ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w23 ನವೆಂಬರ್‌ ಪು. 2-7
  • ಯೆಹೋವ ಪರದೈಸ್‌ ತರ್ತಾನೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ಪರದೈಸ್‌ ತರ್ತಾನೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವ ಏನಂತ ಮಾತು ಕೊಟ್ಟಿದ್ದಾನೆ?
  • ಯೆಹೋವನ ಮಾತು ಖಂಡಿತ ನಿಜ ಆಗುತ್ತೆ
  • “ನೋಡು, ನಾನು ಎಲ್ಲ ಹೊಸದಾಗಿ ಮಾಡ್ತೀನಿ”
  • “ಇದನ್ನ ಜನ್ರು ನಂಬಬಹುದು ಯಾಕಂದ್ರೆ ಇದು ಸತ್ಯ. . . . ಅದೆಲ್ಲ ನಿಜ ಆಗಿದೆ!”
  • “ನಾನೇ ಆಲ್ಫ, ನಾನೇ ಒಮೇಗ”
  • ಯೆಹೋವನ ಮಾತಿನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸ್ಕೊಳ್ಳಿ
  • “ಆಲ್ಫ ಮತ್ತು ಒಮೇಗ” ಅಂದರೆ ಏನು? ಅದು ಯಾರನ್ನ ಸೂಚಿಸುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಒಂದು ನೂತನಾಕಾಶಮಂಡಲ ಮತ್ತು ಒಂದು ನೂತನ ಭೂಮಂಡಲ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ದೇವರು ನಮ್ಮನ್ನು ಯಾಕೆ ಸೃಷ್ಟಿ ಮಾಡಿದನು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಭೂಮಿಗಾಗಿ ದೇವರ ಉದ್ದೇಶವೇನು?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
w23 ನವೆಂಬರ್‌ ಪು. 2-7

ಅಧ್ಯಯನ ಲೇಖನ 46

ಯೆಹೋವ ಪರದೈಸ್‌ ತರ್ತಾನೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ!

“ಭೂಮಿ ಮೇಲೆ ಯಾರೆಲ್ಲ ತಮಗಾಗಿ ಆಶೀರ್ವಾದವನ್ನ ಬೇಡ್ಕೊಳ್ತಾರೋ ಅವರು ಸತ್ಯ ದೇವರಿಂದ ಆಶೀರ್ವಾದ ಪಡಿತಾರೆ.”—ಯೆಶಾ. 65:16.

ಗೀತೆ 152 ಯೆಹೋವ ನೀನೇ ಆಶ್ರಯ

ಈ ಲೇಖನದಲ್ಲಿ ಏನಿದೆ?a

1. ಯೆಶಾಯ ಇಸ್ರಾಯೇಲ್ಯರಿಗೆ ಏನು ಹೇಳಿದ?

ಪ್ರವಾದಿ ಯೆಶಾಯ ಯೆಹೋವನನ್ನ ‘ಸತ್ಯ ದೇವರು’ ಅಂತ ಕರೆದ. “ಸತ್ಯ” ಅನ್ನೋ ಪದದ ಅಕ್ಷರಾರ್ಥ “ಆಮೆನ್‌”. (ಯೆಶಾ. 65:16, ಪಾದಟಿಪ್ಪಣಿ) “ಆಮೆನ್‌” ಅಂದ್ರೆ “ಹಾಗೇ ಆಗಲಿ” ಅಥವಾ “ಖಂಡಿತ” ಅಂತ ಅರ್ಥ. ಆಮೆನ್‌ ಅನ್ನೋ ಪದ ಬೈಬಲಲ್ಲಿ ತುಂಬ ಸಲ ಇದೆ. ಯೆಹೋವ ಮತ್ತು ಯೇಸು ಏನಾದ್ರೂ ಮಾಡಿದ್ರೆ ಅಥವಾ ಹೇಳಿದ್ರೆ ಅದು ನಿಜ ಅಂತ ತೋರಿಸೋಕೆ ಈ ಪದವನ್ನ ಬಳಸಲಾಗಿದೆ. ಅದಕ್ಕೆ ಯೆಶಾಯ ಇಸ್ರಾಯೇಲ್ಯರಿಗೆ ಯೆಹೋವ ಏನಾದರೂ ಹೇಳಿದರೆ ಅದನ್ನು ಮಾಡೇ ಮಾಡ್ತಾನೆ ಅಂತ ಹೇಳಿದ. ಯೆಹೋವ ಈಗಾಗ್ಲೇ ತಾನು ಕೊಟ್ಟ ಮಾತನ್ನ ಉಳಿಸ್ಕೊಂಡು ಅದನ್ನ ಸಾಬೀತು ಮಾಡಿದ್ದಾನೆ.

2. (ಎ) ಭವಿಷ್ಯದ ಬಗ್ಗೆ ಯೆಹೋವ ಕೊಟ್ಟಿರೋ ಮಾತು ನಿಜ ಆಗುತ್ತೆ ಅಂತ ನಾವು ಯಾಕೆ ನಂಬಬಹುದು? (ಬಿ) ಯಾವ ಪ್ರಶ್ನೆಗಳಿಗೆ ನಾವೀಗ ಉತ್ತರ ತಿಳ್ಕೊಳ್ತೀವಿ?

2 ಯೆಶಾಯ ಇದನ್ನ ಹೇಳಿ ಸುಮಾರು 800 ವರ್ಷಗಳು ಆದ್ಮೇಲೆ ಅಪೊಸ್ತಲ ಪೌಲ, ದೇವರು “ಸುಳ್ಳು ಹೇಳೋಕೆ ಸಾಧ್ಯಾನೇ ಇಲ್ಲ” ಅಂತ ಹೇಳಿದ. (ಇಬ್ರಿ. 6:18) ಹಾಗಾಗಿ ಯೆಹೋವ ಭವಿಷ್ಯದಲ್ಲಿ ಏನು ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೋ ಅದು ಖಂಡಿತ ನಡೆಯುತ್ತೆ. ಒಂದು ತೊರೆಯಿಂದ ಸಿಹಿ ನೀರು, ಉಪ್ಪು ನೀರು ಎರಡೂ ಹೇಗೆ ಬರಲ್ವೋ ಹಾಗೇ ಯೆಹೋವನ ಬಾಯಿಂದ ಸತ್ಯ, ಸುಳ್ಳು ಎರಡೂ ಬರಲ್ಲ. ಆತನು ಸತ್ಯ ಮಾತ್ರ ಹೇಳ್ತಾನೆ. ಹಾಗಾಗಿ ಯೆಹೋವ, ಭವಿಷ್ಯದಲ್ಲಿ ಏನೆಲ್ಲ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೋ ಅದನ್ನ ನಾವು ಖಂಡಿತ ನಂಬಬಹುದು. ಹಾಗಾದ್ರೆ ಆತನು ಭವಿಷ್ಯದಲ್ಲಿ ಏನು ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ? ಅದು ನಿಜ ಆಗುತ್ತೆ ಅನ್ನೋದಕ್ಕೆ ಏನು ಗ್ಯಾರಂಟಿ?

