ಹೊಸ ಲೋಕದೊಳಗೆ ವಿಮೋಚನೆಗೆ ಸಿದ್ಧವಾಗಿರ್ರಿ
“ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ.”—ಲೂಕ 17:32.
1. ದೈವಿಕ ವಿಮೋಚನೆಯ ಯಾವ ಐತಿಹಾಸಿಕ ದೃಷ್ಟಾಂತವನ್ನು ನಮ್ಮ ಪಾಠ ಇಂದು ಎತ್ತಿ ತೋರಿಸುತ್ತದೆ ಮತ್ತು ಅದು ನಮಗೆ ಹೇಗೆ ಪ್ರಯೋಜನ ತರಬಲ್ಲದು?
ಯೆಹೋವನು ನೋಹ ಮತ್ತು ಅವನ ಕುಟುಂಬಕ್ಕೆ ಕೊಟ್ಟ ಅದ್ಭುತಕರವಾದ ವಿಮೋಚನೆಯ ಕುರಿತು ತಿಳಿಸಿದ ಬಳಿಕ ಅಪೊಸ್ತಲ ಪೇತ್ರನು ಇನ್ನೊಂದು ಐತಿಹಾಸಿಕ ದೃಷ್ಟಾಂತವನ್ನು ಕೊಟ್ಟನು. ಸೊದೋಮ್ ಮತ್ತು ಗೊಮೋರಗಳು ಭಸ್ಮವಾದಾಗ, ನಾವು 2 ಪೇತ್ರ 2:6-8 ರಲ್ಲಿ ಓದುವಂತೆ, ನೀತಿವಂತನಾದ ಲೋಟನ ಸಂರಕ್ಷಣೆಗೆ ಅವನು ಗಮನ ಸೆಳೆಯುತ್ತಾನೆ. ಇದರ ವಿವರಗಳು ನಮ್ಮ ಪ್ರಯೋಜನಕ್ಕಾಗಿ ಉಳಿಸಲ್ಪಟ್ಟಿವೆ. (ರೋಮಾಪುರದವರಿಗೆ 15:4) ಆ ವಿಮೋಚನೆಯ ಸಂಬಂಧದಲ್ಲಿ ಏನು ನಡೆಯಿತು ಎಂಬದನ್ನು ಹೃದಯಕ್ಕೆ ತಕ್ಕೊಳ್ಳುವಲ್ಲಿ ದೇವರ ನೂತನ ಜಗತ್ತಿನೊಳಗೆ ಸಂರಕ್ಷಣೆ ಹೊಂದಲು ನಮ್ಮನ್ನು ತಕ್ಕವರನ್ನಾಗಿ ಮಾಡಲು ನಮಗೆ ಸಹಾಯ ದೊರೆಯುವದು.
ಲೋಕದ ಜೀವನರೀತಿಗೆ ನಾವು ಪ್ರತಿವರ್ತಿಸುವ ವಿಧ
2. ಸೋದೋಮ್ ಮತ್ತು ಗೊಮೋರಗಳ ಯಾವ ನಡತೆ ದೇವರಿಂದ ಅವರ ನಾಶಕ್ಕೆ ನಡಿಸಿತು?
2. ಆ ನಗರಗಳು ನಿವಾಸಿಗಳೊಂದಿಗೆ ನಾಶವಾದುದೇಕೆ? “ಸಡಿಲು ನಡತೆಯಲ್ಲಿ” ಲೋಲುಪರಾದ ಕಾರಣವೇ ಎಂದು ಅಪೊಸ್ತಲ ಪೇತ್ರನು ಹೇಳುತ್ತಾನೆ. (2 ಪೇತ್ರ 2:7) ಅದು ಭಾಷಾಂತರವಾದ ಗ್ರೀಕ್ ಪದ ತೋರಿಸುವಂತೆ, ಸೊದೋಮ್ ಮತ್ತು ಗೊಮೋರಗಳ ಜನರು, ನಿರ್ಲಜ್ಜೆಯ ಅಗೌರವವನ್ನು, ನಿಯಮ ಮತ್ತು ಅಧಿಕಾರಕ್ಕೆ ಧಿಕ್ಕಾರವನ್ನು ತೋರಿಸುವ ರೀತಿಯಲ್ಲಿ ಕೆಟ್ಟತನದಲ್ಲಿ ಲೋಲುಪರಾದರು. ಯೂದ 7 ಹೇಳುವದೇನಂದರೆ, ಅವರು ‘ಮಿತಿಮೀರಿ ಜಾರತ್ವವನ್ನು ನಡಿಸಿ ಶರೀರವನ್ನು ಅಸ್ವಾಭಾವಿಕವಾಗಿ ಉಪಯೋಗಿಸಲು ಅದನ್ನು ಬೆನ್ನಟ್ಟಿದ್ದರು.’ ಸೊದೋಮಿನ ಪುರುಷರು, “ಹುಡುಗರು ಮುದುಕರು ಸಹಿತವಾಗಿ ಸೊದೋಮಿನ ಪಟ್ಟಣದವರೆಲ್ಲರೂ ಒಗ್ಗಟ್ಟಾಗಿ” ಲೋಟನ ಮನೆಗೆ ಸುತ್ತು ಹಾಕಿ ಅವನು ತನ್ನ ಅತಿಥಿಗಳನ್ನು ಸೊದೋಮಿನ ಪುರುಷರ ವಕ್ರ ಕಾಮವನ್ನು ತೃಪ್ತಿ ಪಡಿಸಲು ಒಪ್ಪಿಸ ಬೇಕೆಂದು ತಗಾದೆ ಮಾಡಿದಾಗ ಅವರ ನಡತೆಯ ಘೋರ ಅಶ್ಲೀಲತೆಯು ಕಂಡು ಬಂತು. ಮತ್ತು ಅವನು ಅವರ ಭ್ರಷ್ಟ ತಗಾದೆಗಳನ್ನು ತಡೆದ ಕಾರಣ ಅವರು ಅವನನ್ನು ನಿಂದಿಸಿದರು.—ಆದಿಕಾಂಡ 13:13; 19:4, 5, 9.
3. (ಎ)ಲೋಟನೂ ಕುಟುಂಬವೂ ಸೊದೋಮಿನ ಅಂಥ ಭ್ರಷ್ಟ ಪರಿಸರದಲ್ಲಿ ಜೀವಿಸುವಂಥಾದದ್ದು ಹೇಗೆ? (ಬಿ) ಸೊದೋಮಿನ ಜನರ ಸಡಿಲು ನಡತೆಗೆ ಲೋಟನ ಪ್ರತಿವರ್ತನೆ ಏನಾಗಿತ್ತು?
3. ಲೋಟನು ಆದಿಯಲ್ಲಿ ಸೊದೋಮಿನ ಸಮೀಪ ನೆಲೆಸಿದ್ದದ್ದು ಅದರ ಪ್ರಾಪಂಚಿಕ ಸಮೃದ್ಧಿಯ ಕಾರಣದಿಂದಲೇ. ಆ ಬಳಿಕ ಅವನು ಹೋಗಿ ಪಟ್ಟಣದಲ್ಲೀ ವಾಸಿಸಿದನು. (ಆದಿಕಾಂಡ 13:8-12; 14:12; 19:1) ಆದರೆ ಆ ನಗರದ ಪುರುಷರ ಮರ್ಯಾದೆಗೆಟ್ಟ ಆಚಾರಗಳನ್ನು ಅವನು ಸಮ್ಮತಿಸಲಿಲ್ಲ. ಮತ್ತು ಆ ಪುರುಷರು ನೋಹನೂ ಅವನ ಕುಟುಂಬವೂ ಅವರೊಂದಿಗೆ ಸಮಾಜ ಜೀವನದಲ್ಲಿ ಭಾಗವಹಿಸದರ್ದಿಂದ ಅವನನ್ನು ತಮ್ಮವನೆಂದು ಎಣಿಸಲಿಲ್ಲವೆಂದು ವ್ಯಕ್ತವಾಗುತ್ತದೆ. 2 ಪೇತ್ರ 2:7, 8 ಹೇಳುವಂತೆ, “ಆತನು ಸಡಿಲು ನಡತೆಯಲ್ಲಿ ಲೋಲುಪರಾಗಿದ್ದ ನಿಯಮ ಪ್ರತಿಭಟಿಸುವ ಜನರಿಂದ ಅತಿಯಾಗಿ ವ್ಯಥೆಗೆ ಈಡಾಗಿದ್ದ ನೀತಿವಂತನಾದ ಲೋಟನನ್ನು ರಕ್ಷಿಸಿದನು. ಆ ನೀತಿವಂತ ಪುರುಷನೋ, ಅವರ ಮಧ್ಯೆ ದಿನೇ ದಿನೇ ವಾಸಿಸುತ್ತಿದ್ದಾಗ ನೋಡಿದ ಮತ್ತು ಕೇಳಿದ ವಿಷಯಗಳಿಂದ ತನ್ನ ನೀತಿಯ ಆತ್ಮವನ್ನು ಅವರ ನಿಯಮರಾಹಿತ್ಯ ಕೃತ್ಯಗಳ ಕಾರಣದಿಂದ ಪೀಡಿಸಿ ಕೊಳ್ಳುತ್ತಿದ್ದನು.” ಆ ಪರಿಸ್ಥಿತಿಗಳು ಲೋಟನಿಗೆ ಕಠಿಣ ಪರೀಕ್ಷೆಯ ರೂಪದಲ್ಲಿದ್ದವು. ಏಕೆಂದರೆ ನೀತಿವಂತನಾಗಿದ್ದ ಅವನು ಅಂಥ ನಡತೆಯನ್ನು ಹೇಸುತ್ತಿದ್ದನು.
