ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 24
  • ಬನ್ನಿ ಯೆಹೋವನ ಬೆಟ್ಟಕ್ಕೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬನ್ನಿ ಯೆಹೋವನ ಬೆಟ್ಟಕ್ಕೆ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಬನ್ನಿ ಯೆಹೋವನ ಪರ್ವತಕ್ಕೆ
    ಯೆಹೋವನಿಗೆ ಹಾಡಿರಿ
  • ವಾಕ್ಯವ ಸಾರೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಎಲ್ಲಾ ರೀತಿಯ ಜನರಿಗೆ ಸಾರೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಎಲ್ಲ ರೀತಿಯ ಜನರಿಗೆ ಸಾರಿ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 24

ಗೀತೆ 24

ಬನ್ನಿ ಯೆಹೋವನ ಬೆಟ್ಟಕ್ಕೆ

(ಯೆಶಾಯ 2:2-4)

  1. 1. ನೋಡಿ ಸೋಜಿಗವ!

    ಮುಗಿಲನ್ನು ತಾಕುವ,

    ಎಂಥ ಉನ್ನತ ಬೆಟ್ಟ,

    ನಮ್ಮ ದೇವರದು!

    ಕೋಟಿ ಸಾಲುಗಳ,

    ಜನರ ಗುಂಪೆಲ್ಲವೂ,

    ಹಾಡಿ ಯೆಹೋವನನ್ನು

    ಗಣ್ಯ ಮಾಡುವರು.

    ಬಂದಿದೆ ಸಮಯ,

    ದೇವರಾಳ್ವಿಕೆಯು ಉದಯ.

    ತುಂಬಿದೆ ಹೃದಯ,

    ನೋಡಿ ದೇವರ ಆ ವಿಜಯ!

    ನಾವು ನೀಡುವೆವು,

    ವಚನ ಎಂದೆಂದಿಗೂ.

    ನ್ಯಾಯ ನಿಷ್ಠೆಯ ತೋರಿ

    ನಾವು ಬಾಳುವೆವು.

  2. 2. ವಾಕ್ಯ ಸಾರುವೆವು,

    ಇದು ದೇವ ಆಜ್ಞೆಯು.

    ಹೀಗೆ ಹಂಚುವ ನಾವು

    ವಾಕ್ಯ ಎಲ್ಲೆಡೆಯೂ.

    ‘ದೇವ ಆಡಳಿತ

    ಅದಕೆ ಸುಸ್ವಾಗತ!’

    ಹೀಗೆ ಕರೆಯುವಾತ

    ಯೇಸು ಪ್ರೀತಿಸುತ.

    ಪಾಲಿದೆ ನಮಗೆ,

    ಸ್ವಾಗತ ಕೋರಲು ನಿಮಗೆ.

    ಎಷ್ಟೊಂದು ಸಂತೋಷ,

    ನೋಡಲು ಈ ಮಹಾ ಸಮೂಹ!

    ‘ದೇವ ಬೆಟ್ಟದಲಿ

    ವಾಸಿಸು ಸಂತೋಷದಿ’

    ಹೀಗೆ ಸ್ವರವೆತ್ತಿ

    ಹೇಳೋಣ ಉಲ್ಲಾಸದಿ!

( ಕೀರ್ತ. 43:3; 99:9; ಯೆಶಾ. 60:22; ಅ.ಕಾ. 16:5 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