ಯೆಹೋವ ಏನಂತ ಮಾತು ಕೊಟ್ಟಿದ್ದಾನೆ?

3. (ಎ) ಯೆಹೋವ ಕೊಟ್ಟಿರೋ ಯಾವ ಮಾತು ನಿಜ ಆಗಬೇಕು ಅಂತ ನಾವೆಲ್ರೂ ಕಾಯ್ತಾ ಇದ್ದೀವಿ? (ಪ್ರಕಟನೆ 21:3, 4) (ಬಿ) ಇದ್ರ ಬಗ್ಗೆ ಹೇಳುವಾಗ ಕೆಲವು ಜನ್ರು ಏನು ಹೇಳಬಹುದು?

3 “ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ” ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ಈ ಮಾತು ಆದಷ್ಟು ಬೇಗ ನೆರವೇರಬೇಕು ಅಂತ ನಾವೆಲ್ರೂ ಕಾಯ್ತಿದ್ದೀವಿ. (ಪ್ರಕಟನೆ 21:3, 4 ಓದಿ.) ಪರದೈಸ್‌ ಬಗ್ಗೆ ನಾವು ಜನ್ರ ಹತ್ತಿರ ಹೇಳುವಾಗ ಈ ವಚನವನ್ನ ತುಂಬ ಸಲ ತೋರಿಸಿರ್ತೀವಿ. ಅದಕ್ಕೆ ಕೆಲವರು “ಇದೆಲ್ಲಾ ಕೇಳೋಕಷ್ಟೇ ಚೆನ್ನಾಗಿರುತ್ತೆ ಆದ್ರೆ ನಿಜವಾಗ್ಲೂ ನಡೆಯಲ್ಲ” ಅಂತ ಹೇಳಿರಬಹುದು.

4. (ಎ) ಯೆಹೋವ ದೇವರಿಗೆ ಏನು ಗೊತ್ತು? (ಬಿ) ಯೆಹೋವ ಬರೀ ಮಾತು ಕೊಟ್ಟಿದ್ದಷ್ಟೇ ಅಲ್ಲದೇ ಇನ್ನೇನು ಮಾಡಿದ್ದಾನೆ?

4 ಯೆಹೋವ ದೇವರು ಅಪೊಸ್ತಲ ಯೋಹಾನನಿಂದ ಪರದೈಸ್‌ ಬಗ್ಗೆ ಇರೋ ಸಿಹಿ ಸುದ್ದಿಯನ್ನ ಬರೆಸಿದನು. ಯಾಕಂದ್ರೆ ಮುಂದೊಂದು ದಿನ ನಾವು ಈ ಸಹಿ ಸುದ್ದಿಯನ್ನ ಜನ್ರಿಗೆ ಸಾರ್ತೀವಿ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತಿತ್ತು. ಈ “ಹೊಸ ವಿಷ್ಯಗಳನ್ನ” ಜನ್ರು ಅಷ್ಟು ಸುಲಭವಾಗಿ ನಂಬಲ್ಲ ಅಂತಾನೂ ಯೆಹೋವನಿಗೆ ಗೊತ್ತಿತ್ತು. (ಯೆಶಾ. 42:9; 60:2; 2 ಕೊರಿಂ. 4:3, 4) ಹಾಗಾಗಿ ನಾವು ಮತ್ತು ಬೇರೆಯವರು ಪ್ರಕಟನೆ 21:3, 4ರಲ್ಲಿರೋ ಮಾತನ್ನ ನಂಬೋಕೆ ಏನು ಮಾಡಬೇಕು? ದೇವರು ತಾನು ಕೊಟ್ಟ ಮಾತುಗಳನ್ನ ನಂಬೋಕೆ ಕೆಲವು ಕಾರಣಗಳನ್ನ ಕೊಟ್ಟಿದ್ದಾನೆ. ಅದು ಏನಂತ ನಾವೀಗ ನೋಡೋಣ.

ಯೆಹೋವನ ಮಾತು ಖಂಡಿತ ನಿಜ ಆಗುತ್ತೆ

5. ದೇವರು ಕೊಟ್ಟಿರೋ ಮಾತುಗಳು ನಿಜ ಆಗುತ್ತೆ ಅಂತ ನಂಬೋಕೆ ಯಾವ ವಚನಗಳು ಸಹಾಯ ಮಾಡುತ್ತೆ?

5 ಯೆಹೋವ ಕೊಟ್ಟ ಮಾತುಗಳು ಖಂಡಿತ ನಿಜ ಆಗುತ್ತೆ ಅಂತ ನಂಬೋಕೆ ಕೆಲವು ವಚನಗಳು ಸಹಾಯ ಮಾಡುತ್ತೆ. ಅಲ್ಲಿ ಹೀಗಿದೆ: “ಆಗ ಸಿಂಹಾಸನದ ಮೇಲೆ ಕೂತಿದ್ದ ದೇವರು ಹೀಗೆ ಹೇಳಿದನು: ‘ನೋಡು, ನಾನು ಎಲ್ಲ ಹೊಸದಾಗಿ ಮಾಡ್ತೀನಿ. ಈ ಮಾತುಗಳನ್ನ ಬರಿ. ಇದನ್ನ ಜನ್ರು ನಂಬಬಹುದು ಯಾಕಂದ್ರೆ ಇದು ಸತ್ಯ.’ ಆತನು ನನಗೆ ಹೀಗೆ ಹೇಳಿದನು: ‘ಅದೆಲ್ಲ ನಿಜ ಆಗಿದೆ! ನಾನೇ ಆಲ್ಫ, ನಾನೇ ಒಮೇಗ. ನಾನೇ ಆರಂಭ, ನಾನೇ ಅಂತ್ಯ.’”—ಪ್ರಕ. 21:5, 6ಎ.

6. ಪ್ರಕಟನೆ 21:5, 6ರಲ್ಲಿರೋ ಮಾತುಗಳು ಯೆಹೋವ ತನ್ನ ಮಾತುಗಳನ್ನ ನಿಜ ಮಾಡ್ತಾನೆ ಅಂತ ನಂಬೋಕೆ ಹೇಗೆ ಸಹಾಯ ಮಾಡುತ್ತೆ?

