ಟು ಭಯಾನಕನೋ ಅದೇ ತರ ಒಂದು ವೈರಸ್‌ ನಮ್ಮನ್ನ ಒಳಗಡೆಯಿಂದ ನಿಧಾನವಾಗಿ ತಿನ್ಕೊಂಡು ಬರೋದು ಅಷ್ಟೇ ಭಯಾನಕ.”—ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮೈಕಲ್‌ ಒಸ್ಟರ್‌ಹಾಮ್‌.

      [ಪುಟ 6ರಲ್ಲಿರುವ ಚಿತ್ರ ಕೃಪೆ]

      ©William Daniels/Panos Pictures

  • ಭವಿಷ್ಯವಾಣಿ 4. ಇತರರನ್ನು ಪ್ರೀತಿಸದವರು
    ಕಾವಲಿನಬುರುಜು: ಆರು ಬೈಬಲ್‌ ಭವಿಷ್ಯವಾಣಿಗಳ ನೆರವೇರಿಕೆಯನ್ನ ನೀವು ಕಣ್ಣಾರೆ ನೋಡುತ್ತಿದ್ದೀರಿ
    • ಭವಿಷ್ಯವಾಣಿ 4. ಇತರರನ್ನು ಪ್ರೀತಿಸದವರು

      “ಇತರರನ್ನು ಪ್ರೀತಿಸದವರು.”—2 ತಿಮೊತಿ 3:1-3, ಪರಿಶುದ್ಧ ಬೈಬಲ್‌.

      ● ಉತ್ತರ ವೇಲ್ಸ್‌ನಲ್ಲಿ ಕ್ರಿಸ್‌ ಅನ್ನೋ ಒಬ್ಬ ವ್ಯಕ್ತಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಸಹಾಯಮಾಡೋ ಒಂದು ಸಂಸ್ಥೆಯಲ್ಲಿ ಕೆಲಸ ಮಾಡ್ತಾನೆ. ಅವನು ಹೀಗೆ ಹೇಳ್ತಾನೆ: “ಒಂದಿನ ನನಗೆ ಗೊತ್ತಿರೋ ಒಬ್ಬ ಹೆಂಗಸು ನಮ್ಮ ಸಂಸ್ಥೆಗೆ ಬಂದಿದ್ದಳು. ಅವಳ ಗಂಡ ಅವಳನ್ನ ಎಷ್ಟು ಹೊಡೆದಿದ್ದ ಅಂದ್ರೆ ಅವಳನ್ನ ನೋಡಿ ನನಗೆ ಗುರುತು ಹಿಡಿಯಲಿಕ್ಕೂ ಆಗಲಿಲ್ಲ. ಇನ್ನು ಕೆಲವು ಹೆಂಗಸರು ಮಾನಸಿಕವಾಗಿ ಎಷ್ಟು ಹೊಡೆತ ತಿಂದಿರುತ್ತಾರಂದ್ರೆ ಅವರಿಗೆ ಬೇರೆಯವರನ್ನ ಕಣ್ಣೆತ್ತಿ ನೋಡಕ್ಕೂ ಕಷ್ಟ ಆಗುತ್ತೆ.”

      ನಿಜ ಏನು? ಆಫ್ರಿಕದ ಒಂದು ದೇಶದಲ್ಲಿ ಮೂರರಲ್ಲಿ ಒಬ್ಬ ಹೆಂಗಸು ಚಿಕ್ಕವರಿರುವಾಗಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾರೆ. ಅದೇ ದೇಶದಲ್ಲಿ ನಡೆಸಿದ ಒಂದು ಸರ್ವೆ ಪ್ರಕಾರ ಮೂರರಲ್ಲಿ ಒಬ್ಬ ವ್ಯಕ್ತಿ ಹೆಂಡತಿನ ಹೊಡೆಯೋದ್ರಲ್ಲಿ ತಪ್ಪೇನಿಲ್ಲ ಅನ್ನೋ ಹೇಳಿಕೆ ಕೊಟ್ಟಿದ್ದಾರೆ. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ ಸ್ತ್ರೀಯರು ಮಾತ್ರವಲ್ಲ ಪುರುಷರೂ ಇದ್ದಾರೆ. ಉದಾಹರಣೆಗೆ ಕೆನಡದಲ್ಲಿ 10 ರಲ್ಲಿ 3 ಪುರುಷರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.