4. (ಎ)ಇಂದು ಪರಿಸ್ಧಿತಿಗಳು ಪುರಾತನ ಸೊದೋಮಿನಂತಿರುವುದು ಯಾವ ವಿಧಗಳಲ್ಲಿ? (ಬಿ) ನಾವು ನೀತಿವಂತ ಲೋಟನಂತಿರುವುದಾದರೆ ಇಂದಿನ ಭ್ರಷ್ಟ ಪರಿಸ್ಥಿತಿಗಳಿಗೆ ಹೇಗೆ ಪ್ರತಿವರ್ತನೆ ತೋರಿಸುತ್ತೇವೆ?
4. ನಮ್ಮ ದಿನಗಳಲ್ಲಿಯೂ ಮಾನವ ಸಮಾಜದ ನೈತಿಕ ಮಟ್ಟ ಕೀಳಾಗಿ ಪರಿಣಮಿಸಿದೆ. ಅನೇಕ ದೇಶಗಳಲ್ಲಿ ಹೆಚ್ಚೆಚ್ಚು ಜನರು ವಿವಾಹ ಪೂರ್ವ ಅಥವಾ ವಿವಾಹ ಬಾಹ್ಯ ಕಾಮಗಳಲ್ಲಿ ಭಾಗವಹಿಸುತ್ತಾರೆ. ಅನೇಕ ಯುವಜನರು ಶಾಲೆಗಳಲ್ಲಿಯೂ ಈ ಜೀವನ ರೀತಿಯಲ್ಲಿ ಪೂರಾ ಮುಳುಗಿದ್ದು ಅವರ ಜೊತೆ ಸೇರದವರಿಗೆ ಅಪಹಾಸ್ಯ ಮಾಡುತ್ತಾರೆ. ಸಲಿಂಗೀಕಾಮಿಗಳು ಮುಚ್ಚುಮರೆಯಿಲ್ಲದೆ ತಮ್ಮನ್ನು ಗುರುತಿಸಿಕೊಂಡು ದೊಡ್ಡ ನಗರದ ರಸ್ತೆಗಳಲ್ಲಿ ಮೆರವಣಿಗೆ ಹೋಗುತ್ತಾ ಮನ್ನಣೆಯನ್ನು ಅಪೇಕ್ಷಿಸುತ್ತಾರೆ. ಈ ವಿಲಾಸದಲ್ಲಿ ಪಾದ್ರಿಗಳೂ ಸೇರಿದ್ದಾರೆ. ಅಧಿಕೃತವಾಗಿ, ಸಲಿಂಗೀಕಾಮಿಗಳನ್ನೂ ಜಾರರನ್ನೂ ಪಾದ್ರಿಗಳಾಗಿ ನೇಮಿಸುವ ಚರ್ಚುಗಳು ಕಡಿಮೆ. ಆದರೂ, ವಾಸ್ತವವಾಗಿ, ವರದಿಗಳು ಪದೇ ಪದೇ ತಿಳಿಸಿರುವಂತೆ, ಪಾದ್ರಿವರ್ಗದವರಲ್ಲಿ ಸಲಿಂಗೀ ಕಾಮಿಗಳನ್ನು, ಜಾರರನ್ನು ಮತ್ತು ವ್ಯಭಿಚಾರಿಗಳನ್ನು ಕಂಡುಹಿಡಿಯುವದು ಏನೂ ಕಷ್ಟವಲ್ಲ. ವಾಸ್ತವವೇನಂದರೆ, ಕೆಲವು ಧಾರ್ಮಿಕ ಮುಖಂಡರನ್ನು ಮೈಥುನ ಅಪನಿಂದೆಯ ಕಾರಣ ಇತರ ನಗರಗಳಿಗೆ ವರ್ಗಾಯಿಸಲಾಗಿದೆ ಅಥವಾ ರಾಜೀನಾಮೆ ಕೊಡುವಂತೆ ಸಹ ನಿರ್ಬಂಧಿಸಲಾಗಿದೆ. ನೀತಿಪ್ರಿಯರು ಇಂಥ ದುಷ್ಟತನದೊಂದಿಗೆ ಸಹಾನುಭೂತಿ ತೋರಿಸುವದಿಲ್ಲ. ಅವರು “ಕೆಟ್ಟತನಕ್ಕೆ ಹೇಸಿ” ಕೊಳ್ಳುತ್ತಾರೆ. (ರೋಮಾಪುರದವರಿಗೆ 12:9) ದೇವರನ್ನು ಸೇವಿಸುತ್ತೇವೆಂದು ಹೇಳಿಕೊಳ್ಳುವವರು ಆತನ ಹೆಸರಿಗೆ ಕಳಂಕ ತರುವುದರಿಂದ, ವಿಷಯ ತಿಳಿಯದ ಅಜ್ಞಾನಿಗಳು ಧರ್ಮವನ್ನು ಹೇಸಿ ಅದರಿಂದ ತಿರುಗುವಂತೆ ಮಾಡುವುದನ್ನು ನೋಡುವುದು ಅವರಿಗೆ ವಿಶೇಷವಾಗಿ ದುಃಖವನ್ನುಂಟು ಮಾಡುತ್ತದೆ.—ರೋಮಾಪುರದವರಿಗೆ 2:24.
5. ಸೊದೋಮ್ ಮತ್ತು ಗೊಮೋರಗಳಿಗೆ ಯೆಹೋವನಿಂದಾದ ನಾಶನ ಯಾವ ಪ್ರಶ್ನೆಗೆ ಉತ್ತರವನ್ನೊದಗಿಸುತ್ತದೆ?
5. ವರ್ಷಗಳು ದಾಟಿದಷ್ಟಕ್ಕೆ ಪರಿಸ್ಥಿತಿ ಹೆಚ್ಚು ಕೆಡುತ್ತಿದೆ. ಇದಕ್ಕೆ ಅಂತ್ಯವಿರಬಹುದೇ? ಹೌದು, ಇದೆ ! ಯೆಹೋವನು ಪೂರ್ವಕಾಲದ ಸೊದೋಮ್ ಮತ್ತು ಗೊಮೋರಗಳಿಗೆ ಮಾಡಿದ ಸಂಗತಿಯು ಆತನು ತನ್ನ ನಿಶ್ಚಿತ ಸಮಯದಲ್ಲಿ ತೀರ್ಪು ವಿಧಿಸುವನೆಂದು ಸ್ಪಷ್ಟವಾಗಿ ತೋರಿಸುತ್ತದೆ. ಆತನು ದುಷ್ಟರನ್ನು ತೀರಾ ನಾಶಮಾಡಿ ತನ್ನ ನಿಷ್ಠ ಸೇವಕರನ್ನು ವಿಮೋಚಿಸುವನು.