6 ಯೆಹೋವ ಕೊಟ್ಟಿರೋ ಮಾತುಗಳು ನಿಜ ಆಗುತ್ತೆ ಅಂತ ನಂಬೋಕೆ ಈ ವಚನಗಳು ಹೇಗೆ ಸಹಾಯ ಮಾಡುತ್ತೆ? ಇದ್ರ ಬಗ್ಗೆ ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ ಅನ್ನೋ ಪುಸ್ತಕ ಹೀಗೆ ಹೇಳುತ್ತೆ: “ನಂಬಿಗಸ್ತ ಮಾನವರಿಗಾಗಿ ಈ ಭಾವೀ ಆಶೀರ್ವಾದಗಳ ಖಾತರಿಯನ್ನು, ಯಾ ಹಕ್ಕುಪತ್ರಗಳನ್ನು ಯೆಹೋವನೇ ಸ್ವತಃ ಸಹಿಮಾಡುವಂತೆ ಇದು ಇದೆ.”b ಅಂದ್ರೆ ಆತನು ಕೊಟ್ಟಿರೋ ಮಾತುಗಳು ನಿಜ ಆಗೋಕೆ ಆತನೇ ಸಹಿ ಹಾಕಿದ ಹಾಗೆ ಇದೆ. ಪ್ರಕಟನೆ 21:3, 4ರಲ್ಲಿ ಯೆಹೋವ ತಾನು ಏನು ಮಾಡ್ತೀನಿ ಅಂತ ಹೇಳಿದ್ದಾನೆ. ಆದ್ರೆ ವಚನ 5 ಮತ್ತು 6ರಲ್ಲಿ ತಾನು ಕೊಟ್ಟ ಮಾತನ್ನ ಖಂಡಿತ ಮಾಡ್ತೀನಿ ಅಂತ ಸಹಿ ಹಾಕಿದ್ದಾನೆ. ಆ ಮಾತುಗಳ ಬಗ್ಗೆ ನಾವು ಈಗ ಒಂದೊಂದಾಗಿ ನೋಡೋಣ.

7. ವಚನ 5ರ ಆರಂಭದಲ್ಲಿ ಯಾರು ಮಾತಾಡ್ತಿದ್ದಾರೆ? ಮತ್ತು ಆ ವಚನ ಯಾಕೆ ವಿಶೇಷವಾಗಿದೆ?

7 “ಆಗ ಸಿಂಹಾಸನದ ಮೇಲೆ ಕೂತಿದ್ದ ದೇವರು ಹೀಗೆ ಹೇಳಿದನು.” ಅಂತ ವಚನ 5 ಶುರುವಾಗುತ್ತೆ. (ಪ್ರಕ. 21:5ಎ) ಈ ಮಾತುಗಳು ತುಂಬ ವಿಶೇಷವಾಗಿದೆ. ಯಾಕಂದ್ರೆ ಯೆಹೋವ ದೇವರು ಪ್ರಕಟನೆ ಪುಸ್ತಕದಲ್ಲಿ ನೇರವಾಗಿ ಮಾತಾಡಿರೋದು ಮೂರೇ ಸಲ. ಅದ್ರಲ್ಲಿ ಇದೂ ಒಂದು. ಈ ಮಾತನ್ನ ದೇವದೂತರಾಗ್ಲಿ, ಯೇಸುವಾಗ್ಲಿ ಹೇಳಲಿಲ್ಲ. ಯೆಹೋವನೇ ನೇರವಾಗಿ ಹೇಳಿದ್ದು! ಯೆಹೋವ “ಸುಳ್ಳು ಹೇಳೋಕೆ ಸಾಧ್ಯಾನೇ ಇಲ್ಲದ ದೇವರು.” (ತೀತ 1:2) ಹಾಗಾಗಿ ಪ್ರಕಟನೆ 21:5, 6ರಲ್ಲಿ ಹೇಳಿರೋ ಮಾತು ಸುಳ್ಳಾಗಲ್ಲ ಅಂತ ನಾವು ಕಣ್ಮುಚ್ಚಿ ನಂಬಬಹುದು.

“ನೋಡು, ನಾನು ಎಲ್ಲ ಹೊಸದಾಗಿ ಮಾಡ್ತೀನಿ”

8. ಯೆಹೋವ “ನೋಡು” ಅಂತ ಯಾಕೆ ಹೇಳ್ತಿದ್ದಾನೆ? (ಯೆಶಾಯ 46:10)

8 ಈಗ ನಾವು “ನೋಡು” ಅನ್ನೋ ಪದದ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಣ. (ಪ್ರಕ. 21:5) “ನೋಡು” ಅನ್ನೋ ಪದ ಪ್ರಕಟನೆ ಪುಸ್ತಕದಲ್ಲಿ ತುಂಬ ಸಲ ಇದೆ. ಬೈಬಲನ್ನ ಬರೆದ ಮೂಲ ಭಾಷೆಯಲ್ಲಿ “ನೋಡು” ಅನ್ನೋ ಪದ ಆದ್ಮೇಲೆ ಒಂದು ಆಶ್ಚರ್ಯ ಸೂಚಕ ಚಿಹ್ನೆ ಇದೆ. ಈ ಚಿಹ್ನೆಯನ್ನ ಯಾಕೆ ಬಳಸ್ತಿದ್ರು ಅಂತ ಒಂದು ರೆಫರೆನ್ಸ್‌ ಹೀಗೆ ಹೇಳುತ್ತೆ: “ಮುಂದೆ ಏನು ಹೇಳುತ್ತೋ ಅದಕ್ಕೆ ಓದುಗರು ಗಮನ ಕೊಡ್ಲಿ ಅಂತ ಈ ಚಿಹ್ನೆಯನ್ನ ಬಳಸ್ತಾರೆ.” ಆ ವಚನದಲ್ಲಿ ಯೆಹೋವ “ನೋಡು” ಅಂತ ಹೇಳಿದ್ಮೇಲೆ ಮುಂದೆ ಏನು ಹೇಳ್ತಿದ್ದಾನೆ ನೋಡಿ. “ನಾನು ಎಲ್ಲ ಹೊಸದಾಗಿ ಮಾಡ್ತೀನಿ.” ಇದು ಯೆಹೋವ ಮುಂದೆ ಮಾಡ್ಲಿಕ್ಕಿರೋ ಬದಲಾವಣೆಯ ಬಗ್ಗೆ ಹೇಳುತ್ತೆ. ಆದ್ರೆ ಯೆಹೋವ ದೇವರಿಗೆ ಮುಂದೆ ಇದು ನಿಜ ಆಗೇ ಆಗುತ್ತೆ ಅಂತ ಗೊತ್ತಿರೋದ್ರಿಂದ ಈಗಾಗ್ಲೇ ಇದು ಆಗಿದೆ ಅನ್ನೋ ರೀತಿಯಲ್ಲಿ ಮಾತಾಡ್ತಿದ್ದಾನೆ.—ಯೆಶಾಯ 46:10 ಓದಿ.

9. (ಎ) ಯೆಹೋವ ಯಾವ ಎರಡು ಕೆಲಸಗಳನ್ನ ಮಾಡ್ತಾನೆ? (ಬಿ) ಈಗಿರೋ ‘ಆಕಾಶ ಮತ್ತು ಭೂಮಿಗೆ’ ಏನಾಗುತ್ತೆ?