      ತಪ್ಪು ಅಭಿಪ್ರಾಯಗಳು? ಕೌಟುಂಬಿಕ ದೌರ್ಜನ್ಯ ಯಾವಾಗಲೂ ಇತ್ತು. ಹಿಂದೆ ಅದು ಯಾರಿಗೂ ಗೊತ್ತಾಗ್ತಾ ಇರಲಿಲ್ಲ, ಈಗ ಅದು ಎಲ್ರಿಗೂ ಗೊತ್ತಾಗ್ತಾ ಇದೆ ಅಷ್ಟೇ.

      ಈ ಅಭಿಪ್ರಾಯ ಸರಿನಾ? ಹಿಂದಿನ ಕಾಲಕ್ಕೆ ಹೋಲಿಸೋದಾದ್ರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರೋ ಕೌಟುಂಬಿಕ ದೌರ್ಜನ್ಯ ಬೆಳಕಿಗೆ ಬರುತ್ತಿದೆ ನಿಜ. ಕೌಟುಂಬಿಕ ದೌರ್ಜನ್ಯ ಆಗ್ತಾ ಇದೆ ಅನ್ನೋದು ಬೆಳಕಿಗೆ ಬರ್ತಿರೋದಾದ್ರೂ ಆ ತರ ನಡಿಯೋದು ಕಡಿಮೆ ಆಗ್ತಿದ್ಯಾ? ಇಲ್ವೇ ಇಲ್ಲ. ಇವತ್ತು ಜನ್ರಲ್ಲಿ ಪ್ರೀತಿ, ಮಮತೆ ಕಡಿಮೆಯಾಗಿದೆ ಅಂತ ಇದ್ರಿಂದಾನೇ ಗೊತ್ತಾಗುತ್ತೆ.

      ನಿಮ್ಮ ಅಭಿಪ್ರಾಯ ಏನು? 2 ತಿಮೊತಿ 3:1-3 ರಲ್ಲಿರೋ ಮಾತುಗಳು ನೆರವೇರುತ್ತಾ ಇದ್ಯಾ? ಇವತ್ತು ತುಂಬ ಕುಟುಂಬಗಳಲ್ಲಿ ಪ್ರೀತಿ, ಮಮತೆ ಕಡಿಮೆಯಾಗಿರೋದನ್ನ ನೀವು ಗಮನಿಸ್ತಾ ಇದ್ದೀರಾ?

      ಇದು ನೆರವೇರುತ್ತಾ ಇರೋ 5 ನೇ ಭವಿಷ್ಯವಾಣಿ. ಇದು ನಮ್ಮ ಬೀಡಾದ ಭೂಮಿಗೆ ಸಂಬಂಧಪಟ್ಟಿದೆ. ಬೈಬಲ್‌ ಇದರ ಬಗ್ಗೆ ಏನು ಹೇಳುತ್ತೆ ಅಂತ ಈಗ ನೋಡೋಣ.

      [ಪುಟ 7ರಲ್ಲಿರುವ ಸಂಕ್ಷಿಪ್ತ ವಿವರ]

      “ಇಷ್ಟೆಲ್ಲಾ ಕೌಟುಂಬಿಕ ದೌರ್ಜನ್ಯ ನಡೆದ್ದಿದ್ರೂ ಈ ರೀತಿ ನಡೆದಿದೆ ಅಂತ ಸಮಾಜ ಒಪ್ಪೋದೇ ಇಲ್ಲ. ಈ ರೀತಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರು ನನಗೆ ಈ ರೀತಿ ಆಗಿದೆ ಅಂತ ಹೇಳ್ಕೊಂಡು ಕಂಪ್ಲೇಂಟ್‌ ಕೊಡಲ್ಲ. ಒಂದು ಅಂದಾಜಲ್ಲಿ ಹೇಳೋದಾದ್ರೆ ಒಬ್ಬ ಸ್ತ್ರೀ ಗಂಡ ಹೊಡೆದಿದ್ದಾನೆ ಅಂತ ಬಂದು ಕಂಪ್ಲೇಂಟ್‌ ಕೊಡೋದಕ್ಕಿಂತ ಮುಂಚೆ ಈಗಾಗಲೇ 35 ಸಲ ಹೊಡೆತ ತಿಂದಿರುತ್ತಾಳೆ.”—ವೇಲ್ಸ್‌ನಲ್ಲಿರೋ ಕೌಟುಂಬಿಕ ದೌರ್ಜನ್ಯದ ವಿರುದ್ಧ ಮಾತಾಡೋ ಸ್ತ್ರೀ ಪ್ರತಿನಿಧಿಯ ಹೆಲ್ಪ್‌ಲೈನ್‌.