ಜೀವನದಲ್ಲಿ ಯಾರು ಅಥವಾ ಏನು ಪ್ರಥಮವಾಗಿದೆ?
6. (ಎ)ಲೋಟನ ಹೆಣ್ಣು ಮಕ್ಕಳನ್ನು ವಿವಾಹವಾಗಲಿದ್ದ ಯುವಕರ ವೃತ್ತಾಂತದಲ್ಲಿ ನಮಗೆ ಯಾವ ಕಾಲೋಚಿತ ಪಾಠವಿದೆ? (ಬಿ) ತಮ್ಮ ಭಾವೀ ಜೊತೆಗಳ ಮನೋಭಾವ ಲೋಟನ ಪುತ್ರಿಯರನ್ನು ಹೇಗೆ ಪರೀಕ್ಷಿಸಿತು?
6. ನಿಜ ದಿವ್ಯ ಭಕ್ತಿ ತೋರಿಸುವವರನ್ನು ಮಾತ್ರ ಉಳಿಸಲಾಗುವುದು. ಈ ಸಂಬಂಧದಲ್ಲಿ ಸೊದೋಮ್ ಗೊಮೋರಗಳ ನಾಶನಕ್ಕೆ ಮುಂಚಿತವಾಗಿ ಯೆಹೋವನ ದೂತನು ಲೋಟನಿಗೆ ಹೇಳಿದ್ದನ್ನು ಪರಿಗಣಿಸಿರಿ: “ಇಲ್ಲಿ ನಿನಗೆ ಇನ್ನಾರಿದ್ದಾರೆ? ಅಳಿಯಂದಿರನ್ನೂ ಗಂಡು ಹೆಣ್ಣು ಮಕ್ಕಳನ್ನೂ ಪಟ್ಟಣದಲ್ಲಿ ನಿನಗಿರುವ ಬೇರೆ ಎಲ್ಲವನ್ನೂ ಊರ ಹೊರಕ್ಕೆ ಕರೆದು ಕೊಂಡು ಬಾ. ನಾವು ಈ ಸ್ಥಳವನ್ನು ನಾಶ ಮಾಡುವುದಕ್ಕೆ ಬಂದವರು.” ಆಗ ಲೋಟನು ತನ್ನ ಪುತ್ರಿಯರನ್ನು ವಿವಾಹವಾಗಲಿದ್ದ ಯುವಕರೊಂದಿಗೆ ಮಾತಾಡಿದನು. ಅವನು ಅವರನ್ನು ಪುನಃ ಪುನಃ “ನೀವೆದ್ದು ಸ್ಥಳವನ್ನು ಬಿಟ್ಟು ಹೋಗಿರಿ. ಯೆಹೋವನು ಈ ಊರನ್ನು ನಾಶ ಮಾಡುತ್ತಾನೆ” ಎಂದು ಪ್ರೋತ್ಸಾಹಿಸಿದನು. ಲೋಟನ ಕುಟುಂಬದೊಂದಿಗೆ ಅವರಿಗೆ ಇದ್ದ ಸಂಬಂಧವು ಅವರಿಗೆ ವಿಮೋಚನೆಯ ಸಂದರ್ಭವನ್ನು ಒದಗಿಸಿದರೂ ಅವರು ಸ್ವತಃ ಕ್ರಮ ಕೈಕೊಳ್ಳಬೇಕಾಗಿತ್ತು. ಯೆಹೋವನಿಗೆ ನಾವು ವಿಧೇಯರೆಂಬದಕ್ಕೆ ಅವರು ಸ್ಫುಟವಾದ ಸಾಕ್ಷಿಯನ್ನು ಒದಗಿಸಬೇಕಿತ್ತು. ಆದರೆ ಇದಕ್ಕೆ ಬದಲು, ಅವರಿಗೆ ಲೋಟನು “ಗೇಲಿಮಾಡುವವನಾಗಿ” ಕಾಣಿಸಿದನು. (ಆದಿಕಾಂಡ 19:12-14) ಸಂಭವಿಸಿದನ್ನು ಕೇಳಿದಾಗ ಲೋಟನ ಹೆಣ್ಣು ಮಕ್ಕಳಿಗೆ ಹೇಗೆ ಅನಿಸಿದಿರ್ದಬೇಕೆಂದು ಊಹಿಸಿರಿ. ಇದು ಅವರಿಗೆ ದೇವರಲ್ಲಿದ್ದ ನಿಷ್ಠೆಯನ್ನು ಪರೀಕ್ಷಿಸಿತು.
7, 8. (ಎ)ಲೋಟನು ಕುಟುಂಬದೊಂದಿಗೆ ಓಡಿ ಹೋಗುವಂತೆ ದೇವ ದೂತರು ತರ್ವೆಪಡಿಸಿದಾಗ ಅವನು ಹೇಗೆ ಪ್ರತಿವರ್ತಿಸಿದನು, ಮತ್ತು ಇದು ಏಕೆ ಅವಿವೇಕವಾಗಿತ್ತು? (ಬಿ) ವಿಮೋಚನೆ ಹೊಂದಲು ಲೋಟನಿಗೆ ಮತ್ತು ಕುಟುಂಬಕ್ಕೆ ಯಾವುದು ಅತ್ಯಾವಶ್ಯಕವಾಗಿತ್ತು?
7. ಮರುದಿನ ಬೆಳಿಗ್ಗೆ ದೇವದೂತರು ಲೋಟನನ್ನು ತರ್ವೆ ಪಡಿಸಿದರು. ಅವರಂದದ್ದು: “ನೀನೆದ್ದು ಇಲ್ಲಿರುವ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣು ಮಕ್ಕಳನ್ನೂ ಬೇಗ ಕರಕೊಂಡು ಹೋಗು. ಊರಿಗೆ ಉಂಟಾಗುವ ದಂಡನೆಯಿಂದ ನಿನಗೂ ನಾಶವುಂಟಾದೀತು.” ಆದರೆ “ಅವನು ತಡ” ಮಾಡಿದನು. (ಆದಿಕಾಂಡ 19:15, 16) ಏಕೆ? ಅವನನ್ನು ನಿಲ್ಲಿಸಿದ್ದು ಯಾವುದು? ಸೊದೋಮಿನಲ್ಲಿದ್ದ ಮತ್ತು ಅವನನ್ನು ಆದಿಯಲ್ಲಿ ಆ ಸ್ಥಳಕ್ಕೆ ಆಕರ್ಷಿಸಿದ್ದ ಪ್ರಾಪಂಚಿಕ ಅಭಿರುಚಿಗಳೋ? ಅವನು ಅವುಗಳನ್ನು ಹಿಡಿದುಕೊಳ್ಳುವದಾದರೆ ಅವನು ಸೊದೋಮಿನೊಂದಿಗೆ ನಾಶವಾಗಲಿದ್ದನು.
8. ಕನಿಕರಪಟ್ಟ ದೇವದೂತರು ಅವನ ಕುಟುಂಬದವರನ್ನು ಕೈಹಿಡಿದು ಅವಸರದಿಂದ ಪಟ್ಟಣದ ಹೊರಗೆ ತಂದರು. ಹೊರವಲಯದಲ್ಲಿ ಯೆಹೋವನ ದೂತನು ಆಜ್ಞಾಪಿಸಿದ್ದು: “ಓಡಿ ಹೋಗು, ಪ್ರಾಣವನ್ನು ಉಳಿಸಿಕೋ. ಹಿಂದಕ್ಕೆ ನೋಡಬೇಡ. ಈ ಪ್ರದೇಶದೊಳಗೆ ಎಲ್ಲಿಯೂ ನಿಲ್ಲದೆ ಬೆಟ್ಟದ ಸೀಮೆಗೆ ಓಡಿಹೋಗು. ನಿನಗೂ ನಾಶವುಂಟಾದೀತು.” ಲೋಟನು ಇನ್ನೂ ಹಿಂಜರಿದನು. ಕೊನೆಗೆ, ಹೆಚ್ಚು ದೂರವಿಲ್ಲದ ಒಂದು ಸ್ಥಳಕ್ಕೆ ಅವನು ಹೋಗಬಹುದೆಂದು ಸಮ್ಮತಿಸಿದ ಬಳಿಕ, ಅವನೂ ಅವನ ಕುಟುಂಬದವರೂ ಓಡಿಹೋದರು. (ಆದಿಕಾಂಡ 19:17-22) ಇನ್ನು ವಿಳಂಬವಿಲ್ಲ. ವಿಧೇಯತೆ ಜೀವದಾಯಕವಾಗಿತ್ತು.