9 ಈಗ ನಾವು “ನಾನು ಎಲ್ಲ ಹೊಸದಾಗಿ ಮಾಡ್ತೀನಿ” ಅಂತ ಯೆಹೋವ ಹೇಳಿದ ಮಾತಿಗೆ ಗಮನ ಕೊಡೋಣ. ಈ ಅಧ್ಯಾಯದಲ್ಲಿ ಯೆಹೋವ ಮಾಡೋ ಎರಡು ಕೆಲಸಗಳ ಬಗ್ಗೆ ಹೇಳುತ್ತೆ. ಒಂದನೇದಾಗಿ, ಆತನು ಹಳೇ ವಿಷ್ಯಗಳನ್ನ ತೆಗೆದು ಹಾಕ್ತಾನೆ. ಎರಡನೇದಾಗಿ, ಆತನು ಹೊಸ ವಿಷ್ಯಗಳನ್ನ ತರ್ತಾನೆ. ಹಳೇ ವಿಷ್ಯಗಳು ಅಂದ್ರೆ ಯಾವುದು? ಪ್ರಕಟನೆ 21:1ರಲ್ಲಿ “ಮುಂಚೆ ಇದ್ದ ಆಕಾಶ, ಭೂಮಿ ಇಲ್ಲದೆ ಹೋಗಿತ್ತು” ಅಂತ ಹೇಳ್ತಾ ಇದೆ. “ಮುಂಚೆ ಇದ್ದ ಆಕಾಶ” ಅಂದ್ರೆ ಸೈತಾನ ಮತ್ತು ಅವನ ಕೆಟ್ಟ ದೇವದೂತರ ಕೈ ಕೆಳಗಿರೋ ಸರ್ಕಾರಗಳು. (ಮತ್ತಾ. 4:8, 9; 1 ಯೋಹಾ. 5:19) ‘ಮುಂಚೆ ಇದ್ದ ಭೂಮಿ’ ಅಂದ್ರೆ ಏನು? ಬೈಬಲಲ್ಲಿ “ಭೂಮಿ” ಅಂತ ಹೇಳಿರೋದು ಮನುಷ್ಯರನ್ನ ಸೂಚಿಸುತ್ತೆ. (ಆದಿ. 11:1; ಕೀರ್ತ. 96:1) ಹಾಗಾಗಿ ಕೆಟ್ಟ ಜನ್ರಿಂದ ತುಂಬಿರೋ ಈ ಸಮಾಜನೇ ‘ಮುಂಚೆ ಇದ್ದ ಭೂಮಿ.’ ಯೆಹೋವ ದೇವರು ಈಗಿರೋ ‘ಆಕಾಶ ಮತ್ತು ಭೂಮಿ’ ಅಂದ್ರೆ ಮಾನವ ಸರ್ಕಾರ ಮತ್ತು ಕೆಟ್ಟ ಜನ್ರಿರೋ ಸಮಾಜವನ್ನ ರಿಪೇರಿ ಮಾಡಲ್ಲ, ಬದ್ಲಿಗೆ ಅದನ್ನೆಲ್ಲ ನಾಶ ಮಾಡಿ “ಹೊಸ ಆಕಾಶ, ಹೊಸ ಭೂಮಿಯನ್ನ” ತರ್ತಾನೆ. ಅಂದ್ರೆ ಒಂದು ಹೊಸ ಸರ್ಕಾರ ತರ್ತಾನೆ ಮತ್ತು ಅದ್ರಲ್ಲಿ ಬರೀ ಒಳ್ಳೇ ಜನ್ರಿರೋ ಹಾಗೆ ಮಾಡ್ತಾನೆ.

10. ಯೆಹೋವ ಏನನ್ನ ಹೊಸದಾಗಿ ಮಾಡ್ತಾನೆ?

10 ಯೆಹೋವ ಮಾಡೋ ಇನ್ನೊಂದು ಕೆಲಸ ಏನು ಅಂತ ಪ್ರಕಟನೆ 21:5ರಲ್ಲಿದೆ. ಈ ವಚನದಲ್ಲಿ ಯೆಹೋವ “ನಾನು ಎಲ್ಲ ಹೊಸದಾಗಿ ಮಾಡ್ತೀನಿ” ಅಂತ ಹೇಳಿದ್ದಾನೆ. ಅಂದ್ರೆ ಯೆಹೋವ ದೇವರು ಇರೋದನ್ನೇ ಹೊಸದಾಗಿ ಮಾಡ್ತಾನೆ. ಅದ್ರ ಬದ್ಲು ‘ಎಲ್ಲಾ ವಿಷ್ಯಗಳನ್ನ ಮೊದ್ಲಿಂದ ಮತ್ತೆ ಹೊಸದಾಗಿ ಮಾಡಲ್ಲ’. ಯೆಹೋವ ಈಗಿರೋ ಭೂಮಿಯನ್ನ ಸುಂದರ ತೋಟ ಮಾಡ್ತಾನೆ. ಮನುಷ್ಯರು ಪರಿಪೂರ್ಣರಾಗೋ ತರ ಮಾಡ್ತಾನೆ. ಅಷ್ಟೇ ಅಲ್ಲ ಯೆಶಾಯ ಹೇಳಿದ ಹಾಗೆ ಕುಂಟರಿಗೆ ಕಾಲು ಬರುತ್ತೆ, ಕಣ್ಣು ಕಾಣದವ್ರಿಗೆ ಕಾಣಿಸುತ್ತೆ, ಕಿವಿ ಕೇಳದವ್ರಿಗೆ ಕೇಳಿಸುತ್ತೆ. ಅಷ್ಟೇ ಯಾಕೆ? ಸತ್ತಿರುವವರು ಕೂಡ ಜೀವಂತವಾಗಿ ಬರ್ತಾರೆ.—ಯೆಶಾ. 25:8; 35:1-7.

“ಇದನ್ನ ಜನ್ರು ನಂಬಬಹುದು ಯಾಕಂದ್ರೆ ಇದು ಸತ್ಯ. . . . ಅದೆಲ್ಲ ನಿಜ ಆಗಿದೆ!”

11. ಯೆಹೋವ ಯೋಹಾನನಿಗೆ ಏನು ಹೇಳಿದನು?

11 ತಾನು ಕೊಟ್ಟ ಮಾತು ನಿಜ ಆಗುತ್ತೆ ಅನ್ನೋದಕ್ಕೆ ಯೆಹೋವ ಇನ್ನೂ ಯಾವ ಗ್ಯಾರಂಟಿ ಕೊಟ್ಟಿದ್ದಾನೆ? ಯೆಹೋವ ದೇವರು ಯೋಹಾನನಿಗೆ “ಈ ಮಾತುಗಳನ್ನ ಬರಿ” ಅಂತ ಹೇಳಿ ಸುಮ್ಮನಾಗಲಿಲ್ಲ. (ಪ್ರಕ. 21:5) “ಇದನ್ನ ಜನ್ರು ನಂಬಬಹುದು ಯಾಕಂದ್ರೆ ಇದು ಸತ್ಯ” ಅಂತ ಹೇಳಿ ಕಾರಣನೂ ಕೊಟ್ಟನು. ಹಾಗಾಗಿ ಯೆಹೋವ ಕೊಟ್ಟ ಮಾತು ನಿಜವಾಗ್ಲೂ ನಡಿಯುತ್ತೆ ಅಂತ ನಾವು ನಂಬಬಹುದು. ಯೋಹಾನ ಅದನ್ನ ಬರೆದಿದ್ದು ಒಳ್ಳೇದೇ ಆಯ್ತು. ಯಾಕಂದ್ರೆ ‘ಪರದೈಸ್‌ ತರ್ತೀನಿ’ ಅಂತ ಯೆಹೋವ ಹೇಳಿದ ಮಾತನ್ನ ನಮಗೀಗ ಓದೋಕೆ ಆಗ್ತಿದೆ, ಆತನು ನಮಗೆ ಕೊಡಲಿಕ್ಕಿರೋ ಆಶೀರ್ವಾದದ ಬಗ್ಗೆ ಯೋಚಿಸೋಕೆ ಆಗ್ತಿದೆ.

