-
ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆಕಾವಲಿನಬುರುಜು—2011 | ಜನವರಿ 1
-
-
ಹನ್ನಳು ಪ್ರಯಾಣದ ತಯಾರಿಯಲ್ಲಿ ತಲ್ಲೀನಳಾಗಿ ತನ್ನ ಸಮಸ್ಯೆ ಹಾಗೂ ನೋವನ್ನು ಮರೆಯಲು ಪ್ರಯತ್ನಿಸಿದಳು. ಇದು ವಾಸ್ತವದಲ್ಲಿ ಸಂಭ್ರಮದ ಸಮಯವಾಗಿರಬೇಕಿತ್ತು. ಆಕೆಯ ಗಂಡ ಎಲ್ಕಾನನು ಇಡೀ ಕುಟುಂಬವನ್ನು ಶಿಲೋವಿನಲ್ಲಿದ್ದ ದೇವಗುಡಾರಕ್ಕೆ ಆರಾಧನೆಗೆಂದು ಪ್ರತಿ ವರ್ಷ ತಪ್ಪದೆ ಕರಕೊಂಡು ಹೋಗುತ್ತಿದ್ದನು. ಈ ಆರಾಧನೆಯ ಸಂದರ್ಭಗಳು ಆನಂದದಿಂದ ಕೂಡಿರಬೇಕೆಂಬುದು ಯೆಹೋವನ ಅಪೇಕ್ಷೆಯೂ ಆಗಿತ್ತು. (ಧರ್ಮೋಪದೇಶಕಾಂಡ 16:15) ಆದರೆ ಈ ಹಬ್ಬಗಳನ್ನು ಬಾಲ್ಯದಿಂದ ಆನಂದಿಸಿದ್ದ ಹನ್ನಳ ಸನ್ನಿವೇಶ ಇತ್ತೀಚಿನ ವರ್ಷಗಳಲ್ಲಿ ಬದಲಾಗಿತ್ತು.
-
-
ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆಕಾವಲಿನಬುರುಜು—2011 | ಜನವರಿ 1
-
-
ಬೆಳ್ಳಂಬೆಳಿಗ್ಗೆ ಇಡೀ ಮನೆಯಲ್ಲಿ ಗಡಿಬಿಡಿಯ ಗದ್ದಲವಿತ್ತು. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಪ್ರಯಾಣದ ಸಿದ್ಧತೆಯಲ್ಲಿದ್ದರು. ಎಫ್ರಾಯಿಮೀನ ಗುಡ್ಡಗಾಡು ಪ್ರದೇಶದಿಂದ ಶಿಲೋವಿಗೆ 30 ಕಿಲೊಮೀಟರ್ ಇತ್ತು.c ಕಾಲ್ನಡಿಗೆಯಲ್ಲಿ ಅಲ್ಲಿ ತಲಪಲು ಆ ದೊಡ್ಡ ಕುಟುಂಬಕ್ಕೆ ಒಂದೆರಡು ದಿನಗಳಾದರೂ ಹಿಡಿಯಲಿತ್ತು. ಈ ಸಮಯದಲ್ಲಿ ತನ್ನ ಸವತಿಯ ವರ್ತನೆ ಹೇಗಿರುವುದೆಂದು ಹನ್ನಳಿಗೆ ಚೆನ್ನಾಗಿ ಗೊತ್ತಿದ್ದರೂ ಆಕೆ ಮನೆಯಲ್ಲೇ ಉಳಿಯಲಿಲ್ಲ. ಹೀಗೆ ಆಕೆಯಿಟ್ಟ ಉತ್ಕೃಷ್ಟ ಮಾದರಿ ಇಂದಿನ ವರೆಗೂ ದೇವರ ಆರಾಧಕರಿಗೆ ಅನ್ವಯವಾಗುತ್ತದೆ. ಬೇರೆಯವರ ದುರ್ವರ್ತನೆಯು ನಾವು ದೇವರಿಗೆ ಸಲ್ಲಿಸುವ ಆರಾಧನೆಗೆ ಅಡ್ಡಿಯಾಗುವಂತೆ ಬಿಡಬಾರದು. ಹಾಗೆ ಬಿಟ್ಟರೆ, ತಾಳಿಕೊಳ್ಳುವಂತೆ ನಮ್ಮನ್ನು ಬಲಪಡಿಸುವ ಆಶೀರ್ವಾದಗಳನ್ನೇ ಬೇಡವೆಂದಂತಾಗುತ್ತದೆ.
-
-
ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆಕಾವಲಿನಬುರುಜು—2011 | ಜನವರಿ 1
-
-
c ಯೇಸುವಿನ ದಿನದಲ್ಲಿ ಅರಿಮಥಾಯ ಎಂದು ಜ್ಞಾತವಾಗಿದ್ದ ಸ್ಥಳವೇ ಎಲ್ಕಾನನ ಊರಾದ ರಾಮಾ ಆಗಿದ್ದಿರಬಹುದು ಎಂಬ ಎಣಿಕೆಗನುಸಾರ ಈ ಅಂತರವನ್ನು ಅಳೆಯಲಾಗಿದೆ.
-