  • ಭವಿಷ್ಯವಾಣಿ 5. ಜನರಿಂದ ನಾಶ ಆಗ್ತಿರೋ ಭೂಮಿ
    ಕಾವಲಿನಬುರುಜು: ಆರು ಬೈಬಲ್‌ ಭವಿಷ್ಯವಾಣಿಗಳ ನೆರವೇರಿಕೆಯನ್ನ ನೀವು ಕಣ್ಣಾರೆ ನೋಡುತ್ತಿದ್ದೀರಿ
    • ಭವಿಷ್ಯವಾಣಿ 5. ಜನರಿಂದ ನಾಶ ಆಗ್ತಿರೋ ಭೂಮಿ

      “ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ [ದೇವರು] ನಾಶಮಾಡೋ ಸಮಯ ಬಂದಿದೆ.”—ಪ್ರಕಟನೆ 11:18.

      ● ನೈಜೀರಿಯದ ಕೆಪೋರ್‌ ಅನ್ನೋ ಸ್ಥಳದಲ್ಲಿ ಪಿರಿ ಅನ್ನುವವರು ಈಚಲು ಮರದಿಂದ ಹೆಂಡ ತೆಗೆಯೋ ಕೆಲಸ ಮಾಡ್ತಾರೆ. ನೈಜರ್‌ ಡೆಲ್ಟದಲ್ಲಿ ಆಗ್ತಿದ್ದ ತೈಲ ಸೋರಿಕೆಯಿಂದ ನಾನು ಮಾಡ್ತಿದ್ದ ಕೆಲಸಕ್ಕೆ ತುಂಬ ಪೆಟ್ಟು ಬಿತ್ತು. “ಈ ತೈಲ ಸೋರಿಕೆಯಿಂದ ನಮ್ಮ ಹೊಳೆಯಲ್ಲಿ ಹರಿಯುತ್ತಿದ್ದ ನೀರು ಹಾಳಾಗಿ ಅದ್ರಲಿದ್ದ ಮೀನೆಲ್ಲ ಸತ್ತು ಹೋಯ್ತು. ಆ ನೀರಿಂದ ನಮ್ಮ ಚರ್ಮ ಕೂಡ ಹಾಳಾಯ್ತು. ಒಟ್ಟಿನಲ್ಲಿ ನಮ್ಮ ಜೀವನನೇ ತಲೆ ಕೆಳಗಾಗಿಬಿಡ್ತು.”