12. “ಅದೆಲ್ಲ ನಿಜ ಆಗಿದೆ!” ಅಂತ ಯೆಹೋವ ಯಾಕೆ ಹೇಳ್ತಿದ್ದಾನೆ?

12 ಆಮೇಲೆ ದೇವರು ಏನು ಹೇಳ್ತಿದ್ದಾನೆ? “ಅದೆಲ್ಲ ನಿಜ ಆಗಿದೆ!” (ಪ್ರಕ. 21:6) ಇಲ್ಲಿ ಯೆಹೋವ ತಾನು ಹೇಳಿದ್ದೆಲ್ಲ ನಿಜ ಆಗಿದೆ ಅಂತ ಹೇಳ್ತಿದ್ದಾನೆ. ಯಾಕೆ ಹಾಗೆ ಹೇಳ್ತಿದ್ದಾನೆ? ಯಾಕಂದ್ರೆ ಯೆಹೋವ ದೇವರ ಉದ್ದೇಶನ ತಡೆಯೋಕೆ ಯಾರಿಗೂ ಆಗಲ್ಲ. ತನ್ನ ಮಾತನ್ನ ನಂಬೋಕೆ ಯೆಹೋವ ಇನ್ನೂ ಒಂದು ಗ್ಯಾರಂಟಿ ಕೊಡ್ತಿದ್ದಾನೆ. ಅದು ಯಾವುದು ಅಂತ ಈಗ ನೋಡೋಣ.

“ನಾನೇ ಆಲ್ಫ, ನಾನೇ ಒಮೇಗ”

13. ಯೆಹೋವ ಯಾಕೆ “ನಾನೇ ಆಲ್ಫ, ನಾನೇ ಒಮೇಗ” ಅಂತ ಹೇಳ್ತಿದ್ದಾನೆ?

13 ಈಗಾಗ್ಲೇ ನೋಡಿದ ತರ ಯೆಹೋವ ದೇವರು ಯೋಹಾನನ ಹತ್ರ ಮೂರು ಸಲ ನೇರವಾಗಿ ಮಾತಾಡಿದ್ದಾನೆ. (ಪ್ರಕ. 1:8; 21:5, 6; 22:13) ಪ್ರತಿ ಸಲ ಅವನ ಹತ್ತಿರ ಮಾತಾಡುವಾಗ “ನಾನೇ ಆಲ್ಫ, ನಾನೇ ಒಮೇಗ” ಅಂತ ಹೇಳಿದನು. ಗ್ರೀಕ್‌ ಅಕ್ಷರಮಾಲೆ ಶುರುವಾಗೋದು ಆಲ್ಫ ಅನ್ನೋ ಅಕ್ಷರದಿಂದ ಮತ್ತು ಕೊನೆ ಆಗೋದು ಒಮೇಗ ಅನ್ನೋ ಅಕ್ಷರದಿಂದ. ಹಾಗಾಗಿ ಯೆಹೋವ “ನಾನೇ ಆಲ್ಫ, ನಾನೇ ಒಮೇಗ” ಅಂತ ಹೇಳಿರೋದ್ರ ಅರ್ಥ, ಒಂದು ವಿಷ್ಯವನ್ನ ಆತನು ಶುರು ಮಾಡಿದ್ರೆ ಅದನ್ನ ಖಂಡಿತ ಕೊನೆ ಮಾಡೇ ಮಾಡ್ತಾನೆ.

ಚಿತ್ರಗಳು: ಯೆಹೋವನ ಉದ್ದೇಶ ನೇರವೇರುತ್ತಾ ಇದೆ . 1. “ಆಲ್ಫ.” ಆದಾಮ, ಹವ್ವ ಏದೆನ್‌ ತೋಟದಲ್ಲಿದ್ದಾರೆ . 2. ಅವರು ದೇವರ ಮಾತು ಕೇಳದೆ ಇದ್ದಿದ್ರಿಂದ ಏನಾಯ್ತು ಅಂತ ತೋರಿಸಿದ್ದಾರೆ . ಕೆಟ್ಟ ದೇವದೂತ ಸೈತಾನ ನಿಂತಿದ್ದಾನೆ , ಆದಾಮ ಮತ್ತು ಹವ್ವಗೆ ವಯಸ್ಸಾಗಿದೆ , ಬಾಬೆಲಿನ ಗೋಪುರ , ಸಮಾಧಿ, ಸೈನಿಕರು, ಮಿಲಿಟರಿ ಟ್ಯಾಂಕ್‌ , ಯುದ್ಧ ವಿಮಾನಗಳು, ಕಾರ್ಖಾನೆಗಳಿಂದ ಮಾಲಿನ್ಯ ಆಗ್ತಿದೆ , ಜನ್ರು ಹೋರಾಡ್ತಿದ್ದಾರೆ . ಅದ್ರ ಕೆಳಗೆ ಯೆಹೋವನ ಉದ್ದೇಶ ನೆರವೇರುತ್ತಾ ಇರೋದನ್ನ ತೋರಿಸೋಕೆ ಎರಡು ಚಿತ್ರ ಇದೆ : ಬಿಡುಗಡೆ ಬೆಲೆ ಕೊಡೋಕೆ ಯೇಸು ಹಿಂಸಾ ಕಂಬದ ಮೇಲಿದ್ದಾನೆ . ಹಿಂದಿನ ಕಾಲದಲ್ಲಿದ್ದ ಮತ್ತು ಈಗಿರೋ ಆದಾಮ, ಹವ್ವರ ನೀತಿವಂತ ಮಕ್ಕಳು ಒಟ್ಟಿಗೆ ನಿಂತಿದ್ದಾರೆ . 3. “ಒಮೇಗ .” ಜನ್ರೆಲ್ಲ ಪರದೈಸಲ್ಲಿ ಖುಷಿಖುಷಿಯಾಗಿ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ .

ಯೆಹೋವ ಒಂದು ವಿಷ್ಯವನ್ನ ಶುರು ಮಾಡಿದ್ರೆ ಅದನ್ನ ಕೊನೇ ಮಾಡೇ ಮಾಡ್ತಾನೆ (ಪ್ಯಾರ 14, 17 ನೋಡಿ)

14. (ಎ) ಯೆಹೋವ ಒಂದರ್ಥದಲ್ಲಿ “ಆಲ್ಫ” ಅಂತ ಯಾವಾಗ ಹೇಳಿದನು? ಮತ್ತು “ಒಮೇಗ” ಅಂತ ಯಾವಾಗ ಹೇಳಲಿಕ್ಕಿದ್ದನು? (ಬಿ) ಆದಿಕಾಂಡ 2:1-3ರಲ್ಲಿ ನಮಗೆ ಯಾವ ಗ್ಯಾರಂಟಿ ಸಿಗುತ್ತೆ?