9, 10. (ಎ)ಲೋಟನ ಹೆಂಡತಿ ತನ್ನ ಗಂಡನೊಂದಿಗೆ ಇದ್ದಳೆಂಬ ವಿಷಯ ಸಂರಕ್ಷಣೆಗೆ ಸಾಕಾಗಲಿಲ್ಲವೇಕೆ? (ಬಿ) ಲೋಟನ ಪತ್ನಿ ಕೊಲ್ಲಲ್ಪಟ್ಟಾಗ ಲೋಟನ ಮತ್ತು ಅವನ ಪುತ್ರಿಯರ ಮೇಲೆ ಇನ್ನಾವ ಪರೀಕ್ಷೆ ಬಂತು?
9. ಆದರೆ, ಅವರು ಸೊದೋಮಿನಿಂದ ಹೊರಟುಹೋದಾಗ ವಿಮೋಚನೆ ಪೂರ್ಣವಾಗಿರಲಿಲ್ಲ. ಅದಿಕಾಂಡ 19:23-25 ಹೇಳುವುದು: “ಲೋಟನು ಚೋಗರಿಗೆ ಮುಟ್ಟುವಷ್ಟರಲ್ಲಿ ಸೂರ್ಯನು ಮೂಡಿದನು. ಆಗ ಯೆಹೋವನು ಸೊದೋಮ್ ಗೊಮೋರಗಳ ಮೇಲೆ ಆಕಾಶದಿಂದ ಅಗ್ನಿ ಗಂಧಕಗಳನ್ನು ಸುರಿಸಿ ಆ ಪಟ್ಟಣಗಳನ್ನು ಸುತ್ತಲಿರುವ ಸೀಮೆಯೆಲವ್ಲನ್ನೂ ಊರುಗಳಲ್ಲಿದ್ದ ಜನರೆಲ್ಲರನ್ನೂ ಭೂಮಿಯ ಮೇಲಣ ಎಲ್ಲಾ ಬೆಳೆಯನ್ನೂ ಹಾಳು ಮಾಡಿದನು.” ಆದರೆ ಲೋಟನ ಪತ್ನಿಯೆಲ್ಲಿದ್ದಳು?
10. ತನ್ನ ಗಂಡನೊಂದಿಗೆ ಓಡಿಹೋಗಿದ್ದಳು. ಆದರೆ, ಅವನು ಮಾಡುತ್ತಿದ್ದುದರಲ್ಲಿ ಆಕೆ ಪೂರ್ತಿ ಸಮ್ಮತಿಯವಳಾಗಿದ್ದಳೋ? ಸೊದೋಮಿನ ದುರಾಚಾರವನ್ನು ಆಕೆ ಒಪ್ಪುತ್ತಿದ್ದಳೆಂದು ಯಾವುದೂ ಸೂಚಿಸುವುದಿಲ್ಲ. ಆದರೆ, ದೇವರ ಮೇಲೆ ಆಕೆಗೆ ಇದ್ದ ಪ್ರೀತಿಯು ಮನೆ ಮತ್ತು ಅಲ್ಲಿಯ ಪ್ರಾಪಂಚಿಕ ವಸ್ತುಗಳಲ್ಲಿ ಆಕೆಗಿದ್ದ ಅನುರಕ್ತಿಗಿಂತ ಬಲಾಢ್ಯವಾಗಿತ್ತೋ? (ಲೂಕ 17:31, 32 ಹೋಲಿಸಿ.) ಒತ್ತಡ ಬಂದಾಗ, ಆಕೆಯ ಹೃದಯದಲ್ಲಿದ್ದದ್ದು ಬೆಳಕಿಗೆ ಬಂತು. ಅವರು ಆಗಲೇ ಚೋಗರಿಗೆ ಹತ್ತಿರವಾಗಿದ್ದರು. ಪ್ರಾಯಶಃ ನಗರವನ್ನು ಪ್ರವೇಶಿಸಲಿಕ್ಕಿದ್ದರು. ಆಗ ಅವಳು ಅವಿಧೇಯತೆಯಿಂದ ತಿರುಗಿ ಹಿಂದೆ ನೋಡಿದಳು. ಮತ್ತು ಬೈಬಲಿನ ದಾಖಲೆ ಹೇಳುವಂತೆ, “ಉಪ್ಪಿನ ಕಂಭವಾದಳು.” (ಆದಿಕಾಂಡ 19:26) ಈಗ ನಿಷ್ಠೆಯ ಇನ್ನೊಂದು ಪರೀಕ್ಷೆ ಲೋಟ ಮತ್ತು ಅವನ ಪುತ್ರಿಯರನ್ನು ಎದುರಿಸಿತು. ಯಾರು ಈ ವಿಪತ್ತನ್ನು ಬರಮಾಡಿದ್ದನೋ ಆ ಯೆಹೋವನ ಕಡೆಗೆ ಅವರಿಗೆ ಇದ್ದ ಪ್ರೀತಿ, ಲೋಟನಿಗೆ ತನ್ನ ಸತ್ತಿದ್ದ ಹೆಂಡತಿಯ ಮೇಲಿದ್ದ ಅನುರಕ್ತಿ ಮತ್ತು ಹುಡುಗಿಯರಿಗೆ ಸತ್ತಿದ್ದ ತಮ್ಮ ತಾಯಿಯ ಕಡೆಗಿದ್ದ ಮನೋಭಾವಕ್ಕಿಂತ ಬಲಾಢ್ಯವಾಗಿತ್ತೋ? ತಮಗೆ ಆಪ್ತಳಾಗಿದ್ದ ಒಬ್ಬಳು ಕರ್ತವ್ಯಭ್ರಷ್ಟಳಾದರೂ ಅವರು ದೇವರಿಗೆ ವಿಧೇಯರಾಗುತ್ತಾ ಮುಂದುವರಿಯುವರೋ? ಯೆಹೋವನ ಮೇಲೆ ಪೂರ್ಣ ಭರವಸವಿಟ್ಟವರಾಗಿ ಅವರು ಹಿಂದೆ ನೋಡಲಿಲ್ಲ.
11. ಯೆಹೋವನು ಒದಗಿಸುವ ವಿಮೋಚನೆಯ ಕುರಿತು ನಾವಿಲ್ಲಿ ಏನು ಕಲಿತಿದ್ದೇವೆ?
11. ಹೌದು, ದಿವ್ಯ ಭಕ್ತಿಯ ಜನರನ್ನು ಪರೀಕ್ಷೆಯಿಂದ ವಿಮೋಚಿಸುವ ವಿಧವನ್ನು ಯೆಹೋವನು ಬಲ್ಲನು. ಶುದ್ಧವಾದ ಆರಾಧನೆಯಲ್ಲಿ ಐಕ್ಯವಾಗಿ ಇರುವ ಇಡೀ ಕುಟುಂಬಗಳನ್ನು ವಿಮೋಚಿಸುವ ವಿಧಾನವು ಆತನಿಗೆ ಗೊತ್ತಿದೆ. ಒಬ್ಬೊಬ್ಬರನ್ನು ವಿಮೋಚಿಸುವ ವಿಧವೂ ಆತನಿಗೆ ತಿಳಿದದೆ. ಅವರು ಆತನನ್ನು ನಿಜವಾಗಿಯೂ ಪ್ರೀತಿಸುವಲ್ಲಿ ಅವರೊಂದಿಗೆ ವ್ಯವಹರಿಸುವಾಗ ಆತನು ಮಹಾ ವಿಚಾರಪರತೆಯನ್ನು ತೋರಿಸುತ್ತಾನೆ. “ಆತನು ನಮ್ಮ ಪ್ರಕೃತಿಯನ್ನು ಬಲ್ಲನು. ನಾವು ಧೂಳಿಯಾಗಿದ್ದೇವೆಂಬದನ್ನು ಆತನು ನೆನಪು ಮಾಡಿಕೊಳ್ಳುತ್ತಾನೆ.” (ಕೀರ್ತನೆ 103:13, 14) ಆದರೆ ಆತನ ವಿಮೋಚನೆ ದೊರೆಯುವದು ದಿವ್ಯ ಭಕ್ತಿಯ, ನೈಜಭಕ್ತಿಯ, ನಿಷ್ಠೆಯನ್ನು ತೋರಿಸುವ ವಿಧೇಯ ಜನರಿಗೆ ಮಾತ್ರ .