      ನಿಜ ಏನು? ತಜ್ಞರು ಹೇಳೋ ಪ್ರಕಾರ ಇಡೀ ಲೋಕದಲ್ಲಿರೋ ಸಮುದ್ರಗಳಿಗೆ ಸುಮಾರು 65 ಲಕ್ಷ ಕಸ ಪ್ರತಿ ವರ್ಷ ಸೇರುತ್ತೆ. ಆ ಕಸದಲ್ಲಿ ಅರ್ಧಕರ್ಧದಷ್ಟು ಪ್ಲಾಸ್ಟಿಕ್‌ ಇರುತ್ತೆ. ಈ ಪ್ಲಾಸ್ಟಿಕ್‌ ನೂರಾರು ವರ್ಷ ನೀರಲ್ಲಿ ತೇಲುತ್ತಾ ಇರುತ್ತೆ ಹೊರತು ಮಣ್ಣಲ್ಲಿ ಸೇರಿಕೊಂಡು ನಾಶ ಆಗಲ್ಲ. ಮನುಷ್ಯರು ಭೂಮಿಯನ್ನ ಮಲೀನಗೊಳಿಸುವುದು ಅಲ್ಲದೇ ಭೂಮಿಯಲ್ಲಿರೋ ನೈಸರ್ಗಿಕ ಸಂಪತ್ತುಗಳನ್ನ ಅತಿಯಾಗಿ ಬಳಸ್ಕೊಂಡು ಅದನ್ನ ನಾಶಮಾಡ್ತಿದ್ದಾರೆ. ಜನರು ಒಂದು ವರ್ಷದಲ್ಲಿ ಉಪಯೋಗಿಸೋ ನೈಸರ್ಗಿಕ ಸಂಪ್ತತನ್ನ ಮತ್ತೆ ತಯಾರಿಸಲಿಕ್ಕೆ ಭೂಮಿ ಒಂದು ವರ್ಷ ಐದು ತಿಂಗಳು ತಗೊಳ್ಳುತ್ತೆ. ಇದು ಹೀಗೆ ಮುಂದುವರಿದರೆ ಇಸವಿ 2035 ರಷ್ಟಕ್ಕೆ ನಮಗೆ ಒಂದು ಭೂಮಿ ಸಾಕಾಗಲ್ಲ 2 ಭೂಮಿ ಬೇಕಾಗುತ್ತೆ ಅಂತ ಸಿಡ್ನಿ ಮಾರ್ನಿಂಗ್‌ ಹೆರಲ್ಡ್‌ ಎಂಬ ಆಸ್ಟ್ರೇಲಿಯದ ವಾರ್ತಾಪತ್ರಿಕೆ ತಿಳಿಸುತ್ತೆ.

      ತಪ್ಪು ಅಭಿಪ್ರಾಯಗಳು? ಮನುಷ್ಯರ ಕೈಯಲ್ಲಿ ಈಗ ಆಗಿರೋ ಅನಾಹುತನಾ ಸರಿಪಡಿಸೋಕೆ ಆಗುತ್ತೆ, ಭೂಮಿಯನ್ನ ಉಳಿಸೋಕೆ ಆಗುತ್ತೆ.

      ಈ ಅಭಿಪ್ರಾಯ ಸರಿನಾ? ನಮ್ಮ ಪರಿಸರನ ಉಳಿಸೋಕೆ ಇವತ್ತು ತುಂಬ ಜನ ಕಷ್ಟಪಟ್ಟು ದುಡಿತ್ತಿದ್ದಾರೆ. ಆದರೂ ಇವತ್ತು ಭೂಮಿಯಲ್ಲಿ ಮಾಲಿನ್ಯ ಹೆಚ್ಚಾಗಿ ಅದು ಹಾಳಾಗ್ತಿದೆಯೇ ಹೊರತು ಸರಿ ಹೋಗ್ತಿಲ್ಲ.

      ನಿಮ್ಮ ಅಭಿಪ್ರಾಯ ಏನು? ಹಾಳಾಗ್ತಿರೋ ಭೂಮಿಯನ್ನ ನಾನು ಸರಿಮಾಡ್ತಿನಿ ಅಂತ ದೇವರು ಮಾತು ಕೊಟ್ಟಿದ್ದಾನೆ. ದೇವರಿಂದ ಮಾತ್ರ ಈ ಸಮಸ್ಯೆಗೆ ಒಂದು ಪರಿಹಾರನ ಕೊಡೋಕೆ ಸಾಧ್ಯ ಅಂತ ನಿಮಗನಿಸುತ್ತಾ?

      ಕೊನೆ ದಿನಗಳಲ್ಲಿ ಬರೀ ಕೆಟ್ಟ ವಿಷಯಗಳು ಮಾತ್ರ ಅಲ್ಲ ಕೆಲವು ಒಳ್ಳೇ ವಿಷಯಗಳು ಕೂಡ ನಡೆಯುತ್ತೆ ಅನ್ನೋದನ್ನ ಬೈಬಲ್‌ ಭವಿಷ್ಯವಾಣಿ ತಿಳಿಸುತ್ತೆ. ಈಗ ಒಂದು ಉದಾಹರಣೆಯನ್ನ ನೋಡೋಣ.