14 ಯೆಹೋವ ದೇವರು ಆದಾಮ, ಹವ್ವನ್ನ ಸೃಷ್ಟಿ ಮಾಡಿದ ಮೇಲೆ “ನೀವು ತುಂಬ ಮಕ್ಕಳನ್ನ ಪಡೆದು ಜಾಸ್ತಿ ಜನ ಆಗಿ ಇಡೀ ಭೂಮಿ ತುಂಬ್ಕೊಳಿ. ಅದು ನಿಮ್ಮ ಅಧಿಕಾರದ ಕೆಳಗಿರಲಿ.” ಅಂತ ಅವ್ರಿಗೆ ಹೇಳಿದನು. (ಆದಿ. 1:28) ಯೆಹೋವ ಈ ಉದ್ದೇಶದ ಬಗ್ಗೆ ತಿಳಿಸಿದಾಗ “ಆಲ್ಫ” ಅಂತ ಹೇಳಿದ ಹಾಗೆ ಇತ್ತು. ಯೆಹೋವ ಅಂದ್ಕೊಂಡ ಹಾಗೆ ಒಂದುವೇಳೆ ಆದಾಮ ಹವ್ವರ ಮಕ್ಕಳು ಇಡೀ ಭೂಮಿಯನ್ನ ತುಂಬ್ಕೊಂಡು ಅದನ್ನ ಪರದೈಸಾಗಿ ಮಾಡಿದ್ದಿದ್ರೆ ಆಗ ಯೆಹೋವ “ಒಮೇಗ” ಅಂತ ಹೇಳಿರ್ತಿದ್ದನು. ಅದು ನಮಗೆ ಹೇಗೆ ಗೊತ್ತು? “ಆಕಾಶ, ಭೂಮಿ, ಅವುಗಳಲ್ಲಿ ಇರೋ ಎಲ್ಲವನ್ನ” ಸೃಷ್ಟಿಸಿದ ಮೇಲೆ ಯೆಹೋವ ತಾನು ಅಂದ್ಕೊಂಡಿದ್ದು ನಡದೇ ನಡೆಯುತ್ತೆ ಅಂತ ನಂಬಿದನು. ಅದಕ್ಕೊಂದು ಗ್ಯಾರಂಟಿನೂ ಕೊಟ್ಟಿದ್ದನು. ಅದು ಆದಿಕಾಂಡ 2:1-3ರಲ್ಲಿದೆ. (ಓದಿ.) ಈ ವಚನದಲ್ಲಿ ಯೆಹೋವ ಏಳನೇ ದಿನವನ್ನ “ಪವಿತ್ರ” ಅಂತ ಹೇಳಿದನು. ಯಾಕಂದ್ರೆ ಏಳನೇ ದಿನದ ಕೊನೆಯಲ್ಲಿ ತನ್ನ ಉದ್ದೇಶ ಖಂಡಿತ ನೆರವೇರುತ್ತೆ ಅನ್ನೋ ಗ್ಯಾರಂಟಿ ಆತನಿಗಿತ್ತು.

15. ಯೆಹೋವನ ಉದ್ದೇಶ ಹಾಳು ಮಾಡಿಬಿಟ್ಟೆ ಅಂತ ಸೈತಾನ ಯಾಕೆ ಅಂದ್ಕೊಂಡಿರಬಹುದು?

15 ಆದಾಮ ಹವ್ವ ದೇವರ ಮಾತು ಕೇಳದೆ ಇದ್ದಿದ್ರಿಂದ ಅವರ ಸಂತತಿಗೆ ಪಾಪ ಮತ್ತು ಮರಣ ಬಂತು. (ರೋಮ. 5:12) ಹೀಗೆ ಸೈತಾನ, ಇಡೀ ಭೂಮಿಯಲ್ಲಿ ಪರಿಪೂರ್ಣ ಮನುಷ್ಯರು ತುಂಬ್ಕೊಬೇಕು ಅಂತ ಇದ್ದ ಯೆಹೋವನ ಉದ್ದೇಶ ಹಾಳು ಮಾಡಿಬಿಟ್ಟ. ಆಗ ಅವನು ಏನೆಲ್ಲಾ ಅಂದ್ಕೊಂಡಿರಬಹುದು? ಯೆಹೋವ ದೇವರು ತಾನು ಕೊಟ್ಟಿರೋ ಮಾತನ್ನ ಉಳಿಸ್ಕೊಳ್ಳೋಕೆ ಆಗಲ್ಲ, “ಒಮೇಗ” ಅಂತ ಹೇಳೋಕೇ ಆಗಲ್ಲ. ಅಷ್ಟೇ ಅಲ್ಲ ಈಗ ಯೆಹೋವನಿಗೆ ಇರೋದು ಎರಡೇ ದಾರಿ. ಅದ್ರಲ್ಲೊಂದು, ಆದಾಮ ಹವ್ವನ್ನ ಸಾಯಿಸಿ ಅವ್ರ ತರನೇ ಇನ್ನೊಂದು ಪರಿಪೂರ್ಣ ಜೋಡಿಯನ್ನ ಸೃಷ್ಟಿ ಮಾಡಬೇಕು ಅಂತ ಅವನು ಅಂದ್ಕೊಂಡಿರ್ತಾನೆ. ಒಂದುವೇಳೆ ಸೈತಾನ ಅಂದ್ಕೊಂಡ ಹಾಗೆ ಯೆಹೋವ ಮಾಡಿದ್ದಿದ್ರೆ ದೇವರು ಸುಳ್ಳುಗಾರ ಅಂತ ಅವನು ಹೇಳ್ತಿದ್ದ. ಯಾಕಂದ್ರೆ ಆದಿಕಾಂಡ 1:28ರಲ್ಲಿ ಯೆಹೋವ, ಆದಾಮ ಹವ್ವಗೆ ಅವರ ಸಂತತಿ ಇಡೀ ಭೂಮಿಯನ್ನ ತುಂಬ್ಕೊಳ್ಳುತ್ತೆ ಅಂತ ಹೇಳಿದನು.

16. ಯೆಹೋವ ತನ್ನ ಮಾತನ್ನ ಉಳಿಸ್ಕೊಳ್ಳೋಕೆ ಆಗಲ್ಲ ಅಂತ ಸೈತಾನ ಯಾಕೆ ಅಂದ್ಕೊಂಡಿರಬಹುದು?

16 ಎರಡನೇ ದಾರಿ, ಯೆಹೋವ ಆದಾಮ ಹವ್ವಗೆ ಮಕ್ಕಳಾಗೋಕೆ ಬಿಟ್ಟುಬಿಡ್ತಾನೆ, ಆಗ ಅವ್ರೆಲ್ರೂ ಜೀವನ ಪರ್ಯಂತ ಅಪರಿಪೂರ್ಣರಾಗಿನೇ ಇರ್ತಾರೆ ಅಂತನೂ ಸೈತಾನ ಅಂದ್ಕೊಂಡಿರ್ತಾನೆ. (ಪ್ರಸಂ. 7:20; ರೋಮ. 3:23) ಅವನು ಅಂದ್ಕೊಂಡ ಹಾಗೆ ಯೆಹೋವ ಮಾಡಿದ್ದಿದ್ರೆ ಆಗ್ಲೂ ಯೆಹೋವ ಸುಳ್ಳುಗಾರ ಆಗ್ತಿದ್ದನು. ಯಾಕಂದ್ರೆ ಆದಾಮ ಹವ್ವರ ಪರಿಪೂರ್ಣ ಮಕ್ಕಳು ಇಡೀ ಭೂಮಿಯನ್ನ ತುಂಬ್ಕೊಂಡು ಅದನ್ನ ಪರದೈಸಾಗಿ ಮಾಡೋ ಯೆಹೋವನ ಉದ್ದೇಶ ನೆರವೇರ್ತಾ ಇರ್ಲಿಲ್ಲ.