ಹೆಚ್ಚು ದೊಡ್ಡ ವಿಮೋಚನೆಗಾಗಿ ಪ್ರೀತಿಯ ಸಿದ್ಧತೆಗಳು
12. ನಾವು ಅತ್ಯಾಸಕಿಯ್ತಿಂದ ಹಾರೈಸುವ ವಿಮೋಚನೆಯನ್ನು ತರುವ ಮೊದಲು ಯೆಹೋವನು ಯಾವ ಪ್ರೀತಿಪೂರ್ವಕ ಸಿದ್ಧತೆಗಳನ್ನು ಮಾಡಲಿದ್ದನು?
12. ನೋಹನ ಮತ್ತು ಲೋಟನ ದಿನಗಳ ನಾಶನದಿಂದ ಯೆಹೋವನು ದುಷ್ಟರನ್ನು ಸದಾಕಾಲಕ್ಕಾಗಿ ತೆಗೆದು ಹಾಕಲಿಲ್ಲ. ಶಾಸ್ತ್ರ ತಿಳಿಸುವಂತೆ, ಇದು ಬರಲಿರುವ ವಿಷಯಗಳಿಗೆ ಮಾದರಿಯನ್ನು ಒದಗಿಸಿತು ಅಷ್ಟೇ. ಆದರೆ ಆ ಸಂಗತಿಗಳು ಬರುವ ಮೊದಲು, ತನ್ನನ್ನು ಪ್ರೀತಿಸುವ ಜನರ ಪ್ರಯೋಜನಾರ್ಥವಾಗಿ ಎಷ್ಟೋ ಹೆಚ್ಚು ವಿಷಯಗಳನ್ನು ಮಾಡುವ ಉದ್ದೇಶವು ಯೆಹೋವನ ಮನಸ್ಸಿನಲ್ಲಿ ಇತ್ತು. ಆತನು ತನ್ನ ಏಕಜಾತ ಪುತ್ರನಾದ ಯೇಸು ಕ್ರಿಸ್ತನನ್ನು ಭೂಮಿಗೆ ಕಳುಹಿಸಲಿಕ್ಕೆ ಇದ್ದನು. ಇಲ್ಲಿ ಯೇಸು, ಪರಿಪೂರ್ಣ ಮಾನವನಾದ ಆದಾಮನು ದೇವರಿಗೆ ಸಲ್ಲಿಸ ಸಾಧ್ಯವಿದ್ದ ಮತ್ತು ಸಲ್ಲಿಸ ಬೇಕಾಗಿದ್ದ ಭಕ್ತಿಯನ್ನು ಪ್ರದರ್ಶಿಸುತ್ತಾ ದೇವರ ನಾಮದ ಮೇಲಿರುವ ಕಳಂಕವನ್ನು ಶುಚಿ ಮಾಡಲಿದ್ದನು. ಆದರೆ ಯೇಸು ಇದನ್ನು ಹೆಚ್ಚು ಕಷ್ಟಕರವಾದ ಪರಿಸ್ಥಿತಿಯ ಕೆಳಗೆ ಮಾಡಲಿದ್ದನು. ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನು ಯಜ್ಞವಾಗಿ, ಆದಾಮನು ಕಳ ಕೊಂಡದ್ದನ್ನು ಆದಾಮನ ಸಂತತಿಯವರು ನಂಬಿಕೆಯ ಮೂಲಕ ಪುನಃ ಪಡೆಯುವ ಸಲುವಾಗಿ ಅರ್ಪಿಸಲಿದ್ದನು. ಆಗ, ನಿಷ್ಠೆಯ ಮಾನವರ ಒಂದು “ಚಿಕ್ಕ ಹಿಂಡು” ಕ್ರಿಸ್ತನೊಂದಿಗೆ ಅವನ ಸ್ವರ್ಗೀಯ ರಾಜ್ಯದಲ್ಲಿ ಭಾಗವಹಿಸಲಿಕ್ಕಾಗಿ ಆರಿಸಲ್ಪಡಲಿಕ್ಕಿತ್ತು. ಮತ್ತು ನೂತನ ಮಾನವ ಸಮಾಜವೊಂದರ ಬುನಾದಿಯಾಗಲು ಸಕಲ ರಾಷ್ಟ್ರಗಳಿಂದ ಒಂದು “ಮಹಾ ಸಮೂಹ” ಕೂಡಿಸಲ್ಪಡಲಿಕ್ಕಿತ್ತು. (ಲೂಕ 12:32; ಪ್ರಕಟನೆ 7:9) ಇದು ಈಡೇರಿದಾಗ ದೇವರು, ಜಲಪ್ರಳಯ ಮತ್ತು ಸೊದೋಮ್ ಗೊಮೋರಗಳ ನಾಶನದಿಂದ ಮುನ್ಸೂಚಿತವಾಗಿರುವ ಮಹಾ ವಿಮೋಚನೆಯ ಕಾರ್ಯವನ್ನು ನಡಿಸಲಿದ್ದನು.
ಈಗ ನಿರ್ಣಾಯಕ ಕ್ರಮ ಅತ್ಯಗತ್ಯವಾಗಿರುವ ಕಾರಣ
13, 14. ಲೋಟನ ಮತ್ತು ನೋಹನ ದಿನಗಳ ಭಕ್ತಿಹೀನರ ನಾಶವನ್ನು ದೃಷ್ಟಾಂತವಾಗಿ ಪೇತ್ರನು ತಕ್ಕೊಂಡದರಲ್ಲಿ ನಾವೇನು ಕಲಿಯಬಲ್ಲೆವು?
13. ಯೆಹೋವನು ಅನೇಕ ಸಂದರ್ಭಗಳಲ್ಲಿ ತನ್ನ ಸೇವಕರ ಪರವಾಗಿ ವಿಮೋಚನಾ ಕೃತ್ಯಗಳನ್ನು ನಡಿಸಿದ್ದಾನೆಂಬದು ದೇವರ ವಾಕ್ಯದ ವಿದ್ಯಾರ್ಥಿಗಳಿಗೆ ಗೊತ್ತಿದೆ. ಆದರೂ ಹೆಚ್ಚಿನ ಸಂದರ್ಭಗಳಲ್ಲಿ ಬೈಬಲು ‘ಆ ಸಮಯದಲ್ಲಿ ಇದ್ದಂತೆಯೇ ಮನುಷ್ಯ ಕುಮಾರನ ಸಾನ್ನಿಧ್ಯದಲ್ಲಿಯೂ ಇರುವದು’ ಎಂದು ಹೇಳುವುದಿಲ್ಲ. ಹಾಗಾದರೆ, ಪವಿತ್ರಾತ್ಮ ಪ್ರೇರಿತನಾದ ಅಪೊಸ್ತಲ ಪೇತ್ರನು ಈ ಎರಡು ಮಾದರಿಗಳನ್ನು ಎತ್ತಿ ತೋರಿಸಿದ್ದು ಏಕೆ? ಲೋಟನ ಮತ್ತು ನೋಹನ ದಿನಗಳಲ್ಲಿ ಸಂಭವಿಸಿದುದರಲ್ಲಿ ಪ್ರತ್ಯೇಕತೆ ಏನಾಗಿತ್ತು?