      [ಪುಟ 8ರಲ್ಲಿರುವ ಸಂಕ್ಷಿಪ್ತ ವಿವರ]

      “ನಾನು ನನ್ನದು ಅಂತ ಮಾಡ್ಕೊಂಡಿರೋದು ಒಂದು ಸುಂದರವಾದ ತೋಟವಿರೋ ಒಂದು ಜಾಗ ಅಲ್ಲ, ಬದಲಾಗಿ ಒಂದು ಕಸದ ಗುಂಡಿ ಅಂತ ಈ ನಡುವೆ ಅನಿಸ್ತಿದೆ.”—ಎರಿನ್‌ ಟ್ಯಾಂಬರ್‌, ಇವರು ಅಮೆರಿಕದ ಗಲ್ಫ್‌ ಕೋಸ್ಟ್‌ನಲ್ಲಿ ಇರೋರು. 2010 ರಲ್ಲಿ ಮೆಕ್ಸಿಕೋ ಗಲ್ಫ್‌ನಲ್ಲಿ ನಡೆದ ತೈಲ ಸೋರಿಕೆಯ ಕೆಟ್ಟ ಪರಿಣಾಮಗಳ ಬಗ್ಗೆ ವರದಿ ನೀಡಿದವರು.

      [ಪುಟ 8 ರಲ್ಲಿರುವ ಚೌಕ]

      ಇದಕೆಲ್ಲಾ ಕಾರಣ ದೇವರಾ?

      ಇವತ್ತು ನಡಿತಿರೋ ಎಲ್ಲಾ ಕೆಟ್ಟ ವಿಷಯಗಳನ್ನ ಬೈಬಲ್‌ನಲ್ಲಿ ಮೊದಲೇ ಹೇಳಿರೋದ್ರಿಂದ, ಇದಕ್ಕೆಲ್ಲಾ ಕಾರಣ ದೇವರಾ? ದೇವರು ನಮ್ಗೆ ಕಷ್ಟ ಕೊಡ್ತಿದ್ದಾನಾ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಯೆಹೋವನ ಸಾಕ್ಷಿಗಳು ಪ್ರಕಾಶಿಸಿರೊ ”ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?” ಪುಸ್ತಕದ 11 ನೇ ಅಧ್ಯಾಯದಲ್ಲಿದೆ.

      [ಪುಟ 8ರಲ್ಲಿರುವ ಚಿತ್ರ ಕೃಪೆ]

      U.S. Coast Guard photo

  • ಭವಿಷ್ಯವಾಣಿ 6. ಇಡೀ ಲೋಕದಲ್ಲಿ ಸಾರುವ ಕೆಲಸ
    ಕಾವಲಿನಬುರುಜು: ಆರು ಬೈಬಲ್‌ ಭವಿಷ್ಯವಾಣಿಗಳ ನೆರವೇರಿಕೆಯನ್ನ ನೀವು ಕಣ್ಣಾರೆ ನೋಡುತ್ತಿದ್ದೀರಿ
    • ಭವಿಷ್ಯವಾಣಿ 6. ಇಡೀ ಲೋಕದಲ್ಲಿ ಸಾರುವ ಕೆಲಸ

      “ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾರಲಾಗುತ್ತೆ.”—ಮತ್ತಾ. 24:14.

      ● ವಯಾಟಿಯಾ ಇರೋದು ಟುವಾಮೋಟೊ ದ್ವೀಪ ಸಮೂದಾಯದ ಪೆಸಿಫಿಕ್‌ ದ್ವೀಪದಲ್ಲಿ. ಟುವಾಮೋಟೊ ದ್ವೀಪ ಸಮೂದಾಯದಲ್ಲಿ ಸುಮಾರು 80 ದ್ವೀಪಗಳಿವೆ. ಇದು ಸುಮಾರು 8,02,900 ಚದರ ಕಿಲೋಮೀಟರ್‌ಗಿಂತ ದೊಡ್ಡದಾಗಿದೆ. ಈ ಜಾಗ ಇಷ್ಟು ದೊಡ್ಡದಾಗಿದ್ರೂ, ಅದ್ರಲ್ಲಿ ಬರೀ 16,000 ಜನ ಅಷ್ಟೇ ಇರೋದು. ಇದು ಒಂದು ದೂರದಲ್ಲಿರೋ ಜಾಗವಾಗಿದ್ರೂನೂ, ವಯಾಟಿಯಾ ಮತ್ತು ಅವಳ ಅಕ್ಕಪಕ್ಕದಲ್ಲಿರೊ ಸ್ಥಳಗಳಿಗೆ ಯೆಹೋವನ ಸಾಕ್ಷಿಗಳು ಬಂದ್ರು. ಯಾಕೆ? ಯಾಕಂದ್ರೆ ಜನರು ಎಲ್ಲೇ ಇದ್ರೂ ಅವ್ರಿಗೂ ದೇವರ ಆಳ್ವಿಕೆಯ ಈ ಸಿಹಿಸುದ್ದಿಯನ್ನ ಸಾರಬೇಕು ಅನ್ನೋದೆ ಯೆಹೋವನ ಸಾಕ್ಷಿಗಳ ಆಸೆ.

