ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • “ಅವರ ದುಃಖವನ್ನೆಲ್ಲಾ ನಾನು ಬಲ್ಲೆನು”
    ಕಾವಲಿನಬುರುಜು—2009 | ಜುಲೈ 1
    • ಒಂದು ದಿನ ಮೋಶೆ ಕುರಿಗಳನ್ನು ಮೇಯಿಸುತ್ತಿದ್ದಾಗ ಅದ್ಭುತ ನೋಟವೊಂದು ಅವನ ಕಣ್ಣಿಗೆ ಬಿತ್ತು. ಮುಳ್ಳಿನ ಪೊದೆಯೊಂದು ಉರಿಯುತ್ತಾ ಇತ್ತು ಆದರೆ “ಅದು ಸುಟ್ಟುಹೋಗದೆ ಇತ್ತು.” (ವಚನ 2) ಆಶ್ಚರ್ಯಚಕಿತನಾಗಿ ಮೋಶೆಯು ಅದೇನಿರಬಹುದೆಂದು ನೋಡಲು ಹತ್ತಿರಹೋದನು. ಆಗ ಯೆಹೋವನು ಒಬ್ಬ ದೇವದೂತನ ಮೂಲಕ ಪೊದೆಯೊಳಗಿಂದ ಮಾತಾಡುತ್ತಾ ಅಂದದ್ದು: “ನೀನು ಹತ್ತಿರ ಬರಬೇಡ; ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧಭೂಮಿ.” (ವಚನ 5) ಉರಿಯುತ್ತಿದ್ದ ಆ ಪೊದೆಯು ದೇವರ ಸಾನಿಧ್ಯವನ್ನು ಮಾತ್ರ ಸೂಚಿಸಿತ್ತಾದರೂ ಆ ಸ್ಥಳವು ತಾನೇ ಪರಿಶುದ್ಧವಾಗಿದ್ದ ಬಗ್ಗೆ ತುಸು ಯೋಚಿಸಿರಿ!

  • “ಅವರ ದುಃಖವನ್ನೆಲ್ಲಾ ನಾನು ಬಲ್ಲೆನು”
    ಕಾವಲಿನಬುರುಜು—2009 | ಜುಲೈ 1
    • ದೇವರ ಕನಿಕರವು ನಮಗೆ ನಿರೀಕ್ಷೆಗೆ ಆಧಾರವನ್ನು ಕೊಡುತ್ತದೆ. ಅಪರಿಪೂರ್ಣ ಮಾನವರಾದ ನಾವು ಸ್ವಲ್ಪ ಮಟ್ಟಿಗಿನ ಪರಿಶುದ್ಧತೆಯನ್ನು ಆತನ ಸಹಾಯದಿಂದ ಪಡೆದುಕೊಂಡು ಆತನಿಗೆ ಸ್ವೀಕಾರಾರ್ಹರು ಆಗಿರಬಲ್ಲೆವು. (1 ಪೇತ್ರ 1:15, 16) ಖಿನ್ನತೆ ಮತ್ತು ನಿರುತ್ತೇಜನದಿಂದ ಕಷ್ಟಪಡುತ್ತಿದ್ದ ಕ್ರೈಸ್ತ ಮಹಿಳೆಯೊಬ್ಬಳು, ಉರಿಯುವ ಪೊದೆಯಲ್ಲಿ ಮೋಶೆಗಾದ ಅನುಭವ ವೃತ್ತಾಂತದಿಂದ ಆದರಣೆಯನ್ನು ಕಂಡುಕೊಂಡಳು. ಅವಳನ್ನುವುದು: “ಅಶುದ್ಧ ಸ್ಥಳವನ್ನು ಸಹ ದೇವರು ಪರಿಶುದ್ಧವಾಗಿ ಮಾಡಶಕ್ತನೆಂದ ಮೇಲೆ ನನಗೆ ಸ್ವಲ್ಪವಾದರೂ ಆಶಾಕಿರಣವಿದ್ದೀತು. ಈ ವಿಚಾರವು ನನಗೆ ಬಹಳವಾಗಿ ಸಹಾಯಮಾಡಿದೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