17. ಸೈತಾನ ಮತ್ತು ಆದಾಮ ಹವ್ವ ಹಾಳು ಮಾಡಿದ್ದನ್ನ ಯೆಹೋವ ಹೇಗೆ ಸರಿ ಮಾಡಿದನು? ಇದ್ರಿಂದ ಯಾವೆಲ್ಲ ಪ್ರಯೋಜನ ಸಿಗುತ್ತೆ? (ಚಿತ್ರನೂ ನೋಡಿ.)

17 ಯೆಹೋವ ಮುಂದೆ ತಗೊಳ್ಳೋ ತೀರ್ಮಾನದ ಬಗ್ಗೆ ಸೈತಾನ ಕನಸು ಮನಸ್ಸಲ್ಲೂ ಯೋಚಿಸಿರಲಿಕ್ಕಿಲ್ಲ. (ಕೀರ್ತ. 92:5) ಆದಾಮ ಹವ್ವಗೆ ಮಕ್ಕಳನ್ನ ಪಡೆಯೋಕೆ ಬಿಟ್ಟುಕೊಟ್ಟಿದ್ರಿಂದ ತಾನು ಸುಳ್ಳುಗಾರ ಅಲ್ಲ, ಸತ್ಯವಂತ ಅಂತ ಯೆಹೋವ ನಿರೂಪಿಸಿದನು. ಯೆಹೋವ ಒಂದು ವಿಷ್ಯವನ್ನ ಮಾಡ್ತೀನಿ ಅಂತ ಹೇಳಿದ್ರೆ ಅದನ್ನ ತಡೆಯೋಕೆ ಯಾರಿಂದನೂ ಆಗಲ್ಲ. ಅದಕ್ಕೆ ಆತನು ಒಂದು ‘ಸಂತಾನವನ್ನ’ ಕೊಟ್ಟನು. ಆ ಸಂತಾನ ಬಿಡುಗಡೆ ಬೆಲೆ ಕೊಟ್ಟು ಆದಾಮ ಹವ್ವರ ಮಕ್ಕಳ ಜೀವ ಉಳಿಸುತ್ತೆ. (ಆದಿ. 3:15; 22:18) ಯೆಹೋವ ಈ ರೀತಿ ಬಿಡುಗಡೆ ಬೆಲೆಯ ಏರ್ಪಾಡು ಮಾಡಿದ್ದನ್ನ ನೋಡಿದಾಗ ಸೈತಾನನಿಗೆ ದಂಗು ಬಡಿದಂತೆ ಆಗಿರ್ಬೇಕು ಅಲ್ವಾ? ಯಾಕಂದ್ರೆ ಸ್ವಾರ್ಥಿಯಾಗಿರೋ ಅವನಿಗೆ ಯೆಹೋವ ನಿಸ್ವಾರ್ಥ ಪ್ರೀತಿ ತೋರಿಸಿದ್ದನ್ನ ನೋಡಿದಾಗ ಖಂಡಿತ ಹಾಗೆ ಅನಿಸಿರುತ್ತೆ. (ಮತ್ತಾ. 20:28; ಯೋಹಾ. 3:16) ಈ ಏರ್ಪಾಡಿಂದ ಈಗಷ್ಟೇ ಅಲ್ಲ, ಮುಂದೆ ಏನು ಪ್ರಯೋಜನ ಆಗುತ್ತೆ? ಸಾವಿರ ವರ್ಷ ಆದ್ಮೇಲೆ ಆದಾಮ ಹವ್ವರ ಮಕ್ಕಳೆಲ್ಲ ಪರಿಪೂರ್ಣರಾಗ್ತಾರೆ. ಆಮೇಲೆ ಯೆಹೋವ ಅಂದ್ಕೊಂಡ ಹಾಗೆ ಅವರು ಇಡೀ ಭೂಮಿಯನ್ನ ಪರದೈಸ್‌ ಮಾಡ್ತಾರೆ. ಹೀಗೆ ಯೆಹೋವನ ಉದ್ದೇಶ ನೆರವೇರುವಾಗ ಆತನು “ಒಮೇಗ” ಅಂತ ಹೇಳ್ತಾನೆ.

ಯೆಹೋವನ ಮಾತಿನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸ್ಕೊಳ್ಳಿ

18. ಯೆಹೋವ ಅಂದ್ಕೊಂಡಿದ್ದು ನಡೆದೆ ನಡೆಯುತ್ತೆ ಅನ್ನೋದಕ್ಕೆ ಯಾವ ಮೂರು ಕಾರಣಗಳಿವೆ? (“ಯೆಹೋವನ ಮಾತು ನಡೆಯುತ್ತೆ ಅನ್ನೋದಕ್ಕಿರೋ ಮೂರು ಕಾರಣಗಳು” ಅನ್ನೋ ಚೌಕ ನೋಡಿ.)

18 ಪರದೈಸ್‌ ಬಂದೇ ಬರುತ್ತೆ ಅಂತ ನಾವು ಮತ್ತು ಬೇರೆಯವರು ನಂಬಿಕೆ ಇಡೋಕೆ ಏನು ಮಾಡಬೇಕು? ಅದಕ್ಕೆ ಮೂರು ಕಾರಣಗಳನ್ನ ಈ ಲೇಖನದಲ್ಲಿ ನೋಡಿದ್ವಿ. ಮೊದಲನೇದಾಗಿ, ಆ ಮಾತು ಕೊಟ್ಟಿರೋದು ಯೆಹೋವ. ಅದಕ್ಕೇ ಪ್ರಕಟನೆ ಪುಸ್ತಕದಲ್ಲಿ “ಸಿಂಹಾಸನದ ಮೇಲೆ ಕೂತಿದ್ದ ದೇವರು ಹೀಗೆ ಹೇಳಿದನು: ‘ನೋಡು, ನಾನು ಎಲ್ಲ ಹೊಸದಾಗಿ ಮಾಡ್ತೀನಿ’” ಅಂತ ಹೇಳುತ್ತೆ. ತಾನು ಕೊಟ್ಟ ಮಾತನ್ನ ನಿಜ ಮಾಡೋಕೆ ಯೆಹೋವನಿಗೆ ಆಸೆ ಇದೆ. ಅಷ್ಟೇ ಅಲ್ಲ ವಿವೇಕ ಮತ್ತು ಶಕ್ತಿನೂ ಇದೆ. ಎರಡನೇದಾಗಿ, ಯೆಹೋವನಿಗೆ ತಾನು ಅಂದ್ಕೊಂಡಿದ್ದು ಮುಂದೆ ಖಂಡಿತ ಆಗುತ್ತೆ ಅನ್ನೋ ಗ್ಯಾರಂಟಿ ಇರೋದ್ರಿಂದ, ಅದೆಲ್ಲ ಆತನ ದೃಷ್ಟಿಯಲ್ಲಿ ಈಗಾಗ್ಲೇ ಆಗಿದೆ. ಅದಕ್ಕೇ “ಇದನ್ನ ಜನ್ರು ನಂಬಬಹುದು ಯಾಕಂದ್ರೆ ಇದು ಸತ್ಯ. . . . ಅದೆಲ್ಲ ನಿಜ ಆಗಿದೆ!” ಅಂತ ಆತನು ಹೇಳ್ತಿದ್ದಾನೆ. ಮೂರನೇದಾಗಿ, ಯೆಹೋವ ಒಂದು ವಿಷ್ಯ ಶುರು ಮಾಡಿದ್ರೆ ಅದನ್ನ ಕೊನೆ ಮಾಡೇ ಮಾಡ್ತಾನೆ. ಅದಕ್ಕೇ “ನಾನೇ ಆಲ್ಫ, ನಾನೇ ಒಮೇಗ” ಅಂತ ಹೇಳ್ತಿದ್ದಾನೆ. ಹೀಗೆ ಸೈತಾನ ಒಬ್ಬ ಸುಳ್ಳುಗಾರ, ತಾನು ಅಂದ್ಕೊಂಡಿದ್ದನ್ನ ತಡೆಯೋಕೆ ಅವನಿಗೆ ಆಗೋದೇ ಇಲ್ಲ ಅಂತ ಯೆಹೋವ ನಿರೂಪಿಸ್ತಾನೆ.