14. ಯೂದ 7 (NW) ರಲ್ಲಿ ಇದರ ಒಂದು ನಿಶ್ಚಿತ ಸೂಚನೆ ಕೊಡಲ್ಪಟ್ಟಿದೆ. ಅಲ್ಲಿ ನಾವು, “ಸೊದೋಮ್ ಮತ್ತು ಗೊಮೋರ ಮತ್ತು ಸುತ್ತಲಿನ ಪಟ್ಟಣಗಳು . . . ನಿತ್ಯಾಗ್ನಿಯ ನ್ಯಾಯದಂಡನೆಗೊಳಗಾಗಿ ನಮ್ಮ ಮುಂದೆ ಎಚ್ಚರಿಕೆಯ ದೃಷ್ಟಾಂತಗಳಾಗಿ ಇಡಲ್ಪಟ್ಟಿವೆ.” ಹೌದು, ಆ ನಗರಗಳ ಅಶ್ಲೀಲ ಪಾಪಿಗಳ ನಾಶನ, ಇಂದಿನ ವ್ಯವಸ್ಥೆಯ ಅಂತ್ಯದಲ್ಲಿ ದುಷ್ಟರಿಗೆ ಆಗುವ ನಾಶನದಂತೆಯೇ ಶಾಶ್ವತವಾಗಿತ್ತು. (ಮತ್ತಾಯ 25:46) ಇದೇ ರೀತಿ, ನೋಹನ ದಿನಗಳ ಜಲಪ್ರಳಯವು ನಿತ್ಯ ತೀರ್ಪುಗಳನ್ನು ಚರ್ಚಿಸುವ ಪೂರ್ವಾಪರ ಸಂದರ್ಭಗಳಲ್ಲಿ ಸೂಚಿಸಲ್ಪಟ್ಟಿದೆ. (2 ಪೇತ್ರ 2:4, 5, 9-12; 3:5-7) ಹೀಗೆ, ಲೋಟ ಮತ್ತು ನೋಹನ ದಿನಗಳಲ್ಲಿ ಭಕ್ತಿಹೀನರಿಗಾದ ನಾಶದ ಮೂಲಕ ಯೆಹೋವನು, ಅನೀತಿಯನ್ನು ಆಚರಿಸುವವರನ್ನು ಶಾಶ್ವತವಾಗಿ ನಾಶ ಮಾಡಿ ತನ್ನ ಸೇವಕರನ್ನು ವಿಮೋಚಿಸುವನು ಎಂದು ತೋರಿಸಿದನು.
15. (ಎ)ದುಷ್ಟ ಆಚಾರಗಳಲ್ಲಿ ಭಾಗವಹಿಸುವವರಿಗೆ ಯಾವ ತುರ್ತು ಎಚ್ಚರಿಕೆ ಕೊಡಲ್ಪಟ್ಟಿದೆ? (ಬಿ) ಅನೀತಿಯಲ್ಲಿ ಪಟ್ಟುಹಿಡಿಯುವ ಸರ್ವರಿಗೆ ಏಕೆ ನ್ಯಾಯ ತೀರಿಸಲಾಗುವುದು?
15. ದುಷ್ಟರ ನಾಶ ಯೆಹೋವನಿಗಾಗಲಿ ಆತನ ಸೇವಕರಿಗಾಗಲಿ ಸಂತೋಷವನ್ನು ತರುವುದಿಲ್ಲ. ತನ್ನ ಸಾಕ್ಷಿಗಳ ಮೂಲಕ ಯೆಹೋವನು, “ನಿಮ್ಮ ದುರ್ಮಾರ್ಗಗಳನ್ನು ಬಿಡಿರಿ. ನೀವು ಸಾಯ ಬೇಕೇಕೆ?” ಎಂದು ಪ್ರೋತ್ಸಾಹಿಸುತ್ತಾನೆ. (ಯೆಹೆಜ್ಕೇಲ 33:11) ಆದರೆ, ಈ ಪ್ರೀತಿಯ ಬೇಡಿಕೆಗೆ ಓಗೊಡಲು ಜನರು ಯಾವ ಅಪೇಕ್ಷೆಯನ್ನೂ ತೋರಿಸದೆ ತಮ್ಮ ಸ್ವಾರ್ಥ ಜೀವನ ಕ್ರಮದಲ್ಲೀ ಪಟ್ಟು ಹಿಡಿಯುವಾಗ ತನ್ನ ಪರಿಶುದ್ಧ ನಾಮಕ್ಕೆ ಯೆಹೋವನಿಗೆ ಇರುವ ಗೌರವ ಮತ್ತು ಭಕ್ತಿಹೀನರಿಂದ ಅಪವಾದ ಸಹಿಸುತ್ತಿರುವ ತನ್ನ ನಿಷ್ಠ ಸೇವಕರ ಕಡೆಗೆ ಆತನಿಗೆ ಇರುವ ಪ್ರೀತಿ, ಆತನು ನ್ಯಾಯ ತೀರಿಸುವಂತೆ ಕೇಳಿ ಕೊಳ್ಳುತ್ತದೆ.
16. (ಎ)ಮುಂತಿಳಿಸಲ್ಪಟ್ಟ ವಿಮೋಚನೆ ಅತಿ ಸಮೀಪವಿದೆಯೆಂದು ನಾವೇಕೆ ಭರವಸದಿಂದ ಇರಬಲ್ಲೆವು? (ಬಿ) ಈ ವಿಮೋಚನೆ ಯಾವುದರಿಂದ ಮತ್ತು ಯಾವುದಕ್ಕೆ ಆಗಿರುವುದು?
16. ವಿಮೋಚನೆ ತರಲು ದೇವರ ಸಮಯ ಅತಿ ಸಮೀಪವಾಗಿದೆ ! ಯೇಸು ತನ್ನ ಸಾನ್ನಿಧ್ಯತೆಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆಯಾಗಿ ಹೇಳಿದ ಮನೋಭಾವ ಮತ್ತು ಘಟನೆಗಳು ಈಗ ಸ್ಪಷ್ಟವಾಗಿ ತೋರುತ್ತಿವೆ. ಆ ಸೂಚನೆಯ ವಿವಿಧ ಭಾಗಗಳು 75 ವರ್ಷಗಳಿಗೂ ಹೆಚ್ಚು ಹಿಂದೆ ತೋರಿ ಬಂದವು. ಮತ್ತು ಯೇಸು, “ಈ ಸಂತತಿಯು” ಭಕ್ತಿಹೀನರ ಲೋಕಕ್ಕೆ ದೇವರು ತೀರ್ಪು ವಿಧಿಸುವ ಮೊದಲು ಅಳಿದು ಹೋಗುವುದೇ ಇಲ್ಲವೆಂದು ಹೇಳಿದ್ದಾನೆ. ನಿವಾಸಿತ ಭೂಮಿಯಲ್ಲೆಲ್ಲಾ ಸಕಲ ರಾಷ್ಟ್ರಗಳಿಗೆ ರಾಜ್ಯ ಸಂದೇಶವು ಸಾಕಷ್ಟು ಮಟ್ಟಿಗೆ ಸಾರಲ್ಪಟ್ಟಿದೆಯೆಂದು ಯೆಹೋವನು ನಿಷ್ಕರ್ಷಿಸುವಾಗ ಈ ದುಷ್ಟ ಲೋಕ ಅಂತ್ಯಗೊಳ್ಳುವದಲ್ಲದೆ ದಿವ್ಯ ಭಕ್ತಿಯ ಜನರಿಗೆ ಬಿಡುಗಡೆಯೂ ಬರುವುದು. (ಮತ್ತಾಯ 24:3-34; ಲೂಕ 21:28-33) ಯಾವುದರಿಂದ ಬಿಡುಗಡೆ? ದುಷ್ಟರು ಅವರ ಮೇಲೆ ತಂದ ಪರೀಕೆಗ್ಷಳಿಂದ ಮತ್ತು ನೀತಿಪ್ರಿಯರಾದ ಅವರಿಗೆ ದಿನೇ ದಿನೇ ಪರಿಸ್ಥಿತಿಗಳು ಬರಮಾಡಿದ ಸಂಕಟದಿಂದಲೇ. ರೋಗ, ಮರಣಗಳು ಗತ ವಿಷಯಗಳಾಗಿ ಇರುವ ನೂತನ ಲೋಕದೊಳಗೂ ಈ ವಿಮೋಚನೆ ಅವರನ್ನು ಕೊಂಡೊಯ್ಯುವದು.