      ನಿಜ ಏನು? ಇಂದು ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದ ಎಲ್ಲಾ ಕಡೆ ಸಾರಲಾಗ್ತಿದೆ. ಉದಾಹರಣೆಗೆ ಇಸವಿ 2010 ರಲ್ಲಿ ಮಾತ್ರ 236 ದೇಶದಲ್ಲಿ ಯೆಹೋವನ ಸಾಕ್ಷಿಗಳು 1.6 ಬಿಲಿಯನ್‌ ಗಿಂತ ಜಾಸ್ತಿ ತಾಸನ್ನ ಸುವಾರ್ತೆ ಸಾರೋದ್ರಲ್ಲಿ ಕಳೆದಿದ್ದಾರೆ. ಇದರ ಅರ್ಥ ಪ್ರತಿ ದಿನ ಪ್ರತಿ ಒಬ್ಬ ಯೆಹೋವನ ಸಾಕ್ಷಿ 30 ನಿಮಿಷ ಸುವಾರ್ತೆಯನ್ನ ಸಾರಿದ್ದಾನೆ. ಕಳೆದ 10 ವರ್ಷದಲ್ಲಿ 20 ಬಿಲಿಯನ್‌ಗಿಂತ ಜಾಸ್ತಿ ಬೈಬಲ್‌ ಪ್ರಕಾಶನಗಳನ್ನ ತಯಾರಿಸಿ ಹಂಚ್ಚಿದ್ದಾರೆ.

      ತಪ್ಪು ಅಭಿಪ್ರಾಯಗಳು: ಹೇಗಿದ್ರೂ ಸುವಾರ್ತೆನ ಸಾವಿರಾರು ವರ್ಷಗಳಿಂದ ಸಾರ್ತಾನೇ ಇದ್ದಾರೆ.

      ಈ ಅಭಿಪ್ರಾಯ ಸರಿನಾ? ತುಂಬಾ ಜನ ಬೈಬಲ್‌ ಬಗ್ಗೆ ಏನೋ ಒಂದು ಸಾರಿದ್ದಾರೆ ನಿಜ. ಆದ್ರೆ ಹೆಚ್ಚಿನವರು ಅದನ್ನ ಸ್ವಲ್ಪ ಸಮಯದ ಮಟ್ಟಿಗೆ ಮಾತ್ರ ಮಾಡಿದ್ದಾರೆ. ಆದ್ರೆ ಯೆಹೋವನ ಸಾಕ್ಷಿಗಳು ಇವತ್ತಿನವರೆಗೂ ಸಾರುವ ಕೆಲಸವನ್ನ ನಿಲ್ಸಿಲ್ಲ. ಇಡೀ ಲೋಕದಲ್ಲಿರೋ ಲಕ್ಷಾಂತರ ಜನರಿಗೆ ಇಂದಿನವರೆಗೂ ಅವ್ರು ಸುವಾರ್ತೆನ ಸಾರ್ತಾನೇ ಇದ್ದಾರೆ. ಅವ್ರಿಗೆ ಎಷ್ಟೇ ಕಷ್ಟವಾದ ವಿರೋಧ ಬಂದ್ರು, ಅವ್ರು ಈ ಸಾರುವ ಕೆಲಸನ ನಿಲ್ಸಿಲ್ಲ.a (ಮಾರ್ಕ 13:13) ಈ ಸಾರುವ ಕೆಲಸನ ಅವ್ರು ಹಣದಾಸೆಗೋಸ್ಕರ ಮಾಡ್ತಿಲ್ಲ. ಅವರು ತಮ್ಮ ಸ್ವಂತ ಇಷ್ಟದ ಪ್ರಕಾರ ಈ ಕೆಲಸಕ್ಕೋಸ್ಕರ ಸಮಯನ ಕಳಿತಾರೆ. ಎಲ್ಲಾ ಪ್ರಕಾಶನಗಳನ್ನ ಅವ್ರು ಜನರಿಗೆ ಫ್ರೀಯಾಗಿ ಕೊಡ್ತಾರೆ. ಇಲ್ಲಿ ಎಲ್ರೂ ಸ್ವಯಂ ಸೇವಕರಾಗಿ ಕೆಲಸ ಮಾಡ್ತಾರೆ. ಅವ್ರು ಕೊಡೋ ಕಾಣಿಕೆಯಿಂದಾನೇ ಈ ಕೆಲಸ ನಡಿತಿರೋದು.