ಯೆಹೋವನ ಮಾತು ನಡೆಯುತ್ತೆ ಅನ್ನೋದಕ್ಕಿರೋ ಮೂರು ಕಾರಣಗಳು

ಯೆಹೋವ ಕೂತಿರೋ ಸಿಂಹಾಸನದಿಂದ ಬೆಳಕು ಹೊಳಿತಾ ಇದೆ .
  • “ಸಿಂಹಾಸನದ ಮೇಲೆ ಕೂತಿದ್ದ ದೇವರು ಹೀಗೆ ಹೇಳಿದನು: ‘ನೋಡು, ನಾನು ಎಲ್ಲ ಹೊಸದಾಗಿ ಮಾಡ್ತೀನಿ’”—ಪ್ರಕ. 21:5

ಅಪೊಸ್ತಲ ಯೋಹಾನ , ಚರ್ಮದ ಹಾಳೆ ಮೇಲೆ ಬರೀತಿದ್ದಾನೆ .
  • “ಈ ಮಾತುಗಳನ್ನ ಬರಿ. ಇದನ್ನ ಜನ್ರು ನಂಬಬಹುದು ಯಾಕಂದ್ರೆ ಇದು ಸತ್ಯ. . . . ಅದೆಲ್ಲ ನಿಜ ಆಗಿದೆ!”—ಪ್ರಕ. 21:5, 6

ಗ್ರೀಕ್‌ ಪದಗಳಾದ ಆಲ್ಫ ಮತ್ತು ಒಮೇಗ .
  • “ನಾನೇ ಆಲ್ಫ, ನಾನೇ ಒಮೇಗ.”—ಪ್ರಕ. 21:6

19. ಯೆಹೋವನ ಮಾತು ನಿಜ ಆಗಲ್ಲ ಅಂತ ಜನ ಹೇಳಿದ್ರೆ ನೀವೇನು ಮಾಡ್ತೀರ?

19 ಯೆಹೋವ ಕೊಟ್ಟಿರೋ ಮಾತಿನ ಬಗ್ಗೆ ನೀವು ಜನ್ರಿಗೆ ಹೇಳಿದಷ್ಟು ನಿಮ್ಮ ನಂಬಿಕೆ ಜಾಸ್ತಿ ಆಗುತ್ತೆ. ಹಾಗಾಗಿ ಪ್ರಕಟನೆ 21:4ನ್ನ ನೀವು ಬೇರೆಯವ್ರಿಗೆ ತೋರಿಸಿದಾಗ ಅವರು, “ಇದು ಕೇಳೋಕಷ್ಟೇ ಚೆನ್ನಾಗಿರುತ್ತೆ, ನಿಜ ಆಗಲ್ಲ” ಅಂತ ಹೇಳಬಹುದು. ಆಗ ಏನು ಮಾಡ್ತೀರ? ಅದೇ ಅಧ್ಯಾಯದ 5 ಮತ್ತು 6ನೇ ವಚನವನ್ನ ಅವರಿಗೆ ತೋರಿಸಿ. ಆಗ ಯೆಹೋವ ದೇವರು ಈ ಮಾತುಗಳನ್ನ ಹೇಳಿ ಅದಕ್ಕೆ ಸಹಿ ಹಾಕಿದ್ದಾನೆ ಅಂತ ತೋರಿಸಿಕೊಡೋಕೆ ಆಗುತ್ತೆ.—ಯೆಶಾ. 65:16.

ನೀವೇನು ಹೇಳ್ತೀರಾ?

  • ಪರದೈಸ್‌ ತರ್ತೀನಿ ಅಂತ ಯೆಹೋವನೇ ಕೊಟ್ಟಿರೊ ಮಾತು ನಮ್ಮ ನಂಬಿಕೆಯನ್ನ ಹೇಗೆ ಜಾಸ್ತಿ ಮಾಡುತ್ತೆ?

  • ಯೆಹೋವ ಹೇಳಿರೋ ಯಾವ ಮಾತುಗಳು ತಾನು ಅಂದ್ಕೊಂಡಿದ್ದನ್ನ ಮಾಡೇ ಮಾಡ್ತಾನೆ ಅಂತ ತೋರಿಸುತ್ತೆ?

  • ಯೆಹೋವನ ಮಾತಿನ ಮೇಲೆ ನಮ್ಮ ನಂಬಿಕೆ ಜಾಸ್ತಿ ಆಗಬೇಕಂದ್ರೆ ನಾವೇನು ಮಾಡಬೇಕು?

ಗೀತೆ 19 ಪರದೈಸಿನ ಕುರಿತಾದ ದೇವರ ವಾಗ್ದಾನ

a ಯೆಹೋವ ಈ ಭೂಮಿಯನ್ನ ಪರದೈಸಾಗಿ ಮಾಡೇ ಮಾಡ್ತಾನೆ ಅನ್ನೋದಕ್ಕೆ ಏನು ಗ್ಯಾರಂಟಿ ಇದೆ ಅಂತ ಈಗ ನೋಡೋಣ. ಇದ್ರ ಬಗ್ಗೆ ನಾವು ಜನ್ರಿಗೆ ಹೇಳಿದಷ್ಟು ಯೆಹೋವನ ಮೇಲಿರೋ ನಮ್ಮ ನಂಬಿಕೆ ಜಾಸ್ತಿ ಆಗುತ್ತೆ.

b ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ ಪುಸ್ತಕದ ಪುಟ 303-304, ಪ್ಯಾರ 8-9 ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