ವಿಮೋಚನೆಯ ವೀಕ್ಷಣದಲ್ಲಿ ದೈವಿಕ ಸಹಾಯ
17. (ಎ)ನಾವು ಯಾವ ಗಂಭೀರ ಪ್ರಶ್ನೆಯನ್ನು ಕೇಳಿಕೊಳ್ಳಬೇಕು? (ಬಿ) ನೋಹನಂತೆ ನಾವೂ “ದಿವ್ಯ ಭಕ್ತಿ”ಯಿಂದ ಪ್ರಚೋದಿತರಾಗಿದ್ದೇವೆಂದು ಹೇಗೆ ಸಾಕ್ಷಿಕೊಡಬಲ್ಲೆವು?
17. ನಾವು ವೈಯಕ್ತಿಕವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆ ಏನಂದರೆ, ‘ನಾನು ಈ ದೈವ ಘಟನೆಗೆ ಸಿದ್ಧನಾಗಿ ಇದ್ದೇನೋ?’ ಎಂಬದೇ. ನಾವು ನಮ್ಮಲ್ಲೀ ಅಥವಾ ನಮ್ಮ ಸ್ವಂತ ನೀತಿಯಲ್ಲೀ ಭರವಸವಿಡುತ್ತಿರುವಲ್ಲಿ ನಾವು ಸಿದ್ಧರಾಗಿರುವದಿಲ್ಲ ಎಂದರ್ಥ. ಆದರೆ ನೋಹನಂತೆ ನಾವು “ದಿವ್ಯ ಭಯ”ದಿಂದ ಪ್ರಚೋದಿಸಲ್ಪಡುವಲ್ಲಿ ಯೆಹೋವನು ನೀಡುವ ನಿರ್ದೇಶನವನ್ನು ನಾವು ನಂಬಿಕೆಯಿಂದ ಅನುಸರಿಸುವೆವು ಮತ್ತು ಇದು ನಮ್ಮನ್ನು ವಿಮೋಚನೆಗೆ ನಡಿಸುವುದು.—ಇಬ್ರಿಯ 11:7.
18. ದೇವಪ್ರಭುತ್ವಾಧಿಕಾರಕ್ಕೆ ನೈಜ ಗೌರವ ತೋರಿಸಲು ಕಲಿಯುವದು ನೂತನ ಲೋಕದ ವಿಮೋಚನೆಗೆ ನಾವು ಮಾಡುವ ಸಿದ್ಧತೆಯ ಪ್ರಾಮುಖ್ಯ ಭಾಗವಾಗಿದೆಯೇಕೆ?
18. ಯೆಹೋವನು ಕೊಡುವ ಸಂರಕ್ಷಣೆಯನ್ನು ಈಗಲೂ ಅನುಭವಿಸುತ್ತಿರುವವರನ್ನು ಸುಂದರವಾಗಿ ವರ್ಣಿಸುತ್ತಾ ಕೀರ್ತನೆ 91:1, 2 ಹೇಳುವುದು: “ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು. ನಾನು ಯೆಹೋವನಿಗೆ—ನೀನೇ ನನ್ನ ಶರಣನು, ನನ್ನ ದುರ್ಗವು, ನಾನು ಭರವಸವಿಟ್ಟಿರುವ ದೇವರು ಎಂದು ಹೇಳುವೆನು.” ಜನ್ಮಕೊಟ್ಟ ಪಕ್ಷಿಯ ಬಲಾಢ್ಯ ರೆಕ್ಕೆಯ ಕೆಳಗೆ ಮರಿಗಳಿರುವಂತೆಯೇ ದೇವರಿಂದ ಭದ್ರವಾಗಿರಿಸಲ್ಪಡುವ ಜನರ ಗುಂಪೇ ಇದು. ಅವರ ಪೂರ್ತಿ ಭರವಸ ಯೆಹೋವನಲ್ಲಿದೆ. ಆತನೇ ಸರ್ವೋನ್ನತ ಸರ್ವಶಕ್ತನೆಂದು ಅವರು ಒಪ್ಪಿ ಕೊಳ್ಳುತ್ತಾರೆ. ಇದರ ಫಲವಾಗಿ ಅವರು ದೇವಪ್ರಭುತ್ವಾಧಿಕಾರವನ್ನು ಗೌರವಿಸಿ, ಅದು ಹೆತ್ತವರಿಂದ ನಡಿಸಲ್ಪಡಲಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ”ನಿಂದ ನಡಿಸಲ್ಪಡಲಿ, ಅವರು ಅದಕ್ಕೆ ಅಧೀನರಾಗುತ್ತಾರೆ. (ಮತ್ತಾಯ 24:45-47) ಇದು ನಮ್ಮ ಸ್ವಂತ ವಿಷಯದಲ್ಲಿ ನಿಜವೂ? ನೋಹನಂತೆ, ‘ಯೆಹೋವನು ಆಜ್ಞಾಪಿಸುವ ಸರ್ವವನ್ನು’ ಮಾಡಲು ಮತ್ತು ಅದನ್ನು ಆತನು ಹೇಳುವ ರೀತಿಯಲ್ಲಿ ಮಾಡಲು ನಾವು ಕಲಿಯುತ್ತೇವೂ? (ಆದಿಕಾಂಡ 6:22) ಇದು ನಿಜವಾದರೆ, ಯೆಹೋವನು ತನ್ನ ನೀತಿಯ ನೂತನ ಲೋಕದ ವಿಮೋಚನೆಗಾಗಿ ನಮಗೆ ಕೊಡುತ್ತಿರುವ ಸಿದ್ಧತೆಗೆ ನಾವು ಪ್ರತಿವರ್ತನೆ ತೋರಿಸುತ್ತಿದ್ದೇವೆ.
19. (ಎ)ನಮ್ಮ ಸಾಂಕೇತಿಕ ಹೃದಯ ಯಾವುದು, ಮತ್ತು ನಾವು ಅದಕ್ಕೆ ಗಮನ ಕೊಡುವದು ಅತ್ಯಾವಶ್ಯಕವೇಕೆ? (ಜ್ಞಾನೋಕ್ತಿ 4:23) (ಬಿ) ಲೌಕಿಕ ಆಕರ್ಷಣೆಗೆ ನಮ್ಮ ಪ್ರತಿವರ್ತನೆಯ ಕುರಿತು ಲೋಟನ ಮಾದರಿಯಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?
19. ಈ ಸಿದ್ಧತೆಯಲ್ಲಿ ನಾವು ನಮ್ಮ ಸಾಂಕೇತಿಕ ಹೃದಯದ ಕಡೆಗೆ ಕೊಡುವ ಗಮನವೂ ಸೇರಿದೆ. “ಹೃದಯಗಳನ್ನು ಶೋಧಿಸುವವನು ಯೆಹೋವನೇ.” (ಜ್ಞಾನೋಕ್ತಿ 17:3) ನಾವು ಬಾಹ್ಯ ರೀತಿಯಲ್ಲಿ ಹೇಗೆ ತೋರಿ ಬರುತ್ತೇವೆ ಎಂದಲ್ಲ, ಆಂತರಿಕ ವ್ಯಕ್ತಿಯಾದ ಹೃದಯದಲ್ಲಿ ಹೇಗೆ ಕಂಡು ಬರುತ್ತೇವೆ ಎಂಬದೇ ಪ್ರಾಮುಖ್ಯವೆಂದು ನಾವು ತಿಳಿಯುವಂತೆ ಆತನು ನಮಗೆ ಸಹಾಯ ನೀಡುತ್ತಾನೆ. ನಮ್ಮ ಸುತ್ತಲಿರುವ ಲೋಕದ ಬಲಾತ್ಕಾರ, ದುರಾಚಾರಗಳಲ್ಲಿ ನಾವು ಪಾಲಿಗರಾಗದಿದ್ದರೂ ಇವುಗಳಿಂದ ಆಕರ್ಷಿತರಾಗುವುದರ ಮತ್ತು ಮನೋರಂಜಿತರಾಗುವದರ ಕುರಿತು ನಾವು ಎಚ್ಚರಿಕೆಯಿಂದಿರಬೇಕು. ಇಂಥ ನಿಯಮರಹಿತ ಕೃತ್ಯಗಳ ಅಸ್ತಿತ್ವವೇ ನಮ್ಮನ್ನು ಸಂಕಟಗೊಳಿಸ ಬೇಕು. ಕೆಟ್ಟದ್ದನ್ನು ದ್ವೇಷಿಸುವವರು ಅದರಲ್ಲಿ ಲೋಲುಪರಾಗಲು ಪ್ರಯತ್ನಿಸುವದಿಲ್ಲ. ಆದರೂ ಅದನ್ನು ದ್ವೇಷಿಸದವರು ಶಾರೀರಿಕವಾಗಿ ಅದನ್ನು ಮಾಡದಿದ್ದರೂ, ಮಾನಸಿಕವಾಗಿ ಅದರಲ್ಲಿ ಭಾಗವಹಿಸಲು ಬಯಸಬಹುದು. “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆ ಮಾಡಿರಿ.”—ಕೀರ್ತನೆ 97:10.