      ನಿಮ್ಮ ಅಭಿಪ್ರಾಯ ಏನು? “ದೇವರ ಆಳ್ವಿಕೆಯ ಬಗ್ಗೆ ಇರೋ ಈ ಸಿಹಿಸುದ್ದಿ” ಇಡೀ ಲೋಕದಲ್ಲಿ ಸಾರಲಾಗ್ತಿದ್ಯಾ? ಈ ಭವಿಷ್ಯವಾಣಿ ನೆರವೇರಿದ್ರೆ, ತುಂಬ ಜಲ್ದಿ ಒಳ್ಳೇದಾಗುತ್ತಾ?

      [ಪಾದಟಿಪ್ಪಣಿ]

      a ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಈ ಮೂರು ವಿಡಿಯೋಗಳನ್ನ ನೋಡಿ. “ಪರೀಕ್ಷೆಗಳ ಕೆಳಗೆ ನಂಬಿಗಸ್ತರು” (ಇಂಗ್ಲಿಷ್‌), ”ಕೆನ್ನೀಲಿ ತ್ರಿಕೋಣಗಳು” (ಇಂಗ್ಲಿಷ್‌), ”ಯೆಹೋವನ ಸಾಕ್ಷಿಗಳು ನಾಜ಼ಿ ಆಕ್ರಮಣದ ವಿರುಧ ದೃಡವಾಗಿ ನಿಲ್ಲುತ್ತಾರೆ”.

      [ಪುಟ 9ರಲ್ಲಿರುವ ಸಂಕ್ಷಿಪ್ತ ವಿವರ]

      “ಯೆಹೋವನು ಅನುಮತಿಸೋವರೆಗೂ ನಮ್ಮಿಂದ ಆದಷ್ಟು ಪ್ರಯತ್ನನ ಹಾಕಿ, ದೇವರ ಆಳ್ವಿಕೆಯ ಈ ಸಿಹಿಸುದ್ದಿಯನ್ನ ಹುರುಪಿನಿಂದ ನಾವು ಸಾರುತ್ತಾನೇ ಇರ್ತೀವಿ.”—2010 ಯೆಹೋವನ ಸಾಕ್ಷಿಗಳ ವರ್ಷ ಪುಸ್ತಕ.

  • ತುಂಬ ಬೇಗ ಒಳ್ಳೇ ಕಾಲ ಬರುತ್ತೆ!
    ಕಾವಲಿನಬುರುಜು: ಆರು ಬೈಬಲ್‌ ಭವಿಷ್ಯವಾಣಿಗಳ ನೆರವೇರಿಕೆಯನ್ನ ನೀವು ಕಣ್ಣಾರೆ ನೋಡುತ್ತಿದ್ದೀರಿ
    • ತುಂಬ ಬೇಗ ಒಳ್ಳೇ ಕಾಲ ಬರುತ್ತೆ!

      “ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ . . . ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ.”—ಕೀರ್ತ. 37:10, 11.

      ಈ ಭವಿಷ್ಯವಾಣಿ ನೆರವೇರೋದನ್ನ ನೋಡೋಕೆ ನಿಮಗೆ ಆಸೆ ಇದ್ಯಾ? ಖಂಡಿತ ನಿಮಗೆ ಆ ಆಸೆ ಇದ್ದೇ ಇರುತ್ತೆ. ಇದು ಬೇಗ ನಿಜ ಆಗುತ್ತೆ ಅಂತ ನಂಬಲಿಕ್ಕೆ ಕಾರಣಗಳಿವೆ.

