-
ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆಅವರ ನಂಬಿಕೆಯನ್ನು ಅನುಕರಿಸಿ
-
-
15, 16. (1) ಹನ್ನಳು ಆರಾಧನೆಗಾಗಿ ಗುಡಾರಕ್ಕೆ ಬಂದದ್ದು, ಯೆಹೋವನಲ್ಲಿ ಹೃದಯ ತೋಡಿಕೊಂಡದ್ದು ಆಕೆಯ ಮೇಲೆ ಯಾವ ಪರಿಣಾಮ ಬೀರಿತು? (2) ನಕಾರಾತ್ಮಕ ಭಾವನೆಗಳು ನಮ್ಮನ್ನು ಕಾಡುವಾಗ ಹನ್ನಳಂತೆ ನಾವೇನು ಮಾಡಬಹುದು?
15 ಹನ್ನಳು ಆರಾಧನೆಗಾಗಿ ಗುಡಾರಕ್ಕೆ ಬಂದದ್ದು, ಯೆಹೋವನಲ್ಲಿ ಹೃದಯ ತೋಡಿಕೊಂಡದ್ದು ಆಕೆಯ ಮೇಲೆ ಯಾವ ಪರಿಣಾಮ ಬೀರಿತು? ಆಕೆ “ಹೊರಟುಹೋಗಿ ಊಟಮಾಡಿದಳು. ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ” ಎನ್ನುತ್ತದೆ ವೃತ್ತಾಂತ. (1 ಸಮು. 1:18) ಹೌದು ಹನ್ನಳ ಮನಸ್ಸು ಹೂವಿನಷ್ಟು ಹಗುರವಾಯಿತು. ಒಂದರ್ಥದಲ್ಲಿ ತನ್ನ ಹೆಗಲ ಮೇಲಿದ್ದ ಭಾವನಾತ್ಮಕ ಹೊರೆಯನ್ನು ಬಲಿಷ್ಠನಾದ ತನ್ನ ಸ್ವರ್ಗೀಯ ತಂದೆಯ ಹೆಗಲ ಮೇಲೆ ಹಾಕಿಬಿಟ್ಟಿದ್ದಳು. (ಕೀರ್ತನೆ 55:22 ಓದಿ.) ಯೆಹೋವನಿಗೆ ಯಾವುದೇ ಸಮಸ್ಯೆ ಭಾರವೆನಿಸುತ್ತದೋ? ಇಲ್ಲ! ಅಂದು ಇಂದು ಮುಂದೆಂದಿಗೂ ಆತನಿಗೆ ಹಾಗನಿಸದು.
16 ದುಃಖದಿಂದ ಜಜ್ಜಿಹೋದಾಗ, ಕಂಗೆಟ್ಟಾಗ ನಾವು ಹನ್ನಳಂತೆ ದೇವರೊಂದಿಗೆ ಮನಬಿಚ್ಚಿ ಮಾತಾಡಬೇಕು. ಆತನು “ಪ್ರಾರ್ಥನೆಯನ್ನು ಕೇಳುವವ” ಎನ್ನುತ್ತದೆ ಬೈಬಲ್. (ಕೀರ್ತ. 65:2) ನಾವು ನಂಬಿಕೆಯಿಂದ ಪ್ರಾರ್ಥಿಸಿದರೆ, ನಮ್ಮ ಮನಸ್ಸಲ್ಲಿರುವ ದುಃಖ ಕರಗಿ “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ಅನುಭವಿಸುವೆವು.—ಫಿಲಿ. 4:6, 7.
-
-
ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆಅವರ ನಂಬಿಕೆಯನ್ನು ಅನುಕರಿಸಿ
-
-
18 ಇನ್ನು ಮುಂದೆ ಹನ್ನಳ ಮನನೋಯಿಸಲು ಅಸಾಧ್ಯ ಎಂದು ಪೆನಿನ್ನಳಿಗೆ ಗೊತ್ತಾದದ್ದು ಯಾವಾಗ? ವೃತ್ತಾಂತ ಇದನ್ನು ತಿಳಿಸುವುದಿಲ್ಲ. ಆದರೆ “ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ” ಎಂಬ ಮಾತುಗಳು ಅಂದಿನಿಂದ ಹನ್ನಳು ಖುಷಿಯಿಂದಿದ್ದಳು ಎನ್ನುವುದನ್ನು ಸೂಚಿಸುತ್ತವೆ. ತಾನೆಷ್ಟೇ ಹೀನೈಸಿದರೂ ಅದು ಹನ್ನಳ ಮೇಲೆ ಪರಿಣಾಮ ಬೀರುವುದಿಲ್ಲವೆಂದು ಪೆನಿನ್ನಳಿಗೆ ಸ್ವಲ್ಪದರಲ್ಲಿ ಗೊತ್ತಾಗಿರಬಹುದು. ಬೈಬಲಿನಲ್ಲಿ ಮುಂದೆಲ್ಲೂ ಆಕೆಯ ಹೆಸರಿಲ್ಲ.
-