-
ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆಅವರ ನಂಬಿಕೆಯನ್ನು ಅನುಕರಿಸಿ
-
-
9. ಸವತಿಯ ವರ್ತನೆ ಬಗ್ಗೆ ಗೊತ್ತಿದ್ದರೂ ಹನ್ನಳು ಶೀಲೋವಿಗೆ ಹೋದದ್ದು ನಮಗೆ ಯಾವ ಪಾಠ ಕಲಿಸುತ್ತದೆ?
9 ಬೆಳಗ್ಗಿನ ಜಾವ. ಮನೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಹೊರಡುವ ಗಡಿಬಿಡಿಯಲ್ಲಿದ್ದರು. ಗುಡ್ಡಗಾಡು ಪ್ರದೇಶವಾದ ಎಫ್ರಾಯೀಮ್‌ನಿಂದ ಶೀಲೋವಿಗೆ 30ಕ್ಕಿಂತಲೂ ಹೆಚ್ಚು ಕಿ.ಮೀ. ದೂರ.b ಕಾಲ್ನಡಿಗೆಯಲ್ಲಿ ಅಲ್ಲಿ ತಲಪಲು ಆ ದೊಡ್ಡ ಕುಟುಂಬಕ್ಕೆ ಒಂದೆರಡು ದಿನಗಳಾದರೂ ಬೇಕಿತ್ತು. ಅಲ್ಲಿ ತನ್ನೊಂದಿಗೆ ಸವತಿ ಹೇಗೆ ನಡಕೊಳ್ಳಲಿಕ್ಕಿದ್ದಾಳೆಂದು ಹನ್ನಳಿಗೆ ಚೆನ್ನಾಗಿ ಗೊತ್ತಿತ್ತು. ಸುಮ್ಮನೆ ಸಮಸ್ಯೆಗೆ ತಲೆಯೊಡ್ಡುವುದೇಕೆ ಎಂದು ನೆನಸಿ ಆಕೆ ಬೇಕಿದ್ದರೆ ಮನೆಯಲ್ಲೇ ಕೂರಬಹುದಿತ್ತು. ಆದರೆ ಅವಳು ಹಾಗೆ ಮಾಡಲಿಲ್ಲ. ನಮಗೆ ಅವಳು ನಿಶ್ಚಯವಾಗಿಯೂ ಒಳ್ಳೇ ಮಾದರಿ. ಸಹೋದರ ಸಹೋದರಿಯರು ನಮ್ಮ ಜೊತೆ ಸರಿಯಾಗಿ ವರ್ತಿಸದಿದ್ದರೆ ನಾವೇನು ಮಾಡುತ್ತೇವೆ? ದೇವರಿಗೆ ಸಲ್ಲಿಸುವ ನಮ್ಮ ಆರಾಧನೆಗೆ ಅದು ಅಡ್ಡಬರುವಂತೆ ಬಿಡುತ್ತೇವಾ? ಹಾಗೆ ಬಿಟ್ಟರೆ, ಆ ಸನ್ನಿವೇಶವನ್ನು ತಾಳಿಕೊಳ್ಳಲು ಯೆಹೋವನು ಕೊಡುವ ಸಹಾಯವನ್ನು ನಾವೇ ದೂರ ತಳ್ಳಿದಂತಾಗುವುದು.
-
-
ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆಅವರ ನಂಬಿಕೆಯನ್ನು ಅನುಕರಿಸಿ
-
-
b ಯೇಸುವಿನ ದಿನದ ಅರಿಮಥಾಯ ಎಂಬ ಊರು ಮತ್ತು ಎಲ್ಕಾನನ ಊರಾದ ರಾಮಾ ಎರಡೂ ಒಂದೇ ಆಗಿದ್ದಿರಬಹುದು. ಇದಕ್ಕನುಸಾರ ಈ ಅಂತರವನ್ನು ಅಳೆಯಲಾಗಿದೆ.
-