      ನಾವು “ಕೊನೆ ದಿನಗಳಲ್ಲಿ” ಜೀವಿಸ್ತಿದ್ದೀವಿ ಅಂತ ತೋರಿಸೋ ಕೆಲವು ಭವಿಷ್ಯವಾಣಿಗಳನ್ನ ನಾವು ಕಳೆದ ಲೇಖನಗಳಲ್ಲಿ ಚರ್ಚೆ ಮಾಡಿದ್ದೀವಿ. (2 ತಿಮೊತಿ 3:1-5) ಈ ಘಟನೆಗಳ ಬಗ್ಗೆ ಮುಂಚೆನೇ ಬರೆದಿಡೋಕೆ ದೇವರು ಬೈಬಲ್‌ ಬರಹಗಾರರಿಗೆ ಹೇಳಿದನು. ಇದ್ರಿಂದ ನಮಗಿರೋ ನಿರೀಕ್ಷೆ ಬಲವಾಗುತ್ತೆ. (ರೋಮನ್ನರಿಗೆ 15:4) ಈ ಭವಿಷ್ಯವಾಣಿಗಳು ನೆರವೇರುತ್ತಿರುವುದರ ಅರ್ಥ ಬೇಗ ನಮ್ಮ ಕಷ್ಟಗಳೆಲ್ಲ ಕೊನೆ ಆಗುತ್ತೆ ಅನ್ನೋದೆ ಆಗಿದೆ.

      ಕೊನೆ ದಿನಗಳು ಆದ ಮೇಲೆ ಏನಾಗುತ್ತೆ? ಮನುಷ್ಯರ ಮೇಲೆ ದೇವರು ಆಳ್ವಿಕೆ ಮಾಡ್ತಾರೆ. (ಮತ್ತಾಯ 6:9) ಆಗ ಭೂಮಿ ಮೇಲೆ ಯಾವಯಾವ ಬದಲಾವಣೆ ಬರುತ್ತೆ ಅಂತ ಬೈಬಲ್‌ ಹೇಳುತ್ತೆ. ಅದು ಯಾವುದಂದ್ರೆ:

      ● ಆಗ ಜನರು ಹೊಟ್ಟೆಗಿಲ್ಲದೆ ಅಲಿಯಲ್ಲ. “ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ, ಪರ್ವತ ಶಿಖರಗಳ ಮೇಲೆ ಧಾನ್ಯ ತುಂಬಿತುಳುಕುತ್ತೆ.”—ಕೀರ್ತನೆ 72:16.

      ● ಕಾಯಿಲೆ ಇರಲ್ಲ. “ದೇಶದಲ್ಲಿ ಒಬ್ಬನೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ.”—ಯೆಶಾಯ 33:24.

      ● ಭೂಮಿ ಮತ್ತು ಅದರ ವಾತಾವರಣ ಚೇತರಿಸಿಕೊಳ್ಳುತ್ತೆ. “ಕಾಡು ಮತ್ತು ಬರಡು ಭೂಮಿ ಸಂಭ್ರಮಪಡುತ್ತೆ, ಬಯಲು ಪ್ರದೇಶ ಉಲ್ಲಾಸಿಸ್ತಾ ಹೂಗಳಿಂದ ಕಂಗೊಳಿಸುತ್ತೆ.”—ಯೆಶಾಯ 35:1.

      ಇವು ತುಂಬ ಬೇಗ ನೆರವೇರೋ ಭವಿಷ್ಯವಾಣಿಗಳಲ್ಲಿ ಕೆಲವು. ತುಂಬ ಬೇಗ ಒಳ್ಳೇ ಕಾಲ ಬರುತ್ತೆ ಅಂತ ಯಾಕೆ ಯೆಹೋವನ ಸಾಕ್ಷಿಗಳು ಅಷ್ಟು ದೃಢವಾಗಿ ನಂಬ್ತಾರೆ ಅಂತ ಅವರನ್ನೇ ಕೇಳಿ ತಿಳ್ಕೊಳ್ಳಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