20. (ಎ)ಪ್ರಾಪಂಚಿಕ ಜೀವನ ರೀತಿಯ ವಿರುದ್ಧ ಬೈಬಲು ನಮ್ಮನ್ನು ಯಾವ ವಿಧದಲ್ಲಿ ಎಚ್ಚರಿಸುತ್ತದೆ? (ಬಿ) ಪ್ರಾಪಂಚಿಕತೆಯ ಕುರಿತು ಬೈಬಲಿನ ಅತ್ಯಾವಶ್ಯಕ ಪಾಠಗಳು ನಮ್ಮ ಹೃದಯಗಳಲ್ಲಿವೆಯೋ ಇಲ್ಲವೋ ಎಂದು ನಾವು ಹೇಗೆ ಹೇಳಬಲ್ಲೆವು?
20. ಯೆಹೋವನು ಪ್ರೀತಿಪೂರ್ವಕವಾಗಿ ನಾವು ದುರಾಚಾರವನ್ನು ಮಾತ್ರವಲ್ಲ, ಪ್ರಾಪಂಚಿಕ ಜೀವನ ರೀತಿಯನ್ನೂ ತ್ಯಜಿಸುವಂತೆ ನಮಗೆ ಶಿಕ್ಷಣ ನೀಡುತ್ತಿದ್ದಾನೆ. ‘ಆಹಾರ ಮತ್ತು ಬಟ್ಟೆಯಿಂದ ತೃಪ್ತರಾಗಿರಿ’ ಎನ್ನುತ್ತದೆ ಆತನ ವಾಕ್ಯ. (1 ತಿಮೊಥಿ 6:8) ನಾವೆಯೊಳಗೆ ಹೋದಾಗ ನೋಹನೂ ಅವನ ಪುತ್ರರೂ ತಮ್ಮ ಮನೆಗಳನ್ನು ಬಿಟ್ಟು ಹೋಗಬೇಕಾಯಿತು. ತಮ್ಮ ಜೀವಗಳನ್ನು ರಕ್ಷಿಸಲು ಲೋಟನೂ, ಅವನ ಕುಟುಂಬವೂ ತಮ್ಮ ಬೀಡು ಮತ್ತು ಸೊತ್ತುಗಳನ್ನು ತ್ಯಜಿಸ ಬೇಕಾಯಿತು. ಹಾಗಾದರೆ ನಾವು ನಮ್ಮ ಒಲುಮೆಯನ್ನು ಎಲ್ಲಿ ಇರಿಸಿದ್ದೇವೆ? “ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ.” (ಲೂಕ 17:32) ಯೇಸು ಪ್ರೋತ್ಸಾಹಿಸಿದ್ದು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ ಪಡಿರಿ.” (ಮತ್ತಾಯ 6:33) ನಾವು ಹಾಗೆ ಮಾಡುತ್ತಿದ್ದೇವೂ? ಯೆಹೋವನ ನೀತಿಯ ಮಟ್ಟಗಳು ನಮ್ಮನ್ನು ನಡಿಸುವುದಾದರೆ ಮತ್ತು ದೇವರ ರಾಜ್ಯದ ಸುವಾರ್ತಾ ಸಾರೋಣವು ನಮ್ಮ ಪ್ರಧಾನ ಧ್ಯೇಯವಾಗಿರುವುದಾದರೆ, ಆತನು ನೂತನ ಲೋಕಕ್ಕೆ ವಿಮೋಚಿಸುವ ಆತನ ಜನರ ಸಿದ್ಧತೆಗೆ ನಾವು ಪ್ರತಿವರ್ತನೆ ತೋರಿಸುವುದು ನಿಶ್ಚಯ.
21. ಯೆಹೋವನ ವಿಮೋಚನೆಯ ವಾಗ್ದಾನ ಬೇಗನೇ ನೆರವೇರುವದೆಂದು ನಾವೇಕೆ ಯೋಗ್ಯವಾಗಿಯೇ ಹಾರೈಸಬಲ್ಲೆವು?
21. ರಾಜ್ಯಾಧಿಕಾರದಲ್ಲಿ ತನ್ನ ಸಾನ್ನಿಧ್ಯದ ನೆರವೇರಿಕೆಯನ್ನು ನೋಡುವ ದಿವ್ಯ ಭಕ್ತಿಯ ಜನರಿಗೆ ಯೇಸು ಹೇಳಿದ್ದು: “ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ. ನಿಮ್ಮ ಬಿಡುಗಡೆಯು ಸಮೀಪವಾಗಿದೆ.” (ಲೂಕ 21:28) ಆ ಸೂಚನೆ ಅದರ ಸಕಲ ವಿವರಗಳಲ್ಲಿ ಬೆಳೆದಿರುವುದನ್ನು ನೀವು ನೋಡಿದ್ದೀರೋ? ಹಾಗಾದರೆ ಯೆಹೋವನ ವಿಮೋಚನಾ ವಾಗ್ದಾನದ ನೆರವೇರಿಕೆ ಅತಿ ಸಮೀಪವಾಗಿದೆ, ಸನ್ನಿಹಿತವಾಗಿದೆ ಎಂಬ ಭರವಸೆಯುಳ್ಳವರಾಗಿ ಇರ್ರಿ ! “ದಿವ್ಯಭಕ್ತಿಯ ಜನರನ್ನು ಪರೀಕ್ಷೆಯಿಂದ ವಿಮೋಚಿಸುವ ವಿಧವನ್ನು . . . ಯೆಹೋವನು ಬಲ್ಲನು ಎಂಬದರ ಪೂರ್ಣ ಮನವರಿಕೆ ನಿಮಗೆ ಆಗಿರಲಿ.—2 ಪೇತ್ರ 2:9, (w90 4/15)
ನೀವೇನು ಕಲಿತಿರಿ?
◻ ಲೋಟನಂತೆ, ಲೋಕದ ಜೀವನ ರೀತಿಗೆ ನಾವು ಹೇಗೆ ಪ್ರತಿವರ್ತನೆ ತೋರಿಸಬೇಕು?
◻ ಸೋದೋಮನ್ನು ಬಿಟ್ಟು ಓಡಿ ಹೋಗುವಾಗಲೂ ಲೋಟ ಮತ್ತು ಅವನ ಕುಟುಂಬದವರು ಯಾವ ಪರೀಕ್ಷೆಗಳನ್ನು ಎದುರಿಸಿದರು?
◻ ಪೇತ್ರನು ಕೊಟ್ಟ ಉದಾಹರಣೆಗಳು ಈಗ ಯೆಹೋವನ ಪಕ್ಷದಲ್ಲಿ ಸ್ಥಿರವಾಗಿ ನಿಲ್ಲುವುದರ ಜರೂರಿಯನ್ನು ಹೇಗೆ ಒತ್ತಿಹೇಳುತ್ತವೆ?
◻ ತನ್ನ ಜನರನ್ನು ವಿಮೋಚನೆಗೆ ತಯಾರಿಸುವಾಗ ಯೆಹೋವನು ಯಾವ ಅತ್ಯಾವಶ್ಯಕ ಪಾಠಗಳನ್ನು ಕಲಿಸುತ್ತಿದ್ದಾನೆ?
[ಪುಟ 20 ರಲ್ಲಿರುವ ಚಿತ್ರ]
ಜನ್ಮಕೊಟ್ಟ ಪಕ್ಷಿಯ ಬಲಾಢ್ಯ ರೆಕ್ಕೆಗಳ ಕೆಳಗಿನ ಭದ್ರತೆಯಂತೆಯೇ ದೇವಜನರು ಸುಭದ್ರರಾಗಿದ್ದಾರೆ