ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 139
  • ಕಲ್ಪಿಸಿ ನೋಡು ದೇವರ ರಾಜ್ಯ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಲ್ಪಿಸಿ ನೋಡು ದೇವರ ರಾಜ್ಯ!
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು
    ಯೆಹೋವನಿಗೆ ಹಾಡಿರಿ
  • ರಾಜ್ಯದ ಗೀತೆ ಬನ್ನಿ ಹಾಡಿರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ರಾಜ್ಯ ಗೀತೆಯಲ್ಲಿ ಜೊತೆಗೂಡಿರಿ!
    ಯೆಹೋವನಿಗೆ ಹಾಡಿರಿ
  • ಸ್ತುತಿ ಗೀತೆ ಹಾಡುವೆ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 139

ಗೀತೆ 139

ಕಲ್ಪಿಸಿ ನೋಡು ದೇವರ ರಾಜ್ಯ!

(ಪ್ರಕಟನೆ 21:1-5)

  1. 1. ದೇವ ರಾಜ್ಯ ಎಂಥ ಚೆಂದ!

    ಕಲ್ಪಿಸಿ ನೋಡು ನೀ ಆ ರಾಜ್ಯವ;

    ಸಾವು ನೋವು ಇಲ್ಲ ಆಗ,

    ಬಾಳಲ್ಲಿ ಎಂದೆಂದೂ ಆನಂದ;

    ದುಷ್ಟ ಜನ ಇರೋದಿಲ್ಲ,

    ನ್ಯಾಯ ನೀತಿ ಬಾಳೋದು ಸದಾ.

    ದೇವ ಕೊಡುವ ಶಾಶ್ವತ ಜೀವವ;

    ಸಂತೋಷದ ಹಾಡು ಕೇಳಿ ಬರೋದಾಗ:

    (ಪಲ್ಲವಿ)

    “ಯೆಹೋವ ದೇವಾ, ನೀನೇ ವಿಜೇತ!

    ನೂತನ ಲೋಕ ಪುತ್ರ ಮೂಲಕ.

    ಈ ಹೃದಯವು ಹಾಡಿದೆ ಕೀರ್ತಿಸುತ,

    ನಿಂಗೆ ಸಲ್ಲಲಿ ಮಹಿಮೆ, ಸ್ತುತಿ ಸದಾ!”

  2. 2. ದೇವ ಮಾತು ಈಡೇರುವ

    ಸಮಯವು ಬಹಳ ಮಧುರ;

    ಸುಳ್ಳಾಗದು ಆ ವಾಗ್ದಾನ

    ಕಾದಿದೆ ಹಾಯಾದ ಜೀವನ;

    ಮರಣದ ಸಂಕೋಲೆಗೆ

    ಬಂಧಿಯಾದ ಪ್ರಿಯರು ಆಗ

    ಎದ್ದು ಬರಲು ಮರಳಿ ಜೀವಂತ,

    ಉಲ್ಲಾಸದ ಗೀತೆ ಕೇಳಿ ಬರೋದಾಗ:

    (ಪಲ್ಲವಿ)

    “ಯೆಹೋವ ದೇವಾ, ನೀನೇ ವಿಜೇತ!

    ನೂತನ ಲೋಕ ಪುತ್ರ ಮೂಲಕ.

    ಈ ಹೃದಯವು ಹಾಡಿದೆ ಕೀರ್ತಿಸುತ,

    ನಿಂಗೆ ಸಲ್ಲಲಿ ಮಹಿಮೆ, ಸ್ತುತಿ ಸದಾ!”

(ಕೀರ್ತ. 37:10,11; ಯೆಶಾ. 65:17; ಯೋಹಾ. 5:28; 2 ಪೇತ್ರ 3:13 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